ಎರಡನೇ ಟೆಸ್ಟ್‌: ಆಸೀಸ್‌ 318ಕ್ಕೆ ಆಲೌಟ್, ಪಾಕ್ ಎಚ್ಚರಿಕೆಯ ಆರಂಭ

ಎರಡನೇ ದಿನದಾಟ ಆರಂಭಿಸಿದ ಆಸ್ಟ್ರೇಲಿಯಾ ತಂಡವು 318 ರನ್‌ಗಳಿಗೆ ಸರ್ವಪತನ ಕಂಡಿತು. ಮಾರ್ನಸ್ ಲಬುಶೇನ್ 63 ರನ್ ಬಾರಿಸಿ ವಿಕೆಟ್ ಒಪ್ಪಿಸಿದರೆ, ಆಲ್ರೌಂಡರ್ ಮಿಚೆಲ್ ಮಾರ್ಷ್ 41 ರನ್ ಬಾರಿಸಿ ಪೆವಿಲಿಯನ್ ಸೇರಿದರು. ಇದಾದ ಬಳಿಕ ಆಸೀಸ್ ದಿಢೀರ್ ವಿಕೆಟ್ ಕಳೆದುಕೊಳ್ಳುವ ಮೂಲಕ ಕೇವಲ 318 ರನ್‌ಗಳಿಗೆ ಆಲೌಟ್ ಆಯಿತು.

Aus vs Pak 2nd Test Pakistan steady start  after Australia all out for 318 runs  kvn

ಮೆಲ್ಬರ್ನ್‌: ಪಾಕಿಸ್ತಾನ ವಿರುದ್ಧದ 2ನೇ ಟೆಸ್ಟ್‌ನಲ್ಲಿ ಮೊದಲು ಬ್ಯಾಟ್‌ ಮಾಡಲು ಆಹ್ವಾನ ಪಡೆದ ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸಲ್ಲಿ ಮೊದಲ ದಿನದಂತ್ಯಕ್ಕೆ 3 ವಿಕೆಟ್‌ಗೆ 187 ರನ್‌ ಕಲೆಹಾಕಿತು. ಮಳೆಯಿಂದಾಗಿ ಪಂದ್ಯ ತಡವಾಗಿ ಆರಂಭಗೊಂಡ ಕಾರಣ, ದಿನದಾಟದಲ್ಲಿ ಕೇವಲ 66 ಓವರ್‌ ಆಟವಷ್ಟೇ ನಡೆಯಿತು. ಉಸ್ಮಾನ್‌ ಖವಾಜ 42 ರನ್‌ ಗಳಿಸಿ ಔಟಾದರೆ, ಮಾರ್ನಸ್‌ ಲಬುಶೇನ್‌ 44 ರನ್‌ ಗಳಿಸಿ 2ನೇ ದಿನಕ್ಕೆ ಬ್ಯಾಟಿಂಗ್‌ ಕಾಯ್ದುಕೊಂಡಿದ್ದರು.

ಇನ್ನು ಎರಡನೇ ದಿನದಾಟ ಆರಂಭಿಸಿದ ಆಸ್ಟ್ರೇಲಿಯಾ ತಂಡವು 318 ರನ್‌ಗಳಿಗೆ ಸರ್ವಪತನ ಕಂಡಿತು. ಮಾರ್ನಸ್ ಲಬುಶೇನ್ 63 ರನ್ ಬಾರಿಸಿ ವಿಕೆಟ್ ಒಪ್ಪಿಸಿದರೆ, ಆಲ್ರೌಂಡರ್ ಮಿಚೆಲ್ ಮಾರ್ಷ್ 41 ರನ್ ಬಾರಿಸಿ ಪೆವಿಲಿಯನ್ ಸೇರಿದರು. ಇದಾದ ಬಳಿಕ ಆಸೀಸ್ ದಿಢೀರ್ ವಿಕೆಟ್ ಕಳೆದುಕೊಳ್ಳುವ ಮೂಲಕ ಕೇವಲ 318 ರನ್‌ಗಳಿಗೆ ಆಲೌಟ್ ಆಯಿತು.

ಪಾಕಿಸ್ತಾನ ತಂಡದ ಬೌಲರ್‌ಗಳು ಸಂಘಟಿತ ಪ್ರದರ್ಶನ ತೋರುವ ಮೂಲಕ ಆಸೀಸ್ ಬ್ಯಾಟರ್‌ಗಳನ್ನು ಕಟ್ಟಿಹಾಕುವಲ್ಲಿ ಯಶಸ್ವಿಯಾದರು. ಅಮೀರ್ ಜಮಾಲ್ 3 ವಿಕೆಟ್ ಪಡೆದರೆ, ಹಸನ್ ಅಲಿ, ಮಿರ್ ಹಮ್ಜಾ ಹಾಗೂ ಶಾಹೀನ್ ಅಫ್ರಿದಿ ತಲಾ 2 ವಿಕೆಟ್ ಕಬಳಿಸಿದರು. ಇನ್ನು ಅಘಾ ಸಲ್ಮಾನ್ ಒಂದು ವಿಕೆಟ್ ತಮ್ಮ ಬುಟ್ಟಿಗೆ ಹಾಕಿಕೊಂಡರು.

ಇನ್ನು ಮೊದಲ ಇನಿಂಗ್ಸ್ ಆರಂಭಿಸಿರುವ ಪಾಕಿಸ್ತಾನ ತಂಡವು ಆರಂಭಿಕ ಆಘಾತದ ಹೊರತಾಗಿಯೂ ಎಚ್ಚರಿಕೆಯ ಆರಂಭ ಪಡೆದಿದೆ. ಇಮಾಮ್ ಉಲ್ ಹಕ್ 10 ರನ್ ಬಾರಿಸಿ ನೇಥನ್ ಲಯನ್‌ಗೆ ವಿಕೆಟ್ ಒಪ್ಪಿಸಿದರು. ಪಾಕಿಸ್ತಾನ ತಂಡವು 24 ಓವರ್ ಅಂತ್ಯದ ವೇಳೆಗೆ ಒಂದು ವಿಕೆಟ್ ಕಳೆದುಕೊಂಡು 68 ರನ್ ಬಾರಿಸಿದ್ದು, ಇನ್ನೂ 250 ರನ್ ಹಿನ್ನಡೆಯಲಿದೆ. ಶಾನ್ ಮಸೂಸ್ 15 ಹಾಗೂ ಅಬ್ದುಲ್ ಶಫೀಕ್ 39 ರನ್ ಬಾರಿಸಿ ಕ್ರೀಸ್‌ನಲ್ಲಿದ್ದಾರೆ.

2ನೇ ‘ಎ’ ಟೆಸ್ಟ್‌: ಮೊದಲ ದಿನದಾಟ ಮಳೆಗೆ ಬಲಿ

ಬೆನೊನಿ: ಭಾರತ ‘ಎ’ ಹಾಗೂ ದಕ್ಷಿಣ ಆಫ್ರಿಕಾ ‘ಎ’ ತಂಡಗಳ ನಡುವಿನ 2ನೇ ಅನಧಿಕೃತ ಟೆಸ್ಟ್‌ ಪಂದ್ಯದ ಮೊದಲ ದಿನದಾಟ ಮಳೆಗೆ ಬಲಿಯಾಗಿದೆ. ಭಾರಿ ಮಳೆಯಿಂದಾಗಿ ಮೈದಾನ ಸಂಪೂರ್ಣ ಒದ್ದೆಯಾಗಿದ್ದ ಕಾರಣ ಆಟ ಆರಂಭಿಸದೆ ಇರಲು ಅಂಪೈರ್‌ಗಳು ನಿರ್ಧರಿಸಿದರು. ಪಂದ್ಯ ಇನ್ನೂ ಟಾಸ್‌ ಕೂಡ ಕಂಡಿಲ್ಲ. ಮೊದಲ ಟೆಸ್ಟ್‌ ಡ್ರಾನಲ್ಲಿ ಅಂತ್ಯಗೊಂಡಿತ್ತು.

ಟೆಸ್ಟ್‌ ಕ್ರಿಕೆಟ್‌ಗೆ ರಾಜ್ಯದ ಪ್ರಸಿದ್ಧ್‌ ಕೃಷ್ಣ ಪಾದಾರ್ಪಣೆ

ಸೆಂಚೂರಿಯನ್‌: ಕರ್ನಾಟಕದ ವೇಗದ ಬೌಲರ್‌ ಪ್ರಸಿದ್ಧ್‌ ಕೃಷ್ಣ, ಮಂಗಳವಾರ ಭಾರತ ಟೆಸ್ಟ್‌ ತಂಡಕ್ಕೆ ಕಾಲಿಟ್ಟರು. ತಂಡದ ಉಪನಾಯಕ, ತಾರಾ ವೇಗಿ ಜಸ್‌ಪ್ರೀತ್‌ ಬುಮ್ರಾ, ಪ್ರಸಿದ್ಧ್‌ಗೆ ಭಾರತದ ಕ್ಯಾಪ್‌ ನೀಡಿದರು. ಭಾರತ ಪರ ಟೆಸ್ಟ್‌ ಆಡುತ್ತಿರುವ 309ನೇ ಆಟಗಾರ ಎನ್ನುವ ಹಿರಿಮೆಗೆ ಪ್ರಸಿದ್ಧ್‌ ಪಾತ್ರರಾಗಿದ್ದಾರೆ. 

ಪ್ರಸಿದ್ಧ್‌ ಭಾರತ ಪರ, 17 ಏಕದಿನ ಹಾಗೂ 5 ಟಿ20 ಪಂದ್ಯಗಳನ್ನೂ ಆಡಿದ್ದಾರೆ. ಎಲ್ಲಾ ಮೂರು ಮಾದರಿಗಳಲ್ಲಿ ಭಾರತವನ್ನು ಪ್ರತಿನಿಧಿಸುವ ಅವಕಾಶ ಪಡೆದ ರಾಜ್ಯದ ಕೇವಲ 5ನೇ ಆಟಗಾರ ಎನ್ನುವ ಖ್ಯಾತಿಯನ್ನೂ ಪ್ರಸಿದ್ಧ್‌ ಪಡೆದಿದ್ದಾರೆ. ಈ ಮೊದಲು ರಾಹುಲ್‌ ದ್ರಾವಿಡ್‌, ವಿನಯ್‌ ಕುಮಾರ್‌, ಸ್ಟುವರ್ಟ್‌ ಬಿನ್ನಿ ಹಾಗೂ ಕೆ.ಎಲ್‌.ರಾಹುಲ್‌ ಈ ಸಾಧನೆ ಮಾಡಿದ ಇತರರು.
 

Latest Videos
Follow Us:
Download App:
  • android
  • ios