ಟೀಂ ಇಂಡಿಯಾದ ಎಲ್ಲಾ ಆಟಗಾರರು Yo Yo ಟೆಸ್ಟ್‌ ಪಾಸ್..! ಆದ್ರೆ ಒಬ್ಬ ಆಟಗಾರನ ಮಾಹಿತಿ ರಿವೀಲ್ ಆಗಿಲ್ಲ..!

ಸದ್ಯ ನಡೆಯುತ್ತಿರುವ ಟೀಂ ಇಂಡಿಯಾ ಕ್ಯಾಂಪ್‌ನಲ್ಲೂ ರಾಹುಲ್ ಭಾಗವಹಿಸಿದ್ದಾರೆ. ಆದ್ರೆ ಅವರು ಯೋ ಯೋ ಟೆಸ್ಟ್​ನಲ್ಲಿ ಪಾಲ್ಗೊಂಡಿಲ್ಲ. ಸಣ್ಣ ಪ್ರಮಾಣದ ಗಾಯದಿಂದ ಚೇತರಿಸಿಕೊಂಡ ಬಳಿಕ ಅವರು ಯೋ ಯೋ ಟೆಸ್ಟ್‌ನಲ್ಲಿ ಭಾಗವಹಿಸಲಿದ್ದು, ಯೋ ಯೋ ಟೆಸ್ಟ್​ ಪಾಸ್ ಮಾಡಿಯೇ ಅವರು ಲಂಕಾ ಫ್ಲೈಟ್ ಹತ್ತೋದು.

Asia Cup 2023 No Yo Yo Test For KL Rahul Here Is The Reason kvn

ಬೆಂಗಳೂರು(ಆ.29): ಉದ್ಯಾನನಗರಿ ಬೆಂಗಳೂರು ಹೊರವಲಯದಲ್ಲಿರುವ ಅಲೂರ್ ಗ್ರೌಂಡ್​ನಲ್ಲಿ ಟೀಂ ಇಂಡಿಯಾದ ಆರು ದಿನಗಳ ಅಭ್ಯಾಸ ಶಿಬಿರಿ ಭರ್ಜರಿಯಾಗಿ ನಡೆಯುತ್ತಿದೆ. ಆಟಗಾರರ ಫಿಟ್ನೆಸ್ ಕಡೆ ಹೆಚ್ಚಿನ ಗಮನ ಹರಿಸಲಾಗ್ತಿದೆ. ಏಷ್ಯಾಕಪ್‌ಗೆ ಸೆಲೆಕ್ಟ್ ಆಗಿರೋ ಎಲ್ಲಾ ಆಟಗಾರರ ಯೋ ಯೋ ಟೆಸ್ಟ್​ ನಡೆದಿದೆ. ಎಲ್ಲರೂ ಪಾಸಾಗಿದ್ದಾರೆ. ಆದ್ರೆ ಒಬ್ಬ ಆಟಗಾರನ ಯೋ ಯೋ ಟೆಸ್ಟ್ ರಿಸಲ್ಟ್ ಮಾತ್ರ ನಿಗೂಢವಾಗಿದೆ. ಆತನಿಗೆ ಯೋ ಯೋ ಟೆಸ್ಟ್ ನಡೆಸಲಾಯ್ತಾ ಅಥವಾ ಇಲ್ವಾ ಅನ್ನೋದನ್ನ ಯಾರೋಬ್ಬರೂ ಬಹಿರಂಗಪಡಿಸಿಲ್ಲ. ಆತನೇ ಕೆಎಲ್ ರಾಹುಲ್.

ರಾಹುಲ್​ ಒಬ್ಬರಿಗೆ ಯೋ ಯೋ ಟೆಸ್ಟ್​..!

ಹೌದು, ಏಷ್ಯಾಕಪ್‌ಗೆ ಆಯ್ಕೆಯಾಗಿರುವ ಆಟಗಾರರ ಯೋ ಯೋ ಟೆಸ್ಟ್ ಮುಗಿದಿದೆ. ಆದ್ರೆ ಕನ್ನಡಿಗ ಕೆಎಲ್ ರಾಹುಲ್ ಯೋ ಯೋ ಟೆಸ್ಟ್ ಮಾತ್ರ ನಡೆದಿಲ್ಲ. ಐಪಿಎಲ್ ವೇಳೆ ತೊಡೆ ನೋವಿಗೆ ತುತ್ತಾಗಿದ್ದ ರಾಹುಲ್, ಫುಲ್ ಫಿಟ್ ಆಗಿದ್ದಾರೆ. ಆದ್ರೆ ಅವರಿಗೆ ಸಣ್ಣ ಪ್ರಮಾಣದ ಗಾಯವೊಂದು ಕಾಣಿಸಿಕೊಂಡಿದೆ. ಹಾಗಾಗಿಯೇ ಅವರು ಏಷ್ಯಾಕಪ್‌ಗೆ ಸೆಲೆಕ್ಟ್ ಆದ್ರೂ ಬ್ಯಾಕ್ ಅಪ್ ಕೀಪರ್ ಆಗಿ ಸಂಜು ಸ್ಯಾಮ್ಸನ್ ಆಯ್ಕೆ ಮಾಡಲಾಗಿದೆ.

ವಿಶ್ವಕಪ್‌ಗೆ ಕೌಂಟ್‌ಡೌನ್ ಬೆನ್ನಲ್ಲೇ ಗ್ಲೆನ್ ಮ್ಯಾಕ್ಸ್‌ವೆಲ್‌ಗೆ ಗಾಯ..! ಆಸೀಸ್ ಪಾಳಯದಲ್ಲಿ ಆತಂಕ

ಎಲ್ಲಾ ಆಟಗಾರರ ಜೊತೆ ಲಂಕಾಗೆ ಹೋಗಲ್ಲ ರಾಹುಲ್..!

ಸದ್ಯ ನಡೆಯುತ್ತಿರುವ ಟೀಂ ಇಂಡಿಯಾ ಕ್ಯಾಂಪ್‌ನಲ್ಲೂ ರಾಹುಲ್ ಭಾಗವಹಿಸಿದ್ದಾರೆ. ಆದ್ರೆ ಅವರು ಯೋ ಯೋ ಟೆಸ್ಟ್​ನಲ್ಲಿ ಪಾಲ್ಗೊಂಡಿಲ್ಲ. ಸಣ್ಣ ಪ್ರಮಾಣದ ಗಾಯದಿಂದ ಚೇತರಿಸಿಕೊಂಡ ಬಳಿಕ ಅವರು ಯೋ ಯೋ ಟೆಸ್ಟ್‌ನಲ್ಲಿ ಭಾಗವಹಿಸಲಿದ್ದು, ಯೋ ಯೋ ಟೆಸ್ಟ್​ ಪಾಸ್ ಮಾಡಿಯೇ ಅವರು ಲಂಕಾ ಫ್ಲೈಟ್ ಹತ್ತೋದು. ಸೆಪ್ಟೆಂಬರ್ 29ರಂದು ಟೀಂ ಇಂಡಿಯಾ, ಶ್ರೀಲಂಕಾಗೆ ಪ್ರಯಾಣ ಬೆಳಸಲಿದೆ. ಆದ್ರೆ ಈ ಟೀಂ​ ಜೊತೆ ರಾಹುಲ್​ ಲಂಕಾಗೆ ಹೋಗ್ತಿಲ್ಲ.

Maharaja Trophy Final: ಹುಬ್ಬಳ್ಳಿ-ಮೈಸೂರು ಫೈನಲ್‌ ಫೈಟ್‌!

ಸೆಪ್ಟೆಂಬರ್ 1ರಂದು ಬೆಂಗಳೂರಿನಲ್ಲಿರುವ ಎನ್‌ಸಿಎನಲ್ಲಿ ರಾಹುಲ್ ಯೋ ಯೋ ಟೆಸ್ಟ್​ ನಡೆಯಲಿದೆ. ಈ ಯೋ ಯೋ ಟೆಸ್ಟ್ ಪಾಸ್ ಮಾಡಿದ ಬಳಿಕ ಸೆಪ್ಟೆಂಬರ್ 2 ಅಥವಾ 3ರಂದು ಅವರು ಲಂಕಾಗೆ ಏಕಾಂಗಿಯಾಗಿ ಪ್ರಯಾಣ ಬೆಳಸಲಿದ್ದಾರೆ. ಆಕಸ್ಮಾತ್ ರಾಹುಲ್ ಆಡಲು ಫಿಟ್ ಇಲ್ಲದಿದ್ದರೂ ಲಂಕಾಗೆ ಹೋಗಲಿದ್ದಾರೆ. ಯಾಕಂದ್ರೆ ವಿಶ್ವಕಪ್​ನಲ್ಲಿ ಆಡೋ ಕೋರ್ ಟೀಂ​, ಈಗಿನಿಂದಲೇ ಜೊತೆಯಲ್ಲಿರಬೇಕು ಅನ್ನೋದು ಕೋಚ್ ದ್ರಾವಿಡ್ ಅಭಿಮತ. ಹಾಗಾಗಿ ರಾಹುಲ್​ ಲಂಕಾಗೆ ಹೋಗೋದು ಕನ್ಪರ್ಮ್​.

ವಿಕೆಟ್ ಕೀಪರ್ ಕಮ್ ಬ್ಯಾಟರ್ ರಾಹುಲ್​​, ಸದ್ಯ ಟೀಂ  ಇಂಡಿಯಾಗೆ ಬೇಕಿದೆ. ಕೀಪಿಂಗ್ ಜೊತೆ ನಂಬರ್ 5 ಸ್ಲಾಟ್‌ನಲ್ಲಿ ಅವರು ಆಡಲಿದ್ದು, ಅವರೇ ಫಿನಿಶರ್. ಆಕಸ್ಮಾತ್ ಅವರೇನಾದ್ರೂ ಕೈಕೊಟ್ರೆ ಟೀಂ ಇಂಡಿಯಾದ ಲೋ ಆರ್ಡರ್ ದುರ್ಬಲವಾಗಲಿದೆ. ಹೀಗಾಗಿಯೇ ಅವರ ಮೇಲೆ ರಿಸ್ಕ್ ತೆಗೆದುಕೊಳ್ಳಬಾರದು ಅನ್ನೋ ಉದ್ದೇಶದಿಂದ ಅವರನ್ನ ಫುಲ್ ಫಿಟ್ ಆಗಲು ಬಿಸಿಸಿಐ ಬಿಟ್ಟಿರೋದು. ಒಟ್ನಲ್ಲಿ ರಾಹುಲ್ ಟೀಂ ಇಂಡಿಯಾಗೆ ಎಷ್ಟು ಇಂಪಾಡೆಂಟ್ ಅನ್ನೋದು ಈಗ ಗೊತ್ತಾಗ್ತಿದೆ.
 

Latest Videos
Follow Us:
Download App:
  • android
  • ios