Asianet Suvarna News Asianet Suvarna News

IPL 2023 ಲಖನೌ ಎದುರು ರೋಚಕ ಪಂದ್ಯ ಸೋತ ಆರ್‌ಸಿಬಿ; ಅನುಷ್ಕಾ ಶರ್ಮಾ ರಿಯಾಕ್ಷನ್ ವೈರಲ್‌

ಲಖನೌ ಸೂಪರ್ ಜೈಂಟ್ಸ್‌ ಎದುರು ರೋಚಕ ಸೋಲು ಕಂಡ ಆರ್‌ಸಿಬಿ
ಕೊನೆಯ ಎಸೆತದಲ್ಲಿ ಕೆ ಎಲ್ ರಾಹುಲ್ ಪಡೆಗೆ ಒಂದು ವಿಕೆಟ್ ಜಯ
ಪಂದ್ಯ ವೀಕ್ಷಿಸಲು ಬಂದ ಅನುಷ್ಕಾ ಶರ್ಮಾಗೆ ನಿರಾಸೆ

Anushka Sharma reaction goes viral as Virat Kohli RCB lose thrilling match against Lucknow Super Giants kvn
Author
First Published Apr 11, 2023, 11:35 AM IST

ಬೆಂಗಳೂರು(ಏ.11): ಫಾಫ್ ಡು ಪ್ಲೆಸಿಸ್ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ತವರಿನಲ್ಲಿ ಲಖನೌ ಸೂಪರ್ ಜೈಂಟ್ಸ್‌ ಎದುರು ರೋಚಕ ಸೋಲು ಕಂಡಿದೆ. ಕ್ರಿಕೆಟ್ ಅಭಿಮಾನಿಗಳನ್ನು ಅಕ್ಷರಶಃ ತುದಿಗಾಲಿನಲ್ಲಿ ನಿಲ್ಲುವಂತೆ ಮಾಡಿದ್ದ ಪಂದ್ಯದಲ್ಲಿ ಕೊನೆಗೂ ಕೆ ಎಲ್ ರಾಹುಲ್ ನೇತೃತ್ವದ ಲಖನೌ ತಂಡವು ಗೆಲುವಿನ ಕೇಕೆ ಹಾಕಿದೆ. ಇನ್ನು ತಮ್ಮ ಪತಿ ವಿರಾಟ್ ಕೊಹ್ಲಿಯನ್ನು ಬೆಂಬಲಿಸಲು ಅನುಷ್ಕಾ ಶರ್ಮಾ, ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕಾಣಿಸಿಕೊಂಡಿದ್ದರು. ಆದರೆ ಲಖನೌ ಎದುರು ಬೃಹತ್ ಮೊತ್ತ ಗಳಿಸಿದ ಹೊರತಾಗಿಯೂ ಆರ್‌ಸಿಬಿ ಪಂದ್ಯ ಸೋತಿದ್ದು ಅನುಷ್ಕಾ ಶರ್ಮಾ ಅವರಿಗೂ ನಂಬಲು ಸಾಧ್ಯವಾಗಿಲ್ಲ. ಲಖನೌ ಎದುರು ಆರ್‌ಸಿಬಿ ಪಂದ್ಯ ಸೋಲುತ್ತಿದ್ದಂತೆಯೇ ಅನುಷ್ಕಾ ಶರ್ಮಾ ಮುಖದ ರಿಯಾಕ್ಷನ್ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದೆ.

ಆರ್‌ಸಿಬಿ ಹಾಗೂ ಲಖನೌ ಸೂಪರ್‌ ಜೈಂಟ್ಸ್‌ ತಂಡಗಳ ನಡುವಿನ ಪಂದ್ಯವನ್ನು ಕಣ್ತುಂಬಿಕೊಳ್ಳಲು ನಗರದ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಅಭಿಮಾನಿಗಳು ಕಿಕ್ಕಿರಿದು ತುಂಬಿದ್ದರು. ಇನ್ನು ಅನುಷ್ಕಾ ಶರ್ಮಾ ಕೂಡಾ ಸ್ಟೇಡಿಯಂಗೆ ಬಂದು ಆರ್‌ಸಿಬಿಯನ್ನು ಬೆಂಬಲಿಸುತ್ತಿದ್ದರು. ಅನುಷ್ಕಾ ಶರ್ಮಾ, ಸ್ಟೇಡಿಯಂನಲ್ಲಿರುವ ಹಲವು ಫೋಟೋಗಳು ವೈರಲ್ ಆಗಿವೆ. ಬಿಳಿ ಶರ್ಟ್ ತೊಟ್ಟು ಮೈದಾನಕ್ಕೆ ಬಂದಿದ್ದ ಅನುಷ್ಕಾ ಶರ್ಮಾ, ಲಖನೌ ಎದುರು ಪತಿ ವಿರಾಟ್ ಕೊಹ್ಲಿ ಭರ್ಜರಿ ಅರ್ಧಶತಕ ಸಿಡಿಸಿದಾಗ ತುಂಬಾ ಖುಷಿಯಲ್ಲಿದ್ದರು. ಆದರೆ ಆರ್‌ಸಿಬಿ ಪಂದ್ಯದ ಕೊನೆಯ ಎಸೆತದಲ್ಲಿ ಸೋಲು ಕಾಣುತ್ತಿದ್ದಂತೆಯೇ ಮುಖದಲ್ಲಿ ಅರಳಿದ್ದ ಮಂದಹಾಸ ಮಸುಕಾಗಿ ಹೋಯಿತು. ಈ ಫೋಟೋಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ಸಾಕಷ್ಟು ಬಿಡುವಿನ ಬಳಿಕ ಅನುಷ್ಕಾ ಶರ್ಮಾ, ಭಾರತದ ದಿಗ್ಗಜ ಮಹಿಳಾ ಕ್ರಿಕೆಟರ್ ಜೂಲನ್‌ ಗೋಸ್ವಾಮಿ ಜೀವನಾಧಾರಿತ ಚಿತ್ರ ಚಕ್ಡಾ ಎಕ್ಸ್‌ಪ್ರೆಸ್‌ನಲ್ಲಿ ಮುಖ್ಯ ಭೂಮಿಕೆ ನಿಭಾಯಿಸುತ್ತಿದ್ದಾರೆ. ಈ ಸಿನಿಮಾ ಯಾವಾಗ ರಿಲೀಸ್ ಆಗಲಿದೆ ಎನ್ನುವ ಮಾಹಿತಿಯನ್ನು ಇನ್ನು ಚಿತ್ರತಂಡ ಬಿಟ್ಟುಕೊಟ್ಟಿಲ್ಲ.

ಆರ್‌ಸಿಬಿ ಕೊನೆಯಲ್ಲಿ ಹರ್ಷಲ್‌, ಕಾರ್ತಿಕ್‌ ಎಡವಟ್ಟು!

ಕೊನೆ 6 ಎಸೆತದಲ್ಲಿ ಲಖನೌಗೆ ಗೆಲ್ಲಲು ಬೇಕಿದ್ದಿದ್ದು 5 ರನ್‌. ಮೊದಲ ಎಸೆತದಲ್ಲಿ ಉನಾದ್ಕತ್‌ 1 ರನ್‌ ಪಡೆದರು. 2ನೇ ಎಸೆತದಲ್ಲಿ ವುಡ್‌ ಬೌಲ್ಡ್‌ ಆದರೆ, 3ನೇ ಎಸೆತದಲ್ಲಿ ಬಿಷ್ಣೋಯ್‌ 2 ರನ್‌ ಕದ್ದರು. 4ನೇ ಎಸೆತದಲ್ಲಿ 1 ರನ್‌ ಪಡೆದ ಬಿಷ್ಣೋಯ್‌ ಸ್ಕೋರ್‌ ಸಮಗೊಳ್ಳುವಂತೆ ಮಾಡಿದರು. 5ನೇ ಎಸೆತದಲ್ಲಿ ಉನಾದ್ಕತ್‌ ಔಟಾದರು. ಕೊನೆ ಎಸೆತವನ್ನು ಬೌಲ್‌ ಮಾಡುವಾಗ ಹರ್ಷಲ್‌ ಮೊದಲು ‘ಮನ್‌ಕಡಿಂಗ್‌’ ಯತ್ನವನ್ನು ಕೈಚೆಲ್ಲಿದರು. ಬಳಿಕ ಕೊನೆ ಎಸೆತದಲ್ಲಿ ಬ್ಯಾಟರ್‌ ಆವೇಶ್‌ ಬ್ಯಾಟ್‌ಗೆ ಸಿಗದ ಚೆಂಡನ್ನು ಹಿಡಿದು ರನೌಟ್‌ ಮಾಡಲು ಕಾರ್ತಿಕ್‌ ವಿಫಲರಾದರು. ಲಖನೌ ಗೆದ್ದು ಸಂಭ್ರಮಿಸಿತು. 

IPL 2023: ಚಿನ್ನಸ್ವಾಮಿಯಲ್ಲಿ ಪೂರನ್‌ ವೈಲೆಂಟ್‌, ಆರ್‌ಸಿಬಿ ಫುಲ್‌ ಸೈಲೆಂಟ್‌!

ಚಿನ್ನಸ್ವಾಮಿಯಲ್ಲಿ ಗರಿಷ್ಠ ಮೊತ್ತದ ಚೇಸ್‌ ದಾಖಲೆ!

213 ರನ್‌ ಗುರಿಯನ್ನು ಬೆನ್ನತ್ತಿದ ಲಖನೌ, ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅತಿಹೆಚ್ಚು ಮೊತ್ತವನ್ನು ಯಶಸ್ವಿಯಾಗಿ ಬೆನ್ನತ್ತಿ ಜಯಿಸಿದ ತಂಡ ಎನ್ನುವ ದಾಖಲೆ ಬರೆದಿದೆ. ಐಪಿಎಲ್‌ನಲ್ಲಿ ಒಟ್ಟಾರೆ ಇದು ಯಶಸ್ವಿಯಾಗಿ ಬೆನ್ನತ್ತಲ್ಪಟ್ಟ4ನೇ ಗರಿಷ್ಠ ಮೊತ್ತ.

8-16: 9 ಓವರಲ್ಲಿ ಲಖನೌ 142 ರನ್‌!

ಲಖನೌ ಪವರ್‌-ಪ್ಲೇನಲ್ಲಿ ಕೇವಲ 37 ರನ್‌ ಗಳಿಸಿತ್ತು. ಆದರೆ ಸ್ಟೋಯ್ನಿಸ್‌ ತಂಡದ ರನ್‌ ಗಳಿಕೆಗೆ ವೇಗ ತುಂಬಿದರು. 8ನೇ ಓವರಿಂದ 16ನೇ ಓವರ್‌ ವರೆಗೂ 9 ಓವರ್‌ಗಳಲ್ಲಿ ಲಖನೌ ಬರೋಬ್ಬರಿ 148 ರನ್‌ ಚಚ್ಚಿ ಪಂದ್ಯ ತನ್ನ ಕಡೆಗೆ ವಾಲುವಂತೆ ಮಾಡಿತು.

Follow Us:
Download App:
  • android
  • ios