ಧೋನಿ ವೈರಲ್ ವಿಡಿಯೋ ಬೆನ್ನಲ್ಲಿಯೇ ಮೂರೇ ಗಂಟೆಗಳಲ್ಲಿ 36 ಲಕ್ಷ ಕ್ಯಾಂಡಿ ಕ್ರಶ್ ಅಪ್ಲಿಕೇಶನ್ ಡೌನ್‌ಲೋಡ್!
ಟೀಮ್ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ಇಂಡಿಗೋ ವಿಮಾನದಲ್ಲಿ ಕ್ಯಾಂಡಿ ಕ್ರಶ್ ಗೇಮ್ ಆಡುತ್ತಿರುವ ವಿಡಿಯೋ ವೈರಲ್ ಆದ ಬೆನ್ನಲ್ಲಿಯೇ ಸೋಶಿಯಲ್ ಮೀಡಿಯಾದಲ್ಲಿ ಇದು ಟ್ರೆಂಡ್ ಆಗಿತ್ತು. ಇದರ ಬೆನ್ನಲ್ಲಿಯೇ ಮೂರೇ ಗಂಟೆಗಳಲ್ಲಿ ಅಂದಾಜು 36 ಲಕ್ಷ ಕ್ಯಾಂಡಿ ಕ್ರಶ್ ಅಪ್ಲಿಕೇಶನ್ ಡೌನ್‌ಲೋಡ್ ಆಗಿದೆ.
ನವದೆಹಲಿ (ಜೂ.26): ಟೀಮ್ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ಇಂಡಿಗೋ ವಿಮಾನದಲ್ಲಿ ಪ್ರಯಾಣ ಮಾಡುವ ವೇಳೆ ತಮ್ಮ ಟ್ಯಾಬ್ಲೆಟ್‌ನಲ್ಲಿ ಕ್ಯಾಂಡಿ ಕ್ರಶನ್ ಗೇಮ್ ಆಡುತ್ತಿದ್ದದ್ದು ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ವಿಡಿಯೋದಲ್ಲಿ ಇಂಡಿಗೋ ಏರ್‌ಲೈನ್ಸ್‌ನ ಗಗನಸಖಿಯೊಬ್ಬರು ಧೋನ್‌ಗೆ ಚಾಕಲೇಟ್‌ಗಳನ್ನು ನೀಡುತ್ತಿರುವುದು ಕಂಡುಬಂದಿದೆ. ಭಾರತದ ದಿಗ್ಗಜ ಕ್ರಿಕೆಟಿಗ ಆತ್ಮೀಯತೆಯಿಂದಲೇ ಇದನ್ನು ಸ್ವೀಕರಿಸಿದ್ದಲ್ಲದೆ, ಅವರೊಂದಿಗೆ ಸಂವಹನ ನಡೆಸಿದ್ದರು. ಅದೇ ವಿಡಿಯೋದಲ್ಲಿ ಧೋನಿ ತಮ್ಮ ಟ್ಯಾಬ್ಲೆಟ್‌ನಲ್ಲಿ ಕ್ಯಾಂಡಿ ಕ್ರಶ್ ಗೇಮ್ ಆಡುತ್ತಿರುವುದು ಕಂಡುಬಂದಿದೆ. ಚಾಕೋಲೆಟ್ ಸ್ವೀಕರಿಸುವಾಗ ಟ್ಯಾಬ್ಲೆಟ್ಅನ್ನು ತಮ್ಮ ಸೀಟ್‌ನ ಮುಂದೆ ಧೋನಿ ಇಟ್ಟ ಬೆನ್ನಲ್ಲಿಯೇ ಅದರಲ್ಲಿ ಅವರು ಕ್ಯಾಂಡಿ ಕ್ರಶ್ ಗೇಮ್ ಆಡುತ್ತಿರುವುದು ಕಂಡುಬಂದಿದೆ.
ಧೋನಿ ಕ್ಯಾಂಡಿ ಕ್ರಷ್ ಆಟ ಆಡುತ್ತಿರುವ ದೃಶ್ಯಗಳು ಅಭಿಮಾನಿಗಳಲ್ಲಿ ಕುತೂಹಲಕ್ಕೆ ಕಾರಣವಾಗಿದೆ. ಇದರ ಬೆನ್ನಲ್ಲಿಯೇ ಟ್ವಿಟರ್‌ನಲ್ಲಿ #CandyCrush ಎನ್ನುವ ಟ್ರೆಂಡಿಂಗ್ ಕೂಡ ಆರಂಭವಾಯಿತು. ಇದರಲ್ಲಿ ಧೋನಿ ವಿಡಿಯೋಅನ್ನು ಅನುಸರಿಸಿ ಹೆಚ್ಚಿನವರು ಟ್ರೆಂಡ್ ಸೃಷ್ಟಿಸಿದ್ದರು. ಹೆಚ್ಚಿನ ಬಳಕೆದಾರರು ಕ್ಯಾಂಡಿ ಕ್ರಶ್ ಅಡಿದ್ದ ತಮ್ಮ ಅನುಭವವಳನ್ನು ಹಂಚಿಕೊಂಡಿದ್ದಾರೆ. ಅದರೊಂದಿಗೆ ತಮ್ಮ ಆರಾಧ್ಯದೈವವಾಗಿರುವ ಎಂಎಸ್ ಧೋನಿ ಕೂಡ ಕ್ಯಾಂಡಿ ಕ್ರಶ್ ಆಡುತ್ತಾರೆ ಎನ್ನುವ ಹವ್ಯಾಸವನ್ನು ಮೆಚ್ಚಿದ್ದಾರೆ. ಇನ್ನೂ ಕೆಲವರು ಧೋನಿ ತಮ್ಮ ಟ್ಯಾಬ್‌ನಲ್ಲಿ ಆಟವಾಡುತ್ತಿದ್ದದ್ದು ಪೆಟ್ ರೆಸ್ಕ್ಯೂ ಸಾಗಾ ಗೇಮ್. ಅದು ಕ್ಯಾಂಡಿ ಕ್ರಶ್ ಅಲ್ಲ ಎಂದೂ ಹೇಳಿದ್ದಾರೆ.
ಹಾಗಿದ್ದರೂ, ಈ ವೀಡಿಯೊ ಇಂಟರ್ನೆಟ್‌ನಲ್ಲಿ ವೈರಲ್ ಆದ ನಂತರ ಕ್ಯಾಂಡಿ ಕ್ರಷ್ ಟ್ವಿಟರ್‌ನಲ್ಲಿ ಟ್ರೆಂಡಿಂಗ್ ಪ್ರಾರಂಭಿಸಿತು. ಕೇವಲ ಮೂರು ಗಂಟೆಗಳಲ್ಲಿ 36 ಲಕ್ಷಕ್ಕೂ ಹೆಚ್ಚು ಜನರು ತಮ್ಮ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿದ್ದಾರೆ ಎಂದು ಮೊಬೈಲ್ ಗೇಮಿಂಗ್ ಅಪ್ಲಿಕೇಶನ್ ಹೇಳಿಕೊಂಡಿದೆ. ಕ್ಯಾಂಡಿ ಕ್ರಶ್‌ನ ಟ್ವಿಟ್ಟರ್ ಪುಟವು ಧೋನಿಗೆ ಆಟವನ್ನು ಟ್ರೆಂಡಿಂಗ್ ಮಾಡಿದ್ದಕ್ಕಾಗಿ ಧನ್ಯವಾದ ಹೇಳಿದೆ. 'ನಾವು ಕೇವಲ ಮೂರೇ ಗಂಟೆಗಳಲ್ಲಿ 3.6 ಮಿಲಿಯನ್ ಹೊಸ ಡೌನ್‌ಲೋಡ್‌ಗಳನ್ನು ಪಡೆದುಕೊಂಡಿದ್ದೇವೆ. ಭಾರತೀಯ ಕ್ರಿಕೆಟ್ ದಂತಕಥೆ @msdhoni ಅವರಿಗೆ ಧನ್ಯವಾದಗಳು. ನಿಮ್ಮಿಂದಾಗಿ ನಾವು ಭಾರತದಲ್ಲಿ ಟ್ರೆಂಡಿಂಗ್ ಆಗಿದ್ದೇವೆ" ಎಂದು ಅಪ್ಲಿಕೇಶನ್ ಬರೆದುಕೊಂಡಿದೆ.
ಧೋನಿ ಕ್ರಿಕೆಟ್ ಮಾತ್ರವಲ್ಲ ವಿಡಿಯೋ ಗೇಮ್‌ನ ದೊಡ್ಡ ಅಭಿಮಾನಿ ಕೂಡ. ಮೊಬೈಲ್ ಅಥವಾ ಟ್ಯಾಬ್ಲೆಟ್‌ನಲ್ಲಿ ಕಾಲ್ ಆಫ್ ಡ್ಯೂಟಿ, ಫಿಫಾ ಮತ್ತು ಪಬ್‌ಜೀಯಂಥ ಗೇಮ್‌ಗಳನ್ನು ಆಡುತ್ತಿರುತ್ತಾರೆ. ಯೂಟ್ಯೂಬ್‌ನಲ್ಲಿನ ರಣವೀರ್ ಶೋನಲ್ಲಿ ಮಾಹಿತಿ ನೀಡಿದ್ದ ಇಶಾಂತ್ ಶರ್ಮ, 'ನಾವು ಎಲ್ಲಿಯೇ ಹೋಗುವುದಿದ್ದರೂ ಪ್ಲೇ ಸ್ಟೇಷನ್ ತೆಗೆದುಕೊಂಡು ಹೋಗುತ್ತೇವೆ. ಮಹಿ ಭಾಯ್ ಆನ್ ಲೈನ್ ವಿಡಿಯೋ ಗೇಮ್‌ಗಳಾದ ಕಾಲ್ ಆಫ್ ಡ್ಯೂಟಿಯಂಥ ಗೇಮ್‌ಗಳನ್ನು ಆಡುತ್ತಿರುತ್ತಾರೆ. ಪಬ್‌ಜೀ ಗೇಮ್ ಕೂಡ ಅವರು ಆಡುತ್ತಾರೆ' ಎಂದಿದ್ದರು.
ಈ ದಿಗ್ಗಜ ನಾಯಕನನ್ನು ನಿಜವಾದ 'ಕ್ಯಾಪ್ಟನ್ ಕೂಲ್' ಎಂದು ಕರೆದ ಸುನಿಲ್ ಗವಾಸ್ಕರ್..!
ಈ ತಿಂಗಳ ಆರಂಭದಲ್ಲಿ, ಭಾರತದ ಮಾಜಿ ನಾಯಕ ಮುಂಬೈ ಆಸ್ಪತ್ರೆಯಲ್ಲಿ ಎಡ ಮೊಣಕಾಲಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಧೋನಿಯ ನಾಯಕತ್ವದಲ್ಲಿ, ಭಾರತವು ಎಲ್ಲಾ ಸ್ವರೂಪಗಳಲ್ಲಿ ಐಸಿಸಿ ಪ್ರಶಸ್ತಿ ಗೆದ್ದಿದೆ. ಡಿಸೆಂಬರ್ 2009 ರಿಂದ 18 ತಿಂಗಳುಗಳ ಕಾಲ ಟೆಸ್ಟ್ ಶ್ರೇಯಾಂಕದಲ್ಲಿ ಅಗ್ರಸ್ಥಾನದಲ್ಲಿದ್ದರೆ, 2011 ರಲ್ಲಿ ಏಕದಿನ ವಿಶ್ವಕಪ್, ಮತ್ತು 2007 ರಲ್ಲಿ ಅವರ ನಾಯಕತ್ವದ ತಂಡ ಚೊಚ್ಚಲ ಟಿ20 ವಿಶ್ವಕಪ್ ಗೆದ್ದಿತ್ತು.
ರಿಲೀಸ್‌ಗೆ ರೆಡಿಯಾದ ಎಂಎಸ್ ಧೋನಿ ನಿರ್ಮಾಣದ ಮೊದಲ ಸಿನಿಮಾ!
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ ಧೋನಿ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಯ ಪ್ರಮುಖ ಆಟಗಾರನಾಗಿದ್ದಾರೆ. ಅವರು ನಗರದೊಂದಿಗೆ ಎಷ್ಟು ಆಳವಾಗಿ ಸಂಬಂಧ ಹೊಂದಿದ್ದಾರೆ ಎಂದರೆ, ಅವರು ಚೆನ್ನೈ ಮೂಲದ ಫುಟ್‌ಬಾಲ್ ಫ್ರಾಂಚೈಸಿಯ ಸಹ ಮಾಲೀಕರು ಆಗಿದ್ದಾರೆ. 2020ರಲ್ಲಿ ತಮ್ಮ ಬಹುಮುಖ್ಯ ನಿರ್ಧಾರ ಮಾಡಿದ್ದ ಧೋನಿ, ಎಲ್ಲಾ ಮಾದರಿಯ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದರು. ಪದ್ಮಭೂಷಣ, ಪದ್ಮಶ್ರೀ ಸೇರಿದಂತೆ 2008, 09ರಲ್ಲಿ ಐಸಿಸಿ ವರ್ಷದ ಏಕದಿನ ಆಟಗಾರ, 2011ರಲ್ಲಿ ಐಸಿಸಿ ಕ್ರೀಡಾ ಸ್ಫೂರ್ತಿ ಪ್ರಶಸ್ತಿ ಜಯಿಸಿದ್ದಾರೆ.