ವುಮೆನ್ಸ್ ಪ್ರೀಮಿಯರ್ ಲೀಗ್ ಟೂರ್ನಿಯು ಮಾರ್ಚ್ 04ರಿಂದ ಆರಂಭಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕಿಯಾಗಿ ಮೆಗ್ ಲ್ಯಾನಿಂಗ್ ನೇಮಕ4 ಟಿ20 ವಿಶ್ವಕಪ್ ಒಂದು ಏಕದಿನ ವಿಶ್ವಕಪ್ ಗೆದ್ದ ನಾಯಕಿ ಲ್ಯಾನಿಂಗ್
ಮುಂಬೈ(ಮಾ.03): 4 ಟಿ20, 1 ಏಕದಿನ ವಿಶ್ವಕಪ್ ವಿಜೇತ ಆಸ್ಪ್ರೇಲಿಯಾ ತಂಡದ ನಾಯಕಿ ಮೆಗ್ ಲ್ಯಾನಿಂಗ್ ಚೊಚ್ಚಲ ಅವೃತ್ತಿಯ ವುಮೆನ್ಸ್ ಪ್ರೀಮಿಯರ್ ಲೀಗ್(ಮಹಿಳಾ ಐಪಿಎಲ್)ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಮುನ್ನಡೆಸಲಿದ್ದಾರೆ. ಭಾರತದ ತಾರಾ ಬ್ಯಾಟರ್ ಜೆಮಿಮಾ ರೋಡ್ರಿಗ್ಸ್ ತಂಡಕ್ಕೆ ಉಪನಾಯಕಿಯಾಗಿ ನೇಮಕಗೊಂಡಿದ್ದಾರೆ.
ಇತ್ತೀಚೆಗೆ ನಡೆದ ಹರಾಜಿನಲ್ಲಿ ಡೆಲ್ಲಿ ತಂಡ ಲ್ಯಾನಿಂಗ್ರನ್ನು 1.1 ಕೋಟಿ ರು. ನೀಡ ಖರೀದಿಸಿತ್ತು. ಜೆಮಿಮಾ 2.2 ಕೋಟಿ ರು.ಗೆ ತಂಡಕ್ಕೆ ಬಿಕರಿಯಾಗಿದ್ದರು. ಲ್ಯಾನಿಂಗ್ ಟೂರ್ನಿಯಲ್ಲಿ ತಂಡ ಮುನ್ನಡೆಸಲಿರುವ 3ನೇ ಆಸೀಸ್ ಆಟಗಾರ್ತಿ. ಬೆಥ್ ಮೂನಿ ಗುಜರಾತ್ ಜೈಂಟ್ಸ್, ಅಲೀಸಾ ಹೀಲಿ ಯುಪಿ ವಾರಿಯರ್ಸ್ಗೆ ನಾಯಕತ್ವ ವಹಿಸಲಿದ್ದಾರೆ.
ಮಹಿಳಾ ಐಪಿಎಲ್: ಯುಪಿ ತಂಡಕ್ಕೆ ದೀಪ್ತಿ ಉಪನಾಯಕಿ
ನವದೆಹಲಿ. ವುಮೆನ್ಸ್ ಪ್ರೀಮಿಯರ್ ಲೀಗ್(ಮಹಿಳಾ ಐಪಿಎಲ್)ನ ಯುಪಿ ವಾರಿಯರ್ಸ್ ತಂಡಕ್ಕೆ ಆಲ್ರೌಂಡರ್ ದೀಪ್ತಿ ಶರ್ಮಾ ಉಪನಾಯಕಿಯಾಗಿ ನೇಮಕಗೊಂಡಿದ್ದಾರೆ. 25 ವರ್ಷದ ದೀಪ್ತಿಯನ್ನು ಇತ್ತೀಚೆಗೆ ನಡೆದ ಹರಾಜಿನಲ್ಲಿ ಫ್ರಾಂಚೈಸಿಯು 2.6 ಕೋಟಿ ರು. ನೀಡಿ ಖರೀದಿಸಿತ್ತು. ಅವರನ್ನು ತಂಡಕ್ಕೆ ನಾಯಕಿಯಾಗಿ ನೇಮಿಸಲಾಗುತ್ತದೆ ಎಂದು ವರದಿಯಾಗಿತ್ತು. ಆದರೆ ನಾಯಕತ್ವದ ಹೊಣೆಯನ್ನು ಆಸ್ಪ್ರೇಲಿಯಾದ ಅಲೀಸಾ ಹೀಲಿಗೆ ವಹಿಸಲಾಗಿದೆ. ಮಾರ್ಚ್ 4ಕ್ಕೆ ಚೊಚ್ಚಲ ಆವೃತ್ತಿ ಮಹಿಳಾ ಐಪಿಎಲ್ ಆರಂಭಗೊಳ್ಳಲಿದೆ.
ಟಿ20 ವಿಶ್ವಕಪ್ ಶ್ರೇಷ್ಠ ತಂಡದಲ್ಲಿ ರಿಚಾ ಘೋಷ್
ಕೇಪ್ಟೌನ್: ಭಾರತದ ವಿಕೆಟ್ ಕೀಪರ್ ಬ್ಯಾಟರ್ ರಿಚಾ ಘೋಷ್ ಐಸಿಸಿ ಮಹಿಳಾ ಟಿ20 ವಿಶ್ವಕಪ್ನ ಶ್ರೇಷ್ಠ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದು, ತಂಡದಲ್ಲಿರುವ ಏಕೈಕ ಭಾರತೀಯ ಆಟಗಾರ್ತಿ ಎನಿಸಿದ್ದಾರೆ. ರಿಚಾ ವಿಂಡೀಸ್ ವಿರುದ್ಧ ಔಟಾಗದೆ 44, ಇಂಗ್ಲೆಂಡ್ ವಿರುದ್ಧ ಔಟಾಗದೆ 47 ರನ್ ಸೇರಿ 68ರ ಸರಾಸರಿಯಲ್ಲಿ ಒಟ್ಟು 136 ರನ್ ಸಿಡಿಸಿದ್ದರು. ತಂಡಕ್ಕೆ ಇಂಗ್ಲೆಂಡ್‌ನ ನಥಾಲಿ ಸ್ಕೀವರ್ ನಾಯಕಿಯಾಗಿ ಆಯ್ಕೆಯಾಗಿದ್ದು, ಆಸ್ಪ್ರೇಲಿಯಾದ ನಾಲ್ವರು ತಂಡದಲ್ಲಿದ್ದಾರೆ.
WPL 2023 ಮಹಿಳಾ ಐಪಿಎಲ್ ಅದ್ಧೂರಿ ಒಪನಿಂಗ್ ಸೆರಮನಿ, ಕೃತಿ, ಕಿಯಾರ ವರ್ಣರಂಜಿತ ಕಾರ್ಯಕ್ರಮ!
2024ರ ಟಿ20 ವಿಶ್ವಕಪ್ಗೆ ಭಾರತ ವನಿತೆಯರ ಅರ್ಹತೆ
ದುಬೈ: ಬಾಂಗ್ಲಾದೇಶದಲ್ಲಿ ನಡೆಯಲಿರುವ 2024ರ ಐಸಿಸಿ ಮಹಿಳಾ ಟಿ20 ವಿಶ್ವಕಪ್ಗೆ ಭಾರತ ತಂಡ ನೇರವಾಗಿ ಅರ್ಹತೆ ಗಿಟ್ಟಿಸಿಕೊಂಡಿದೆ. ಇತ್ತೀಚೆಗೆ ಮುಕ್ತಾಯಗೊಂಡ ಟಿ20 ವಿಶ್ವಕಪ್ನಲ್ಲಿ ಭಾರತ ಗುಂಪು 2ರಲ್ಲಿ 2ನೇ ಸ್ಥಾನ ಪಡೆದಿತ್ತು. ಈ ಗುಂಪಿನಿಂದ ಇಂಗ್ಲೆಂಡ್, ವೆಸ್ಟ್ಇಂಡೀಸ್ ತಂಡಗಳು ನೇರವಾಗಿ ಅರ್ಹತೆ ಪಡೆದಿವೆ.
ಚಾಂಪಿಯನ್ ಆಸ್ಪ್ರೇಲಿಯಾ, ನ್ಯೂಜಿಲೆಂಡ್ ಹಾಗೂ ದ.ಆಫ್ರಿಕಾ ತಂಡಗಳೂ ವಿಶ್ವಕಪ್ನಲ್ಲಿ ಸ್ಥಾನ ಗಿಟ್ಟಿಸಿಕೊಂಡಿವೆ. ಬಾಂಗ್ಲಾದೇಶ ಆತಿಥ್ಯ ದೇಶವಾಗಿ ಅರ್ಹತೆ ಪಡೆದಿದ್ದು, ರಾರಯಂಕಿಂಗ್ನಲ್ಲಿ 7ನೇ ಸ್ಥಾನದಲ್ಲಿರುವ ಪಾಕಿಸ್ತಾನ ಕೂಡಾ ಅರ್ಹತೆ ಗಿಟ್ಟಿಸಿದೆ. ಆದರೆ ಶ್ರೀಲಂಕಾ, ಐರ್ಲೆಂಡ್ ನೇರವಾಗಿ ಅರ್ಹತೆ ಪಡೆದುಕೊಳ್ಳಲು ವಿಫಲವಾಗಿವೆ.
