Asianet Suvarna News Asianet Suvarna News

UPSC Recruitment 2022: ಉಪನ್ಯಾಸಕ ಮತ್ತು ಇತರ ಹುದ್ದೆಗಳಿಗೆ ನೇಮಕಾತಿ

ಕೇಂದ್ರ ಲೋಕಸೇವಾ ಆಯೋಗ ತನ್ನಲ್ಲಿ ಖಾಲಿ ಇರುವ ಉಪನ್ಯಾಸಕ ಮತ್ತು ಇತರ ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಅರ್ಹ ಮತ್ತು ಆಸಕ್ತ   ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಡಿಸೆಂಬರ್ 1, 2022 ಆಗಿದೆ.

UPSC Recruitment 2022 notification for 160 Lecturer and other post gow
Author
First Published Nov 12, 2022, 4:35 PM IST

ನವದೆಹಲಿ (ನ.12): ಕೇಂದ್ರ ಲೋಕಸೇವಾ ಆಯೋಗ ತನ್ನಲ್ಲಿ ಖಾಲಿ ಇರುವ ಉಪನ್ಯಾಸಕ ಮತ್ತು ಇತರ ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಅರ್ಹ ಮತ್ತು ಆಸಕ್ತ   ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದ್ದು, ಅರ್ಜಿ ಸಲ್ಲಿಸಲು ಇಚ್ಚಿಸುವವರು UPSC ಯ ಅಧಿಕೃತ ವೆಬ್‌ತಾಣ upsc.gov.in ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಡಿಸೆಂಬರ್ 1, 2022 ಆಗಿದೆ. ಈ ನೇಮಕಾತಿ ಅಭಿಯಾನದಲ್ಲಿ ಸಂಸ್ಥೆಯಲ್ಲಿ 160 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ. ಅರ್ಹತೆ, ಆಯ್ಕೆ ಪ್ರಕ್ರಿಯೆ ಜೊತೆಗೆ ಹೆಚ್ಚಿನ ವಿವರಗಳಿಗೆ ಮುಂದೆ ಓದಿ.

ಒಟ್ಟು 16 ಹುದ್ದೆಯ ವಿವರಗಳು ಇಂತಿದೆ
ಹಿರಿಯ ಕೃಷಿ ಇಂಜಿನಿಯರ್: 7 ಹುದ್ದೆಗಳು
ಕೃಷಿ ಇಂಜಿನಿಯರ್: 1 ಹುದ್ದೆ
ಸಹಾಯಕ ನಿರ್ದೇಶಕ: 13 ಹುದ್ದೆಗಳು
ಸಹಾಯಕ ರಸಾಯನಶಾಸ್ತ್ರಜ್ಞ: 1 ಹುದ್ದೆ
ಸಹಾಯಕ ಜಲವಿಜ್ಞಾನಿ: 70 ಹುದ್ದೆಗಳು
ಜೂನಿಯರ್ ಟೈಮ್ ಸ್ಕೇಲ್: 29 ಪೋಸ್ಟ್‌ಗಳು
ಸಹಾಯಕ ರಸಾಯನಶಾಸ್ತ್ರಜ್ಞ: 6 ಹುದ್ದೆಗಳು
ಸಹಾಯಕ ಭೂವಿಜ್ಞಾನಿ: 9 ಹುದ್ದೆಗಳು
ಸಹಾಯಕ ಜಿಯೋಫಿಸಿಸ್ಟ್: 1  ಹುದ್ದೆ
ಸಹಾಯಕ ರಸಾಯನಶಾಸ್ತ್ರಜ್ಞ: 14 ಹುದ್ದೆಗಳು
ಉಪನ್ಯಾಸಕರು: 9 ಹುದ್ದೆಗಳು

ಶೈಕ್ಷಣಿಕ ವಿದ್ಯಾರ್ಹತೆ: ಕೇಂದ್ರ ಲೋಕಸೇವಾ ಆಯೋಗದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ ಹುದ್ದೆಗೆ ಅನುಸಾರವಾಗಿ ವಿದ್ಯಾರ್ಹತೆ ಪಡೆದಿರಬೇಕು. 
ಕೃಷಿ ಇಂಜಿನಿಯರ್ ಹುದ್ದೆಗೆ ಅಗ್ರಿಕಲ್ಚರಲ್ ಇಂಜಿನಿಯರಿಂಗ್ ಅಥವಾ ಮೆಕ್ಯಾನಿಕಲ್ ಇಂಜಿನಿಯರಿಂಗ್ ಪದವಿ ಮತ್ತು 2 ರಿಂದ 5 ವರ್ಷಗಳ ಅನುಭವ ಹೊಂದಿರಬೇಕು.
ಸಹಾಯಕ ನಿರ್ದೇಶಕ ಹುದ್ದೆಗೆ ಕಾನೂನಿನಲ್ಲಿ ಬ್ಯಾಚುಲರ್ ಪದವಿ; ಅಥವಾ  ಕಾನೂನಿನಲ್ಲಿ (ಐದು ವರ್ಷಗಳು) ಸಂಯೋಜಿತ ಬ್ಯಾಚುಲರ್ ಪದವಿ; ಅಥವಾ  ಯಾವುದೇ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಅಥವಾ ಇನ್ಸ್ಟಿಟ್ಯೂಟ್ ಆಫ್ ಕಂಪನಿ ಸೆಕ್ರೆಟರಿಸ್ ಆಫ್ ಇಂಡಿಯಾದಿಂದ ಕಂಪನಿ ಕಾರ್ಯದರ್ಶಿ ಮಾಡಿರಬೇಕು
JTS ಹುದ್ದೆಗೆ ಪದವಿ, ಸಮಾಜ ಕಾರ್ಯ ಅಥವಾ ಕಾರ್ಮಿಕ ಕಲ್ಯಾಣ ಅಥವಾ ಕೈಗಾರಿಕಾ ಸಂಬಂಧಗಳಲ್ಲಿ ಡಿಪ್ಲೊಮಾ ಅಥವಾ   ಸಿಬ್ಬಂದಿ ನಿರ್ವಹಣೆ ಅಥವಾ ಕಾರ್ಮಿಕ ಕಾನೂನು ಮಾಡಿರಬೇಕು.
ಸಹಾಯಕ ರಸಾಯನಶಾಸ್ತ್ರಜ್ಞ - ರಸಾಯನಶಾಸ್ತ್ರ / ಸಾವಯವ ರಸಾಯನಶಾಸ್ತ್ರ / ಭೌತಿಕ ರಸಾಯನಶಾಸ್ತ್ರ / ಅಜೈವಿಕ ರಸಾಯನಶಾಸ್ತ್ರ / ವಿಶ್ಲೇಷಣಾತ್ಮಕ ರಸಾಯನಶಾಸ್ತ್ರ / ಕೃಷಿ ರಸಾಯನಶಾಸ್ತ್ರ ಮತ್ತು ಮಣ್ಣು ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಮಾಡಿರಬೇಕು.

NBT Recruitment 2022: ಬೆಂಗಳೂರಿನಲ್ಲಿರುವ ಬುಕ್ ಟ್ರಸ್ಟ್‌ನಲ್ಲಿ ಜಂಟಿ ನಿರ್ದೇಶಕರ

ವಯೋಮಿತಿ: ಕೇಂದ್ರ ಲೋಕಸೇವಾ ಆಯೋಗದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳಿಗೆ ಹುದ್ದೆಗೆ ಅನುಸಾರವಾಗಿ ವಯೋಮಿತಿ ನಿಗದಿಯಾಗಿದೆ.
ಹಿರಿಯ ಕೃಷಿ ಇಂಜಿನಿಯರ್: 40 ವರ್ಷಗಳು
ಕೃಷಿ ಇಂಜಿನಿಯರ್: 33 ವರ್ಷಗಳು
ಸಹಾಯಕ ನಿರ್ದೇಶಕ: 30 ವರ್ಷಗಳು
ಸಹಾಯಕ ರಸಾಯನಶಾಸ್ತ್ರಜ್ಞ: 30 ವರ್ಷಗಳು
ಸಹಾಯಕ ಜಲವಿಜ್ಞಾನಿ: 30 ವರ್ಷಗಳು
ಜೂನಿಯರ್ ಟೈಮ್ ಸ್ಕೇಲ್: 35 ವರ್ಷಗಳು
ಸಹಾಯಕ ಭೂವಿಜ್ಞಾನಿ: 30 ವರ್ಷಗಳು
ಸಹಾಯಕ ಭೂ ಭೌತಶಾಸ್ತ್ರಜ್ಞ: 30 ವರ್ಷಗಳು
ಉಪನ್ಯಾಸಕ: 35 ವರ್ಷಗಳು

ಟ್ವಿಟರ್‌, ಮೆಟಾ ಆಯ್ತು.. ಈಗ ಅಮೆಜಾನ್‌ನಿಂದ 3766 ಉದ್ಯೋಗಿಗಳ ವಜಾ!

ಅರ್ಜಿ ಶುಲ್ಕ: ಅಭ್ಯರ್ಥಿಗಳು ಅರ್ಜಿ ಶುಲ್ಕ ರೂ. 25/- ನಗದು ರೂಪದಲ್ಲಿ ಅಥವಾ SBI ಯ ನೆಟ್ ಬ್ಯಾಂಕಿಂಗ್ ಸೌಲಭ್ಯವನ್ನು ಬಳಸಿಕೊಂಡು ಅಥವಾ ವೀಸಾ/ಮಾಸ್ಟರ್ ಕ್ರೆಡಿಟ್/ಡೆಬಿಟ್ ಕಾರ್ಡ್ ಅನ್ನು ಬಳಸುವ ಮೂಲಕ ಮಾತ್ರ ಪಾವತಿಸಬೇಕು. SC/ST/PwBD/ಮಹಿಳಾ ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕವಿಲ್ಲ.

Follow Us:
Download App:
  • android
  • ios