ಮುಂಬೈ(ಜ.16): ಬಿಸಿಸಿಐ ವಾರ್ಷಿಕ ಗುತ್ತಿಗೆ ಪ್ರಕಟವಾದ ಅಭಿಮಾನಿಗಳಿಗೆ ಆಘಾತ ಎದುರಾಗಿತ್ತು. ಕಳೆದ ಸಾಲಿನಲ್ಲಿ ಎ ಕಾಂಟ್ರಾಕ್ಟ್‌ನಲ್ಲಿ  ಟೀಂ ಇಂಡಿಯಾ ಹಿರಿಯ ಕ್ರಿಕೆಟಿಗ ಎಂ.ಎಸ್.ಧೋನಿಯ ಹೆಸರೇ ಇರಲಿಲ್ಲ. ಗುತ್ತಿಯಿಂದ ಧೋನಿ ಹೆಸರು ಕೈಬಿಡೋ ಮೂಲಕ ಪರೋಕ್ಷ ಸೂಚನೆಯನ್ನು ಬಿಸಿಸಿಐ ರವಾನಿಸಿತ್ತು. ಇದು ಅಭಿಮಾನಿಗಳಿಗೆ ನುಂಗಲಾರದ ತುತ್ತಾಗಿ ಪರಿಣಿಮಿಸಿತ್ತು. ಧೋನಿ ಮತ್ತೆ ಟೀಂ ಇಂಡಿಯಾ ಪರ ಆಡುವುದಿಲ್ಲ ಅನ್ನೋ ಬೇಸರ ಅಭಿಮಾನಿಗಳಲ್ಲಿ ಮನೆ ಮಾಡಿದೆ. ಆದರೆ ಬೇಸರ ಪಡುವ ಅಗತ್ಯವಿಲ್ಲ.

ಇದನ್ನೂ ಓದಿ: ಬಿಸಿಸಿಐ ವಾರ್ಷಿಕ ಗುತ್ತಿಗೆ ಪ್ರಕಟ: ಧೋನಿಗಿಲ್ಲ ಸ್ಥಾನ..!

ಒಂದು ಟೂರ್ನಿ ಎಲ್ಲವನ್ನು ಬದಲಿಸಲಿದೆ. ಧೋನಿ ಸದ್ಯ 2020ರ ಐಪಿಎಲ್ ಟೂರ್ನಿಗೆ ಸಜ್ಜಾಗುತ್ತಿದ್ದಾರೆ. ಈಗಾಗಲೇ ಟೀಂ ಇಂಡಿಯಾ ಕೋಚ್ ರವಿ ಶಾಸ್ತ್ರಿ, ಧೋನಿ ಭವಿಷ್ಯ ಐಪಿಎಲ್ ಟೂರ್ನಿ ಬಳಿಕ ಸ್ಪ,ಷ್ಟವಾಗಲಿದೆ ಎಂದಿದ್ದಾರೆ. ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಧೋನಿ ಅದ್ಬುತ ಪ್ರದರ್ಶನ ನೀಡಿದರೆ, 2020ರ ಟಿ20 ವಿಶ್ವಕಪ್ ಟೂರ್ನಿ ತಂಡದಲ್ಲಿ ಸ್ಥಾನ ಪಡೆಯುವ ಎಲ್ಲಾ ಸಾಧ್ಯತೆಗಳಿವೆ.

ಇದನ್ನೂ ಓದಿ: ಟಿ20 ವಿಶ್ವಕಪ್ ತಂಡದಲ್ಲಿ ಧೋನಿ ಯಾಕಿರಬೇಕು? ಇಲ್ಲಿದೆ 3 ಕಾರಣ!

ಈ ಕುರಿತು ಖ್ಯಾತ ವೀಕ್ಷಕ ವಿವರಣೆಗಾರ ಹರ್ಷಾ ಬೋಗ್ಲೆ ಹೇಳಿದ್ದಾರೆ. ವಾರ್ಷಿಕ ಗುತ್ತಿಗೆಯಿಂದ ಧೋನಿ ಹೆಸರು ಕೈಬಿಟ್ಟ ಕೂಡಲೇ, ಧೋನಿ ವಿದಾಯಕ್ಕೆ ಸಜ್ಜಾಗಿದ್ದಾರೆ ಅನ್ನೋ ಆತಂಕ ಬೇಡ. ಅತ್ಯುತ್ತಮ ಐಪಿಎಲ್ ಟೂರ್ನಿ ಧೋನಿಯದ್ದಾಗಲಿ. ಐಪಿಎಲ್‌ನಲ್ಲಿ ಅಬ್ಬರಿಸಿದರೆ ಮುಂದೆ ಏನೂ ಬೇಕಾದರೂ ಆಗಬಹುದು ಎಂದು ಹರ್ಷಾ ಬೋಗ್ಲೆ ಟ್ವೀಟ್ ಮಾಡಿದ್ದಾರೆ.

ಟ್ವೀಟ್ ಮೂಲಕ ಹರ್ಷಾ ಬೋಗ್ಲೆ, ಧೋನಿಗೆ ಮತ್ತೆ ಟೀಂ ಇಂಡಿಯಾ ಪರ ಆಡುವ ಎಲ್ಲಾ ಅವಕಾಶವಿದೆ. ಅಭಿಮಾನಿಗಳು ಬೇಸರ ಪಡುವ ಅಗತ್ಯವಿಲ್ಲ ಎಂದಿದ್ದಾರೆ. ಆದರೆ 2019ರ ವಿಶ್ವಕಪ್ ಟೂರ್ನಿ ಬಳಿಕ ಧೋನಿ ಕ್ರಿಕೆಟ್ ಆಡಿಲ್ಲ. ಕೇವಲ ಐಪಿಎಲ್ ಟೂರ್ನಿ ಪ್ರದರ್ಶನ ಆಧರಿಸಿ ಟಿ20 ವಿಶ್ವಕಪ್ ತಂಡಕ್ಕೆ ಆಯ್ಕೆ ಮಾಡುತ್ತಾರಾ ಅನ್ನೋದೇ ಸದ್ಯಕ್ಕಿರುವ ಪ್ರಶ್ನೆ.