Asianet Suvarna News Asianet Suvarna News

'ಮೋಟು ಪತ್ಲು' ಫೇವರೇಟ್ ಕಾರ್ಟೂನೆಂದ ಐಎಎಸ್ ಆಕಾಂಕ್ಷಿ: ಕಾರಣ ಕೇಳಿದ ಸಂದರ್ಶಕರಿಗೇ ಅಚ್ಚರಿ!

'ಮೋಟು ಪತ್ಲು' ಫೇವರೇಟ್ ಕಾರ್ಟೂನೆಂದ ಐಎಎಸ್ ಆಕಾಂಕ್ಷಿ: ಕಾರಣ ಕೇಳಿದ ಸಂದರ್ಶಕರಿಗೇ ಅಚ್ಚರಿಯಾಯ್ತಂತೆ. ಇಂಟರೆಸ್ಟಿಂಗ್​ ವಿಷಯ ಹೇಳಿದ ಸಂದರ್ಶಕಿ 
 

Weirdest Hobby of IAS aspirant Watching Motu Patlu cartoon interesting incident suc
Author
First Published Jun 17, 2024, 5:43 PM IST

ಒಂದೇ ಘಟನೆಗಳನ್ನು ಎರಡು ರೀತಿಯಲ್ಲಿ ಅರ್ಥೈಸಿಕೊಳ್ಳುವ ಜನರ ನಮ್ಮ ಮಧ್ಯೆ ಇದ್ದಾರೆ. ಒಂದೇ ಘಟನೆಯಲ್ಲಿ ಕೆಲವರು ಸಕಾರಾತ್ಮಕತೆಯನ್ನು ನೋಡಿದರೆ, ಮತ್ತೆ ಕೆಲವರು ಅದರಲ್ಲಿಯೇ ನಕಾರಾತ್ಮಕತೆಯನ್ನು ಹುಡುಕುತ್ತಾರೆ. ಅರ್ಧ ತುಂಬಿ, ಅರ್ಧ ಖಾಲಿ ಇರುವ ಗ್ಲಾಸ್​ ಅನ್ನು ಸಾಮಾನ್ಯವಾಗಿ ಎಲ್ಲರೂ ಉದಾಹರಣೆಯಾಗಿ ಕೊಡುವುದು ಇದೆ. ನಮ್ಮಲ್ಲಿ ಹೆಚ್ಚಿನವರಿಗೆ ಈ ಗ್ಲಾಸ್​ ತೋರಿಸಿದರೆ ಅರ್ಧ ಖಾಲಿಯಾಗಿರುವುದು ಕಾಣಿಸುತ್ತದೆ. ಕೆಲವೇ ಕೆಲವು ಮಂದಿಗೆ ಅರ್ಧ ತುಂಬಿರುವ ಗ್ಲಾಸ್​ ಕಾಣಿಸಬಹುದು ಅಷ್ಟೇ. ಇದೇ ಜೀವನಕ್ಕೂ ಅನ್ವಯ ಮಾಡಲಾಗುತ್ತದೆ. ಹೆಚ್ಚಾಗಿ ನಕಾರಾತ್ಮಕತೆಯೇ ತುಂಬಿರುವ ಹಿನ್ನೆಲೆಯಲ್ಲಿ ಅರ್ಧ ಖಾಲಿಯಾಗಿರುವ ಗ್ಲಾಸ್​ ಕಾಣಿಸುವುದು ಸಹಜ.

ಅದೇ ರೀತಿ ಕುತೂಹಲದ ವಿಷಯವನ್ನು ಹೇಳಿದ್ದಾರೆ ಐಎಎಸ್​, ಯುಪಿಎಸ್​ಸಿ ಪರೀಕ್ಷೆಗಳಿಗೆ ಸಂದರ್ಶಕಿಯಾಗಿ ಹೋಗುವ ಶಿಕ್ಷಣ ತಜ್ಞರಾಗಿರುವ ಸಲೋನಿ ಖನ್ನಾ. ಯೂಟ್ಯೂಬ್​ ಸಂದರ್ಶನವೊಂದರಲ್ಲಿ ಐಎಎಲ್​  ಮತ್ತು ಯುಪಿಎಸ್​ಸಿ ಪರೀಕ್ಷಾರ್ಥಿಗಳ ಕುರಿತು ಒಂದಿಷ್ಟು ಮಾಹಿತಿ ನೀಡುವ ಸಂದರ್ಭದಲ್ಲಿ ಅವರು ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. ಸಾಮಾನ್ಯವಾಗಿ ಸಂದರ್ಶನಗಳಲ್ಲಿ ಕೇಳುವ ವಿಷಯಗಳ ಬಗ್ಗೆ ಅವರು ಚರ್ಚಿಸುತ್ತಾ, ಯುಪಿಎಸ್​ಸಿ ಅಥವಾ ಐಎಎಸ್​ ಸಂದರ್ಶನಕ್ಕೆ ಹೋಗುವ ಸಂದರ್ಭದಲ್ಲಿ ಹಾಬಿ ಕಾಲಮ್​ನಲ್ಲಿ ಬರೆಯುವಾಗ ತುಂಬಾ ಜಾಗರೂಕರಾಗಿ ಇರುವಂತೆ ಅವರು ತಿಳಿಸಿದ್ದಾರೆ. 

ಮದುವೆ ಸಂದರ್ಭದಲ್ಲಿ ಈ ಟೆಸ್ಟ್​ ಮಾಡಿಸಿ ನೆಮ್ಮದಿಯಾಗಿರಿ: ಖ್ಯಾತ ವೈದ್ಯರಿಂದ ಹೀಗೊಂದು ಸಲಹೆ

ಸಾಮಾನ್ಯವಾಗಿ ರೀಡಿಂಗ್​, ರೈಟಿಂಗ್​ ಎಂದು ಬರೆದುಬಿಡುತ್ತಾರೆ. ಆದರೆ ಹಾಬಿಯಲ್ಲಿ ಬರೆದಿರುವ ಅಂಶಗಳನ್ನೇ ಕೆದಕಿ ಸಂದರ್ಶಕರು ಕೇಳಿದಾಗ ತಡವಡರಿಸುವುದು ಮಾಮೂಲು. ಅಷ್ಟೇ ಅಲ್ಲದೇ ಮ್ಯೂಸಿಕ್​, ಡಾನ್ಸ್​ ಎಂದೆಲ್ಲಾ ಬರೆದಾಗಲೂ ಅಷ್ಟೇ. ಆದ್ದರಿಂದ ಹಾಬಿ ಎಂದು ಬರೆಯುವುದಾಗ ಅದರ ಬಗ್ಗೆ ನಿಮಗೆ ಪ್ರಶ್ನೆ ಕೇಳುತ್ತಾರೆ ಎನ್ನುವುದು ನೆನಪಿರಲಿ, ಅದರ ಬಗ್ಗೆ ಕೇಳುವ ವಿಷಯಗಳಿಗೆ ಸೂಕ್ತ ಉತ್ತರ ಕೊಡಲು ನೀವು ರೆಡಿಯಾಗಿದ್ದಲ್ಲಿ ಮಾತ್ರ ಹಾಬಿ ಕಾಲಮ್​ನಲ್ಲಿ ಅದರ ಬಗ್ಗೆ ಬರೆಯಿರಿ.  ಏನೋ ಒಂದು ಬರೆಯಬೇಕು ಎಂದು ಎಡವಟ್ಟು ಮಾಡಿಕೊಂಡರೆ ಸಂದರ್ಶನದಲ್ಲಿ ಸಿಕ್ಕಿಬಿದ್ದು ಅವಕಾಶ ಕಳೆದುಕೊಳ್ಳಬೇಕಾಗುವುದು ಎಂದು ಅವರು ಹೇಳಿದ್ದಾರೆ.

ಇದೇ ಸಮಯದಲ್ಲಿ ಕಾಶ್ಮೀರದ ಯುವಕನೊಬ್ಬನ ಹಾಬಿಯ ಕುರಿತು ಹೇಳಿದ ಅವರು, ಒಂದೇ ವಿಷಯವನ್ನು ಎರಡು ರೀತಿಯಲ್ಲಿ ಹೇಗೆ ಅರ್ಥೈಸಿಕೊಳ್ಳಬಹುದು, ಹೇಗೆ ಜೀವನದ ಎರಡು ವಿಭಿನ್ನ ಅಂಶಗಳು ಒಂದೇ ವಿಷಯದಲ್ಲಿ ಅಡಕವಾಗಿರುತ್ತದೆ ಎಂಬ ಬಗ್ಗೆಯೂ ಮಾತನಾಡಿದ್ದಾರೆ. ಐಎಎಸ್​ ಆಕಾಂಕ್ಷಿಯೊಬ್ಬ ತನ್ನ ಹಾಬಿಯಲ್ಲಿ ಮೋಟು ಪತ್ಲು ಫೇವರೇಟ್ ಕಾರ್ಟೂನ್ ಎಂದು ಬರೆದಿದ್ದ. ನಮಗೆ ತುಂಬಾ ಅಚ್ಚರಿಯಾಯಿತು. ಮೋಟು ಮತ್ತು ಪತ್ಲು ಅಂದರೆ ಡುಮ್ಮ ಮತ್ತು ತೆಳ್ಳಗಿರುವವ ಇದು ಬಾಡಿ ಷೇಮಿಂಗ್​ ಆಗುತ್ತದೆ. ಇದನ್ನು ಹೇಗೆ ಆತ ಹಾಬಿ ಎನ್ನುತ್ತಾನೆ, ಹೇಗೆ ಇದನ್ನು ಐಎಎಸ್​ನಲ್ಲಿ ಸೇರಿಸಿದ ಎಂದು ನಮಗೆಲ್ಲಾ ಅಚ್ಚರಿಯಾಯಿತು. ಆದರೆ ಅವನು ಅದಕ್ಕೆ ಕೊಟ್ಟ ಉತ್ತರ ಕೇಳಿ ಖುಷಿಯೂ ಆಯಿತು ಎಂದಿದ್ದಾರೆ. ನಾವು ಆತನಿಗೆ ಇದು ಬಾಡಿ ಷೇಮಿಂಗ್​ ಕಾರ್ಟೂನ್​ ಅನ್ನಿಸಲ್ವಾ ಎಂದು ಪ್ರಶ್ನಿಸಿದಾಗ, ಥಟ್ಟನೆ ಅವನು, ನೀವು ಏಕೆ ಹಾಗೆ ಅಂದುಕೊಳ್ಳುತ್ತೀರಿ. ನನಗೆ ಯಾವತ್ತೂ ಇದು ಬಾಡಿ ಷೇಮಿಂಗ್​ ಎನಿಸಲೇ ಇಲ್ಲ.  ಏಕೆಂದರೆ ಮೋಟು ಮತ್ತು ಪತ್ಲು ಎಂಬ ಜಿಗರಿ ದೋಸ್ತುಗಳ ಕಥೆ ಇದು. ಅವರಿಬ್ಬರೂ ತುಂಬಾ ಕ್ಲೋಸ್​ ಫ್ರೆಂಡ್ಸ್​. ಅದಕ್ಕೆ ನನಗೆ ಬಾಡಿ ಷೇಮಿಂಗ್​ ಅನ್ನಿಸಲೇ ಇಲ್ಲ ಎಂದ. ಇದನ್ನು ಕೇಳಿ ನಮಗೆ ತುಂಬಾ ಖುಷಿಯಾಯಿತು. ಒಂದೇ ವಿಷಯದಲ್ಲಿ ಸಕಾರಾತ್ಮಕತೆಯೂ ಇರುತ್ತದೆ ಎಂದು ಎನ್ನಿಸಿತು ಎಂದಿದ್ದಾರೆ. 

ಇನ್ಮುಂದೆ ಕತ್ತಲು ಕಡಿಮೆ, ಹಗಲು ಹೆಚ್ಚಂತೆ: ವಿಜ್ಞಾನಿಗಳಿಂದ ಬಯಲಾಯ್ತು ಸತ್ಯ!

 

Latest Videos
Follow Us:
Download App:
  • android
  • ios