ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುವ ಆರ್‌ಸಿಬಿ ಮ್ಯಾಚ್ ವೀಕ್ಷಣೆಗೆ ಬರುವ ಕ್ರಿಕೆಟ್ ಪ್ರೇಮಿಗಳಿಗೆ ಬಿಎಂಟಿಸಿ ಗುಡ್‌ನ್ಯೂಸ್ ನೀಡಿದೆ. ಈ 12 ಮಾರ್ಗಗಳಿಗೆ ಮಧ್ಯರಾತ್ರಿ 1 ಗಂಟೆವೆರೆಗ ವಿಶೇಷ ಬಸ್ ಸೇವೆಯನ್ನು ಆರಂಭಿಸಿದೆ.

ಬೆಂಗಳೂರು (ಮಾ.18): ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್‌) ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುವ ರಾಯಲ್ ಚಾಲೆಂಜರ್ಸ್‌ ಬೆಂಗಳೂರು (ಆರ್‌ಸಿಬಿ) ಮಂದ್ಯಗಳನ್ನು ನೋಡಲು ಆಗಿಸುವ ಕ್ರಿಕೆಟ್ ಅಭಿಮಾನಿಗಳಿಗೆ ಬೆಂಗಳೂರ ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಗುಡ್‌ ನ್ಯೂಸ್‌ ನೀಡಿದೆ. ಕ್ರಿಕೆಟ್ ಪಂದ್ಯವನ್ನು ನೋಡಲು ಆಗಮಿಸುವ ಮತ್ತು ಮರಳಿ ಹೋಗುವವರಿಗೆ ಅನುಕೂಲ ಆಗುವಂತೆ ಒಟ್ಟು 12 ರೂಟ್‌ಗಳಿಂದ ಬಿಎಂಟಿಸಿ ಹೊಸ ಸಂಪರ್ಕ ಬಸ್‌ಗಳನ್ನು ಬಿಡುಗಡೆ ಮಾಡಲಾಗಿದೆ.

ಹೌದು, ಬಿಎಂಟಿಸಿ ವತಿಯಿಂದ ಐಪಿಎಲ್ ಮ್ಯಾಚ್ ನೋಡಲು ಹೋಗುವವರಿಗೆ ಗುಡ್ ನ್ಯೂಸ್ ನೀಡಲಾಗಿದೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುವ ಎಲ್ಲಾ ಐಪಿಎಲ್ ಮ್ಯಾಚ್ ಗಳಿಗೂ ವಿಶೇಷ BMTC ಸೇವೆ ನೀಡುತ್ತಿದೆ. ಐಪಿಎಲ್ ಕ್ರಿಕೆಟ್ ಪ್ರೇಮಿಗಳಿಗೆ ನೆರವಾಗುವ ದೃಷ್ಟಿಯಿಂದ ಬಿಎಂಟಿಸಿ ಬಸ್ ಸೇವೆ ವಿಸ್ತರಣೆ ಮಾಡಿದೆ. ಮಾರ್ಚ್ 22, 25, 29 ಮತ್ತು ಏಪ್ರಿಲ್‌ 2ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್‌ಸಿಬಿ ಪಂದ್ಯಗಳು ನಡೆಯಲಿವೆ.

ಜಗತ್ತಿನ ಟಾಪ್ 10 ಬ್ಯೂಟಿಫುಲ್ ಮಹಿಳಾ ಕ್ರಿಕೆಟಿಗರು ಯಾರು? ಎಲಿಸಾ ಪೆರ್ರಿ, ಸ್ಮೃತಿ ಮಂದಾನ ಸ್ಥಾನವೆಷ್ಟು ಗೊತ್ತಾ?

ಬೆಂಗಳೂರಿನಲ್ಲಿ ನಡೆಯುವ ಎಲ್ಲಾ ಮ್ಯಾಚ್ ಗಳ ವೇಳೆ BMTC ಬಸ್ ಗಳ ವಿಶೇಷ ಕಾರ್ಯಾಚರಣೆ ಇರಲಿದೆ. ಪಂದ್ಯದ ವೇಳೆ ಬಂದು ಹೋಗುವ ಎರಡೂ ಅವಧಿಯಲ್ಲೂ ಬಿಎಂಟಿಸಿ ಬಸ್ ವ್ಯವಸ್ಥೆ ಮಾಡಲಾಗುತ್ತಿದೆ. ನಗರದ ಎಲ್ಲಾ ನಿಲ್ದಾಣಗಳಿಂದಲೂ ರಾತ್ರಿ 1 ಗಂಟೆವರೆಗೂ ಬಿಎಂಟಿಸಿ ಬಸ್ ಸೇವೆ ನೀಡಲಾಗುತ್ತದೆ ಎಂದು ನಿಗಮದಿಂದ ತಿಳಿದಲಾಗಿದೆ.

ಎಲ್ಲಿಂದ.. ಎಲ್ಲಿಗೆ? ಬಿಎಂಟಿಸಿ ವಿಶೇಷ ಬಸ್ ಸೇವೆ ಇರಲಿದೆ

  • ಚಿನ್ನಸ್ವಾಮಿ ಸ್ಟೇಡಿಯಂ- ಕಾಡುಗೋಡಿ (ಮಾರ್ಗ- ಹೆಚ್ ಎಎಲ್ ರೋಡ್)
  • ಚಿನ್ನಸ್ವಾಮಿ ಸ್ಟೇಡಿಯಂ - ಕಾಡುಗೋಡಿ (ಮಾರ್ಗ- ಹೂಡಿ ರಸ್ತೆ)
  • ಚಿನ್ನಸ್ವಾಮಿ ಕ್ರೀಡಾಂಗಣ - ಸರ್ಜಾಪುರ (ಮಾರ್ಗ- ಅಗರ ದೊಮ್ಮಸಂದ್ರ)
  • ಚಿನ್ನಸ್ವಾಮಿ ಸ್ಟೇಡಿಯಂ - ಎಲೆಕ್ಟ್ರಾನಿಕ್ ಸಿಟಿ (ಮಾರ್ಗ- ಹೊಸೂರು ರಸ್ತೆ)
  • ಚಿನ್ನಸ್ವಾಮಿ ಸ್ಟೇಡಿಯಂ - ಬನ್ನೇರುಘಟ್ಟ ನ್ಯಾಷನಲ್ ಪಾರ್ಕ್ (ಮಾರ್ಗ- ಜಯದೇವ ಆಸ್ಪತ್ರೆ)
  • ಚಿನ್ನಸ್ವಾಮಿ ಕ್ರೀಡಾಂಗಣ - ಹೆಚ್ ಬಿ ಕ್ವಾರ್ಟರ್ಸ್ (ಮಾರ್ಗ- ಎಂಸಿಟಿಸಿ & ನಾಯಂಡಹಳ್ಳಿ)
  • ಚಿನ್ನಸ್ವಾಮಿ ಸ್ಟೇಡಿಯಂ - ನೆಲಮಂಗಲ (ಮಾರ್ಗ- ಯಶವಂತಪುರ)
  • ಚಿನ್ನಸ್ವಾಮಿ ಸ್ಟೇಡಿಯಂ - ಜನಪ್ರಿಯ ಟೌನ್ ಶಿಪ್ (ಮಾರ್ಗ- ಮಾಗಡಿ ರೋಡ್)
  • ಚಿನ್ನಸ್ವಾಮಿ ಸ್ಟೇಡಿಯಂ - ಯಲಹಂಕ 5ನೇ ಹಂತ (ಮಾರ್ಗ- ಹೆಬ್ಬಾಳ)
  • ಚಿನ್ನಸ್ವಾಮಿ ಸ್ಟೇಡಿಯಂ - ಹೆಗ್ಗಡೆ ನಗರ, ಯಲಹಂಕ (ಮಾರ್ಗ- ನಾಗವಾರ & ಟ್ಯಾನರಿ ರೋಡ್)
  • ಚಿನ್ನಸ್ವಾಮಿ ಸ್ಟೇಡಿಯಂ - ಬಾಗಲೂರು (ಮಾರ್ಗ- ಹೆಣ್ಣೂರು ರಸ್ತೆ)
  • ಚಿನ್ನಸ್ವಾಮಿ ಸ್ಟೇಡಿಯಂ - ಹೊಸಕೋಟೆ (ಮಾರ್ಗ- ಟಿನ್ ಪ್ಯಾಕ್ಟರಿ)

ಮೆಟ್ರೋ ನಿಲ್ದಾಣದಲ್ಲಿ ಹೀಗೆ ಮಾಡಿದ್ರೆ ನಿಮಗೆ ಬಸ್ ಬರುವ ಸ್ಥಳ, ಸಮಯ ಮಾಹಿತಿ ಸಿಗುತ್ತೆ! ಏನಿದು BMTC Feeder?