Asianet Suvarna News Asianet Suvarna News

ಟೀಂ ಇಂಡಿಯಾ ಕಿಟ್‌ಗೆ ಎಂಪಿಎಲ್ ಪ್ರಾಯೋಜಕತ್ವ

ಟೀಂ ಇಂಡಿಯಾಗೆ ಬೆಂಗಳೂರು ಮೂಲದ ಎಂಪಿ​ಎಲ್‌ ಸ್ಪೋರ್ಟ್ಸ್ ಸಂಸ್ಥೆ ಕಿಟ್ ಪ್ರಾಯೋಜಕತ್ವ ನೀಡಲು ಬಿಸಿಸಿಐನನೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ

BCCI ropes in MPL Sports as Team India new kit sponsor for 3 year deal kvn
Author
New Delhi, First Published Nov 3, 2020, 9:08 AM IST

ನವ​ದೆ​ಹ​ಲಿ(ನ.03): ಭಾರತ ಕ್ರಿಕೆಟ್‌ ತಂಡಗಳ ನೂತನ ಕಿಟ್‌ ಪ್ರಾಯೋ​ಜ​ಕರಾಗಿ ಬೆಂಗ​ಳೂರು ಮೂಲದ ಎಂಪಿ​ಎಲ್‌ ಸ್ಪೋರ್ಟ್ಸ್ ಸಂಸ್ಥೆ ಬಿಸಿ​ಸಿಐನೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿ​ದೆ. 

3 ವರ್ಷಗಳ ಕಾಲ ಪ್ರಾಯೋ​ಜ​ಕತ್ವ ನೀಡ​ಲಿ​ರುವ ಎಂಪಿ​ಎಲ್‌ ಸ್ಪೋರ್ಟ್ಸ್ ಪ್ರತಿ ಪಂದ್ಯಕ್ಕೆ ಬಿಸಿ​ಸಿಐಗೆ 65 ಲಕ್ಷ ರುಪಾಯಿ ಪಾವ​ತಿ​ಸ​ಲಿದೆ. ಅಂದರೆ 3 ವರ್ಷಗಳಿಗೆ ಬಿಸಿ​ಸಿಐ 120 ಕೋಟಿ ರುಪಾಯಿ ಸಂಪಾ​ದಿ​ಸ​ಲಿದೆ. ಜೊತೆಗೆ ತಾನು ಮಾರಾಟ ಮಾಡುವ ಪ್ರತಿ ಜೆರ್ಸಿ ಇಲ್ಲವೇ ಇನ್ನಿ​ತರ ಮರ್ಚೆಂಡೈಸ್‌ನ ಶೇ.10ರಷ್ಟು ಮೊತ್ತವನ್ನು ಬಿಸಿ​ಸಿಐಗೆ ನೀಡ​ಲು ಸಂಸ್ಥೆ ಒಪ್ಪಿಗೆ ನೀಡಿದೆ.

ಎಂಪಿ​ಎಲ್‌ ಸ್ಪೋರ್ಟ್ಸ್ ಫ್ಯಾಂಟಸಿ ಗೇಮ್‌ಗಳ ಸಂಸ್ಥೆಯಾಗಿದ್ದು, ಹೊಸದಾಗಿ ಉಡುಪುಗಳ ಉದ್ಯಮವನ್ನು ಆರಂಭಿ​ಸು​ತ್ತಿದೆ. ಆಸ್ಪ್ರೇ​ಲಿಯಾ ಪ್ರವಾಸದಲ್ಲಿ ಭಾರತ ಹೊಸ ಜೆರ್ಸಿಯೊಂದಿಗೆ ಕಣ​ಕ್ಕಿ​ಳಿ​ಯ​ಲಿದೆ.

ಕಪಿಲ್ ದೇವ್ ಆರೋಗ್ಯ ಕುರಿತು ಸುಳ್ಳು ಹಬ್ಬಿಸಬೇಡಿ; ಮಾಜಿ ಕ್ರಿಕೆಟಿಗನಿಂದ ಮನವಿ!

ಹಿಂದಿನ ಒಪ್ಪಂದ​ಕ್ಕಿಂತ ಕಡಿಮೆ: ಈ ಹಿಂದೆ 5 ವರ್ಷಗಳ ಒಪ್ಪಂದ ಹೊಂದಿದ್ದ ಜಾಗ​ತಿಕ ಮಟ್ಟದ ಸಂಸ್ಥೆ ನೈಕಿ, ಪ್ರತಿ ಪಂದ್ಯಕ್ಕೆ 88 ಲಕ್ಷ ರುಪಾಯಿ ಪಾವ​ತಿ​ಸು​ತ್ತಿತ್ತು. ಅಂದರೆ ಒಟ್ಟು 370 ಕೋಟಿ ರುಪಾಯಿ ಮೌಲ್ಯದ ಒಪ್ಪಂದ ಅದಾ​ಗಿತ್ತು. ಜೊತೆಗೆ 30 ಕೋಟಿ ರುಪಾಯಿ ರಾಯಲ್ಟಿಯನ್ನೂ ಪಾವ​ತಿ​ಸಿತ್ತು. ಈ ವರ್ಷ ಸೆಪ್ಟೆಂಬರ್‌ಗೆ ಒಪ್ಪಂದ ಮುಕ್ತಾ​ಯ​ಗೊಂಡಿತ್ತು. ಆ ಬಳಿಕ ಬಿಸಿ​ಸಿಐ ಹೊಸ​ದಾಗಿ ಟೆಂಡರ್‌ ಆಹ್ವಾ​ನಿಸಿತ್ತಾ​ದ​ರೂ, ಕೊರೋನಾ ಆರ್ಥಿಕ ಸಂಕ​ಷ್ಟ​ದಿಂದಾಗಿ ಯಾವ ಸಂಸ್ಥೆಯೂ ಬಿಡ್‌ ಸಲ್ಲಿ​ಸಿ​ರ​ಲಿಲ್ಲ. ಹೀಗಾಗಿ, ಎಂಪಿ​ಎಲ್‌ ಸಂಸ್ಥೆಯೊಂದಿಗೆ ಒಪ್ಪಂದಕ್ಕೆ ಬಿಸಿ​ಸಿ​ಐ ಸಹಿ ಹಾಕಿದೆ.
 

Follow Us:
Download App:
  • android
  • ios