UPSCಯಿಂದ ಖಾಲಿ ಹುದ್ದೆಗಳ ನೇಮಕಾತಿ: ಅರ್ಜಿ ಹಾಕಿ
ಕೇಂದ್ರ ಲೋಕಸೇವಾ ಆಯೋಗ (UPSC) ವಿವಿಧ ಹುದ್ದೆಗಳ ನೇಮಕಾತಿಗೆ ಅಧಿಕಸೂಚನೆ ಹೊರಡಿಸಲಾಗಿದೆ, ಈ ಬಗ್ಗೆ ಇನ್ನುಷ್ಟು ಮಾಹಿತಿ ಈ ಕೆಳಗಿನಂತಿದೆ
ಬೆಂಗಳೂರು, (ಮಾ.28): ಕೇಂದ್ರ ಲೋಕಸೇವಾ ಆಯೋಗ (UPSC) ಅಸಿಸ್ಟಂಟ್ ಪ್ರೊಫೆಸರ್ (ಸಹಾಯಕ ಪ್ರಾಧ್ಯಾಪಕ) ಹುದ್ದೆಗೆ ಅರ್ಜಿ ಆಹ್ವಾನಿಸಿದೆ.
ಅಸಿಸ್ಟಂಟ್ ಪ್ರೊಫೆಸರ್ ಹುದ್ದೆಯಲ್ಲಿ ಒಟ್ಟು 28 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು 2021 ಏಪ್ರಿಲ್ 15ರೊಳಗೆ ಅರ್ಜಿ ಸಲ್ಲಿಸಲು ಕೋರಲಾಗಿದೆ.
ಇನ್ನಷ್ಟು ಜಾಬ್ಸ್ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಖಾಲಿ ಹುದ್ದೆಗಳ ವಿವರ
* ಸಹಾಯಕ ಪ್ರಾಧ್ಯಾಪಕ (ಪೀಡಿಯಾಟ್ರಿಕ್-ಮಕ್ಕಳ ವೈದ್ಯಶಾಸ್ತ್ರ)-14
* ಸಹಾಯಕ ಪ್ರಾಧ್ಯಾಪಕ (ಸಿಸಿಯಾಲಜಿ-ಶರೀರ ವಿಜ್ಞಾನ)-2
* ಸಹಾಯಕ ಪ್ರಾಧ್ಯಾಪಕ-(ಸೈಕಿಯಾಟ್ರಿ-ಮನೋವೈದ್ಯಶಾಸ್ತ್ರ)-11
* ಸಹಾಯಕ ಪ್ರಾಧ್ಯಾಪಕ-(ಸರ್ಜಿಕಲ್ ಗ್ಯಾಸ್ಟ್ರೋಎಂಟರಾಲಜಿ)-1 ಹುದ್ದೆ
ಅರ್ಹತೆ : ಭಾರತೀಯ ವೈದ್ಯಕೀಯ ಮಂಡಳಿ ಕಾಯ್ದೆ 1956ರಲ್ಲಿ ಸೇರಿಸಲಾದ ಮೊದಲ ಹಾಗೂ ಎರಡನೇ ಅನುಬಂಧ ಅಥವಾ ಮೂರನೇ ಅನುಬಂಧದ ಎರಡನೇ ಭಾಗದಲ್ಲಿ ಇರುವ ಮಾನ್ಯತೆ ಇರುವ ಎಂಬಿಬಿಎಸ್ ಪದವಿ ಪಡೆದ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.
ಶುಲ್ಕ ವಿವರ
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 25 ರೂ.ನ್ನು SBI ಬ್ಯಾಂಕ್ನ ಯಾವುದೇ ಶಾಖೆಯ ಮೂಲಕ ನಗದು ರೂಪದಲ್ಲಿ ಅಥವಾ ಎಸ್ಬಿಐ ನೆಟ್ ಬ್ಯಾಂಕಿಂಗ್ ಮೂಲಕ ಅಥವಾ ವಿಸಾ/ ಮಾಸ್ಟರ್ ಕ್ರೆಡಿಟ್/ ಡೆಬಿಟ್ ಕಾರ್ಡ್ಗಳ ಮೂಲಕ ತುಂಬಬಹುದು. ಆದರೆ ಎಸ್ಸಿ/ಎಸ್ಟಿ/ ಪಿಡಬ್ಲ್ಯೂಬಿಡಿ ಸಮುದಾಯಗಳ ಹಾಗೂ ಯಾವುದೇ ಸಮುದಾಯದ ಮಹಿಳೆಯರು ಹಣ ತುಂಬುವ ಅಗತ್ಯ ಇಲ್ಲ.
ಆಸಕ್ತಿ ಇರುವ, ಅರ್ಹ ಅಭ್ಯರ್ಥಿಗಳು ಈ ಬಗ್ಗೆ ಇನ್ನಷ್ಟು ಮಾಹಿತಿಯನ್ನು ಯುಪಿಎಸ್ಸಿಯ upsc.gov.in.ವೆಬ್‌ಸೈಟ್‌ನಲ್ಲಿ ನೋಡಿ.