ಕಟ್ಟದ ಕಾರ್ಮಿಕಳಾಗಿರುವ ಯುವ ಕ್ರಿಕೆಟರ್ ಭಾರತ ಅಂಧ ಮಹಿಳೆಯರ ಕ್ರಿಕೆಟ್ ತಂಡದಲ್ಲಿ ಝಿಲಿಗೆ ಸ್ಥಾನಒಡಿಶಾದ ಗಂಜಮ್ ಜಿಲ್ಲೆಯ 13 ವರ್ಷದ ಝಿಲಿ ಬಿರುವಾ
ನವದೆಹಲಿ(ಏ.22): ಇತ್ತೀಚೆಗಷ್ಟೇ ಮೊದಲ ಬಾರಿ ಭಾರತ ಅಂಧ ಮಹಿಳೆಯರ ಕ್ರಿಕೆಟ್ ತಂಡ ಪ್ರಕಟಗೊಂಡಿದ್ದು, ಇದರಲ್ಲಿ ಕಟ್ಟಡ ಕಾರ್ಮಿಕಳಾಗಿ ದುಡಿಯುತ್ತಿರುವ ಒಡಿಶಾದ ಗಂಜಮ್ ಜಿಲ್ಲೆಯ 13 ವರ್ಷದ ಝಿಲಿ ಬಿರುವಾ ಕೂಡಾ ಸ್ಥಾನ ಪಡೆದಿದ್ದಾರೆ.
ತಾನು 3 ವರ್ಷವಿದ್ದಾಗ ತಾಯಿಯನ್ನು, 2020ರಲ್ಲಿ ಅಪಘಾತದಲ್ಲಿ ತಂದೆಯನ್ನು ಕಳೆದುಕೊಂಡ ಝಿಲಿ ಈಗ ಅನಾಥೆ. ಒಂದೊತ್ತಿನ ಊಟಕ್ಕೆ ಪರದಾಡುತ್ತಿರುವ ಝಿಲಿ ಸದ್ಯ ತನ್ನ ಖರ್ಚಿಗಾಗಿ ದಿನಗೂಲಿ ಕೆಲಸ ಮಾಡುತ್ತಿದ್ದು, ಪ್ರತಿದಿನ 250 ರುಪಾಯಿ ಸಂಪಾದಿಸುತ್ತಿದ್ದಾರೆ. ‘ಸೂಕ್ತ ದಾಖಲೆಗಳಿಲ್ಲದ್ದಕ್ಕೆ ಶಾಲೆ ಅರ್ಧದಲ್ಲೇ ತೊರೆಯಬೇಕಾಯಿತು. ಈಗ ಬೆಳಗ್ಗೆ ಕೆಲಸಕ್ಕೆ ಹೋಗಿ, ಸಂಜೆ ಕ್ರಿಕೆಟ್ ಆಡುತ್ತೇನೆ’ ಎಂದು ನೊಂದು ನುಡಿಯುತ್ತಾರೆ ಝಿಲಿ. ಇನ್ನು, ಚಿಕ್ಕಂದಿನಲ್ಲಿ ಬಿಲ್ಲು ಬಾಣ ಹಿಡಿದು ಆಡುವಾಗ ಕಣ್ಣಿನ ದೃಷ್ಟಿ ಕಳೆದುಕೊಂಡಿದ್ದ 20 ವರ್ಷದ ಸುಶ್ಮಾ ಪಟೇಲ್ ತಂಡದ ನಾಯಕಿಯಾಗಿ ನೇಮಕಗೊಂಡಿದ್ದಾರೆ.
ಭಾರತ ಅಂಧ ಮಹಿಳಾ ತಂಡವು ಈ ತಿಂಗಳಾಂತ್ಯದಲ್ಲಿ ನೇಪಾಳ ಪ್ರವಾಸ ಕೈಗೊಳ್ಳಲಿದ್ದು, ಏಪ್ರಿಲ್ 25ರಿಂದ 30ರ ವರೆಗೂ 5 ಪಂದ್ಯಗಳ ದ್ವಿಪಕ್ಷೀಯ ಟಿ20 ಸರಣಿಯನ್ನು ಆಡಲಿದೆ.
ಸಚಿನ್, ಕೊಹ್ಲಿ, ಧೋನಿಯ ಟ್ವೀಟರ್ ಬ್ಲೂಟಿಕ್ ಮಾಯ!
ನವದೆಹಲಿ: ಭಾರತದ ಕ್ರೀಡಾ ತಾರೆಗಳಾದ ಸಚಿನ್ ತೆಂಡುಲ್ಕರ್, ವಿರಾಟ್ ಕೊಹ್ಲಿ, ಎಂ.ಎಸ್.ಧೋನಿ, ನೀರಜ್ ಚೋಪ್ರಾ ಸೇರಿದಂತೆ ಪ್ರಮುಖರು ಶುಲ್ಕ ಪಾವತಿಸಿಲ್ಲ ಎಂಬ ಕಾರಣಕ್ಕೆ ಟ್ವೀಟರ್ನಲ್ಲಿ ಶುಕ್ರವಾರ ಬ್ಲೂ ಟಿಕ್ ಕಳೆದುಕೊಂಡಿದ್ದಾರೆ. ಇವರ ಜೊತೆಗೆ ರೋಹಿತ್ ಶರ್ಮಾ, ಸಾನಿಯಾ ಮಿರ್ಜಾ, ಸುನಿಲ್ ಚೆಟ್ರಿ, ಭಜರಂಗ್ ಪೂನಿಯಾ, ನಿಖಾತ್ ಜರೀನ್ ಅವರ ಖಾತೆಗಳ ಬ್ಲೂಟಿಕ್ ಕೂಡಾ ಮಾಯವಾಗಿದೆ.
IPL 2023: ಪಂಜಾಬ್ ಮಣಿಸಿ ಮುಂಬೈ ಇಂಡಿಯನ್ಸ್‌ಗೆ 4ನೇ ಗೆಲುವಿನ ಗುರಿ
ಖ್ಯಾತ ಫುಟ್ಬಾಲಿಗರಾದ ರೊನಾಲ್ಡೋ, ಎಂಬಾಪೆ, ಟೆನಿಸ್ ದಿಗ್ಗಜರಾದ ರೋಜರ್ ಫೆಡರರ್, ನಡಾಲ್ ಕೂಡಾ ಬ್ಲೂ ಟಿಕ್ ಕಳೆದುಕೊಂಡಿದ್ದಾರೆ. ಖ್ಯಾತ ಉದ್ಯಮಿ ಎಲಾನ್ ಮಸ್‌್ಕ ಟ್ವೀಟರ್‌ಅನ್ನು ಖರೀದಿಸಿದ ಬಳಿಕ ಬ್ಲೂ ಟಿಕ್‌ಗೆ ಶುಲ್ಕ ಪಾವತಿ ಕಡ್ಡಾಯಗೊಳಿಸಿದ್ದರು. ಬ್ಲೂ ಟಿಕ್ ಸಿಗಬೇಕಿದ್ದರೆ ತಿಂಗಳಿಗೆ ವೆಬ್ ಮಾದರಿಗೆ 650, ಮೊಬೈಲ್ ಅಪ್ಲಿಕೇಶನ್‌ಗೆ 900 ಪಾವತಿಸಬೇಕು.
ಪಾಕ್-ನ್ಯೂಜಿಲೆಂಡ್ 4ನೇ ಟಿ20 ಪಂದ್ಯ ಮಳೆಗಾಹುತಿ
ರಾವಲ್ಪಿಂಡಿ: ಪಾಕಿಸ್ತಾನ ಹಾಗೂ ನ್ಯೂಜಿಲೆಂಡ್ ನಡುವಿನ 4ನೇ ಟಿ20 ಪಂದ್ಯ ಮಳೆಯಿಂದಾಗಿ ರದ್ದಾಗಿದೆ. ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟಕಿವೀಸ್ 18.5 ಓವರ್ಗಳಲ್ಲಿ 5 ವಿಕೆಟ್ಗೆ 164 ರನ್ ಗಳಿಸಿದ್ದಾದ ಮಳೆ ಸುರಿಯಲಾರಂಭಿಸಿತು. ಭಾರೀ ಪ್ರಮಾಣದಲ್ಲಿ ಆಲಿಕಲ್ಲು ಮಳೆ ಸುರಿದ ಕಾರಣ ಬಳಿಕ ಪಂದ್ಯ ಮುಂದುವರಿಸಲಾಗಲಿಲ್ಲ. ಮೊದಲೆರಡು ಪಂದ್ಯ ಗೆದ್ದಿದ್ದ ಪಾಕ್ ಸರಣಿಯಲ್ಲಿ 2-1 ಮುನ್ನಡೆಯಲ್ಲಿದ್ದು, 5ನೇ ಹಾಗೂ ಕೊನೆ ಪಂದ್ಯ ಸೋಮವಾರ ನಡೆಯಲಿದೆ.
