ರಶ್ಮಿಕಾ ಮಂದಣ್ಣಗೆ ರಾಪಿಡ್ ಫೈಯರ್ ಪ್ರಶ್ನೆ ಕೇಳಲಾಗಿದೆ. ಅದಕ್ಕೆ ಅವರು ತಮ್ಮಿಷ್ಟದಂತೆ ಉತ್ತರ ಕೊಟ್ಟಿದ್ದಾರೆ. ಆದರೆ, ನಟಿ ರಶ್ಮಿಕಾ ಮಂದಣ್ಣ ಕೊಟ್ಟ ಉತ್ತರ ಸಾಕಷ್ಟು ಆಸಕ್ತಿಕರವಾಗಿದೆ. ಹಾಗಿದ್ದರೆ ಅವರೇನು ಉತ್ತರ ಕೊಟ್ಟಿದ್ದಾರೆ? ಪ್ರಶ್ನೆ ಏನಿತ್ತು? ಈ ಬಗ್ಗೆ ತಿಳಿಯಲು ಈ ಸ್ಟೋರಿ ನೋಡಿ..
ನ್ಯಾಷನಲ್ ಕ್ರಶ್ ಬದಲು ಬೇರೆ ಪಟ್ಟ?
ಕನ್ನಡದ 'ಕಿರಿಕ್ ಪಾರ್ಟಿ' ನಟಿ, ನ್ಯಾಷನಲ್ ಕ್ರಶ್ ಖ್ಯಾತಿಯ ರಶ್ಮಿಕಾ ಮಂದಣ್ಣ (Rashmika Mandanna) ಅವರು ಭಾಗಿಯಾದ ಒಂದು ಸಂದರ್ಶನವೀಗ ಸಖತ್ ವೈರಲ್ ಆಗಿದೆ. ಆ ಇಂಟರ್‌ವ್ಯೂದಲ್ಲಿನಟಿ ರಶ್ಮಿಕಾ ಅವರಿಗೆ ರಾಪಿಡ್ ಫೈಯರ್ ಪ್ರಶ್ನೆ ಕೇಳಲಾಗಿದೆ. ಅದಕ್ಕೆ ಅವರು ತಮ್ಮಿಷ್ಟದಂತೆ ಉತ್ತರ ಕೊಟ್ಟಿದ್ದಾರೆ. ಆದರೆ, ನಟಿ ರಶ್ಮಿಕಾ ಮಂದಣ್ಣ ಕೊಟ್ಟ ಉತ್ತರ ಸಾಕಷ್ಟು ಆಸಕ್ತಿಕರವಾಗಿದೆ. ಹಾಗಿದ್ದರೆ ಅವರೇನು ಉತ್ತರ ಕೊಟ್ಟಿದ್ದಾರೆ? ಪ್ರಶ್ನೆ ಏನಿತ್ತು? ಈ ಬಗ್ಗೆ ತಿಳಿಯಲು ಈ ಸ್ಟೋರಿ ನೋಡಿ..
ನಟಿ ರಶ್ಮಿಕಾಗೆ 'ನೀವು ಮಾರ್ನಿಂಗ್ ಕಾಲ್‌ಶೀಟ್ ಇಷ್ಟಪಡ್ತೀರಾ ಅಥವಾ ಲೇಟ್ ನೈಟ್?' ಎಂಬ ಪ್ರಶ್ನೆ ಕೇಳಲಾಗಿದೆ. ಅದಕ್ಕೆ ಅವರು 'ಲೇಟ್ ನೈಟ್' ಎಂದು ಉತ್ತರಿಸಿದ್ದಾರೆ. ಬಳಿಕ, ಕಾಫೀ ಅಥವ ಟೀ ಎಂದಾಗ ಕಾಫೀ ಎಂದಿದ್ದಾರೆ. ಗೀತ ಗೊಂವಿಂದಂ ಬಾಯ್ ಫ್ರೆಂಡ್ ಅಥವಾ ಗರ್ಲ್ ಫ್ರೆಂಡ್ ಬಾಯ್ ಫ್ರೆಂಡ್ ಈ ಇಬ್ಬರಲ್ಲಿ ಯಾರನ್ನು ಇಷ್ಟಪಡ್ತೀರಾ ಎಂದಾಗ, ಗಾಬರಿ ಹಾಗೂ ಹುಸಿ ಕೋಪಗೊಂಡು ರಶ್ಮಿಕಾ ಅವರು 'ಅದರಲ್ಲಿ ಕೇಳೋದಕ್ಕೇನಿದೆ?' ಎನ್ನುವಂತೆ, 'ಗೀತ ಗೋವಿಂದಂ' ಭಾರ್ಯ ಫ್ರ್ರೆಂಡ್ ವಿಜಯ್ ದೇವರಕೊಂಡ ಎಂದದ್ದಾರೆ.
ಆ ಬಳಿಕ ಕೇಳಲಾದ 'ನಿಮಗೆ ನ್ಯಾಷನಲ್ ಕ್ರಶ್' ಎನ್ನುವ ಪಟ್ದಟ ಇಷ್ಟನಾ ಅಥವಾ 'ಗ್ಲೋಬಲ್ ಬೆಸ್ಟ್ ಫ್ರೆಂಡ್' ಪಟ್ಟವೇ ಎಂದು ಕೇಳಲಾಗಿ, ತಕ್ಷಣವೇ ಅವರು 'ಗ್ಲೋಬಲ್ ಬೆಸ್ಟ್ ಫ್ರೆಂಡ್' (Global Best Friend) ಎಂದು ಉತ್ತರಿಸಿದ್ದಾರೆ. ಇನ್ನೂ ಒಂದು ಕಡೆ ಮಾತನ್ನಾಡುತ್ತ ನಟಿ ರಶ್ಮಿಕಾ ಮಂದಣ್ಣ ಅವರು 'ನನಗೆ ನಿಜವಾಗಿಯೂ ಈ ನ್ಯಾಷನಲ್ ಕ್ರಶ್ ಅಥವಾ ಬೇರೆ ಯಾವುದೇ ಬಾಕ್ಸ್ ಆಫೀಸ್ ಸಕ್ಸಸ್ ಕಂಡು ಕೊಡುವ ಟೈಟಲ್‌ಗಳು ಇಷ್ಟವಾಗುವುದಿಲ್ಲ.
ನಾನು ಜಗತ್ತನ್ನು ತುಂಬಾ ಪ್ರೀತಿಸುತ್ತೇನೆ
ನಾನೊಬ್ಬಳು ನಟಿಯಾಗಿ ಜಗತ್ತಿನ ಜನರ ಹೃದಯದಲ್ಲಿ ಸ್ಥಾನ ಪಡೆಯಲು ಇಷ್ಟಪಡುತ್ತೇನೆ. ನಾನು ಜಗತ್ತನ್ನು ತುಂಬಾ ಪ್ರೀತಿಸುತ್ತೇನೆ, ಅದೇ ರೀತಿ ಜಗತ್ತೂ ಕೂಡ ನನ್ನನ್ನು ಪ್ರೀತಿಸಬೇಕು ಎಂದು ಇಷ್ಟಪಡುತ್ತೇನೆ' ಎಂದಿದ್ದರು. ಇದೀಗ ತಮಗೆ ನ್ಯಾಷನಲ್ ಕ್ರಶ್ ಎನ್ನುವುದಕ್ಕಿಂತ 'ಗ್ಲೋಬಲ್ ಬೆಸ್ಟ್ ಫ್ರೆಂಡ್' ಪಟ್ಟವೇ ಇಷ್ಟ ಎಂದಿರುವ ರಶ್ಮಿಕಾಗೆ ಸದ್ಯವೇ ಅಧಿಕೃತ ಎನ್ನುವಂತೆ ಈ ಗ್ಲೋಬಲ್ ಬೆಸ್ಟ್ ಫ್ರೆಂಡ್' ಎಂಬ ಟೈಟಲ್ ಬಳಕೆ ಆದರರೂ ಅಚ್ಚರಿಯೇನಿಲ್ಲ ಎನ್ನಬಹುದು.
ಮದುವೆಯ ಮಮತೆಯ ಕರೆಯೋಲೆ
ಕಿರಿಕ್ ಬ್ಯೂಟಿ ರಶ್ಮಿಕಾ ಮತ್ತು ವಿಜಯ್ ದೇವರಕೊಂಡ ಎಂಗೇಜ್ಮೆಂಟ್ ವಿಷ್ಯ ಈಗಾಗ್ಲೇ ಜಗಜ್ಜಾಹೀರಾಗಿದೆ. ನಿಶ್ಚಿತಾರ್ಥದ ಬಳಿಕ ವಿಜಯ್, ರಶ್ಮಿಕಾ ಸಿನಿಮಾಗಳಲ್ಲಿ ಬ್ಯುಸಿಯಾದ್ರೆ , ಅವರ ಮನೆಮಂದಿ ಮದುವೆಗೆ ಡೇಟ್ ಫಿಕ್ಸ್ ಮಾಡಿದ್ದಾರೆ. ಅಷ್ಟೇ ಅಲ್ಲ ಮದುವೆ ನಡೆಯೋ ಜಾಗ ಕೂಡ ಫಿಕ್ಸ್ ಆಗಿದೆ.
ರಶ್ಮಿಕಾ-ವಿಜಯ್ ಕಲ್ಯಾಣಕ್ಕೆ ಮುಹೂರ್ತ ಫಿಕ್ಸ್..!
ಯೆಸ್ ಕಳೆದ ಅಕ್ಟೋಬರ್ ತಿಂಗಳಲ್ಲಿ ರಶ್ಮಿಕಾ ಹಾಗೂ ವಿಜಯ್ ದೇವರಕೊಂಡ ಎಂಗೇಜ್ಮೆಂಟ್ ಗುಟ್ಟಾಗಿ ನಡೆದಿತ್ತು. ಎಂಗೇಜ್ಮೆಂಟ್ ಟೈಂನಲ್ಲಿ ಫೆಬ್ರುವರಿ ತಿಂಗಳಲ್ಲಿ ಮದುವೆ ಮಾಡ್ಲಿಕ್ಕೆ ಇಬ್ಬರ ಮನೆ ಮಂದಿ ನಿರ್ಧಾರ ಮಾಡಿದ್ರು. ಫೈನಲಿ ಈಗ ಈ ತಾರಾಜೋಡಿ ಕಲ್ಯಾಣಕ್ಕೆ ಡೇಟ್ ಫಿಕ್ಸ್ ಮಾಡಿದ್ದಾರೆ. ಫೆಬ್ರುವರಿ 26ನೇ ಈ ತಾರೀಖು ವಿಜಯ್-ರಶ್ಮಿಕಾ ಮದುವೆ ನಡೆಯಲಿದೆ.
ರಾಜಸ್ಥಾನ ಅರಮನೆಯಲ್ಲಿ ತಾರಾಜೋಡಿ ಮದುವೆ..!
ಹೌದು ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ರಾಜಸ್ಥಾನದ ಪ್ಯಾಲೇಸ್ ಹೊಟೇಲ್‌ನಲ್ಲಿ ಮದುವೆ ಆಗೋದಕ್ಕೆ ನಿರ್ಧಾರ ಮಾಡಿದ್ದಾರೆ. ಕೋಟೆ ನಗರಿ ರಾಜಸ್ಥಾನದಲ್ಲಿ ಅನೇಕ ಅರಮನೆಗಳಿವೆ. ಉದಯಪುರದ ಅರಮನೆಯನ್ನ ಹೊಟೇಲ್ ಆಗಿ ಬದಲಾಯಿಸಿದ್ದು ಅಲ್ಲಿ ಇವೆಂಟ್ಗಳನ್ನ ನಡೆಸೋದಕ್ಕೆ ಬಾಡಿಗೆ ಕೊಡಲಾಗುತ್ತೆ. ಈ ಉದಯಪುರ ಪ್ಯಾಲೇಸ್ ಹೊಟೇಲ್ನಲ್ಲೇ ರಶ್ಮಿಕಾ ವಿಜಯ್ ಮದುವೆ ನಡೆಯೋದು ಫಿಕ್ಸ್ ಆಗಿದೆ.
ಮಡಿಕೇರಿ, ಹೈದ್ರಾಬಾದ್ ಬಿಟ್ಟು ಉದಯಪುರ ಯಾಕೆ..?
ರಶ್ಮಿಕಾ ಮಂದಣ್ಣ ಮಡಿಕೇರಿ ಮೂಲದವರು. ಕೊಡವ ಕುಟುಂಬದವರಾದ ಅವರ ಮೂಲ ಮನೆ ಈಗಲೂ ವಿರಾಜಪೇಟೆಯಲ್ಲಿದೆ. ಇನ್ನೂ ದೇವರಕೊಂಡ ಫ್ಯಾಮಿಲಿ ಹೈದರಾಬಾದ್ನವರು. ಸೋ ವಧು-ವರ ಇಬ್ಬರ ಜಾಗವನ್ನೂ ಬಿಟ್ಟು ರಾಜಸ್ಥಾನದ ಉದಯಪುರದಲ್ಲಿ ಮದುವೆ ನಡೆಸಲಾಗ್ತಾ ಇದೆ. ಇದಕ್ಕೆ ಕಾರಣ ಬೇರೆನೂ ಇಲ್ಲ.. ಖಾಸಗಿತನಕ್ಕೆ ಅಡ್ಡಿ ಬರಬಾರದು ಅಂತ.
ಫೆ.26ಕ್ಕೆ ಡೆಸ್ಟಿನೇಷನ್ ವೆಡ್ಡಿಂಗ್.. ಆಪ್ತರಿಗಷ್ಟೇ ಆಹ್ವಾನ..!
ಈ ಹಿಂದೆ ಇದೇ ಉದಯಪುರ ಪ್ಯಾಲೇಸ್ ಹೊಟೇಲ್‌ನಲ್ಲಿ ಹಲವು ಸೆಲೆಬ್ರಿಟಿಗಳ ಮದುವೆ ನಡೆದಿದೆ. ಇಲ್ಲಿಯೇ ರಶ್ಮಿಕಾ- ವಿಜಯ್ ಕೂಡ ಡೆಸ್ಟಿನೇಷನ್ ವೆಡ್ಡಿಂಗ್ ಮಾಡಿಕೊಳ್ತಾ ಇದ್ದು, ತೀರಾ ಆಪ್ತರಿಗೆ ಮಾತ್ರ ಆಹ್ವಾನ ಹೋಗಲಿದೆಯಂತೆ.
ವಿಜಯ್ ರಶ್ಮಿಕಾದೂ ಬರೊಬ್ಬರಿ 8 ವರ್ಷಗಳ ಲವ್ ಸ್ಟೋರಿ. ಫೈನಲಿ ಅದಕ್ಕೀಗ ಅಧಿಕೃತ ಮುದ್ರೆ ಬೀಳ್ತಾ ಇದೆ. ಮುಂದಿನ ವರ್ಷ ಗೀತಾ ಗೋವಿಂದ ಸತಿಪತಿಯರಾಗ್ತಾ ಇದ್ದಾರೆ. ಸದ್ಯಕ್ಕಂತೂ ರಶ್ಮಿಕಾ ಮಂದಣ್ಣ ಅವರ ಕೈನಲ್ಲಿ 2-3 ಸಿನಿಮಾಗಳಿವೆ. ಬಿಡುಗಡೆ ಕಂಡಿರುವ 'ಥಮ' ಸಿನಿಮಾ ಸಕ್ಸಸ್ ಆಗಿದೆ, ಇತ್ತೀಚೆಗೆ ರಿಲೀಸ್ ಆಗಿರುವ 'ದಿ ಗರ್ಲ್ ಫ್ರೆಂಡ್' ಸಿನಿಮಾ ಕೂಡ ಉತ್ತಮ ರೆಸ್ಪಾನ್ಸ್ ಪಡೆದಿದೆ. ಮುಂದಿನ ದಿನಗಳ ರಿಸಲ್ಟ್ ಏನು ಅಂತ ಕಾದು ನೋಡಬೇಕಿದೆ!
