ನವದೆಹಲಿ, (ಮೇ.04): ಕೇಂದ್ರ ಲೋಕಸೇವಾ ಆಯೋಗವು (ಯುಪಿಎಸ್​ಸಿ) ಅಖಿಲ ಭಾರತ ನಾಗರಿಕ ಸೇವಾ ಹುದ್ದೆಗಳ ಆಯ್ಕೆಗಾಗಿ ನಡೆಸುವ ಪೂರ್ವಭಾವಿ ಪರೀಕ್ಷೆಯನ್ನು ಮುಂದೂಡಿದೆ. 

ಇಂದು (ಸೋಮವಾರ) ಯುಪಿಎಸ್‌ಸಿ ಅಧ್ಯಕ್ಷ ಅರವಿಂದ ಸಕ್ಸೇನಾ ಅವರ ಅಧ್ಯಕ್ಷತೆಯಲ್ಲಿ ನಡೆದ ವಿಶೇಷ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ. 

ಲಾಕ್‌ಡೌನ್‌: UPSC ಪರೀಕ್ಷೆ ನಡೆಸಲು ಸಿದ್ಧತೆ, ಅಭ್ಯರ್ಥಿಗಳೇ ರೆಡಿಯಾಗಿರಿ..! 

ಮೇ 17ರವರೆಗೆ ಮತ್ತೊಂದು ಸುತ್ತಿನ ಲಾಕ್​ಡೌನ್​ ವಿಸ್ತರಣೆ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಮೇ 31ರಿಂದ ನಡೆಯಬೇಕಿದ್ದ  ನಾಗರಿಕ ಸೇವಾ ಹುದ್ದೆಗಳ ಪೂರ್ವಭಾವಿ ಪರೀಕ್ಷೆ ಅನಿದಿಷ್ಟಾವಧಿಗೆ ಮುಂದೂಡಲಾಗಿದೆ ಎಂದು ಯುಪಿಎಸ್​ ತಿಳಿಸಿದೆ. 

ಮೇ 20 ನಂತರ ಮತ್ತೊಮ್ಮೆ ಪರಿಸ್ಥಿತಿಯನ್ನು ಅವಲೋಕಿಸಿ ಹೊಸ ದಿನಾಂಕಗಳನ್ನು ಪ್ರಕಟಿಸಲಾಗುವುದು ಎಂದು ಯುಪಿಎಸ್​ಸಿ ಪ್ರಕಟಿಸಿದೆ.