Asianet Suvarna News Asianet Suvarna News

ಶ್ರದ್ಧಾ ಕಪೂರ್​ಗೆ ಸೊಂಟ ಬಳಕಿಸುವುದನ್ನು ಹೀಗೆ ಹೇಳಿಕೊಟ್ಟ ನಟಿ ನೋರಾ ಫತೇಹಿ: ವಿಡಿಯೋ ವೈರಲ್​

ದಿಲ್​ಬರ್​ ಹಾಡಿನಲ್ಲಿ ಸೊಂಟ ಬಳುಕಿಸಿ ಫೇಮಸ್​ ಆಗಿರೋ ಹಾಟ್​ ಬ್ಯೂಟಿ ನೋರಾ ಫತೇಹಿ, ನಟಿ ಶ್ರದ್ಧಾ ಕಪೂರ್​ಗೆ ಸೊಂಟ ಬಳಕಿಸುವುದನ್ನು ಹೇಳಿಕೊಟ್ಟ ವಿಡಿಯೋ ವೈರಲ್​ ಆಗಿದೆ.
 

Nora Fatehi teaches Shraddha Kapoor the signature move of her  song Dilbar suc
Author
First Published Feb 10, 2024, 5:32 PM IST

2018ರಲ್ಲಿ ಬಿಡುಗಡೆಗೊಂಡ ಬಾಲಿವುಡ್​ ಚಿತ್ರ ಸತ್ಯಮೇವ ಜಯತೆಯಲ್ಲಿನ ದಿಲ್​ಬರ್​ ದಿಲ್​ಬರ್​ ಹಾಡು ಸಾಕಷ್ಟು ಫೇಮಸ್​ ಆಗಿತ್ತು. ಈ ಹಾಡಿನ ಮೂಲಕವೇ ಹಾಟ್​ ಬೆಡಗಿ  ನೋರಾ ಫತೇಹಿ ಸಾಕಷ್ಟು ಹಲ್​ಚಲ್​ ಸೃಷ್ಟಿಸಿದ್ದರು. ಈ ಹಾಡಿನ ಮೂಲಕ ನಟಿ ಸಾಕಷ್ಟು ಫೇಮಸ್​ ಕೂಡ ಆದರು.  ಈ ಹಾಡಿನಲ್ಲಿ ನೋರಾ ಅವರು ಸೊಂಟವನ್ನು ಬಳುಕಿಸುವ ರೀತಿಗೆ ಎಲ್ಲರೂ ಬೆರಗಾದರು. ಈ ಡ್ಯಾನ್ಸ್   ಸೋಷಿಯಲ್​ ಮೀಡಿಯಾಗಳಲ್ಲಿ ಇಂದಿಗೂ ವೈರಲ್​ ಆಗುತ್ತಲೇ ಇರುತ್ತದೆ. ನೋರಾ ರೀತಿಯಲ್ಲಿಯೇ ಲಲನೆಯರು ಸೊಂಟ ಬಳುಕಿಸಲು ಟ್ರೈ ಮಾಡುತ್ತಾ ರೀಲ್ಸ್​ ಮಾಡುತ್ತಾರೆ. ಇದೀಗ ಮತ್ತೊಮ್ಮೆ ಈ ಮೂಲ ಹಾಡು ವೈರಲ್​ ಆಗಿದೆ.

ಇದರಲ್ಲಿ ನೋರಾ ಅವರು ಇನ್ನೋರ್ವ ಬಾಲಿವುಡ್​ ಬ್ಯೂಟಿ ಶ್ರದ್ಧಾ ಕಪೂರ್​ ಅವರಿಗೆ ಸೊಂಟ ಬಳುಕಿಸುವುದನ್ನು ಹೇಳಿಕೊಡುವುದನ್ನು ನೋಡಬಹುದುದ.  ನೋರಾ ಅವರು ಶ್ರದ್ಧಾ ಕಪೂರ್​ಗೆ ಡ್ಯಾನ್ಸ್ ಸ್ಟೆಪ್ಸ್ ಹೇಳಿಕೊಡುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಸೊಂಟವನ್ನು ಹಿಡಿದು ತಿರುಗಿಸಿದ್ದಾರೆ ನೋರಾ. ನಂತರ  ಶ್ರದ್ಧಾ ಕೂಡ ಅದೇ ರೀತಿ ಮಾಡಿದ್ದಾರೆ.  ನೋರಾ ಫತೇಹಿಯ ಈ ಹಾಡಿನಲ್ಲಿ ಟೈಗರ್ ಶ್ರಾಫ್‌ನಿಂದ ವರುಣ್ ಧವನ್ ವರೆಗೆ ಕೂಡ ಡ್ಯಾನ್ಸ್ ಮಾಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಯೂ ಲವ್​ ಐ... ಎಂದಿದ್ದ ಶ್ರದ್ಧಾ ಕಪೂರ್- ಶಾಕ್​ನಲ್ಲಿ ಪ್ರೀತಿಯನ್ನೇ ತಿರಸ್ಕರಿಸಿ ಓಡಿದ್ದ ವರುಣ್​ ಧವನ್​..!

  ಇನ್ನು ಶ್ರದ್ಧಾ ಕಪೂರ್​ ಅವರ ಕುರಿತು ಹೇಳುವುದಾದರೆ, ಇವರು ಬಾಲ್ಯದಲ್ಲಿಯೇ ಇಂದಿನ ಬಾಲಿವುಡ್​ ಸ್ಟಾರ್​ ವರುಣ್ ಧವನ್​ ಅವರಿಗೆ ಪ್ರಪೋಸ್ ಮಾಡಿ ಸುದ್ದಿಯಾದವರು.  ಆದರೆ ಶ್ರದ್ಧಾರ ಇಂಗ್ಲಿಷ್​ ಕೇಳಿ ಅರ್ಥವಾಗದೇ ಹೆದರಿ ವರುಣ್​ ಓಡಿಹೋಗಿದ್ರಂತೆ.  ಶ್ರದ್ಧಾ ಕಪೂರ್ ಮತ್ತು ವರುಣ್ ಧವನ್ 'ಎಬಿಸಿಡಿ 2' ನಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಇಬ್ಬರೂ ತುಂಬಾ ಒಳ್ಳೆಯ ಸ್ನೇಹಿತರು, ಆದರೆ ಶ್ರದ್ಧಾ ಕಪೂರ್ ತನ್ನ ಬಾಲ್ಯದಲ್ಲಿ ವರುಣ್ ಧವನ್ ಮೇಲೆ ಕ್ರಶ್ ಹೊಂದಿದ್ದರು. ಅಷ್ಟೇ ಅಲ್ಲ, ನಟಿ ವರುಣ್ ಬಳಿಯೂ ತಮ್ಮ ಭಾವನೆಗಳನ್ನು ಹೇಳಿಕೊಂಡಿದ್ದರು. ಈ ರಹಸ್ಯವನ್ನು ಸ್ವತಃ ಶ್ರದ್ಧಾ ಕೆಲ ದಿನಗಳ ಹಿಂದೆ ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದರು. ನಾನು ವರುಣ್​ ಮೇಲೆ ಚಿಕ್ಕಂದಿನಿಂದಲೇ ಕ್ರಶ್​ ಹೊಂದಿದ್ದೆ. ಆತನಿಗೆ ಪ್ರೀತಿಯ ವಿಷಯ ತಿಳಿಸಬೇಕು ಅಂದುಕೊಂಡಿದ್ದೆ.  ಈ ಪ್ರೀತಿಯಿಂದ ಒಮ್ಮೆ ವರುಣನನ್ನು ಮಲೆನಾಡಿನತ್ತ ಕರೆದುಕೊಂಡು ಹೋಗಿದ್ದೆ. ವರುಣ್​ ಜೊತೆ ಆಟವಾಡಿದ್ದೆ.   ನಂತರ ಐ ಲವ್​ ಯೂ ಹೇಳೋಣ ಅಂದುಕೊಂಡೆ. ಆದರೆ ಆಗಿನ್ನೂ ನನಗೆ 8 ವರ್ಷ ವಯಸ್ಸಾಗಿತ್ತಷ್ಟೇ. ವರುಣ್​ಗೂ ಅಷ್ಟೇ ವಯಸ್ಸಾಗಿತ್ತು. ಆದರೆ ನನಗೆ ಹೇಗೆ ಪ್ರೀತಿಯ ವಿಷಯ ಹೇಳುವುದು ತಿಳಿಯಲಿಲ್ಲ. ಅದಕ್ಕಾಗಿಯೇ ರೀವರ್ಸ್​ ಹೇಳಲು ಇಚ್ಛಿಸಿದೆ ಎಂದು ನೆನಪು ಮಾಡಿಕೊಂಡಿದ್ದಾರೆ ಶ್ರದ್ಧಾ ಕಪೂರ್​. ಹಾಗೆಯೇ  ಮಾಡಿದ ನಾನು  ಐ ಲವ್ ಯೂ ಅನ್ನು ರಿವರ್ಸ್‌ನಲ್ಲಿ ಹೇಳಲು ಯೋಚಿಸಿ ಯೂ ಲವ್​ ಐ ಎಂದೆ.  ಆದರೆ ಅವನು ಓಡಿ ಹೋದ ಎಂದಿದ್ದರು.

ಇನ್ನು ನೋರಾ ಕುರಿತು ಹೇಳುವುದೇ ಬೇಡ. ಹಾಟ್​ ಬ್ಯೂಟಿಯೆಂದೇ ಫೇಮಸ್​ ಆಗಿರೋ ನೋರಾ ಅವರು ತಮ್ಮ ಡ್ರೆಸ್ ಸೆನ್ಸ್​ನಿಂದಲೇ ಸದಾ ಸದ್ದು ಮಾಡುತ್ತಿರುತ್ತಾರೆ. ಬಾಲಿವುಡ್​ನ ಹಾಟ್​ ಬ್ಯೂಟಿ ಎಂದೇ ಫೇಮಸ್​ ಆಗಿರೋ ನಟಿ ನೋರಾ ಫತೇಹಿ. ಹಿಂದಿ, ತಮಿಳು ಮತ್ತು ತೆಲುಗು ಚಿತ್ರಗಳಲ್ಲಿ ಹಾಟ್​ನೆಸ್​ನಿಂದಲೇ ಫೇಮಸ್​ ಆಗಿರೋ ನಟಿ ಈಕೆ. ಇದೇ  ಫೆ.6 ಈ ನಟಿಗೆ 32ನೇ ವರ್ಷದ ಹುಟ್ಟುಹಬ್ಬದ ಆಚರಿಸಿಕೊಂಡಿದ್ದಾರೆ ನಟಿ.  ಅಂದಹಾಗೆ, ನೋರಾ ಫತೇಲಿ ಕುರಿತು ಹೇಳುವುದಾದರೆ, ನೋರಾ ಫತೇಹಿ ಐಟಂ ಗರ್ಲ್​ ಎಂದೇ ಫೇಮಸ್ಸು. ಈಕೆ ನೃತ್ಯ ಮಾಡುವುದಕ್ಕೆ ನಿಂತರೆ ಅಭಿಮಾನಿಗಳು ಹುಚ್ಚೆದ್ದು ಕುಣಿಯುವುದು ಇದೆ.  ಅಂದಹಾಗೆ ನಟಿ, ಯಾವುದೇ ನೃತ್ಯ ತರಬೇತಿ ಪಡೆದಿಲ್ಲ. ಸ್ವಯಂ ಅಭ್ಯಾಸದ ಮೂಲಕ ತಮ್ಮ ಅದ್ಭುತ ಡ್ಯಾನ್ಸರ್ ಆಗಿ ಬೆಳೆದಿದ್ದಾರೆ. ಇಂದು ಅವರ ನೃತ್ಯವನ್ನು ಮಾಧುರಿ ದೀಕ್ಷಿತ್ ಮತ್ತು ಮಲೈಕಾ ಅರೋರಾ ಅವರಂತಹ ನಟಿಯರೊಂದಿಗೆ ಹೋಲಿಸಲಾಗುತ್ತದೆ. ಇವರು ಸೊಂಟ ಕುಣಿಸುತ್ತಾ ಬೆಲ್ಲಿ ಡ್ಯಾನ್ಸ್​ ಮಾಡಿದರೆ ಕಣ್​ ಕಣ್​ ಬಿಟ್ಟು ನೋಡಬೇಕು ಹಾಗಿರುತ್ತದೆ! ಅದಕ್ಕೆ ಉದಾಹರಣೆಯೇ ದಿಲ್​ಬರ್​ ಡ್ಯಾನ್ಸ್​. 

5 ಸಾವಿರದಿಂದ 50 ಕೋಟಿ ಒಡತಿ! ಬಾರ್​ ಗರ್ಲ್​ನಿಂದ ಬಾಲಿವುಡ್​ವರೆಗೆ... ಮಾದಕ ಚೆಲುವೆಯ ರೋಚಕ ಸ್ಟೋರಿ... ​

 

Follow Us:
Download App:
  • android
  • ios