ಅಂಪೈರ್‌ನನ್ನೇ ಮೈದಾನದಿಂದ ಹೊರಕ್ಕೆ ಹಾಕಿದ ಫ್ರಾಂಚೈಸಿ ಮಾಲೀಕ, ವಿವಾದದಲ್ಲಿ APL ಲೀಗ್!
ಕ್ರಿಕೆಟ್ ಮೈದಾನದಲ್ಲಿ ಸ್ಲೆಡ್ಜಿಂಗ್ ನಡೆಯುತ್ತಲೇ ಇರುತ್ತದೆ. ಆದರೆ ಕಿತ್ತಾಟ, ಬಡಿದಾಟಗಳು ವಿರಳ. ಆದರೆ ಪ್ರತಿಷ್ಠಿತ ಪ್ರಿಮಿಯರ್ ಲೀಗ್ ಟೂರ್ನಿಯಲ್ಲಿ ಆಟಗಾರರಲ್ಲ, ಫ್ರಾಂಚೈಸಿ ಮಾಲೀಕ ಹಾಗೂ ಅಂಪೈರ್ ಕಿತ್ತಾಡಿದ ಘಟನೆ ನಡೆದಿದೆ. ಇಷ್ಟೇ ಅಲ್ಲ ಅಂಪೈರ್‌ನನ್ನು ಮೈದಾನದಿಂದಲೆ ಹೊರಕ್ಕೆ ಹಾಕಿದ ಪ್ರಸಂಗವೂ ನಡೆದಿದೆ.
ನ್ಯೂಯಾರ್ಕ್(ಡಿ.31) ಮೈದಾನದಲ್ಲಿ ಆಟಗಾರರು ಸ್ಲೆಡ್ಜಿಂಗ್, ಕಿತ್ತಾಟ, ಕೆಲೆವೊಮ್ಮೆ ಹೊಡೆದಾಟಗಳು ನಡೆದಿದೆ. ಈ ಎಲ್ಲಾ ಸಂದರ್ಭದಲ್ಲಿ ಫೀಲ್ಡ್ ಅಂಪೈರ್ಸ್ ಪರಿಸ್ಥಿತಿ ತಿಳಿಗೊಳಿಸುವ ಪ್ರಯತ್ನ ಮಾಡುತ್ತಾರೆ. ಆದರೆ ಪ್ರತಿಷ್ಠಿತ ಅಮೆರಿಕನ್ ಪ್ರಿಮಿಯರ್ ಲೀಗ್ ಟೂರ್ನಿಯಲ್ಲಿ ಫ್ರಾಂಚೈಸಿ ಮಾಲೀಕ ಹಾಗೂ ಅಂಪೈರ್ ಕಿತ್ತಾಡಿಕೊಂಡ ಘಟನೆ ನಡೆದಿದೆ. ಕೊನೆಗೆ ಅಂಪೈರ್‌ನನ್ನೇ ಮೈದಾನದಿಂದ ಹೊರಕ್ಕೆ ಹಾಕಲಾಗಿದೆ.
ಅಮೆರಿಕನ್ ಪ್ರಿಮಿಯರ್ ಲೀಗ್ ಟೂರ್ನಿ ಅಮೆರಿಕದಲ್ಲಿ ಭಾರಿ ಜನಪ್ರಿಯತೆ ಪಡೆದುಕೊಂಡಿದೆ. ಇದೀಗ ಇದೇ ಟೂರ್ನಿ ಭಾರಿ ವಿವಾದಕ್ಕೂ ಕಾರಣವಾಗಿದೆ. ಅಮೆರಿಕನ್ ಪ್ರಿಮಿಯರ್ ಲೀಗ್ ಟೂರ್ನಿಯ ಲೀಗ್ ಹಂತದ ಪಂದ್ಯಗಳು ಅಂತಿಮ ಹಂತ ತಲುಪಿತ್ತು. ಅಷ್ಟರಲ್ಲೇ ಅಂಪೈರ್ ನಮಗೆ 30 ಸಾವಿರ ಅಮೆರಿಕನ್ ಡಾಲರ್ ಮೊತ್ತ ಪಾವತಿಸದೆ ಫ್ರಾಂಚೈಸಿ ಮಾಲೀಕರು ಬಾಕಿ ಉಳಿಸಿಕೊಂಡಿದ್ದಾರೆ ಎಂದು ಗಲಾಟೆ ಶುರುವಾಗಿದೆ.
ಫ್ರಾಂಚೈಸಿ ಮಾಲೀಕರ ಬಳಿ ತಮ್ಮ ಬಾಕಿ ಮೊತ್ತ ಪಾವತಿಸುವಂತೆ ಅಂಪೈರ್ ತಾಕೀತು ಮಾಡಿದ್ದರೆ. ತಮ್ಮ ಬಾಕಿ ಮೊತ್ತ ಪಾವತಿಸದಿದ್ದರೆ, ಸೆಮಿಫೈನಲ್ ಪಂದ್ಯವನ್ನೇ ಸ್ಥಗಿತಗೊಳಿಸುವುದಾಗಿ ಬೆದರಿಕೆ ಹಾಕಿದ್ದರೆ. ಇದು ಫ್ರಾಂಚೈಸಿ ಮಾಲೀಕರ ಪಿತ್ತ ನೆತ್ತಿಗೇರುವಂತೆ ಮಾಡಿದೆ. ಪೊಲೀಸರಿಗೆ ದೂರು ನೀಡಿದ ಫ್ರಾಂಚೈಸಿ ಮಾಲೀಕರು, ಮೈದಾನದಲ್ಲಿ ಅವಾಚ್ಯ ಶಬ್ದಗಳಿಂದ ಕಿತ್ತಾಡಿಕೊಂಡಿದ್ದಾರೆ.
ಇತ್ತ ಪೊಲೀಸರು ಮೈದಾನಕ್ಕೆ ಆಗಮಿಸಿ ಪರಿಸ್ಥಿತಿಯನ್ನ ಹತೋಟಿಗೆ ತಂದಿದ್ದಾರೆ. ಅಂಪೈರ್‌ಗೆ ಒಪ್ಪಂದದ ಪ್ರಕಾರ ಅವರ ಪಂದ್ಯದ ಮೊತ್ತವನ್ನು ನೀಡಲಾಗಿದೆ. ಆದರೆ ಅಮೆರಿಕನ್ ಪ್ರಿಮಿಯರ್ ಲೀಗ್ ಜನಪ್ರಿಯತೆ ಪಡೆದುಕೊಳ್ಳುತ್ತಿರುವಂತೆ ಅಂಪೈರ್‌ಗೆ ಅತೀ ಅಸೆಯಾಗಿದೆ. ಹೀಗಾಗಿ ಬಾಕಿ ಮೊತ್ತದ ಕತೆ ಹೇಳುತ್ತಿದ್ದಾರೆ. ಬಾಕಿ ಮೊತ್ತ ವಿಚಾರ ಮುಂದಿಟ್ಟುಕೊಂಡು ಬ್ಲಾಕ್‌ಮೇಲ್ ಮಾಡುತ್ತಿದ್ದಾರೆ. ಸೆಮಿಫೈನಲ್ ಪಂದ್ಯ ಸ್ಥಗಿತಗೊಳಿಸುವ ಬೆದರಿಕೆ ಹಾಕುತ್ತಿದ್ದಾರೆ.
ಯಾವುದೇ ಬಾಕಿ ಮೊತ್ತ ಉಳಿಸಿಕೊಂಡಿಲ್ಲ. ಮೊತ್ತ ಉಳಿಸಿಕೊಂಡಿರುವ ಕುರಿತು ದೂರು ನೀಡಬೇಕಿತ್ತು. ದೂರು ನೀಡಲು ಅವರ ಬಳಿ ಯಾವುದೇ ದಾಖಲೆ ಇಲ್ಲ. ಹೀಗಾಗಿ ಬ್ಲಾಕ್‌ಮೇಲ್ ಮಾಡಿ ಪಂದ್ಯ ಸ್ಥಗಿತಗೊಳಿಸುವ, ಲೀಗ್ ಟೂರ್ನಿಗೆ ಕಳಂಕ ತರುವ ಪ್ರಯತ್ನ ಮಾಡುತ್ತಿದ್ದಾರೆ. ಇದು ಕಾನೂನು ಬಾಹಿರ ಎಂದು ಫ್ರಾಂಚೈಸಿ ಮಾಲೀಕರು ಆರೋಪಿಸಿದ್ದಾರೆ. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಅಂಪೈರ್‌ನನ್ನೇ ಕ್ರೀಡಾಂಗಣದಿಂದ ಹೊರಕ್ಕೆ ಹಾಕಿದ್ದರೆ.