ಪಂಚರ್‌ವಾಲಾ ಇಸ್ಲಾಮ್ ಖಾನ್ ಎಂದೇ ಹೆಸರುವಾಸಿ 2021 ರಿಂದ 2022ರೊಳಗೆ 7.15 ಕೋಟಿ ರೂಪಾಯಿ ಆದಾಯ ಪತ್ನಿ, ಮಕ್ಕಳ ಹೆಸರಲ್ಲಿ ಜಮೀನು ಖರೀದಿ, ಅಸಲಿಯತ್ತು ಬಹಿರಂಗ
ಬರೇಲಿ(ಮೇ.23): ಒಂದು ಸಣ್ಣ ಪಂಚರ್ ಅಂಗಡಿ ಮಾಲೀಕ ಇಸ್ಲಾಮ್ ಖಾನ್. 2021ರ ವರೆಗೆ ಎಲ್ಲವೂ ಒಕೆ. ಆದರೆ 2022ರ ವೇಳೆಗೆ ಇಸ್ಲಾಮ್ ಖಾನ್ ಪಂಚರ್ ಅಂಗಡಿ ಹೆಸರಿ ಮಾತ್ರ. ಒಳಗಿಂದ ಭಾರಿ ಸ್ಲಗ್ಲಿಂಗ್ ವ್ಯವಾಹರ. ಈತನ ಅವ್ಯವಹಾರದ ಸುಳಿವು ಪಡೆದ ಪೊಲೀಸರು, ರೆಡ್ ಹ್ಯಾಂಡ್ ಆಗಿ ಹಿಡಿದ್ದಾರೆ. ಈ ಮೂಲಕ ಇಸ್ಲಾಮ್ ಖಾನ್ ಪಂಚರ್ ಅಂಗಡಿ ಅಸಲಿಯತ್ತು ಬಹಿರಂಗವಾಗಿದೆ.
ಉತ್ತರ ಪ್ರದೇಶದ ಬರೇಲಿಯಲ್ಲಿ ಪಂಚರ್ ಅಂಗಡಿ ಇಟ್ಟಿರುವ ಇಸ್ಲಾಮ್ ಖಾನ್, ಕಳೆದ ಒಂದು ವರ್ಷದಲ್ಲಿ ಗಳಿಸಿದ ಆದಾಯ ಬರೋಬ್ಬರಿ 7.15 ಕೋಟಿ ರೂಪಾಯಿ. ಪತ್ನಿ, ಮಕ್ಕಳು ಹೆಸರಲ್ಲಿ ಜಮೀನು ಖರೀದಿ ಮಾಡಲಾಗಿದೆ. ಇಷ್ಟೇ ಅಲ್ಲ ಅನಾಮಧೇಯನ ಹೆಸರಿನಲ್ಲಿ ಬೈಕ್ ಶೋ ರೂಂ, ಕಾಂಪ್ಲೆಕ್ಸ್ ಸೇರಿದಂತೆ ಹಲವು ಕಟ್ಟಡಗಳು ಇವೆ. ಈತನ ವ್ಯವಹಾರದ ಕುರಿತು ಅನುಮಾನ ಪಟ್ಟ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದರು. ಈ ವೇಳೆ ಉತ್ತರ ಪ್ರದೇಶ ಪೊಲೀಸರಿಗೆ ಮಾದಕ್ ದ್ರವ್ಯ ಮಾರಾಟ ವಾಸನೆಯೂ ಬಡಿದಿತ್ತು.
ಪಿಣರಾಯಿ ವಿಜಯನ್ ಮಾಜಿ ಸೆಕ್ರೆಟರಿ ಆತ್ಮಕತೆ ಸುಳ್ಳಿನ ಕಂತೆ, ಮೌನ ಮುರಿದ ಸ್ವಪ್ನಾ ಸುರೇಶ್!
ಮಾದಕ ದ್ರವ್ಯ ಖರೀದಿ ನೆಪದಲ್ಲಿ ಈತನ ಸಂಗ ಬೆಳೆದಿಸಿ ತನಿಖಾ ತಂಡ ಕಳೆದ ಕೆಲ ತಿಂಗಳುಗಳಿಂದ ಡೀಲಿಂಗ್ ನಡೆಸುವ ನಾಟಕವಾಡಿದ್ದು. ಕೊನೆಗೆ ಪೊಲೀಸರ ಬಲೆಗೆ ಬಿದ್ದ ಇಸ್ಲಾಮ್ ಕಾನ್ ರೆಡ್ ಹ್ಯಾಂಡ್ ಆಗಿ ಹಿಡಿದಿದ್ದರು. ಗ್ಯಾಂಗ್‌ಸ್ಟರ್ ಆ್ಯಕ್ಟ್ ಅಡಿಯಲ್ಲಿ ಇಸ್ಲಾಮ್ ಖಾನ್ ಮೇಲೆ ಪ್ರಕರಣ ದಾಖಲಾಗಿದೆ.
ಇತ್ತೀಚೆಗೆ ಅಕ್ರಮ ಕಟ್ಟಡಗಳ ತೆರವಿಗೆ ಉತ್ತರ ಪ್ರದೇಶ ಸರ್ಕಾರ ಬುಲ್ಡೋಜರ್ ಬಳಸಿತ್ತು. ಈ ವೇಳೆ ಈ ಇಸ್ಲಾಮ್ ಖಾನ್ ಅಕ್ರಮವಾಗಿ ಕಟ್ಟಿದ್ದ ಬೈಕ್ ಶೋ ರೂಂ ಕೂಡ ಕೆಡವಲಾಗಿತ್ತು. ಈ ಕುರಿತು ದಾಖಲೆ ಸಲ್ಲಿಸಲು ಇಸ್ಲಾಮ್ ಖಾನ್ ವಿಫಲವಾಗಿದ್ದರು. ಇತ್ತ ನರ್ಕೋಟಿಕ್ಸ್ ಪ್ರಕರಣ ಅಡಿ ಬಂಧಿಸಲ್ಪಟ್ಟ ಇಸ್ಲಾಮ್ ಕಾನ್ ಆಸ್ತಿ ಹಾಗೂ ಆದಾಯ ಕುರಿತು ದಾಖಲೆ ಸಲ್ಲಿಕೆ ಮಾಡಲು ಇಸ್ಲಾಮ್ ಖಾನ್ ವಿಫಲರಾಗಿದ್ದಾರೆ.
ಪೊಲೀಸರು ಇಸ್ಲಾಮ್ ಖಾನ್ ಆಧಾರ್ ಕಾರ್ಡ್ ಆಧರಿಸಿ ಆತನ ಪಾನ್ ನಂಬರ್ ಸೇರಿದಂತೆ ಇತರ ಮಾಹಿತಿಗಳನ್ನು ಕಲೆ ಹಾಕಿ ತನಿಖೆ ನಡೆಸಿತ್ತು. ಈ ವೇಳೆ ಇತ್ತೀಚಿನ ದಿನಗಳಲ್ಲಿ ಲಕ್ಷ ಲಕ್ಷ ರೂಪಾಯಿ ವ್ಯವಹಾರ ಕಂಡು ಬಂದಿತ್ತು. ಈ ಕುರಿತು ದಾಖಲೆ ಒದಗಿಸಲು ನೋಟಿಸ್ ನೀಡಲಾಗಿತ್ತು. ಈ ವೇಳೆ ಪಂಚರ್ ಶಾಪ್ ಮುಂದಿಟ್ಟುಕೊಂಡು ಭಾರಿ ನಾಟಕ ಆಡಲಾಯಿತು. ಕೆಲ ಮುಸ್ಲಿಮ್ ಕುಟುಂಬಗಳು ಅಲ್ಪಸಂಖ್ಯಾತರ ಮೇಲೆ ಸರ್ಕಾರ ಶೋಷಣೆ ಮಾಡುತ್ತಿದೆ. ಪಂಚರ್ ಆಂಗಡಿಯಿಂದ ಊಟ ಮಾಡುತ್ತಿದ್ದ ಕುಟುಂಬದ ಹೊಟ್ಟೆಗೆ ಯೋಗಿ ಸರ್ಕಾರ ಕಲ್ಲು ಹಾಕಿದೆ ಎಂದು ಪ್ರತಿಭಟನೆಗಳು ನಡೆದಿತ್ತು. ಆದರೆ ಆದಾಯದ ದಾಖಲೆ ಸಲ್ಲಿಕೆ ಮಾಡದೇ ವಿನಾ ಕಾರಣ ನೀಡಿದ್ದ ಇಸ್ಲಾಮ್ ಮೇಲೆ ಪೊಲೀಸರ ಅನುಮಾನ ಹೆಚ್ಚಾಗಿತ್ತು. ಈ ಆದಾಯದ ಮೂಲ ಸ್ಮಗ್ಮಿಂಗ್ ಅನ್ನೋ ಬಲವಾದ ಸಂಶಯ ಇದೀಗ ಬಯಲಾಗಿದೆ.
ಲೇಡಿ ಪೋಲೀಸ್ ಮದುವೆಗೂ 10 ದಿನ ಮುನ್ನ ಸಸ್ಪೆಂಡ್
2021ರಲ್ಲಿ ಬರೇಲಿಯಲ್ಲಿ ತೈಮೂರ್ ಖಾನ್ ಶಾಹಿದ್ ಖಾನ್ ಇಬ್ಬರನ್ನು ಬಂಧಿಸಲಾಗಿತ್ತು ಇವರಿಂದ 60 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಹಾಗೂ ನಗದು ವಶಪಡಿಸಿಕೊಳ್ಳಲಾಗಿತ್ತು. ಈ ಗ್ಯಾಂಗ್ ಮಾದಕ ದ್ರವ್ಯ, ಕೊಕೈನ್ ಸೇರಿದಂತೆ ಸ್ಮಗ್ಲಿಂಗ್ ಕೆಲಸದಲ್ಲಿ ತೊಡಗಿಸಿಕೊಂಡಿದ್ದರು. ಇವರ ಬಂಧನದ ಬಳಿಕವೂ ಬರೇಲಿಯಲ್ಲಿ ಸ್ಮಗ್ಲಿಂಗ್ ಎಗ್ಗಿಲ್ಲದೆ ನಡೆಯತ್ತಿತ್ತು. ಇವರಿಬ್ಬರ ಬಂಧನದ ಬಳಿಕ ಇಸ್ಲಾಮ್ ಖಾನ್ ಸೇರಿದಂತೆ ಹಲವರು ಗೌಪ್ಯವಾಗಿ ವ್ಯವಹಾರ ನಡೆಸುತ್ತಿದ್ದಾರೆ. ಇದರಲ್ಲಿ ಇಸ್ಲಾಮ್ ಖಾನ್ ಮಾತ್ರ ಬಂಧನವಾಗಿದೆ. ವಿಚಾರಣೆ ವೇಳೆ 2021ರಲ್ಲಿ ಬಂಧಿಸಲ್ಪಟ್ಟ ತೈಮೂರ್ ಹಾಗೂ ಶಾಹಿದ್ ಖಾನ್ ಇಬ್ಬರೂ ಇಸ್ಲಾಮ್ ಖಾನ್ ಸಂಬಂಧಿಕರು ಎಂಬುದು ಪತ್ತೆಯಾಗಿದೆ.
