ರೋಹಿತ್ ಶರ್ಮಾ- ಕೆ ಎಲ್ ರಾಹುಲ್ ಪಾಲಾದ ಹೊಸ ಟಿ20 ವಿಶ್ವದಾಖಲೆಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಅತಿಹೆಚ್ಚು 50+ ಜತೆಯಾಟವಾಡಿದ ದಾಖಲೆ ರಾಹುಲ್-ರೋಹಿತ್ ಪಾಲುಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ವಿಶ್ವದಾಖಲೆ ಬರೆದ ಮಾಜಿ ನಾಯಕ ವಿರಾಟ್ ಕೊಹ್ಲಿ

ದುಬೈ(ಸೆ.05): ಭಾರತದ ತಾರಾ ಬ್ಯಾಟರ್‌ಗಳಾದ ನಾಯಕ ರೋಹಿತ್‌ ಶರ್ಮಾ ಹಾಗೂ ಉಪನಾಯಕ ಕೆ.ಎಲ್‌.ರಾಹುಲ್‌ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಹೊಸ ವಿಶ್ವ ದಾಖಲೆ ಬರೆದಿದ್ದಾರೆ. ಈ ಜೋಡಿಯು ಅತಿಹೆಚ್ಚು ಬಾರಿ 50ಕ್ಕೂ ಹೆಚ್ಚು ರನ್‌ ಜೊತೆಯಾಟದಲ್ಲಿ ಭಾಗಿಯಾದ ಹಿರಿಮೆಗೆ ಪಾತ್ರವಾಗಿದೆ. ಭಾನುವಾರ ಇಲ್ಲಿ ನಡೆದ ಏಷ್ಯಾಕಪ್‌ ಟಿ20 ಟೂರ್ನಿಯ ಸೂಪರ್‌-4 ಹಂತದ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ರೋಹಿತ್‌ ಶರ್ಮಾ ಹಾಗೂ ಕೆ ಎಲ್ ರಾಹುಲ್‌ ಮೊದಲ ವಿಕೆಟ್‌ಗೆ 54 ರನ್‌ ಜೊತೆಯಾಟವಾಡಿದರು. ಇದು ಅಂತಾರಾಷ್ಟ್ರೀಯ ಟಿ20ಯಲ್ಲಿ ಇವರಿಬ್ಬರ ನಡುವೆ ಮೂಡಿಬಂದ 14ನೇ 50ಕ್ಕೂ ಹೆಚ್ಚು ರನ್‌ಗಳ ಜೊತೆಯಾಟ. ಈ ಮೂಲಕ ರೋಹಿತ್‌ ಹಾಗೂ ರಾಹುಲ್‌, ಐರ್ಲೆಂಡ್‌ನ ಪಾಲ್‌ ಸ್ಟಿರ್ಲಿಂಗ್‌ ಹಾಗೂ ಕೆವಿನ್‌ ಓ’ಬ್ರಿಯಾನ್‌ ಹೆಸರಿನಲ್ಲಿದ್ದ ದಾಖಲೆಯನ್ನು ಮುರಿದರು. ಸ್ಟಿರ್ಲಿಂಗ್‌ ಹಾಗೂ ಓ‘ಬ್ರಿಯಾನ್‌ 13 ಬಾರಿ 50ಕ್ಕೂ ಹೆಚ್ಚು ರನ್‌ಗಳ ಜೊತೆಯಾಟವಾಡಿದ್ದರು.

ನ್ಯೂಜಿಲೆಂಡ್‌ನ ಮಾರ್ಟಿನ್‌ ಗಪ್ಟಿಲ್‌ ಮತ್ತು ಕೇನ್‌ ವಿಲಿಯಮ್ಸನ್‌ 12 ಬಾರಿ ಈ ಸಾಧನೆ ಮಾಡಿದರೆ, ಐರ್ಲೆಂಡ್‌ನ ಪಾಲ್‌ ಸ್ಟಿರ್ಲಿಂಗ್‌ ಹಾಗೂ ಆ್ಯಂಡಿ ಬಾಲ್‌ಬರ್ನಿ, ಸ್ಕಾಟ್ಲೆಂಡ್‌ನ ಕೈಲ್‌ ಕೋಟ್ಜರ್‌ ಹಾಗೂ ಜಾರ್ಜ್‌ ಮುನ್ಸೆ ತಲಾ 12 ಬಾರಿ ಅಂತಾರಾಷ್ಟ್ರೀಯ ಟಿ20 ಪಂದ್ಯದಲ್ಲಿ 50ಕ್ಕಿಂತಲೂ ಹೆಚ್ಚು ರನ್‌ ಜೊತೆಯಾಟದಲ್ಲಿ ಭಾಗಿಯಾಗಿದ್ದಾರೆ.

Scroll to load tweet…

Asia Cup 2022 ರಿಜ್ವಾನ್‌ ಅರ್ಧಶತಕದ ಆಟ, ಪಾಕಿಸ್ತಾನಕ್ಕೆ ಗೆಲುವು

ರೋಹಿತ್‌ ಹಾಗೂ ರಾಹುಲ್‌ 2017ರಲ್ಲಿ ಶ್ರೀಲಂಕಾ ವಿರುದ್ಧ 165 ರನ್‌ಗಳ ಜೊತೆಯಾಟವಾಡಿದ್ದು, ಭಾರತ ಪರ ಮೊದಲ ವಿಕೆಟ್‌ಗೆ ದಾಖಲಾದ ಅತಿದೊಡ್ಡ ಜೊತೆಯಾಟ ಎನಿಸಿಕೊಂಡಿದೆ. ಈ ಇಬ್ಬರು ಒಟ್ಟು 30 ಇನ್ನಿಂಗ್ಸ್‌ಗಳಲ್ಲಿ ಒಟ್ಟಿಗೆ ಬ್ಯಾಟ್‌ ಮಾಡಿದ್ದು 5 ಶತಕ, 9 ಅರ್ಧಶತಕದ ಜೊತೆಯಾಟಗಳಲ್ಲಿ ಭಾಗಿಯಾಗಿದ್ದಾರೆ. ಒಟ್ಟು 1,628 ರನ್‌ ಕಲೆಹಾಕಿದ್ದು, ಅತಿಹೆಚ್ಚು ರನ್‌ ಕಲೆಹಾಕಿದ ಜೋಡಿಗಳ ಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದ್ದಾರೆ. ಮೊದಲ ಸ್ಥಾನದಲ್ಲಿ ರೋಹಿತ್‌ ಶರ್ಮಾ ಮತ್ತು ಶಿಖರ್‌ ಧವನ್‌ ಇದ್ದಾರೆ. ಇವರಿಬ್ಬರು 52 ಇನ್ನಿಂಗ್ಸ್‌ಗಳಲ್ಲಿ 1,743 ರನ್‌ ಗಳಿಸಿದ್ದಾರೆ.

ಅಂತಾರಾಷ್ಟ್ರೀಯ ಟಿ20ಯಲ್ಲಿ ಅತಿಹೆಚ್ಚು ಬಾರಿ +50+ ರನ್‌: ವಿರಾಟ್ ಕೊಹ್ಲಿ ವಿಶ್ವದಾಖಲೆ ದಾಖಲೆ!

ದುಬೈ: ಭಾರತ ತಂಡದ ರನ್‌ ಮಷಿನ್‌ ವಿರಾಟ್‌ ಕೊಹ್ಲಿ ಅಂತಾರಾಷ್ಟ್ರೀಯ ಟಿ20ಯಲ್ಲಿ ಮತ್ತೊಂದು ಹೊಸ ದಾಖಲೆ ಬರೆದಿದ್ದಾರೆ. ಪಾಕಿಸ್ತಾನ ವಿರುದ್ಧ ಏಷ್ಯಾಕಪ್‌ ಸೂಪರ್‌-4 ಪಂದ್ಯದಲ್ಲಿ ಆಕರ್ಷಕ 60 ರನ್‌ ಗಳಿಸಿದ ಕೊಹ್ಲಿ, ಅತಿಹೆಚ್ಚು ಬಾರಿ 50ಕ್ಕಿಂತಲೂ ಹೆಚ್ಚು ರನ್‌ ಗಳಿಸಿದ ಆಟಗಾರರ ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿದರು.

ಕೊಹ್ಲಿ 32ನೇ ಬಾರಿಗೆ ಈ ಸಾಧನೆ ಮಾಡಿ ಭಾರತ ತಂಡದ ನಾಯಕ ರೋಹಿತ್‌ ಶರ್ಮಾ ಅವರನ್ನು ಹಿಂದಿಕ್ಕಿದರು. ವಿರಾಟ್‌ 102 ಪಂದ್ಯಗಳಲ್ಲಿ 32 ಅರ್ಧಶತಕಗಳನ್ನು ಬಾರಿಸಿದ್ದಾರೆ. ರೋಹಿತ್‌ 135 ಪಂದ್ಯಗಳಲ್ಲಿ 27 ಅರ್ಧಶತಕ, 4 ಶತಕಗಳೊಂದಿಗೆ ಒಟ್ಟು 31 ಬಾರಿ 50ಕ್ಕಿಂತಲೂ ಹೆಚ್ಚು ರನ್‌ ಗಳಿಸಿ ಪಟ್ಟಿಯಲ್ಲಿ 2ನೇ ಸ್ಥಾನ ಪಡೆದಿದ್ದಾರೆ. ಪಾಕಿಸ್ತಾನದ ಬಾಬರ್‌ ಆಜಂ 27 ಬಾರಿ (26 ಅರ್ಧಶತಕ, 1 ಶತಕ) 50ಕ್ಕಿಂತಲೂ ಹೆಚ್ಚು ರನ್‌ ಗಳಿಸಿದ್ದು ಪಟ್ಟಿಯಲ್ಲಿ 3ನೇ ಸ್ಥಾನ ಪಡೆದಿದ್ದಾರೆ. ಈ ಮೂವರನ್ನು ಬಿಟ್ಟರೆ ಬೇರಾರ‍ಯವ ಬ್ಯಾಟರ್‌ಗಳು ಅಂತಾರಾಷ್ಟ್ರೀಯ ಟಿ20ಯಲ್ಲಿ 25 ಅಥವಾ ಅದಕ್ಕಿಂತ ಹೆಚ್ಚು ಬಾರಿ 50ಕ್ಕಿಂತಲೂ ಹೆಚ್ಚು ರನ್‌ ಗಳಿಸಿಲ್ಲ.