14 ವರ್ಷಗಳ ಬಳಿಕ ಅಂಡರ್ 19 ಕಿರೀಟ ಗೆದ್ದ ಆಸ್ಟ್ರೇಲಿಯಾ, ಟೀಂ ಇಂಡಿಯಾಗೆ ನಿರಾಸೆ!
ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ರೋಹಿತ್ ಸೈನ್ಯ ಪಡೆ ಆಸ್ಟ್ರೇಲಿಯಾ ವಿರುದ್ಧ ಮುಗ್ಗರಿಸಿ ಪ್ರಶಸ್ತಿ ಕೈಚೆಲ್ಲಿದ್ದರೆ, ಇದೀಗ ಅಂಡರ್ 19 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಭಾರತ, ಆಸ್ಟ್ರೇಲಿಯಾ ವಿರುದ್ಧ ಸೋಲು ಕಂಡಿದೆ. ಈ ಮೂಲಕ ಚಾಂಪಿಯನ್ ಕಿರೀಟ ಕೈತಪ್ಪಿದೆ.
ಬೆನೊನಿ(ಫೆ.11) ಅಂಡರ್ 19 ವಿಶ್ವಕಪ್‌ನಲ್ಲಿ 6ನೇ ಚಾಂಪಿಯನ್ ಕಿರೀಟದ ಮೇಲೆ ಕಣ್ಣಿಟ್ಟಿದ್ದ ಟೀಂ ಇಂಡಿಯಾಗೆ ನಿರಾಸೆಯಾಗಿದೆ. ಆಸ್ಟ್ರೇಲಿಯಾ ವಿರುದ್ಧದ ಫೈನಲ್ ಪಂದ್ಯದಲ್ಲಿ ಭಾರತ ಸೋಲು ಕಂಡಿದೆ. ಆದರೆ ಆಸ್ಟ್ರೇಲಿಯಾ ಬರೋಬ್ಬರಿ 14 ವರ್ಷಗಳ ಬಳಿಕ ಚಾಂಪಿಯನ್ ಪಟ್ಟ ಮುಡಿಗೇರಿಸಿದೆ. ಫೈನಲ್ ಪಂದ್ಯದಲ್ಲಿ ಭಾರತ 254 ರನ್ ಟಾರ್ಗೆಟ್ ಪಡೆದಿತ್ತು. ಆದರೆ ದಿಟ್ಟ ಬೌಲಿಂಗ್ ಪ್ರದರ್ಶನದ ಮುಂದೆ ಟೀಂ ಇಂಡಿಯಾ 174 ರನ್ ಸಿಡಿಸಿ ಆಲೌಟ್ ಆಯಿತು. ಆಸ್ಟ್ರೇಲಿಯಾ 79 ರನ್ ಗೆಲುವು ದಾಖಲಿಸಿತು.
ಆಸ್ಟ್ರೇಲಿಯಾ ನೀಡಿದ 254 ರನ್ ಟಾರ್ಗೆಟ್ ಚೇಸ್ ಮಾಡಲು ಸಾಧ್ಯವಾಗಲಿಲ್ಲ. ಆದರ್ಶ್ ಸಿಂಗ್ ಹಾಗೂ ಮುರುಗನ್ ಅಭಿಷೇಕ್ ಹೊರತು ಪಡಿಸಿ ಇನ್ನುಳಿದವರಿಂದ ನಿರೀಕ್ಷಿತ ಹೋರಾಟ ಮೂಡಿಬರಲಿಲ್ಲ. ಭಾರತಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಅರ್ಶಿನ್ ಕುಲಕರ್ಣಿ ಕೇವಲ 3 ರನ್ ಸಿಡಿಸಿ ನಿರ್ಗಮಿಸಿದರು. ಆದರ್ಶ್ ಸಿಂಗ್ ಹೋರಾಟ ಮುಂದವರಿಸಿದರು. ಆದರೆ ಇತರರಿಂದ ಉತ್ತಮ ಸಾಥ್ ಸಿಗಲಿಲ್ಲ. ಮುಶೀರ್ ಖಾನ್ 22 ರನ್ ಕಾಣಿಕೆ ನೀಡಿದರು. ನಾಯಕ ಉದಯ್ ಶರಣ್ ಕೇವಲ 2 ರನ್ ಸಿಡಿಸಿ ಔಟಾದರು.
IPL ಹತ್ತಿರವಾಗುತ್ತಿದ್ದಂತೆ ಮತ್ತೆ ಗುಡುಗಿದ ಗ್ಲೆನ್ ಮ್ಯಾಕ್ಸ್‌ವೆಲ್..! ರೋಹಿತ್ ಶರ್ಮಾ ದಾಖಲೆ ಧೂಳೀಪಟ
ಸಚಿನ್ ದಾಸ್ 9, ಪ್ರಿಯಾಂಶ್ 9 ರನ್ ಸಿಡಿಸಿ ಔಟಾದರು ಅರವೇಲಿ ಅವಿನಾಶ್, ರಾಜ್ ಲಿಂಬಾನಿ ಬಹುಬೇಗನೆ ಔಟಾದರು. ಹೋರಾಟ ನೀಡಿದ ಆದರ್ಶನ್ ಸಿಂಗ್ 47 ರನ್ ಸಿಡಿಸಿ ಔಟಾದರು. ಇತ್ತ ಅಭಿಷೇಕ್ ಮುರುಗನ್ ಹೋರಾಟ ನೀಡಿದರೂ ಸಾಕಾಗಲಿಲ್ಲ. ಆಸ್ಟ್ರೇಲಿಯಾ ಮಿಂಚಿನ ದಾಳಿಗೆ ರನ್ ಬರಲಿಲ್ಲ, ವಿಕೆಟ್ ಉಳಿಯಲಿಲ್ಲ.
ಮರುಗೇಶ್ ಅಭಿಷೇಕನ್ 42 ರನ್ ಸಿಡಿಸಿ ಔಟಾದರು. ನಮನ್ ತಿವಾರಿ 14 ರನ್ ಸಿಡಿಸಿದರೆ, ಸೌಮೇ ಪಾಂಡೆ ಕೇವಲ 2 ರನ್ ಸಿಡಿಸಿದರು. 43.5 ಓವರ್‌ಗಳಲ್ಲಿ 174 ರನ್ ಸಿಡಿಸಿ ಆಲೌಟ್ ಆಯಿತು. ಆಸ್ಟ್ರೇಲಿಯಾ 79 ರನ್ ಭರ್ಜರಿ ಗೆಲುವು ದಾಖಲಿಸಿತು. ಆಸ್ಟ್ರೇಲಿಯಾ ಇದೀಗ 3ನೇ ಬಾರಿಗೆ ಅಂಡರ್ 19 ವಿಶ್ವಕಪ್ ಪ್ರಶಸ್ತಿ ಗೆದ್ದುಕೊಂಡಿದೆ. 1988ರ ಉದ್ಘಾಟನಾ ಆವೃತ್ತಿಯಲ್ಲಿ ಚಾಂಪಿಯನ್ ಆಗಿದ್ದ ಆಸ್ಟ್ರೇಲಿಯಾ ಆ ಬಳಿಕ 2010ರಲ್ಲಿ 2ನೇ ಪ್ರಶಸ್ತಿ ಜಯಿಸಿತ್ತು. ಇದೀಗ 14 ವರ್ಷ ಬಳಿಕ ಮತ್ತೆ ಟ್ರೋಫಿ ಎತ್ತಿಹಿಡಿದಿದೆ. 2012, 2018ರಲ್ಲಿ ಆಸೀಸ್ ರನ್ನರ್-ಅಪ್ ಸ್ಥಾನಕ್ಕೆ ತೃಪ್ತಿಪಟ್ಟಿತ್ತು.
ಶ್ರೇಯಸ್ ಅಯ್ಯರ್‌ಗೆ ಸಿಕ್ಕಿದ್ದು ವಿಶ್ರಾಂತಿಯಲ್ಲ, ಟೀಂ ಇಂಡಿಯಾದಿಂದ ಕಿಕೌಟ್..?