Asianet Suvarna News Asianet Suvarna News

ವಿರಾಟ್ ಕೊಹ್ಲಿ ಬೇರೆಯದ್ದೇ ಹಂತದ ಆಟಗಾರನೆಂದ ಎಬಿಡಿ..! ಡಿಕೆ ರೆಸ್ಪಾನ್ಸ್‌ ವೈರಲ್‌

ಲಂಕಾ ಎದುರು ಸ್ಪೋಟಕ ಶತಕ ಚಚ್ಚಿದ ವಿರಾಟ್ ಕೊಹ್ಲಿ
ವಿರಾಟ್ ಬ್ಯಾಟಿಂಗ್ ಗುಣಗಾನ ಮಾಡಿದ ಎಬಿ ಡಿವಿಲಿಯರ್ಸ್‌
ಎಬಿಡಿಗೆ ಸಾಥ್ ಕೊಟ್ಟ ಆರ್‌ಸಿಬಿ ಕ್ರಿಕೆಟಿಗ ದಿನೇಶ್ ಕಾರ್ತಿಕ್

AB De Villiers Calls Virat Kohli Different Level RCB Cricketer Dinesh Karthik Responds goes viral kvn
Author
First Published Jan 16, 2023, 4:52 PM IST

ತಿರುವನಂತಪುರಂ(ಜ.16): ಟೀಂ ಇಂಡಿಯಾ, ಶ್ರೀಲಂಕಾ ಎದುರಿನ ಮೂರನೇ ಹಾಗೂ ಕೊನೆಯ ಏಕದಿನ ಪಂದ್ಯದಲ್ಲಿ 317 ರನ್‌ಗಳ ವಿಶ್ವದಾಖಲೆಯ ಗೆಲುವು ಸಾಧಿಸಿದೆ.  ಯಾವ ತಂಡವು ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್ ಪಂದ್ಯದಲ್ಲಿ 300+ ರನ್ ಅಂತರದ ಗೆಲುವು ದಾಖಲಿಸಿಲ್ಲ. ಇದೀಗ ಅಂತಹ ದಾಖಲೆಯನ್ನು ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ ಮಾಡಿದೆ.

ಇನ್ನು ಇದೇ ಪಂದ್ಯದಲ್ಲಿ ಕ್ರಿಕೆಟ್‌ ಅಭಿಮಾನಿಗಳು, ವಿರಾಟ್ ಕೊಹ್ಲಿಯ ವೀರಾವೇಶದ ಬ್ಯಾಟಿಂಗ್ ಕಣ್ತುಂಬಿಕೊಂಡರು. ಲಂಕಾ ಎದುರಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ, ಅಜೇಯ 166 ರನ್‌ ಬಾರಿಸುವುದರ ಜತೆಗೆ ಏಕದಿನ ಕ್ರಿಕೆಟ್‌ ವೃತ್ತಿಜೀವನದ 46ನೇ ಶತಕ ಸಿಡಿಸಿ ಸಂಭ್ರಮಿಸಿದರು. 34 ವರ್ಷದ ವಿರಾಟ್ ಕೊಹ್ಲಿ, ಎರಡು ಶತಕ ಸಹಿತ 283 ರನ್ ಸಿಡಿಸಿ ಮಿಂಚಿದ್ದರು.

ವಿರಾಟ್ ಕೊಹ್ಲಿ ಸಿಡಿಲಬ್ಬರದ ಬ್ಯಾಟಿಂಗ್ ಗಮನಿಸಿದ ಹಿರಿ-ಕಿರಿಯ ಆಟಗಾರರು ಸಾಮಾಜಿಕ ಜಾಲತಾಣಗಳಲ್ಲಿ ಅಭಿನಂದನೆಗಳ ಮಹಾಪೂರವೇ ಹರಿದು ಬಂದಿದೆ. ಇನ್ನು ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗ ಎಬಿ ಡಿವಿಲಿಯರ್ಸ್‌, ವಿರಾಟ್ ಕೊಹ್ಲಿ ಬ್ಯಾಟಿಂಗ್ ಗುಣಗಾನ ಮಾಡಿದ್ದು, "ವಿರಾಟ್ ಕೊಹ್ಲಿ! ಡಿಫರೆಂಟ್‌ ಲೆವೆಲ್‌" ಎಂದು ಟ್ವೀಟ್‌ ಮಾಡಿದ್ದಾರೆ.

ಇನ್ನು ವಿರಾಟ್ ಕೊಹ್ಲಿ ಕುರಿತು ಟ್ವೀಟ್‌ ಮಾಡಿದ ಎಬಿ ಡಿವಿಲಿಯರ್ಸ್‌ ಮಾಡಿದ ಗಮನಿಸಿದ ದಿನೇಶ್ ಕಾರ್ತಿಕ್‌, ಇದನ್ನು ವೇರಾ ಲೆವೆಲ್(ಬೇರೆ ಲೆವಲ್) ಎನ್ನುತ್ತಾರೆ. ಅದನ್ನು ವಿರಾಟ್ ಕೊಹ್ಲಿ ಬಳಿ ಕೇಳಿ ನೋಡಿ. ಐಪಿಎಲ್‌ನಲ್ಲಿ ಸಿಗೋಣ ಎಂದು ಡಿಕೆ ಟ್ವೀಟ್ ಮಾಡಿದ್ದಾರೆ. 

ವಿರಾಟ್ ಕೊಹ್ಲಿ ಹಾಗೂ ಎಬಿ ಡಿವಿಲಿಯರ್ಸ್‌ ದಶಕಗಳ ಕಾಲ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡವನ್ನು ಪ್ರತಿನಿಧಿಸುತ್ತಾ ಬಂದಿದ್ದು,  ಈ ಜೋಡಿ, ಹಲವು ಅವಿಸ್ಮರಣೀಯ ಇನಿಂಗ್ಸ್‌ ಗಳನ್ನು ಆಡುವ ಮೂಲಕ ಕ್ರಿಕೆಟ್‌ ಅಭಿಮಾನಿಗಳನ್ನು ರಂಜಿಸಿದ್ದಾರೆ. ಆದರೆ ಎಬಿ ಡಿವಿಲಿಯರ್ಸ್‌ 2021ರಲ್ಲಿ ಎಲ್ಲಾ ಮಾದರಿಯ ಕ್ರಿಕೆಟ್‌ಗೆ ವಿದಾಯ ಹೇಳುವ ಮೂಲಕ ಈ ಜೋಡಿ ಬೇರ್ಪಟ್ಟಿದೆ.

ಕಳೆದ 4 ಇನ್ನಿಂಗ್ಸಲ್ಲಿ 3 ಶತಕ ಸಿಡಿಸುವ ಮೂಲಕ ಭಾರತದ ‘ರನ್‌ ಮಷಿನ್‌’ ವಿರಾಟ್‌ ಕೊಹ್ಲಿ ಲಯಕ್ಕೆ ಮರಳಿದ್ದಾರೆ. ವಿಶ್ವಕಪ್‌ ವರ್ಷದಲ್ಲಿ ಕೊಹ್ಲಿಯ ಲಯ ಭಾರತದ ಆತ್ಮವಿಶ್ವಾಸವನ್ನು ಇಮ್ಮಡಿಗೊಳಿಸಲಿದೆ. ಲಂಕಾ ವಿರುದ್ಧದ 3ನೇ ಏಕದಿನದಲ್ಲಿ ಕೊಹ್ಲಿ ಮತ್ತಷ್ಟುಮಹತ್ವದ ದಾಖಲೆಗಳನ್ನು ಬರೆದರು.

ಏಕದಿನ ಕ್ರಿಕೆಟ್‌ನಲ್ಲಿ ಗರಿಷ್ಠ ರನ್‌ ಬಾರಿಸಿದ ಆಟಗಾರರ ಪಟ್ಟಿಯಲ್ಲಿ ಕೊಹ್ಲಿ ಲಂಕಾದ ಮಹೇಲಾ ಜಯವರ್ಧನೆ(12650)ಯನ್ನು ಹಿಂದಿಕ್ಕಿ 5ನೇ ಸ್ಥಾನಕ್ಕೇರಿದರು. ಕೊಹ್ಲಿ 268 ಪಂದ್ಯಗಳ 259 ಇನ್ನಿಂಗ್ಸ್‌ಗಳಲ್ಲಿ 12754 ರನ್‌ ಕಲೆಹಾಕಿದ್ದಾರೆ. ಸಚಿನ್‌(18426), ಸಂಗಕ್ಕರ(14234), ಪಾಂಟಿಂಗ್‌(13704), ಜಯಸೂರ್ಯ(13430) ಮೊದಲ 4 ಸ್ಥಾನಗಳಲ್ಲಿದ್ದಾರೆ

ಜನವರಿ 15 ನೆಚ್ಚಿನ ದಿನ

ವಿರಾಟ್‌ ಪಾಲಿಗೆ ಜ.15 ನೆಚ್ಚಿನ ದಿನ. ಅವರು 2017, 2018, 2019, 2023ರ ಈ ದಿನ ಶತಕ ಬಾರಿಸಿದ್ದಾರೆ. 2017ರಲ್ಲಿ ಇಂಗ್ಲೆಂಡ್‌ ವಿರುದ್ಧ ಏಕದಿನದಲ್ಲಿ 122, 2018ರಲ್ಲಿ ದ.ಆಫ್ರಿಕಾ ವಿರುದ್ಧ ಟೆಸ್ಟ್‌ನಲ್ಲಿ 153, 2019ರಲ್ಲಿ ಆಸೀಸ್‌ ವಿರುದ್ಧ ಏಕದಿನದಲ್ಲಿ 104 ರನ್‌ ಗಳಿಸಿದ್ದರು.

Follow Us:
Download App:
  • android
  • ios