ಅಡಿಲೇಡ್‌[ಡಿ.25]: ಆಸ್ಪ್ರೇಲಿಯಾದ ಬಿಗ್‌ಬ್ಯಾಶ್‌ ಲೀಗ್‌ ಟಿ20 ಅಚ್ಚರಿಯ ಪ್ರಸಂಗಗಳಿಗೆ ಸಾಕ್ಷಿಯಾಗುತ್ತಿದೆ. ಸೋಮವಾರ ನಡೆದ ಅಡಿಲೇಡ್‌ ಸ್ಟ್ರೈಕ​ರ್ಸ್ ಹಾಗೂ ಪರ್ತ್ ಸ್ಕ್ರಾಚರ್ಸ್ ನಡುವಿನ ಪಂದ್ಯದಲ್ಲಿ, ಆಸ್ಪ್ರೇಲಿಯಾದ ವೇಗಿ ಜಾಯಿ ರಿಚರ್ಡ್‌ಸನ್‌ ಬೌಂಡರಿ ಗೆರೆಯಿಂದ ಬೌಲ್‌ ಮಾಡಿ ಬ್ಯಾಟ್ಸ್‌ಮನ್‌ನನ್ನು ರನೌಟ್‌ ಮಾಡಿದರು. 

ಪರ್ತ್ ಪರ ಆಡುತ್ತಿರುವ ರಿಚರ್ಡ್‌ಸನ್‌, ಅಡಿಲೇಡ್‌ನ ಜೇಕ್‌ ವೆದರ್‌ಲೆಂಡ್‌ ಬಾರಿಸಿದ ಚೆಂಡನ್ನು ಬೌಂಡರಿ ಗೆರೆ ಬಳಿ ಹಿಡಿದು, ತಮ್ಮ ಬೌಲಿಂಗ್‌ ಶೈಲಿಯಲ್ಲಿ ವಿಕೆಟ್‌ ಕೀಪರ್‌ಗೆ ಎಸೆದರು. ಚೆಂಡನ್ನು ಹಿಡಿದ ಕೀಪರ್‌, ಬೇಲ್ಸ್‌ ಉರುಳಿಸಿದಾಗ ಬ್ಯಾಟ್ಸ್‌ಮನ್‌ ಇನ್ನು ಕ್ರೀಸ್‌ ತಲುಪಿರಲಿಲ್ಲ. ಈ ರನೌಟ್‌ನ ವಿಡಿಯೋ ಸಾಮಾಜಿಕ ತಾಣಗಳಲ್ಲಿ ವೈರಲ್‌ ಆಗಿದೆ.

ಸೂರ್ಯಕುಮಾರ್‌ ಆಯ್ಕೆ ಮಾಡದ್ದಕ್ಕೆ ಹರ್ಭಜನ್‌ ಕಿಡಿ

ಇದರ ಹೊರತಾಗಿಯೂ ಅಡಿಲೇಡ್ ಸ್ಟ್ರೈಕರ್ಸ್ ತಂಡವು ಡೆಕ್ವರ್ತ್ ಲೂವಿಸ್ ನಿಯಮದನ್ವಯ 15 ರನ್’ಗಳ ಜಯ ದಾಖಲಿಸಿತು. 

ಡಿಸೆಂಬರ್ 25ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ