ಆರ್ಮ್‌ ಶೀಲ್ಡ್‌ ಖ್ಯಾತಿಯ ಅಂಪೈರ್‌ ಬ್ರೂಸ್‌ ಆಕ್ಸೆನ್‌ಫರ್ಡ್‌‌ ತಮ್ಮ 15 ವರ್ಷಗಳ ಸುದೀರ್ಘ ಅಂಪೈರಿಂಗ್‌ ವೃತ್ತಿಜೀವನಕ್ಕೆ ಗುಡ್‌ ಬೈ ಹೇಳಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

ದುಬೈ(ಜ.28): ಆಸ್ಟ್ರೇಲಿಯಾ ಮೂಲದ ಅಂಪೈರ್‌ ಬ್ರೂಸ್‌ ಆಕ್ಸೆನ್‌ಫರ್ಡ್‌‌ ತಮ್ಮ ಸುದೀರ್ಘ 15 ವರ್ಷಗಳ ಅಂಪೈರಿಂಗ್ ವೃತ್ತಿಜೀವನಕ್ಕೆ ಗುರುವಾರವಾದ ಇಂದು(ಜ.28) ವಿದಾಯ ಘೋಷಿಸಿದ್ದಾರೆ. 

60 ವರ್ಷದ ಬ್ರೂಸ್‌ ಆಕ್ಸೆನ್‌ಫರ್ಡ್‌ ಎಲ್ಲಾ ಮಾದರಿಯ ಅಂತಾರಾಷ್ಟ್ರೀಯ ಅಂಪೈರಿಂಗ್‌ಗೆ ವಿದಾಯ ಘೋಷಿಸಿದ್ದಾರೆ. ಆದರೆ ಇದೇ ವೇಳೆ ಆಸ್ಟ್ರೇಲಿಯಾದ ದೇಸಿ ಪಂದ್ಯಗಳಲ್ಲಿ ಅಂಪೈರಿಂಗ್ ಆಗಿ ಕಾರ್ಯನಿರ್ವಹಿಸುವುದಾಗಿ ಸ್ಪಷ್ಟಪಡಿಸಿದ್ದಾರೆ. ಬ್ರೂಸ್‌ ಆಕ್ಸೆನ್‌ಫರ್ಡ್‌‌ 2012ರಿಂದೀಚೆಗೆ ಐಸಿಸಿ ಎಲೈಟ್ ಪ್ಯಾನಲ್‌ ಅಂಪೈರ್ ಆಗಿ ಗುರುತಿಸಿಕೊಂಡಿದ್ದರು. ಬ್ರೂಸ್‌ ಆಕ್ಸೆನ್‌ಫರ್ಡ್‌ 62 ಟೆಸ್ಟ್ ಹಾಗೂ 97 ಅಂತಾರಾಷ್ಟ್ರೀಯ ಏಕದಿನ ಪಂದ್ಯಗಳಲ್ಲಿ ಅಂಪೈರ್ ಆಗಿ ಕಾರ್ಯನಿರ್ವಹಿಸಿದ್ದಾರೆ. ಇದಷ್ಟೇ ಅಲ್ಲದೇ 3 ಏಕದಿನ ವಿಶ್ವಕಪ್, 3 ಟಿ20 ವಿಶ್ವಕಪ್ ಮತ್ತು ಎರಡು ಮಹಿಳಾ ಟಿ20 ವಿಶ್ವಕಪ್‌ನಲ್ಲಿ ಅಂಪೈರ್ ಆಗಿ ಕಾರ್ಯನಿರ್ವಹಿಸಿದ್ದಾರೆ.

Scroll to load tweet…

ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಬ್ರೂಸ್‌ ಆಕ್ಸೆನ್‌ಫರ್ಡ್‌‌ ತಮ್ಮ ಎಡಗೈಗೆ ಆರ್ಮ್‌ ಶೀಲ್ಡ್‌ ಅಳವಡಿಸಿಕೊಳ್ಳುವ ಮೂಲಕ ಸಾಕಷ್ಟು ಗಮನ ಸೆಳೆದಿದ್ದರು. ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಗಾಬಾ ಟೆಸ್ಟ್ ಪಂದ್ಯವೇ ಬ್ರೂಸ್‌ ಆಕ್ಸೆನ್‌ಫರ್ಡ್‌ ಪಾಲಿಗೆ ಕಡೆಯ ಬಾರಿಗೆ ಅಂತಾರಾಷ್ಟ್ರೀಯ ಪಂದ್ಯವಾಗಿತ್ತು.

Scroll to load tweet…

ಐಸಿಸಿ ಏಕದಿನ ರ‍್ಯಾಂಕಿಂಗ್‌: ಮೊದಲೆರಡು ಸ್ಥಾನ ಉಳಿಸಿಕೊಂಡ ಕೊಹ್ಲಿ, ರೋಹಿತ್..!

ನಾನು ಒಮ್ಮೆ ಹಿಂತಿರುಗಿ ನೋಡಿದಾಗ ನನ್ನ ವೃತ್ತಿಜೀವನದ ಬಗ್ಗೆ ನನಗೆ ಹೆಮ್ಮೆಯಿದೆ. ಸುಮಾರು 200ರ ಸಮೀಪದಷ್ಟು ಪಂದ್ಯಗಳಲ್ಲಿ ನಾನು ಅಂಪೈರ್ ಆಗಿ ಕಾರ್ಯನಿರ್ವಹಿಸಿದ್ದೇನೆ ಎಂದರೆ ನನಗೇ ಆಶ್ಚರ್ಯವಾಗುತ್ತಿದೆ. ಈ ಸಂದರ್ಭದಲ್ಲಿ ನನ್ನನ್ನು ಬೆಂಬಲಿಸಿದೆ ಐಸಿಸಿ, ಕ್ರಿಕೆಟ್ ಆಸ್ಟ್ರೇಲಿಯಾ, ಸಹೋದ್ಯೋಗಿಗಳು ಹಾಗೂ ಸಹಾಯಕ ಸಿಬ್ಬಂದಿಗಳಿಗೆ ನಾನು ಧನ್ಯವಾದಗಳನ್ನು ಅರ್ಪಿಸುತ್ತೇನೆ. ಇನ್ನು ಮುಂದೆ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ನಾನು ಅಂಪೈರ್ ಆಗಿ ಕಾಣಿಸಿಕೊಳ್ಳುವುದಿಲ್ಲ, ಆದರೆ ಆಸ್ಟ್ರೇಲಿಯಾದೊಳಗೆ ನಡೆಯುವ ದೇಸಿ ಪಂದ್ಯಗಳಲ್ಲಿ ಅಂಪೈರ್ ಆಗಿ ಕಾರ್ಯನಿರ್ವಹಿಸಲಿದ್ದೇನೆ ಎಂದು ಬ್ರೂಸ್‌ ಆಕ್ಸೆನ್‌ಫರ್ಡ್‌ ಹೇಳಿದ್ದಾರೆ.

Scroll to load tweet…