ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ ಆಡಿದ ಮೊದಲೆರಡು ಪಂದ್ಯಗಳಲ್ಲಿ ಗೆಲುವು ಸಾಧಿಸುವ ಮೂಲಕ 4 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರುವುದರ ಜತೆಗೆ ಫೈನಲ್‌ಗೆ ಅರ್ಹತೆ ಗಿಟ್ಟಿಸಿಕೊಂಡಿದೆ.

ಕೊಲಂಬೊ(ಸೆ.13) ಭಾರತ-ಲಂಕಾ ಪಂದ್ಯದೊಂದಿಗೆ ಏಷ್ಯಾಕಪ್‌ ಫೈನಲ್‌ಗೇರುವ ತಂಡಗಳ ಬಗ್ಗೆ ಸ್ಪಷ್ಟ ಚಿತ್ರಣ ಲಭಿಸಿದೆ. ಭಾರತ 2 ಗೆಲುವಿನೊಂದಿಗೆ ಫೈನಲ್‌ಗೇರಿದ್ದು, 2 ಸೋಲು ಕಂಡಿರುವ ಬಾಂಗ್ಲಾದೇಶ ಅಧಿಕೃತವಾಗಿ ಹೊರಬಿದ್ದಿದೆ. ಫೈನಲ್‌ನ ಮತ್ತೊಂದು ಸ್ಥಾನಕ್ಕಾಗಿ ಪಾಕ್‌-ಶ್ರೀಲಂಕಾ ಪೈಪೋಟಿ ನಡೆಸಲಿದೆ. ಉಭಯ ತಂಡಗಳು ಗುರುವಾರ ಪರಸ್ಪರ ಮುಖಾಮುಖಿಯಾಗಲಿದ್ದು, ಗೆದ್ದವರು ಫೈನಲ್‌ಗೇರಲಿದ್ದಾರೆ. ಒಂದು ವೇಳೆ ಪಂದ್ಯ ಮಳೆಯಿಂದ ರದ್ದಾದರೆ ಆಗ ನೆಟ್‌ ರನ್‌ರೇಟ್‌ ಆಧಾತದಲ್ಲಿ ಲಂಕಾ ಅಥವಾ ಪಾಕ್‌ ಫೈನಲ್‌ಗೇರಬಹುದು.

ಸದ್ಯ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ ಆಡಿದ ಮೊದಲೆರಡು ಪಂದ್ಯಗಳಲ್ಲಿ ಗೆಲುವು ಸಾಧಿಸುವ ಮೂಲಕ 4 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರುವುದರ ಜತೆಗೆ ಫೈನಲ್‌ಗೆ ಅರ್ಹತೆ ಗಿಟ್ಟಿಸಿಕೊಂಡಿದೆ. ಇನ್ನು ಪಾಕಿಸ್ತಾನ ಹಾಗೂ ಶ್ರೀಲಂಕಾ ತಂಡಗಳು ಕೂಡಾ ತಲಾ ಎರಡು ಪಂದ್ಯವನ್ನಾಡಿದ್ದು, ತಲಾ ಒಂದು ಪಂದ್ಯದಲ್ಲಿ ಗೆಲುವು ಹಾಗೂ ಒಂದು ಪಂದ್ಯ ಮಳೆಯಿಂದ ರದ್ದಾಗಿದೆ. ಈ ಪೈಕಿ ಶ್ರೀಲಂಕಾ ತಂಡದ ನೆಟ್‌ ರನ್‌ ರೇಟ್ -0.200 ಇದ್ದು ಎರಡನೇ ಸ್ಥಾನದಲ್ಲಿದೆ. ಇನ್ನೊಂದೆಡೆ ಪಾಕಿಸ್ತಾನ ತಂಡದ ನೆಟ್‌ ರನ್‌ರೇಟ್‌ -1.892 ಇದೆ. ಒಂದು ವೇಳೆ ಇಂದು ಪಂದ್ಯ ಮಳೆಯಿಂದ ರದ್ದಾದರೇ, ಶ್ರೀಲಂಕಾ ತಂಡವು ಫೈನಲ್‌ನಲ್ಲಿ ಭಾರತ ಎದುರು ಸೆಣಸಾಡಲಿದೆ.

ಸಿಂಹಳೀಯರ ಮಣಿಸಿದ ಭಾರತ ಫೈನಲ್‌ಗೆ!

ಕೊಲಂಬೊ: ಸ್ಪಿನ್ನರ್‌ಗಳ ಪ್ರಾಬಲ್ಯದ ಮುಂದೆ ಮಂಡಿಯೂರಿದರೂ, ಬೌಲರ್‌ಗಳು ತೋರಿದ ಅಸಾಧಾರಣ ಪ್ರದರ್ಶನ ಟೀಂ ಇಂಡಿಯಾವನ್ನು ಏಷ್ಯಾಕಪ್‌ ಫೈನಲ್‌ಗೇರಿಸಿದೆ. ಮಂಗಳವಾರ ನಡೆದ ಶ್ರೀಲಂಕಾ ವಿರುದ್ಧದ ಸೂಪರ್‌-4 ಪಂದ್ಯದಲ್ಲಿ ಭಾರತ 41 ರನ್‌ ಗೆಲುವು ತನ್ನದಾಗಿಸಿಕೊಂಡಿತು. ಇದರೊಂದಿಗೆ ಸತತ 2ನೇ ಜಯ ದಾಖಲಿಸಿದ ಭಾರತ ಇನ್ನೊಂದು ಪಂದ್ಯ ಬಾಕಿ ಇರುವಂತೆಯೇ, ಟೂರ್ನಿಯಲ್ಲಿ ಮೊದಲ ತಂಡವಾಗಿ ಫೈನಲ್‌ಗೆ ಎಂಟ್ರಿ ಕೊಟ್ಟಿತು.

ಕುಲ್ದೀಪ್ ಸ್ಪಿನ್ ಮೋಡಿಗೆ ಶ್ರೀಲಂಕಾ 172 ರನ್‌ಗೆ ಆಲೌಟ್, ಏಷ್ಯಾಕಪ್ ಫೈನಲ್‌ಗೆ ಭಾರತ!

ಕಳೆದ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಅಬ್ಬರಿಸಿದ್ದ ಭಾರತೀಯ ಬ್ಯಾಟರ್‌ಗಳು ಈ ಪಂದ್ಯದಲ್ಲಿ ಮಂಕಾದರು. ಲಂಕಾದ ಸ್ಪಿನ್ನರ್‌ಗಳ ಮುಂದೆ ರನ್‌ ಗಳಿಸಲು ಪರದಾಡಿದ ಭಾರತೀಯ ಬ್ಯಾಟರ್ಸ್‌ 49.1 ಓವರ್‌ಗಳಲ್ಲಿ 213 ರನ್‌ಗೆ ಆಲೌಟಾಯಿತು. ಸುಲಭ ಗುರಿ ಬೆನ್ನತ್ತಿದರೂ ಲಂಕಾಕ್ಕೆ ಭಾರತೀಯ ಬೌಲರ್‌ಗಳು ಕಂಟಕವಾದರು. ತಂಡ 41.3 ಓವರ್‌ಗಳಲ್ಲಿ 172 ರನ್‌ಗೆ ಸರ್ವಪತನ ಕಂಡಿತು.

25 ರನ್‌ಗೆ ಪ್ರಮುಖ 3 ವಿಕೆಟ್‌ ಕಳೆದುಕೊಂಡ ತಂಡ ಆ ಬಳಿಕವೂ ಬಲುಬೇಗನೇ ಚೇತರಿಸಿಕೊಳ್ಳಲಿಲ್ಲ. 100 ರನ್‌ಗೂ ಮುನ್ನ 6 ವಿಕೆಟ್‌ ಬಿದ್ದಿದ್ದರಿಂದ ತಂಡ ಸೋಲಿನ ಸುಳಿಗೆ ಸಿಲುಕಿತ್ತು. ಆದರೆ 7ನೇ ವಿಕೆಟ್‌ಗೆ ಧನಂಜಯ ಡಿ ಸಿಲ್ವ(41) ಹಾಗೂ 20ರ ದುನಿತ್‌ ವೆಲ್ಲಲಗೆ 63 ರನ್‌ ಜೊತೆಯಾಟವಾಡಿ ತಂಡವನ್ನು ಆಧರಿಸಿದರು. ಆದರೆ ಡಿ ಸಿಲ್ವ ನಿರ್ಗಮನದ ಬಳಿಕ ತಂಡ ಮತ್ತೆ ಕುಸಿತ ಕಂಡು ಸೋಲೊಪ್ಪಿಕೊಂಡಿತು. ವೆಲ್ಲಲಗೆ ಔಟಾಗದೆ 42 ರನ್‌ ಗಳಿಸಿದರು. ಮತ್ತೆ ಕೈಚಳಕ ತೋರಿಸಿದ ಕುಲ್ದೀಪ್‌ ಯಾದವ್‌ 4 ವಿಕೆಟ್‌ ಕಿತ್ತರೆ, ಜಡೇಜಾ ಹಾಗೂ ಬೂಮ್ರಾ ತಲಾ 2 ವಿಕೆಟ್‌ ಪಡೆದರು.

'ಶಿಖರ್‌ ಭಾಯ್‌, 5G ಇಂಟರ್ನೆಟ್‌ ಯೂಸ್‌ ಮಾಡಿ..' ಸೋಶಿಯಲ್‌ ಮೀಡಿಯಾದಲ್ಲಿ ಧವನ್‌ ಫುಲ್‌ ಟ್ರೋಲ್‌!

ರೌಫ್‌, ನಸೀಂಗೆ ಗಾಯ: ಏಷ್ಯಾಕಪ್‌ಗೆ ಅನುಮಾನ

ಕೊಲಂಬೊ: ಭಾರತ ವಿರುದ್ಧದ ಪಂದ್ಯದ ವೇಳೆ ಗಾಯಗೊಂಡಿರುವ ಪಾಕಿಸ್ತಾನದ ತಾರಾ ವೇಗಿಗಳಾದ ಹಾರಿಸ್‌ ರೌಫ್‌ ಹಾಗೂ ನಸೀಂ ಶಾ ಏಷ್ಯಾಕಪ್‌ನ ಇನ್ನುಳಿದ ಪಂದ್ಯಗಳಲ್ಲಿ ಆಡುವುದು ಅನುಮಾನವೆನಿಸಿದೆ. ಈ ಬಗ್ಗೆ ಸ್ವತಃ ಪಾಕ್‌ ಕ್ರಿಕೆಟ್‌ ಮಂಡಳಿ ಮಾಹಿತಿ ನೀಡಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ವೇಗಿಗಳಾದ ಶಾನವಾಜ್‌ ದಹಾನಿ ಹಾಗೂ ಜಮಾನ್‌ ಖಾನ್‌ರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ ಎಂದಿದೆ. ರೌಫ್‌ ಭಾರತ ವಿರುದ್ಧ 5 ಓವರ್‌, ನಸೀಂ 10 ಓವರ್‌ ಪೂರ್ತಿಗೊಳಿಸಿದ ಬಳಿಕ ಮೈದಾನ ತೊರೆದಿದ್ದರು. ಬಳಿಕ ಇಬ್ಬರೂ ಬ್ಯಾಟಿಂಗ್‌ಗೆ ಆಗಮಿಸಿರಲಿಲ್ಲ. ಪಾಕ್‌ ತಂಡ ಸೂಪರ್‌-4ನ ಕೊನೆ ಪಂದ್ಯದಲ್ಲಿ ಗುರುವಾರ ಶ್ರೀಲಂಕಾ ವಿರುದ್ಧ ಆಡಲಿದೆ.