ಕೇಪ್‌ಟೌನ್(ನ.20) ನವೆಂಬರ್ 27 ರಿಂದ ಇಂಗ್ಲೆಂಡ್‌ ವಿರುದ್ಧದ ಸೀಮಿತ ಓವರ್‌ಗಳ ಸರಣಿಗಾಗಿ ಪೂರ್ವಭ್ಯಾಸಕ್ಕೆ ಸಜ್ಜಾಗಿದ್ದ ದಕ್ಷಿಣ ಆಫ್ರಿಕಾ ತಂಡಕ್ಕೆ ಆಘಾತ ಎದುರಾಗಿದೆ. 

ದಕ್ಷಿಣ ಆಫ್ರಿಕಾ ತಂಡದ ಒಬ್ಬ ಆಟಗಾರನಿಗೆ ಕೊರೋನಾ ಸೋಂಕು ದೃಢಪಟ್ಟಿದೆ. ಸೋಂಕಿತ ಆಟಗಾರನ ಸಂಪರ್ಕದಲ್ಲಿದ್ದ ಇಬ್ಬರು ಆಟಗಾರರು ಸೇರಿದಂತೆ ಒಟ್ಟು ಮೂವರನ್ನು ಐಸೋಲೇಷನ್‌ನಲ್ಲಿ ಇರಿಸಲಾಗಿದೆ ಎಂದು ಕ್ರಿಕೆಟ್‌ ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿ ಖಚಿತಪಡಿಸಿದೆ.

ಮೂವರು ಆಟಗಾರರಿಗೆ ಯಾವುದೇ ಕೊರೋನಾ ಲಕ್ಷಣಗಳಿಲ್ಲ. ಆದರೂ ವೈದ್ಯಕೀಯ ಸಿಬ್ಬಂದಿಗಳು ಈ ಮೂವರು ಆಟಗಾರರ ಮೇಲೆ ನಿಗಾಯಿಟ್ಟಿದ್ದಾರೆ ಎಂದು ಆಫ್ರಿಕಾ ಕ್ರಿಕೆಟ್ ಮಂಡಳಿ ತಮ್ಮ ಪತ್ರಿಕ ಪ್ರಕಟಣೆಯಲ್ಲಿ ತಿಳಿಸಿದೆ.

ಕ್ವಾರಂಟೈನ್‌ನಲ್ಲಿರುವ ವಿರಾಟ್ ಕೊಹ್ಲಿ ಸಿಕ್ಕಾಪಟ್ಟೆ ಬ್ಯುಸಿಯಂತೆ..!

ಇಂಗ್ಲೆಂಡ್‌ ವಿರುದ್ಧದ ಸೀಮಿತ ಓವರ್‌ಗಳ ಸರಣಿಗೆ ಬಯೋ ಬಬಲ್ ಪ್ರವೇಶಿಸುವ ಮುನ್ನ ದಕ್ಷಿಣ ಆಫ್ರಿಕಾ ತಂಡದ ಆಟಗಾರರು ಹಾಗೂ ಸಿಬ್ಬಂದಿಗಳಿಗೆ 50ಕ್ಕೂ ಹೆಚ್ಚು ಕೋವಿಡ್ ಪರೀಕ್ಷೆ ನಡೆಸಲಾಗಿತ್ತು ಎಂದು ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿ ತಿಳಿಸಿದೆ. ನವೆಂಬರ್ 27ರಿಂದ 3 ಪಂದ್ಯಗಳ ಟಿ20 ಸರಣಿ ಆರಂಭವಾಗಲಿದೆ. ಆ ಬಳಿಕ 3 ಪಂದ್ಯಗಳ ಏಕದಿನ ಸರಣಿ ಜರುಗಲಿದೆ. 

ಬೆಂಗಾಲ್‌ ನಾಯಕ ಅಭಿಮನ್ಯುಗೆ ಕೊರೋನಾ ಸೋಂಕು

ಕೋಲ್ಕತಾ: ಬೆಂಗಾಲ್‌ ರಣಜಿ ತಂಡದ ನಾಯಕ ಅಭಿಮನ್ಯು ಈಶ್ವರನ್‌ಗೆ ಕೊರೋನಾ ಸೋಂಕು ದೃಢಪಟ್ಟಿದೆ. ಮುಂದಿನ 2 ವಾರಗಳ ಕಾಲ ಅಭಿಮನ್ಯು ಕ್ವಾರಂಟೈನ್‌ಗೆ ಒಳಗಾಗಲಿದ್ದಾರೆ. ನ.24 ರಿಂದ ಆರಂಭವಾಗಲಿರುವ ಉದ್ಘಾಟನಾ ಬೆಂಗಾಲ್‌ ಟಿ20 ಚಾಲೆಂಜ್‌ನಲ್ಲಿ ಅಭಿಮನ್ಯು ಆಡುವುದು ಅನುಮಾನ ಮೂಡಿಸಿದೆ.