ಟೀಂ ಇಂಡಿಯಾ-ಆಪ್ಘಾನಿಸ್ತಾನ ನಡುವಿನ ಎರಡನೇ T20 ಪಂದ್ಯ ಇಂದು ನಡೆಯಲಿದೆ. ಈಗಾಗಲೇ ಮೊದಲ ಗೆದ್ದಿರೋ ರೋಹಿತ್ ಪಡೆ, ಎರಡನೇ ಪಂದ್ಯವನ್ನೂ ಗೆದ್ದು ಸರಣಿ ವಶಪಡಿಸಿಕೊಳ್ಳೋ ವಿಶ್ವಾಸದಲ್ಲಿದೆ. ಈ ನಡುವೆ ವೈಯಕ್ತಿಕ ಕಾರಣದಿಂದ ಮೊದಲ ಪಂದ್ಯದಿಂದ ಹೊರಗುಳಿದಿದ್ದ ವಿರಾಟ್ ಕೊಹ್ಲಿ, ಇಂದು ಕಣಕ್ಕಿಳಿಯೋದು ಫಿಕ್ಸ್.

ಬೆಂಗಳೂರು(ಜ.14): ಆಪ್ಘಾನಿಸ್ತಾನ ವಿರುದ್ಧದ ಎರಡನೇ ಟಿ20 ಫೈಟ್‌​ಗೆ ಟೀಂ ಇಂಡಿಯಾ ರೆಡಿಯಾಗಿದೆ. ವಿರಾಟ್ ಕೊಹ್ಲಿ ತಂಡಕ್ಕೆ ಎಂಟ್ರಿ ಕೊಟ್ಟಿರೋದ್ರಿಂದ, ಈ ಪಂದ್ಯದ ಕ್ರೇಜ್‌ ಮತ್ತಷ್ಟು ಹೆಚ್ಚಾಗಿದೆ. 14 ತಿಂಗಳ ನಂತರ ಟಿ20ಯಲ್ಲಿ ಕೊಹ್ಲಿ ಟೀಂ ಇಂಡಿಯಾ ಪರ ಆಡೋದನ್ನ ನೋಡಲು ಫ್ಯಾನ್ಸ್ ಕಾಯ್ತಿದ್ದಾರೆ. ಈ ನಡುವೆ ಕೊಹ್ಲಿ ಯಾವ ಸ್ಥಾನದಲ್ಲಿ ಆಡ್ತಾರೆ ಅನ್ನೋ ಪ್ರಶ್ನೆ ಮೂಡಿದೆ..? 

ಟಿ20ಯಲ್ಲೂ ಮುಂದುವರಿಯುತ್ತಾ ಕೊಹ್ಲಿ ಆರ್ಭಟ..?

ಟೀಂ ಇಂಡಿಯಾ-ಆಪ್ಘಾನಿಸ್ತಾನ ನಡುವಿನ ಎರಡನೇ T20 ಪಂದ್ಯ ಇಂದು ನಡೆಯಲಿದೆ. ಈಗಾಗಲೇ ಮೊದಲ ಗೆದ್ದಿರೋ ರೋಹಿತ್ ಪಡೆ, ಎರಡನೇ ಪಂದ್ಯವನ್ನೂ ಗೆದ್ದು ಸರಣಿ ವಶಪಡಿಸಿಕೊಳ್ಳೋ ವಿಶ್ವಾಸದಲ್ಲಿದೆ. ಈ ನಡುವೆ ವೈಯಕ್ತಿಕ ಕಾರಣದಿಂದ ಮೊದಲ ಪಂದ್ಯದಿಂದ ಹೊರಗುಳಿದಿದ್ದ ವಿರಾಟ್ ಕೊಹ್ಲಿ, ಇಂದು ಕಣಕ್ಕಿಳಿಯೋದು ಫಿಕ್ಸ್. ಈಗಾಗಲೇ ವಿರಾಟ್ ಇಂದೋರ್ ತಲುಪಿದ್ದಾರೆ. 14 ತಿಂಗಳ ನಂತರ ತಮ್ಮ ಮೊದಲ ಅಂತಾರಾಷ್ಟ್ರೀಯ T20 ಪಂದ್ಯವಾಡಲು ಕೊಹ್ಲಿ ರೆಡಿಯಾಗಿದ್ದಾರೆ. ಇನ್ನು ರನ್‌ ಮಷಿನ್ ಕ್ಲಾಸ್ ಆಟವನ್ನ ಕಣ್ತುಂಬಿಕೊಳ್ಳಲು ಫ್ಯಾನ್ಸ್ ರೆಡಿಯಾಗಿದ್ದಾರೆ. 

ಮೈಮೇಲಿನ ಚಿನ್ನ ಅಡವಿಟ್ಟು ಮಗನಿಗೆ ಕ್ರಿಕೆಟ್ ಕಿಟ್ ಕೊಡಿಸಿದ ತಾಯಿ..! ಈತನೇ ಈಗ ಟೀಂ ಇಂಡಿಯಾದ ಭರವಸೆ

2022ರ ಟಿ20 ವಿಶ್ವಕಪ್ ಸೆಮಿಫೈನಲ್ ಆಡಿದ್ದೇ ಲಾಸ್ಟ್​. ಅಲ್ಲಿಂದ ಈವರೆಗೂ ಕೊಹ್ಲಿ ಟೀಂ ಇಂಡಿಯಾ ಪರ ಯಾವುದೇ ಟಿ20 ಪಂದ್ಯವಾಡಿಲ್ಲ. ಸದ್ಯ ಟೆಸ್ಟ್​ ಮತ್ತು ಏಕದಿನ ಫಾರ್ಮೆಟ್​ನಲ್ಲಿ ಕೊಹ್ಲಿ ಅದ್ಭುತ ಫಾರ್ಮ್​ನಲ್ಲಿದ್ದಾರೆ. ಹೊಡಿಬಡಿ ಆಟದಲ್ಲೂ ಅದೇ ಆಟವನ್ನ ಮುಂದುವರಿಸಲು ಕಾಯ್ತಿದ್ದಾರೆ. ಈ ಹಿಂದೆ ಆಡಿದ ಮೂರು T20 ಟೂರ್ನಿಗಳಲ್ಲೂ ವಿರಾಟ್ ಅಬ್ಬರಿಸಿದ್ದಾರೆ. 2022ರಲ್ಲಿ ಕಳೆದ ವರ್ಷ ದುಬೈನಲ್ಲಿ ನಡೆದ ಏಷ್ಯಾಕಪ್ ಟೂರ್ನಿಯಲ್ಲಿ ಕೊಹ್ಲಿ, 5 ಇನ್ನಿಂಗ್ಸ್​ಗಳಲ್ಲಿ ಬ್ಯಾಟ್ ಬೀಸಿದ್ರು. 92ರ ಸರಾಸರಿ ಮತ್ತು 147.59ರ ಸ್ಟ್ರೈಕ್‌ರೇಟ್‌​ನಲ್ಲಿ 276 ರನ್ ದಾಖಲಿಸಿದ್ರು. 

ಟಿ20 ವಿಶ್ವಕಪ್‌ನಲ್ಲೂ ವಿರಾಟ್ ಕೊಹ್ಲಿ ಮಿಂಚಿದ್ರು. ಆಸ್ಟ್ರೇಲಿಯಾದಲ್ಲಿ ನಡೆದ ಟೂರ್ನಿಯಲ್ಲಿ ಚೇಸಿಂಗ್ ಮಾಸ್ಟರ್, ತಮ್ಮ ಸಾಮರ್ಥ್ಯವನ್ನ ಪ್ರೂವ್ ಮಾಡಿದ್ರು. ಅದರಲ್ಲೂ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಅಕ್ಷರಶ: ಅಬ್ಬರಿಸಿದ್ರು. ಅಸಾಮಾನ್ಯ ಬ್ಯಾಟಿಂಗ್ ಮೂಲಕ ತಂಡವನ್ನ ಸೋಲಿನ ಸುಳಿಯಿಂದ ಪಾರು ಮಾಡಿದ್ರು. ಒಟ್ಟು 6 ಪಂದ್ಯಗಳಿಂದ 98.67ರ ಸರಾಸರಿಯಲ್ಲಿ 296 ರನ್​ ಕಲೆಹಾಕಿದ್ರು. 

ಸಿಕ್ಕ ಅವಕಾಶಗಳನ್ನ ಬಳಸಿಕೊಳ್ತಿಲ್ವಾ ತಿಲಕ್ ವರ್ಮಾ? ಕೊಹ್ಲಿ ಕಮ್‌ಬ್ಯಾಕ್, ತಿಲಕ್ ಕಿಕೌಟ್..!

ಟೀಂ ಇಂಡಿಯಾ ಪರ ಅಷ್ಟೇ ಅಲ್ಲ, IPLನಲ್ಲೂ ಮಿಂಚಿದ್ದಾರೆ. RCB ತಂಡದ ಸ್ಟಾರ್ ಬ್ಯಾಟರ್ ಅಗಿರೋ ವಿರಾಟ್, 14 ಪಂದ್ಯಗಳಿಂದ 53.25ರ ಸರಾಸರಿ ಮತ್ತು ಆಲ್‌ಮೋಸ್ಟ್ 140ರ ಸ್ಟ್ರೈಕ್​ರೇಟ್​ನಲ್ಲಿ 639 ರನ್​ ಕಲೆಹಾಕಿದ್ದಾರೆ. ಇದ್ರಲ್ಲಿ 2 ಶತಕ ಮತ್ತು 6 ಅರ್ಧಶತಕ ಸೇರಿವೆ. 

ಆರಂಭಿಕರಾಗಿ ಕಣಕ್ಕಿಳಿಯುತ್ತಾರಾ ರನ್‌ ಮಷಿನ್..?

ಆಫ್ಘಾನಿಸ್ತಾನ ಟಿ20 ಸರಣಿಯಲ್ಲಿ ಕೊಹ್ಲಿ ಯಾವ ಸ್ಥಾನದಲ್ಲಿ ಆಡ್ತಾರೆ ಅನ್ನೋ ಬಗ್ಗೆ ಚರ್ಚೆ ಜೋರಾಗಿದೆ. ಕೊಹ್ಲಿಯನ್ನ ಒನ್​ಡೌನ್ ಬದಲಾಗಿ, ಓಪನರ್​ ಆಗಿ ಆಡಿಸಬೇಕು ಅನ್ನೋ ಮಾತುಗಳು ಕೇಳಿಬರ್ತಿವೆ. T20ಯಲ್ಲಿ ಆರಂಭಿಕರಾಗಿ ಕೊಹ್ಲಿ ಅದ್ಭುತ ದಾಖಲೆ ಹೊಂದಿದ್ದಾರೆ. ಅಲ್ಲದೇ, ಸದ್ಯ IPL​​ನಲ್ಲಿ RCB ಪರವಾಗಿ ಓಪನರ್​ ಆಗಿಯೇ ಆಡ್ತಿದ್ದಾರೆ. ಮೂರನೇ ಸ್ಥಾನದಲ್ಲಿ 135ರ ಸ್ಟ್ರೈಕ್​ರೇಟ್​ನಲ್ಲಿ ರನ್​ಗಳಿಸಿರೋ ವಿರಾಟ್, ಆರಂಭಿಕರಾಗಿ 161ರ ಸ್ಟ್ರೈಕ್​ರೇಟ್​ನಲ್ಲಿ ರನ್ ಸಿಡಿಸಿದ್ದಾರೆ. ಟೀಂ ಇಂಡಿಯಾ ಪರವೂ ಆರಂಭಿಕರಾಗಿ ಸಕ್ಸಸ್ ಕಂಡಿದ್ದಾರೆ.

ಒಂದು ವೇಳೆ ಕೊಹ್ಲಿ ರೋಹಿತ್ ಜೊತೆ ಇನ್ನಿಂಗ್ಸ್ ಆರಂಭಿಸಿದ್ರೆ, ಶುಭ್‌ಮನ್ ಗಿಲ್ ಒನ್​ಡೌನ್​ನಲ್ಲಿ ಆಡಬೇಕಾಗುತ್ತೆ. ತಿಲಕ್ ವರ್ಮಾ, ಪ್ಲೇಯಿಂಗ್ ಇಲೆವೆನ್​ನಲ್ಲಿ ಸ್ಥಾನ ಕಳೆದುಕೊಳ್ಳಬೇಕಾಗುತ್ತೆ. ಅದೇನೆ ಇರಲಿ, ಕೊಹ್ಲಿ ರೀ ಎಂಟ್ರಿಯಿಂದ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. ಇದು ಪಂದ್ಯದ ಕ್ರೇಝನ್ನ ಮತ್ತಷ್ಟು ಹೆಚ್ಚಿಸಿದೆ. 

ಸ್ಪೋರ್ಟ್​​ ಬ್ಯುರೋ, ಏಷ್ಯಾನೆಟ್ ಸುವರ್ಣ ನ್ಯೂಸ್