ಕೊರೋನಾ ಬಗ್ಗೆ ಜಾಗೃತಿ ಮೂಡಿಸಲು ದೇಶದ ಹಲವು ರಂಗದ ತಾರೆಯರು ವಿನೂತನ ಪ್ರಯತ್ನ ಮಾಡುತ್ತಿದ್ದಾರೆ. ಇದೀಗ ಬಿಸಿಸಿಐ ಕೂಡಾ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಮುಂದಾಗಿದ್ದು, ‘ಟೀಂ ಮಾಸ್ಕ್‌ ಫೋರ್ಸ್‌’ ಎಂಬ ತಂಡವನ್ನು ರೆಡಿ ಮಾಡಿದೆ. ಏನಿದು ಟೀಂ ಟಾಸ್ಕ್ ಫೋರ್ಸ್ ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.

ನವದೆಹಲಿ(ಏ.19): ಕೊರೋನಾ ಸೋಂಕನ್ನು ತಡೆಗಟ್ಟಲು ಮಾಸ್ಕ್‌ ಧರಿಸಿ ಎಂದು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು, ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ), ‘ಟೀಂ ಮಾಸ್ಕ್‌ ಫೋರ್ಸ್‌’ ಎಂಬ ತಂಡವನ್ನು ಸಿದ್ಧಪಡಿಸಿದೆ. 

ಕ್ರಿಕೆಟಿಗರು ವಿಡಿಯೋ ಮೂಲಕ ಜನರಲ್ಲಿ ಮಾಸ್ಕ್‌ ಧರಿಸುವುದು ಏಕೆ ಮುಖ್ಯ ಎನ್ನುವುದನ್ನು ತಿಳಿಸಿದ್ದಾರೆ. ವಿರಾಟ್‌ ಕೊಹ್ಲಿ, ಸಚಿನ್‌ ತೆಂಡುಲ್ಕರ್‌ ಸೇರಿದಂತೆ ಇನ್ನೂ ಅನೇಕರು ಸಂದೇಶಗಳನ್ನು ನೀಡಿದ್ದಾರೆ. ‘ಭಾರತ ತಂಡದ ಭಾಗವಾಗಿರುವುದು ಬಹಳ ದೊಡ್ಡ ಹೆಮ್ಮೆಯ ವಿಚಾರ. ಇಂದು ನಾವು ಅದಕ್ಕಿಂತ ದೊಡ್ಡ ತಂಡವನ್ನು ಕಟ್ಟುತ್ತಿದ್ದೇವೆ. ಅದುವೇ ಟೀಂ ಮಾಸ್ಕ್‌ ಫೋರ್ಸ್‌’ ಎಂದು ಕೊಹ್ಲಿ ಹೇಳಿದ್ದಾರೆ. 

ಕೊಹ್ಲಿ ಬೌಂಡರಿ ಬಾರಿಸು ಎಂದ ಪತ್ನಿ ಅನುಷ್ಕಾ!

Scroll to load tweet…

ಬಿಸಿಸಿಐ ಅಧ್ಯಕ್ಷ ಸೌರವ್‌ ಗಂಗೂಲಿ, ಸ್ಮೃತಿ ಮಂಧನಾ, ರೋಹಿತ್‌ ಶರ್ಮಾ, ಹರ್ಭಜನ್‌ ಸಿಂಗ್‌, ಹರ್ಮನ್‌ಪ್ರೀತ್‌ ಕೌರ್‌, ವೀರೇಂದ್ರ ಸೆಹ್ವಾಗ್‌, ರಾಹುಲ್‌ ದ್ರಾವಿಡ್‌ ಹಾಗೂ ಮಿಥಾಲಿ ರಾಜ್‌, ಮಾಸ್ಕ್‌ ಮಹತ್ವದ ಬಗ್ಗೆ ತಿಳಿಸಿದ್ದಾರೆ.

Scroll to load tweet…

ಈಗಾಗಲೇ ಹಲವು ಕ್ರಿಕೆಟಿಗರು ಕೊರೋನಾ ಸಂಕಷ್ಟಕ್ಕೆ ದೇಶದ ನೆರವಿಗೆ ಧಾವಿಸಿದ್ದಾರೆ. ಹಲವು ಕ್ರೀಡಾ ತಾರೆಯರು PM CARES ಫಂಡ್‌ಗೆ ದೇಣಿಗೆ ನೀಡಿದ್ದಾರೆ. ಬಿಸಿಸಿಐ ಕೂಡಾ ಉದಾರ ದೇಣಿಗೆ ನೀಡಿದ್ದು 51 ಕೋಟಿ ರುಪಾಯಿಗಳನ್ನು ಪ್ರಧಾನ ಮಂತ್ರಿ ಪರಿಹಾರ ನಿಧಿಗೆ ಅರ್ಪಿಸಿದೆ. ಇದರ ಜತೆಗೆ ಕೊರೋನಾ ಹರಡಂತೆ ತಡೆಯಲು ಪ್ರಧಾನಿ ಮೋದಿ ಘೋಷಿಸಿರುವ ಲಾಕ್‌ಡೌನ್‌ ಬಗ್ಗೆ ಅಭಿಮಾನಿಗಳಿಗೆ ಹಾಗೂ ದೇಶದ ಜನತೆಗೆ ಮನೆತಲ್ಲೇ ಇರಿ ಎನ್ನುವ ಎಚ್ಚರಿಕೆಯ ಸಂದೇಶವನ್ನು ರವಾನಿಸಿದ್ದಾರೆ.