ಬೆಂಗಳೂರು ಕಾಂಟ್‌ ಎನ್ನುವ ಪೋಸ್ಟ್ ಹಾಕುವ ಮೂಲಕ ಆರ್‌ಸಿಬಿಯ ಕಾಲೆಳೆದಿದ್ದ ಚೆನ್ನೈ ಸೂಪರ್ ಕಿಂಗ್ಸ್‌ ಸ್ಟಾರ್‌ ತುಷಾರ್‌ ದೇಶಪಾಂಡೆ, ಇದಕ್ಕೆ ಆಕ್ರೋಶ ವ್ಯಕ್ತವಾದ ಬೆನ್ನಲ್ಲಿಯೇ ತಮ್ಮ ಪೋಸ್ಟ್‌ಅನ್ನು ಡಿಲೀಟ್‌ ಮಾಡಿದ್ದಾರೆ. 

ಬೆಂಗಳೂರು (ಮೇ.23): ಐಪಿಎಲ್‌ನ ಪ್ಲೇಆಫ್‌ ಪಂದ್ಯಗಳಲ್ಲಿ ಗರಿಷ್ಠ ಸೋಲು ಕಂಡ ಎನ್ನುವ ಕುಖ್ಯಾತಿ ಪಡೆದ ಆರ್‌ಸಿಬಿ ತಂಡಕ್ಕೆ ಎಲ್ಲಡೆಯಿಂದ ಟೀಕೆ ವ್ಯಕ್ತವಾಗುತ್ತಿದೆ. ಅದರಲ್ಲೂ ಚೆನ್ನೈ ತಂಡವನ್ನು ಸೋಲಿಸಿ ಆರ್‌ಸಿಬಿ ಪ್ಲೇಆಫ್‌ಗೇರಿತ್ತು ಎನ್ನುವ ಕಾರಣಕ್ಕೆ ಚೆನ್ನೈ ತಂಡದ ಅಭಿಮಾನಿಗಳು ಆರ್‌ಸಿಬಿ ತಂಡವನ್ನು ಸೋಶಿಯಲ್‌ ಮೀಡಿಯಾದಲ್ಲಿ ಹಿಂಡಿ ಹಿಪ್ಪೆ ಮಾಡುತ್ತಿದ್ದಾರೆ. ಇದಕ್ಕೆ ಚೆನ್ನೈ ತಂಡದ ಮಾಜಿ ಆಟಗಾರ ಅಂಬಟಿ ರಾಯುಡು ಹಾಗೂ ಸಿಎಸ್‌ಕೆ ತಂಡದ ಪ್ಲೇಯರ್‌ ತುಷಾರ್‌ ದೇಶಪಾಂಡೆ ಕೂಡ ಸೇರಿದ್ದಾರೆ. ಆರ್‌ಸಿಬಿ ತಂಡವನ್ನು ಕಾಲೆಳೆಯುವ ಪೋಸ್ಟ್‌ಅನ್ನು ಇನ್ಸ್‌ಟಾಗ್ರಾಮ್‌ ಸ್ಟೋರೀಸ್‌ನಲ್ಲಿ ಚೆನ್ನೈ ತಂಡದ ವೇಗಿ ತುಷಾರ್‌ ದೇಶಪಾಂಡೆ ಹಂಚಿಕೊಂಡಿದ್ದರು. ಇದರ ಬೆನ್ನಲ್ಲಿಯೇ ಆರ್‌ಸಿಬಿ ಹಾಗೂ ಕ್ರಿಕೆಟ್‌ ಅಭಿಮಾನಿಗಳು ಅವರನ್ನು ವ್ಯಾಪಕವಾಗಿ ಟೀಕಿಸಿದ್ದಾರೆ. ತಮ್ಮ ಪೋಸ್ಟ್‌ಗೆ ವ್ಯಾಪಕ ವಿರೋಧ ಬಂದ ಬಳಿಕ ಅದನ್ನು ಇನ್ಸ್‌ಟಾಗ್ರಾಮ್‌ನಲ್ಲಿ ಡಿಲೀಟ್‌ ಮಾಡಿದ್ದಾರೆ.

ಸತತ ಆರು ಪಂದ್ಯಗಳ ಆರ್‌ಸಿಬಿ ಗೆಲುವಿನ ಓಟ ಬುಧವಾರ ಎಲಿಮಿನೇಟರ್‌ ಪಂದ್ಯದಲ್ಲಿ ಸೋಲು ಕಾಣುವ ಮೂಲಕ ಮುಕ್ತಾಯವಾಗಿತ್ತು. ಅದರೊಂದಿಗೆ ಐಪಿಎಲ್‌ ಟ್ರೋಫಿ ಗೆಲ್ಲುವಲ್ಲಿ ತಂಡದ ಸಾಲು ಸಾಲು ಸೋಲು ಈ ವರ್ಷವೂ ಮುಂದುವರಿದಿದೆ. ಟೂರ್ನಿಯ ಫೈನಲ್‌ಗೇರುವ ಮತ್ತೊಂದು ಅವಕಾಶವನ್ನು ಆರ್‌ಸಿಬಿ ತಂಡ ತಪ್ಪಿಸಿಕೊಂಡ ಬೆನ್ನಲ್ಲಿಯೇ ಚೆನ್ನೈ ಸೂಪರ್‌ ಕಿಂಗ್ಸ್‌ ಸ್ಟಾರ್‌, ಆರ್‌ಸಿಬಿ ತಂಡದ ಕುರಿತು ವ್ಯಂಗ್ಯ ಮಾಡುವ ಪೋಸ್ಟ್‌ಅನ್ನು ಹಂಚಿಕೊಂಡಿದ್ದರು.

'ಚನ್ನೈ ಸೂಪರ್‌ ಕಿಂಗ್ಸ್‌ ಅಭಿಮಾನಿಗಳು ಡಿಫರೆಂಟ್‌ ಆಗಿ ರೂಪುಗೊಂಡಿದ್ದಾರೆ' ಎಂದು ಅವರು ಬರೆದುಕೊಂಡಿದ್ದು, ಅದರೊಂದಿಗೆ ಬೆಂಗಳೂರು ಕಂಟೋನ್ಮೆಂಟ್‌ ರೈಲ್ವೇ ನಿಲ್ದಾಣದ ಚಿತ್ರವನ್ನು ಹಂಚಿಕೊಂಡಿದ್ದಾರೆ. ಬೆಂಗಳೂರು ಕಾಂಟ್‌ ಎಂದರೆ, ಬೆಂಗಳೂರಿಗೆ ಆಗಲ್ಲ ಎನ್ನುವ ಅರ್ಥವೂ ಬರುತ್ತದೆ. ಟ್ರೋಫಿ ಗೆಲ್ಲೋಕೆ ಬೆಂಗಳೂರಿಗೆ ಆಗೋದಿಲ್ಲ ಎನ್ನುವ ಅರ್ಥದ ಪೋಸ್ಟ್‌ ಹಂಚಿಕೊಂಡಿದ್ದರು. ಇದು ವಿವಾದವಾಗುವ ಲಕ್ಷಣ ಕಂಡಾಗ ಅದನ್ನು ಡಿಲೀಟ್‌ ಮಾಡಿದ್ದಾರೆ.

ಆರ್‌ಸಿಬಿಯ ಹೊಸ ಅಧ್ಯಾಯ ಮುಕ್ತಾಯ; ರಾಜಸ್ಥಾನ ಎದುರು ಹೋರಾಡಿ ಸೋತ ಬೆಂಗಳೂರು

ಎಲಿಮಿನೇಟರ್‌ ಪಂದ್ಯದಲ್ಲಿ ಆರ್‌ಸಿಬಿ ನೀಡಿದ 173 ರನ್‌ಗಳ ಟಾರ್ಗೆಟ್‌ಅನ್ನು ರಾಜಸ್ಥಾನ ರಾಯಲ್ಸ್‌ ಬಹಳ ಸುಲಭವಾಗಿ ಬೆನ್ನಟ್ಟುವ ಮೂಲಕ ಕ್ವಾಲಿಫೈಯರ್‌-2 ಪಂದ್ಯಕ್ಕೆ ಅರ್ಹತೆ ಪಡೆದುಕೊಂಡಿತು. ರಿಯಾನ್‌ ಪರಾಗ್‌ 26 ಎಸೆತಗಳಲ್ಲಿ 36 ರನ್‌ ಸಿಡಿಸುವ ಮೂಲಕ ತಂಡದ ಗೆಲುವಿಗೆ ನೆರವಾದರು. 2008ರ ಐಪಿಎಎಲ್‌ ಚಾಂಪಿಯನ್‌ ರಾಜಸ್ಥಾನ ರಾಯಲ್ಸ್‌ ತಂಡ ಶುಕ್ರವಾರ ಚೆನ್ನೈನಲ್ಲಿ ನಡೆಯಲಿರುವ 2ನೇ ಕ್ವಾಲಿಫೈಯರ್‌ ಪಂದ್ಯದಲ್ಲಿ ಸನ್‌ರೈಸರ್ಸ್‌ ಹೈದರಾಬಾದ್‌ ತಂಡವನ್ನು ಎದುರಿಸಲಿದೆ.

RCB ಮ್ಯಾಚ್ ನೋಡ್ಬೇಕಾ, ಇಲ್ಲ ನಿಮ್ಮನ್ನ ನೋಡಬೇಕಾ: ಎದೆ ಸೀಳು ಪ್ರದರ್ಶಿಸಿದ ಪ್ರಿಯಾಂಕಾಗೆ ನೆಟ್ಟಿಗರ ಪ್ರಶ್ನೆ!