Asianet Suvarna News Asianet Suvarna News

ಅಂದು ಫ್ಯಾಮಿಲಿಗಾಗಿ ಹೋರಾಡಿ ಒಬ್ಬಂಟಿಯಾದ್ರು, ಮಿಲ್ಲಾ ದತ್ತು ಪಡೆದು ಸದ್ಯ ಜಂಟಿಯಾದ್ರು ನಟಿ ಶಕೀಲಾ!

ಮದುವೆ ಅಥವಾ ಕಾರ್ಯಕ್ರಮಗಳಿಗೆ ಹೋದರೆ ನಟಿ ಶಕೀಲಾ ಕೊಡುವ ಗಿಫ್ಟ್ ಕೂಡ ಸ್ವೀಕರಿಸುತ್ತಿರಲಿಲ್ಲವಂತೆ. ಬಳಿಕ, ಸ್ವತಃ ಮನೆಯವರೇ ಆಕೆಯ ಜತೆ ಮಾತನಾಡುವುದನ್ನೇ ನಿಲ್ಲಿಸಿಬಿಟ್ಟರಂತೆ.

Malayalam film actress shakeela lives in kerala with transgender child srb
Author
First Published Jan 28, 2024, 10:41 PM IST

ಮಲಯಾಳಂ ಮೂಲದ ನಟಿ ಶಕೀಲಾ ಯಾರಿಗೆ ಗೊತ್ತಿಲ್ಲ. ನೀಲಿ ಚಿತ್ರ ತಾರೆ ಎಂಬ ಹಣೆಪಟ್ಟಿ ಹೊತ್ತುಕೊಂಡು ಈ ನಟಿ ಪಟ್ಟ ಪಾಡು ಅಷ್ಟಿಷ್ಟಲ್ಲ ಎನ್ನಲಾಗಿದೆ. ಬಾಲ್ಯದಲ್ಲೇ ತಂದೆಯನ್ನು ಕಳೆದುಕೊಂಡ 6 ಮಕ್ಕಳ ಫ್ಯಾಮಿಲಿಯನ್ನು ಸಾಕುವ ಹೊಣೆ ಶಕೀಲಾ ಹೆಗಲಿಗೆ ಬಿತ್ತು. ಪ್ರಾರಂಭದಲ್ಲಿ ಚಿಕ್ಕಪುಟ್ಟ ಕೆಲಸಗಳನ್ನು ಮಾಡುತ್ತಿದ್ದ ಶಕೀಲಾಗೆ ಮನೆಯಲ್ಲಿನ ಆರು ಜನರ ಹೊಟ್ಟೆಗೆ ಹಿಟ್ಟು ಹೊಂದಿಸುವುದು ಕಷ್ಟವಾಗತೊಡಗಿತು. ಅಷ್ಟರಲ್ಲಾಗಲೇ ಶಕೀಲಾಗೆ 18 ವಯಸ್ಸು ಆಗಿತ್ತು. 

ಮಾದಕ ಮೈ ಮಾಟ ಹೊಂದಿದ್ದ ಶಕೀಲಾ ತಮ್ಮ ಹದಿನೆಂಟನೆ ವಯಸ್ಸಿನಲ್ಲಿ ಮಲಯಾಳಂ (Malayalam)ಸಾಫ್ಟ್‌ ಕಾರ್ನರ್ ಸೆಕ್ಸ್ ಓರಿಯೆಂಟೆಡ್ ಸಿನಿಮಾಗಳಲ್ಲಿ ನಟಿಸಲು ಪ್ರಾರಂಭಿಸಿದರು. ಲಕ್ಷಾಂತರ ರೂಪಾಯಿ ಸಂಭಾವನೆಯ ಮಾತುಕತೆಯೇನೋ ನಡೆಯುತ್ತಿತ್ತು. ಆದರೆ, ಸಂಭಾವನೆಯಲ್ಲಿ ಸ್ವಲ್ಪ ಭಾಗ ಮಾತ್ರ ಆಕೆಯ ಕೈ ಸೇರುತ್ತಿತ್ತು. ಸಾಕಷ್ಟು ಶೋ‍ಷಣೆ ಅನುಭವಿಸಿದ ನಟಿ ಶಕೀಲಾ (Shakeela) ಕೊನೆಗೆ 'ಅರೆ ನೀಲಿ' (Soft Blue film) ಚಿತ್ರಗಳಲ್ಲಿ ಕೂಡ ನಟಿಸಲು ಪ್ರಾರಂಭಿಸಿದರು. ಆದರೆ ಅಲ್ಲಿಯೂ ಕೂಡ ಆಕೆಯ ಶೋಷಣೆ ನಿಲ್ಲಲಿಲ್ಲ. 

ಪಾಲಿಗೆ ಬಂದಿದ್ದು ಪಂಚಾಮೃತ ಎಂಬ ಸೂತ್ರದಂತೆ ಬದುಕು ಸಾಗಿಸುತ್ತಿದ್ದರು ನಟಿ ಶಕೀಲಾ. ಆದರೆ, ಕಾಲಕಳೆದಂತೆ ಆಕೆಯ ಪರಿಸ್ಥಿತಿ ಎಲ್ಲಿಗೆ ಬಂತು ಎಂದರೆ, ಹತ್ತಿರದ ಸಂಬಂಧಿಗಳು ಆಕೆಯನ್ನು ಮನೆಗೆ ಕರೆಯುವುದಿರಲಿ, ಮದುವೆ ಅಥವಾ ಕಾರ್ಯಕ್ರಮಗಳಿಗೆ ಹೋದರೆ ನಟಿ ಶಕೀಲಾ ಕೊಡುವ ಗಿಫ್ಟ್ ಕೂಡ ಸ್ವೀಕರಿಸುತ್ತಿರಲಿಲ್ಲವಂತೆ. ಬಳಿಕ, ಸ್ವತಃ ಮನೆಯವರೇ ಆಕೆಯ ಜತೆ ಮಾತನಾಡುವುದನ್ನೇ ನಿಲ್ಲಿಸಿಬಿಟ್ಟರಂತೆ. ಇದರಿಂದ ಬೇಸರಗೊಂಡ ಶಕೀಲಾ, 2012ರಲ್ಲಿ ತಾವು ಇನ್ಮುಂದೆ 'ಬಿ-ಗ್ರೇಡ್' ಚಿತ್ರಗಳಲ್ಲಿ ನಟಿಸುವುದಿಲ್ಲ ಎಂದು ಘೋಷಿಸಿದರಂತೆ. 

ಎಲ್ಲಿದ್ದಾರೆ ಏನ್ಮಾಡ್ತಿದ್ದಾರೆ ನೋಡಿ ರವಿಮಾಮನ ಜತೆ 'ಚೆಲುವೆ'ಯಾಗಿ ಚೆಲ್ಲಾಟವಾಡಿದ್ದ ಬೆಡಗಿ ಸಂಗೀತಾ!

ಬಿ ಗ್ರೇಡ್ (B Grade)ಸಿನಿಮಾಗಳಲ್ಲಿ ಸಿನಿಮಾಗಳಲ್ಲಿ ನಟಿಸುವುದನ್ನೇನೋ ಬಿಟ್ಟರು ನಟಿ ಶಕೀಲಾ. ಆದರೆ, ಈಗಾಗಲೇ ಇಮೇಜ್ ಕೆಡಿಸಿಕೊಂಡಿದ್ದ ಶಕೀಲಾರನ್ನು ಏ ಗ್ರೇಡ್ ಸಿನಿಮಾಗಳಿಗೆ ಕರೆದು ಅವಕಾಶ ಕೊಡುವವರು ಯಾರು? ಆದರೆ, ಆಕೆ ತಮ್ಮ ದಿಟ್ಟ ನಿರ್ಧಾರದಂತೆ ಮತ್ತೆ ಬಿ ಗ್ರೇಡ್ ಚಿತ್ರಗಳಲ್ಲಿ ನಟಿಸದೇ ಎ ಗ್ರೇಡ್ ಸಿನಿಮಾಗಳಲ್ಲಿ ಪಾಲಿಗೆ ಬಂದ ಪಾತ್ರಗಳನ್ನು ಮಾಡಿ ಕೊಟ್ಟಷ್ಟು ಸಂಭಾವನೆ ತೆಗೆದುಕೊಂಡು ಜೀವನ ನಡೆಸುತ್ತಿದ್ದಾರೆ. 

ಸದ್ಗುರುಗಳಿಂದ ದೀಕ್ಷೆ ಪಡೆದ ನಟಿ ತಮನ್ನಾ ಭಾಟಿಯಾ ಈಗೇನ್ ಮಾಡ್ತಿದಾರೆ, ಅವ್ರೇ ಹೇಳ್ತಾರೆ ಕೇಳಿ!

ಇತ್ತೀಚೆಗೆ ಮನೆಯವರಿಂದಲೂ ದೂರವಾಗಿರುವ ನಟಿ ಶಕೀಲಾ, ಮಿಲ್ಲಾ (Milla)ಎಂಬ ತ್ರತೀಯ ಲಿಂಗಿ ಮಗುವನ್ನು ದತ್ತು ಪಡೆದು ಸಾಕಿಕೊಂಡು ಅದರೊಂದಿಗೆ ಜೀವನ ಸಾಗಿಸುತ್ತಿದ್ದಾರೆ. ತಮ್ಮ ಪಾಲಿಗೆ ಜೀವನದಲ್ಲಿ ಅವಕಾಶ ಹೇಗೆ ಬರುತ್ತೋ ಹಾಗೆ ಬದುಕುತ್ತಿರುವ ನಟಿ ಶಕೀಲಾಗೆ ಇವತ್ತಿಗೂ ಕೂಡ ಶೋಷಣೆ ತಪ್ಪಿಲ್ಲವಂತೆ. ಹಳೆಯ ಇಮೇಜ್ ಮರೆಯದ ಜನರು ಇಂದಿಗೂ ಕೂಡ ಮಾನಸಿಕ ಚಿತ್ರಹಿಂಸೆಗೆ ಗುರಿ ಮಾಡುತ್ತಲೇ ಇದ್ದಾರಂತೆ. 

ಕತ್ರಿನಾಗಿಂತ ಒಳ್ಳೆಯ ನಟಿ ಸಿಕ್ರೆ 'ಡಿವೋರ್ಸ್‌' ಮಾಡ್ತೀರಾ; ಪ್ರಶ್ನೆ ಕೇಳಿ ತಬ್ಬಿಬ್ಬಾದ ವಿಕ್ಕಿ ಕೌಶಲ್‌ ಏನ್ ಹೇಳಿದ್ರು..?!

Follow Us:
Download App:
  • android
  • ios