Asianet Suvarna News Asianet Suvarna News

ಜಮ್ಮು-ಕಾಶ್ಮೀರದಲ್ಲಿ 15 ವರ್ಷ ವಾಸವಿದ್ದರಿಗೆ ನೌಕರಿ ಅವಕಾಶ!

ಜಮ್ಮು-ಕಾಶ್ಮೀರದಲ್ಲಿ 15 ವರ್ಷ ವಾಸವಿದ್ದರಿಗೆ ನೌಕರಿ ಅವಕಾಶ| ಜಮ್ಮು-ಕಾಶ್ಮೀರದಲ್ಲಿ ಸ್ಥಳೀಯರಿಗೆ ಗ್ರೂಪ್‌-4ವರೆಗಿನ ನೌಕರಿಗಳಿಗೆ ಸ್ಥಳೀಯರಿಗೆ ಮೀಸಲು 

Those living for more than 15 years now eligible for domicile under new rule says Govt
Author
Bangalore, First Published Apr 2, 2020, 8:02 AM IST

ನವದೆಹಲಿ(ಏ.02): ಜಮ್ಮು-ಕಾಶ್ಮೀರದಲ್ಲಿ ಸ್ಥಳೀಯರಿಗೆ ಗ್ರೂಪ್‌-4ವರೆಗಿನ ನೌಕರಿಗಳಿಗೆ ಸ್ಥಳೀಯರಿಗೆ ಮೀಸಲು ಸೌಲಭ್ಯ ಪ್ರಕಟಿಸಲಾಗಿದೆ. ಈ ಕೇಂದ್ರಾಡಳಿತ ಪ್ರದೇಶದ ವಿಶೇಷ ಸ್ಥಾನಮಾನ ರದ್ದುಗೊಳಿಸಿದ ನಂತರ ಕೇಂದ್ರ ಸರ್ಕಾರ ಕೈಗೊಂಡ ಮಹತ್ವದ ಕ್ರಮ ಇದಾಗಿದೆ.

ಇದಕ್ಕಾಗಿ ಜಮ್ಮು-ಕಾಶ್ಮೀರದ ಸಿವಿಲ್‌ ಸರ್ವೀಸ್ ಕಾಯಿದೆಗೆ ತಿದ್ದುಪಡಿ ಮಾಡಲಾಗಿದೆ. ಈ ಕೇಂದ್ರಾಡಳಿತ ಪ್ರದೇಶದಲ್ಲಿ 15 ವರ್ಷಕ್ಕಿಂತ ಹೆಚ್ಚು ಅವಧಿಗೆ ಜಮ್ಮು-ಕಾಶ್ಮೀರದಲ್ಲಿ ಇದ್ದವರು ಸ್ಥಳೀಯರು ಎನ್ನಿಸಿಕೊಳ್ಳುತ್ತಾರೆ. ಕೇಂದ್ರೀಯ ಸೇವೆಯಲ್ಲಿ ಇರುವವರ ಮಕ್ಕಳಾಗಿದ್ದರೆ, ಅವರ ತಂದೆಯು ಜಮ್ಮು-ಕಾಶ್ಮೀರದಲ್ಲಿ 10 ವರ್ಷ ನೆಲೆಸಿರಬೇಕು ಎಂಬ ನಿಯಮ ರೂಪಿಸಲಾಗಿದೆ.

ಎಂಟು ತಿಂಗಳ ಬಳಿಕ ಕಾಶ್ಮೀರ ಮಾಜಿ ಸಿಎಂ ಒಮರ್‌ ಬಿಡುಗಡೆ!

25,500 ರು.ಗಿಂತ (ಗ್ರೂಪ್‌-4) ಕಮ್ಮಿ ವೇತನ ಶ್ರೇಣಿಯ ಯಾವುದೇ ಹುದ್ದೆಗೆ ಸ್ಥಳೀಯರಲ್ಲದೇ ಇರುವವರು ಇನ್ನು ನೇಮಕಾತಿಗೆ ಅರ್ಹರಲ್ಲ ಎಂದು ಕಾಯಿದೆಯಲ್ಲಿ ತಿಳಿಸಲಾಗಿದೆ. ಗ್ರೂಪ್‌-4 ಹುದ್ದೆಗಳಲ್ಲಿ ಪೊಲೀಸ್‌ ಪೇದೆಯ ಹುದ್ದೆಯೂ ಬರುತ್ತದೆ.

ಕೇಂದ್ರ ಸರ್ಕಾರದ ಈ ನಿರ್ಧಾರಕ್ಕೆ ನ್ಯಾಷನಲ್‌ ಕಾನ್ಫರೆನ್ಸ್‌, ಪಿಡಿಪಿ ಸೇರಿದಂತೆ ಸ್ಥಳೀಯ ಪಕ್ಷಗಳು ತೀವ್ರ ವಿರೋಧ ವ್ಯಕ್ತಪಡಿಸಿವೆ.

Follow Us:
Download App:
  • android
  • ios