ಎಡ್ಜ್‌ಬಾಸ್ಟನ್ ಟೆಸ್ಟ್ ಪಂದ್ಯದಲ್ಲಿ ಭಾರತ 336 ರನ್ ಗೆಲುವು ದಾಖಲಿಸಿದೆ. ಈ ಗೆಲುವಿನ ಜೊತೆ ಟೀಂ ಇಂಡಿಯಾ ಕೆಲ ದಾಖಲೆ ಬರೆದಿದೆ. ಇಷ್ಟೇ ಅಲ್ಲ ನಾಯಕ ಶುಬಮನ್ ಗಿಲ್ ಕೂಡ ದಾಖಲೆ ಬರೆದಿದ್ದಾರೆ.
ಎಡ್ಜ್‌ಬಾಸ್ಟನ್ (ಜು.06) ಇಂಗ್ಲೆಂಡ್ ಪ್ರವಾಸದ ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾ ಮುಗ್ಗರಿಸಿ ನಿರಾಸೆ ಕಂಡಿತ್ತು. ಆದರೆ ಎರಡನೇ ಪಂದ್ಯದಲ್ಲಿ ಟೀಂ ಇಂಡಿಯಾ ದಿಟ್ಟ ಹೋರಾಟದ ಮೂಲಕ 336 ರನ್ ಗೆಲುವು ದಾಖಲಿಸಿದೆ. 5 ಪಂದ್ಯಗಳ ಸರಣಿ ಸದ್ಯ 1-1 ಅಂತರದಲ್ಲಿ ಸಮಬಲಗೊಂಡಿದೆ. ಈ ಪಂದ್ಯದಲ್ಲಿ ಟೀಂ ಇಂಡಿಯಾ ಕೆಲ ದಾಖಲೆ ಬರೆದಿದೆ. ಇಷ್ಟೇ ಅಲ್ಲ ನಾಯಕ ಶುಬ್‌ಮನ್ ಗಿಲ್ ಕೂಡ ದಾಖಲೆ ಬರೆದಿದ್ದಾರೆ. ತವರಿನಾಚೆ ಟೀಂ ಇಂಡಿಯಾ ಗೆದ್ದ ಅತೀ ದೊಡ್ಡ ಗೆಲುವು ಇದು ಅನ್ನೋ ದಾಖಲೆ ಬರೆದಿದೆ. ಇದರ ಜೊತೆಗೆ ಎಡ್ಜ್‌ಬಾಸ್ಟನ್‌ನಲ್ಲಿ ಮೊದಲ ಗೆಲುವು ಸೇರಿದಂತೆ ಹಲವು ದಾಖಲೆ ನಿರ್ಮಾಣವಾಗಿದೆ.
ತವರಿನಾಚೆ ಭಾರತದ ಅತೀ ದೊಡ್ಡ ಗೆಲುವು
336 ರನ್ vs ಇಂಗ್ಲೆಂಡ್, 2025
318 ರನ್ vs ವೆಸ್ಟ್ ಇಂಡೀಸ್, 2016
304 ರನ್ vs ಶ್ರೀಲಂಕಾ, 2017
295 ರನ್ vs ಆಸ್ಟ್ರೇಲಿಯಾ, 2024
279 ರನ್ vs ಇಂಗ್ಲೆಂಡ್, 1986
ವಿದೇಶಿ ನೆಲದಲ್ಲಿ ಟೆಸ್ಟ್ ಗೆದ್ದ ಕಿರಿಯ ನಾಯಕ
ಭಾರತದ ಪರ ವಿದೇಶಿ ನೆಲದಲ್ಲಿ ಟೆಸ್ಟ್ ಗೆದ್ದ ಅತೀ ಕಿರಿಯ ನಾಯಕ ಶುಬ್‌ಮನ್ ಗಿಲ್ ಅನ್ನೋ ದಾಖಲೆ ಬರೆದಿದ್ದಾರೆ. 25ರ ಹರೆಯದ ಗಿಲ್ ಇದೇ ಮೊದಲ ಬಾರಿಗೆ ಟೀಂ ಇಂಡಿಯಾ ಟೆಸ್ಟ್ ತಂಡದ ನಾಯಕತ್ವ ವಹಿಸಿಕೊಂಡಿದ್ದಾರೆ. ಇದಕ್ಕೂ ಮೊದಲು ಸುನಿಲ್ ಗವಾಸ್ಕರ್ 1976ರಲ್ಲಿ ನ್ಯೂಜಿಲೆಂಡ್ ವಿರುದ್ದ ಗೆಲುವು ಸಾಧಿಸಿ ದಾಖಲೆ ಬರೆದಿದ್ದರು. ಈ ವೇಳೆ ಗವಾಸ್ಕರ್ ವಯಸ್ಸು 26. ರೋಹಿತ್ ಶರ್ಮಾ ನಿವೃತ್ತಿ ಘೋಷಣೆಯಿಂದ ಶುಬಮನ್ ಗಿಲ್‌ಗೆ ನಾಯಕತ್ವ ನೀಡಲಾಗಿತ್ತು. ಗಿಲ್ ನಾಯಕತ್ವದಲ್ಲಿ ಇಂಗ್ಲೆಂಡ್ ಪ್ರವಾಸ ಕೈಗೊಂಡ ಟೀಂ ಇಂಡಿಯಾ 2ನೇ ಟೆಸ್ಟ್ ಪಂದ್ಯ ಗೆದ್ದುಕೊಂಡಿದೆ.
ಎಡ್ಜ್‌ಬಾಸ್ಟನ್‌ನಲ್ಲಿ ಮೊದಲ ಗೆಲುವು
ಕಳೆದ 58 ವರ್ಷದಿಂದ ಎಡ್ಜ್‌ಬಾಸ್ಟ್ ಮೈದಾನದಲ್ಲಿ ಟೀಂ ಇಂಡಿಯಾ ಹಾಗೂ ಇಂಗ್ಲೆಂಡ್ ಮುಖಾಮುಖಿಯಾಗುತ್ತಿದೆ. ಆದರೆ ಇದುವರೆಗೂ ಭಾರತಕ್ಕೆ ಗೆಲುವು ಸಾಧ್ಯವಾಗಿರಲಿಲ್ಲ. 2025ರ ಪಂದ್ಯ ಸೇರಿದಂತೆ ಎಡ್ಜ್‌ಬಾಸ್ಟ್‌ನಲ್ಲಿ ಭಾರತ 19 ಪಂದ್ಯ ಆಡಿದೆ. 19ನೇ ಪಂದ್ಯದಲ್ಲಿ ಗೆಲುವು ಕಂಡಿದೆ.
ಇಂಗ್ಲೆಂಡ್ ನೆಲದಲ್ಲಿ ಟೀಂ ಇಂಡಿಯಾ ಪರ ಅತ್ಯುತ್ತಮ ಬೌಲಿಂಗ್ ದಾಳಿ ಸಂಘಟಿಸಿದ ಕೀರ್ತಿಗೆ ಅಕಾಶ್ ದೀಪ್ ಪಾತ್ರರಾಗಿದ್ದಾರೆ. ಭಾರತದ ಬೌಲರ್ ಪೈಕಿ ಅಕಾಶ್ ದೀಪ್ ಮೊದಲ ಸ್ಥಾನಕ್ಕೇರಿದ್ದಾರೆ.
ಇಂಗ್ಲೆಂಡ್ ನೆಲದಲ್ಲಿ ಭಾರತೀಯ ಬೌಲರ್‌ಗಳ ಅತ್ಯುತ್ತಮ ಸಾಧನೆ
10/187 ಅಕಾಶ್ ದೀಪ್, ಎಡ್ಜ್‌ಬಾಸ್ಟನ್ ಪಂದ್ಯ, 2025
10/188 ಚೇತನ್ ಶರ್ಮಾ, ಎಡ್ಜ್‌ಬಾಸ್ಟನ್ ಪಂದ್ಯ,1986
9/110 ಜಸ್ಪ್ರೀತ್ ಬುಮ್ರಾ, ಟ್ರೆಂಟ್ ಬ್ರಿಡ್ಜ್ ಪಂದ್ಯ, 2021
9/134 ಜಹೀರ್ ಖಾನ್, ಟ್ರೆಂಡ್ ಬ್ರಿಡ್ಜ್, 2007
