Asianet Suvarna News

ಆ್ಯಂಡಿ ಪ್ಲವರ್, ಕುಮಾರ್ ಸಂಗಕ್ಕರ ಸೇರಿ 10 ಮಂದಿಗೆ ಒಲಿದ ಹಾಲ್ ಆಫ್‌ ಫೇಮ್ ಪ್ರಶಸ್ತಿ

* 10 ಮಂದಿಗೆ ಒಲಿದ ಹಾಲ್ ಆಫ್ ಫೇಮ್ ಪ್ರಶಸ್ತಿ

* ಭಾರತದ ಮಾಜಿ ಸ್ಪಿನ್ನರ್ ವಿನೂ ಮಂಕಡ್‌ ಐಸಿಸಿ ಪ್ರಶಸ್ತಿಗೆ ಭಾಜನ

* ಕುಮಾರ್ ಸಂಗಕ್ಕರಗೆ ಒಲಿದ ಐಸಿಸಿ ಪ್ರತಿಷ್ಟಿತ ಗೌರವ

Andy Flower and Kumar Sangakkara among 10 Cricket players inducted into ICC Hall of Fame kvn
Author
Dubai - United Arab Emirates, First Published Jun 14, 2021, 1:28 PM IST
  • Facebook
  • Twitter
  • Whatsapp

ದುಬೈ(ಜೂ.14): ಚೊಚ್ಚಲ ಆವೃತ್ತಿಯ ಐಸಿಸಿ ಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್‌ ಪಂದ್ಯಕ್ಕೂ ಮುನ್ನ ವಿನೂ ಮಂಕಡ್ ಸೇರಿದಂತೆ 10 ಮಂದಿ ದಿಗ್ಗಜ ಕ್ರಿಕೆಟಿಗರಿಗೆ ಐಸಿಸಿ ಹಾಲ್‌ ಅಫ್‌ ಫೇಮ್ ಪ್ರಶಸ್ತಿ ನೀಡಿ ಗೌರವಿಸಿದೆ.

1898ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ ಮಾಂಟಿ ನೋಬ್ಲೆಯಿಂದ ಹಿಡಿದು 2015ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ ಶ್ರೀಲಂಕಾ ಕ್ರಿಕೆಟ್ ದಂತಕಥೆ ಕುಮಾರ್ ಸಂಗಕ್ಕರ ಅವರಿಗೆ ಹಾಲ್ ಆಫ್‌ ಫೇಮ್‌ ನೀಡಿ ಗೌರವಿಸಲಾಗಿದೆ.

ಐಸಿಸಿ ಟೆಸ್ಟ್ ರ್ಯಾಂಕಿಂಗ್: ಮತ್ತೆ ಅಗ್ರಸ್ಥಾನಕ್ಕೇರಿದ ನ್ಯೂಜಿಲೆಂಡ್ 

ಟೆಸ್ಟ್‌ ಕ್ರಿಕೆಟ್‌ಗೆ ತನ್ನದೇ ಆದ ಕೊಡುಗೆ ನೀಡಿದ 10 ದಿಗ್ಗಜ ಆಟಗಾರರಿಗೆ ಹಾಲ್ ಆಫ್‌ ಫೇಮ್‌ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ. ಇದರೊಂದಿಗೆ ಹಾಲ್ ಅಫ್ ಫೇಮ್ ಪಟ್ಟಿ ಸೇರಿದವರ ಸಂಖ್ಯೆ 103ಕ್ಕೆ ಏರಿಕೆಯಾಗಿದೆ ಎಂದು ಐಸಿಸಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಹಾಲ್ ಆಫ್‌ ಫೇಮ್ ಪಟ್ಟಿಗೆ ಸೇರಿದ 10 ದಿಗ್ಗಜ ಆಟಗಾರರಿವರು:

1. ಮಾಂಟಿ ನೋಬ್ಲೆ: ಆಸ್ಟ್ರೇಲಿಯಾದ ಮಾಜಿ ಆಲ್ರೌಂಡರ್
2.ಆ್ಯಬ್ರಿ ಫಾಲ್ಕನರ್: ದಕ್ಷಿಣ ಆಫ್ರಿಕಾ ಕ್ರಿಕೆಟಿಗ
3. ಸರ್ ಲ್ಯಾರಿ ಕಾನ್ಸ್‌ಸ್ಟಾಟೈನ್‌: ವೆಸ್ಟ್ ಇಂಡೀಸ್
4. ಸ್ಟ್ಯಾನ್‌ ಮೆಕಾಬೆ: ಆಸ್ಟ್ರೇಲಿಯಾ
5. ಟೆಡ್ ಡೆಕ್ಸ್‌ಟರ್: ಇಂಗ್ಲೆಂಡ್
6. ವಿನೂ ಮಂಕಡ್: ಭಾರತ
7. ಡೆಸ್ಮಂಡ್ ಹೇನ್ಸ್: ವೆಸ್ಟ್ ಇಂಡೀಸ್
8. ಬಾಬ್ ವಿಲ್ಲೀಸ್: ಇಂಗ್ಲೆಂಡ್
9. ಆ್ಯಂಡಿ ಫ್ಲವರ್: ಜಿಂಬಾಬ್ವೆ
10. ಕುಮಾರ್ ಸಂಗಕ್ಕರ: ಶ್ರೀಲಂಕಾ

Follow Us:
Download App:
  • android
  • ios