* ಟೆಸ್ಟ್‌ ಕ್ರಿಕೆಟ್‌ನಲ್ಲಿ ಮುಂದುವರೆದ ದಕ್ಷಿಣ ಆಫ್ರಿಕಾದ ಬ್ಯಾಟಿಂಗ್ ವೈಫಲ್ಯ* ಟೆಸ್ಟ್‌ನ ಸತತ 7ನೇ ಇನ್ನಿಂಗ್‌್ಸನಲ್ಲಿ 200ಕ್ಕಿಂತ ಕಡಿಮೆ ಮೊತ್ತಕ್ಕೆ ಆಲೌಟಾದ ದಕ್ಷಿಣ ಆಫ್ರಿಕಾ* 56ಕ್ಕೆ 1 ವಿಕೆಟ್‌ ಕಳೆದುಕೊಂಡಿದ್ದ ತಂಡ 67 ರನ್‌ ಗಳಿಸುವಷ್ಟರಲ್ಲಿ 5 ವಿಕೆಟ್‌ ಕಳೆದುಕೊಂಡ ಹರಿಣಗಳು

ಮೆಲ್ಬರ್ನ್‌(ಡಿ.27): ಟೆಸ್ಟ್‌ನ ಸತತ 7ನೇ ಇನ್ನಿಂಗ್‌್ಸನಲ್ಲಿ 200ಕ್ಕಿಂತ ಕಡಿಮೆ ಮೊತ್ತಕ್ಕೆ ಆಲೌಟಾದ ದ.ಆಫ್ರಿಕಾ ತಂಡ ಆಸ್ಪ್ರೇಲಿಯಾ ವಿರುದ್ಧದ 2ನೇ ಟೆಸ್ಟ್‌ನ ಮೊದಲ ದಿನವೇ ಭಾರೀ ಹಿನ್ನಡೆ ಅನುಭವಿಸಿದೆ. ಮೊದಲು ಬ್ಯಾಟ್‌ ಮಾಡಿದ ದ.ಆಫ್ರಿಕಾ ಮಾರ್ಕೊ ಯಾನ್ಸನ್‌(59), ಕೈಲ್‌ ವೆರೈನ್‌(52) ಹೋರಾಟದ ಹೊರತಾಗಿಯೂ 189ಕ್ಕೆ ಆಲೌಟಾಯಿತು. 

56ಕ್ಕೆ 1 ವಿಕೆಟ್‌ ಕಳೆದುಕೊಂಡಿದ್ದ ತಂಡ 67 ರನ್‌ ಗಳಿಸುವಷ್ಟರಲ್ಲಿ 5 ವಿಕೆಟ್‌ ಬಿದ್ದ ಪರಿಣಾಮ ಸಂಕಷ್ಟಕ್ಕೆ ಸಿಲುಕಿತು. 6ನೇ ವಿಕೆಟ್‌ಗೆ ಯಾನ್ಸನ್‌-ವೆರೈನ್‌ ಜೋಡಿ 112 ರನ್‌ ಜೊತೆಯಾಟವಾಡಿ ತಂಡವನ್ನು ಮೇಲೆತ್ತಿತು. ಮೊದಲ ಇನ್ನಿಂಗ್‌್ಸ ಆರಂಭಿಸಿರುವ ಆಸೀಸ್‌ ಮೊದಲ ದಿನದಂತ್ಯಕ್ಕೆ 1 ವಿಕೆಟ್‌ಗೆ 45 ರನ್‌ ಗಳಿಸಿದೆ.

ಐಪಿಎಲ್‌ ಬಂಪರ್‌ ಬೆನ್ನಲ್ಲೇ ಗ್ರೀನ್‌ ಚೊಚ್ಚಲ 5 ವಿಕೆಟ್‌!

ಇತ್ತೀಚೆಗಷ್ಟೇ ಐಪಿಎಲ್‌ ಮಿನಿ ಹರಾಜಿನಲ್ಲಿ 17.5 ಕೋಟಿ ರು.ಗೆ ಮುಂಬೈ ಇಂಡಿಯನ್ಸ್‌ ತಂಡದ ಪಾಲಾಗಿ, ಟೂರ್ನಿಯ ಇತಿಹಾಸದಲ್ಲೇ 2ನೇ ಅತಿದುಬಾರಿ ಆಟಗಾರ ಎನಿಸಿಕೊಂಡ ಕ್ಯಾಮರೂನ್‌ ಗ್ರೀನ್‌ ಟೆಸ್ಟ್‌ ಕ್ರಿಕೆಟ್‌ನಲ್ಲಿ ಚೊಚ್ಚಲ 5 ವಿಕೆಟ್‌ ಗೊಂಚಲು ಪಡೆದರು. 10.4 ಓವರಲ್ಲಿ 27 ರನ್‌ಗೆ 5 ವಿಕೆಟ್‌ ಪಡೆದು ದ.ಆಫ್ರಿಕಾಕ್ಕೆ ಮುಳುವಾದರು.

ಆಸ್ಪ್ರೇಲಿಯಾ: ವಾರ್ನ್‌ ಹೆಸರಲ್ಲಿ ವಾರ್ಷಿಕ ಪ್ರಶಸ್ತಿ

ಮೆಲ್ಬರ್ನ್‌: ಸಾರ್ವಕಾಲಿಕ ಶ್ರೇಷ್ಠ ಬೌಲರ್‌ಗಳಲ್ಲಿ ಓರ್ವರಾದ ದಿಗ್ಗಜ ಸ್ಪಿನ್ನರ್‌ ಶೇನ್‌ ವಾರ್ನ್‌ಗೆ ಕ್ರಿಕೆಟ್‌ ಆಸ್ಪ್ರೇಲಿಯಾ ವಿಶೇಷ ಗೌರವ ಸಮರ್ಪಿಸಿದ್ದು, ಅವರ ಹೆಸರಿನಲ್ಲಿ ವಾರ್ಷಿಕ ಟೆಸ್ಟ್‌ ಕ್ರಿಕೆಟಿಗ ಪ್ರಶಸ್ತಿ ನೀಡಲು ನಿರ್ಧರಿಸಿದೆ. ಈ ಮೊದಲು ‘ಆಸ್ಪ್ರೇಲಿಯಾದ ವರ್ಷದ ಟೆಸ್ಟ್‌ ಆಟಗಾರ’ ಹೆಸರಲ್ಲಿ ಪ್ರಶಸ್ತಿ ನೀಡಲಾಗುತ್ತಿತ್ತು. ಅದಕ್ಕೆ ಮರುನಾಮಕರಣ ಮಾಡಿದ ಮಂಡಳಿಯು, ಇನ್ನು ಮುಂದೆ ‘ಶೇನ್‌ ವಾರ್ನ್‌ ವಾರ್ಷಿಕ ಟೆಸ್ಟ್‌ ಕ್ರಿಕೆಟಿಗ’ ಹೆಸರಲ್ಲಿ ಪ್ರಶಸ್ತಿ ನೀಡಲಿದೆ. 2006ರಲ್ಲಿ ವಾರ್ನ್‌ ವರ್ಷದ ಟೆಸ್ಟ್‌ ಕ್ರಿಕೆಟಿಗ ಪ್ರಶಸ್ತಿಗೆ ಭಾಜನರಾಗಿದ್ದರು. ಟೆಸ್ಟ್‌ನಲ್ಲಿ 708 ವಿಕೆಟ್‌ ಪಡೆದಿರುವ ವಾರ್ನ್‌ ಕಳೆದ ಮಾರ್ಚ್‌ನಲ್ಲಿ ಮೃತಪಟ್ಟಿದ್ದರು.

Scroll to load tweet…

ಆಜಂ ಶತಕ: ನ್ಯೂಜಿಲೆಂಡ್‌ ವಿರುದ್ಧ ಪಾಕಿಸ್ತಾನ 317/5

ಕರಾಚಿ: ನಾಯಕ ಬಾಬರ್‌ ಆಜಂ ಶತಕದ ನೆರವಿನಿಂದ ನ್ಯೂಜಿಲೆಂಡ್‌ ವಿರುದ್ಧ ಮೊದಲ ಟೆಸ್ಟ್‌ ಪಂದ್ಯದಲ್ಲಿ ಪಾಕಿಸ್ತಾನ ಬೃಹತ್‌ ಮೊತ್ತದತ್ತ ದಾಪುಗಾಲಿಟ್ಟಿದೆ. ಮೊದಲ ದಿನದಂತ್ಯಕ್ಕೆ 5 ವಿಕೆಟ್‌ಗೆ 317 ರನ್‌ ಕಲೆ ಹಾಕಿದೆ. 110 ರನ್‌ಗೆ 4 ವಿಕೆಟ್‌ ಕಳೆದುಕೊಂಡು ಆತಂಕದಲ್ಲಿದ್ದ ತಂಡಕ್ಕೆ ಆಜಂ ಹಾಗೂ 3 ವರ್ಷಗಳ ಬಳಿಕ ಟೆಸ್ಟ್‌ ಆಡುತ್ತಿರುವ ಸರ್ಫರಾಜ್‌ ಅಹ್ಮದ್‌ ಆಸರೆಯಾದರು. ಈ ಜೋಡಿ 5ನೇ ವಿಕೆಟ್‌ಗೆ 196 ರನ್‌ ಜೊತೆಯಾಟವಾಡಿತು. 

ಅಶ್ವಿನ್‌, ಶ್ರೇಯಸ್ ಬ್ಯಾಟಿಂಗ್ ಅಬ್ಬರ: ಬಾಂಗ್ಲಾ ವಿರುದ್ಧ ಟೀಂ ಇಂಡಿಯಾಗೆ 3 ವಿಕೆಟ್‌ಗಳ ಗೆಲುವು; ಸರಣಿ ಕ್ಲೀನ್‌ಸ್ವೀಪ್

ಸತತ 26 ಪಂದ್ಯಗಳನ್ನಾಡಿದ್ದ ಮೊಹಮದ್‌ ರಿಜ್ವಾನ್‌ ಬದಲು ತಂಡದಲ್ಲಿ ಸ್ಥಾನ ಪಡೆದ ಸರ್ಫರಾಜ್‌ ಅತ್ಯಮೂಲ್ಯ 86 ರನ್‌ ಗಳಿಸಿ ಔಟಾದರೆ, 9ನೇ ಟೆಸ್ಟ್‌ ಶತಕ ಪೂರ್ತಿಗೊಳಿಸಿದ ಆಜಂ 161 ರನ್‌ ಗಳಿಸಿ ಕ್ರೀಸ್‌ ಕಾಯ್ದುಕೊಂಡಿದ್ದಾರೆ.