Asianet Suvarna News Asianet Suvarna News

ಸ್ಟಾಫ್ ಸೆಲೆಕ್ಷನ್ ಕಮಿಷನ್ ಪೊಲೀಸ್‌ ಇನ್‌ಸ್ಪೆಕ್ಟರ್ ಹುದ್ದೆ, ಮಾರ್ಚ್‌ 28 ಅರ್ಜಿ ಸಲ್ಲಿಸಲು ಕೊನೆಯ ದಿನ

ಸ್ಟಾಫ್ ಸೆಲೆಕ್ಷನ್ ಕಮಿಷನ್ ದೆಹಲಿ ಪೊಲೀಸ್ ಪಡೆಗಳಲ್ಲಿ ಸಬ್ ಇನ್ಸ್‌ಪೆಕ್ಟರ್ ಹುದ್ದೆಗಳ ಭರ್ತಿಗೆ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ. ಅರ್ಜಿ ಸಲ್ಲಿಸಲು ಮಾರ್ಚ್‌ 28 ಕೊನೆಯ ದಿನವಾಗಿದೆ.

SSC  Recruitment 2024 Staff Selection Commission Sub-Inspector Post gow
Author
First Published Mar 16, 2024, 1:50 PM IST | Last Updated Mar 16, 2024, 1:50 PM IST

ಸ್ಟಾಫ್ ಸೆಲೆಕ್ಷನ್ ಕಮಿಷನ್ ದೆಹಲಿ ಪೊಲೀಸ್ ಪಡೆಗಳಲ್ಲಿ ಹಾಗೂ ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳಲ್ಲಿ (ಸಿಎಪಿಎಫ್) 4187 ಸಬ್ ಇನ್ಸ್‌ಪೆಕ್ಟರ್ ಹುದ್ದೆಗಳ ಭರ್ತಿಗೆ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ.

ಸಂಭಾವ್ಯ ಹುದ್ದೆಗಳ ವಿವರ

1. ದೆಹಲಿ ಪೊಲೀಸ್ ಪಡೆಗಳ ಸಬ್ಇನ್ಸ್‌ಪೆಕ್ಟರ್ (ಎಕ್ಸಿಕ್ಯೂಟಿವ್) - ಪುರುಷರು : 125

2. ದೆಹಲಿ ಪೊಲೀಸ್ ಪಡೆಗಳ ಸಬ್ಇನ್ಸ್‌ಪೆಕ್ಟರ್ (ಎಕ್ಸಿಕ್ಯೂಟಿವ್) - ಮಹಿಳೆಯರು : 61

3. ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳ ಸಬ್ಇನ್ಸ್‌ಪೆಕ್ಟರ್

(ಜೆನರಲ್ ಡ್ಯೂಟಿ) - ಪುರುಷರು : 4001

4. ಕೇಂದ್ರ ಸಶಸ್ತ್ರ‍್ರ ಪೊಲೀಸ್ ಪಡೆಗಳ ಪೈಕಿ ಬಿಎಸ್‌ಎಫ್‌ನಲ್ಲಿ - 892, ಸಿಐಎಸ್‌ಎಫ್‌ನಲ್ಲಿ - 1597, ಸಿಆರ್‌ಪಿಎಸ್- 1172, ಐಟಿಬಿಪಿಯಲ್ಲಿ -278,

ಎಸ್‌ಎಸ್‌ಬಿಯಲ್ಲಿ -62 ಹುದ್ದೆಗಳಿವೆ.

ಕೆಪಿಎಸ್‌ಸಿಯಿಂದ ನೇಮಕಾತಿ ಸುಗ್ಗಿ, 247 ಪಿಡಿಒ, 400ಕ್ಕೂ ಹೆಚ್ಚು ಗ್ರೂಪ್ ಸಿ ಹುದ್ದೆ ಅರ್ಜಿ ಆಹ್ವಾನ

ವಿದ್ಯಾರ್ಹತೆ

1.ಯಾವುದೇ ವಿಶ್ವವಿದ್ಯಾಲಯ / ಶೈಕ್ಷಣಿಕ ಸಂಸ್ಥೆಗಳಿಂದ ಪದವಿ ಪಡೆದಿರಬೇಕು ಅಥವಾ ತತ್ಸಮಾನ ಪರೀಕ್ಷೆ ಉತ್ತೀರ್ಣರಾಗಿರಬೇಕು.

2.ವಾಹನ ಚಾಲನ ಪರವಾನಗಿ ಪಡೆದಿರಬೇಕು.

ವಯೋಮಿತಿ

ದಿನಾಂಕ 01-08-2024ಕ್ಕೆ ಕನಿಷ್ಠ 20 ವರ್ಷ ಆಗಿರಬೇಕು.

ಗರಿಷ್ಠ 25 ವರ್ಷ ಮೀರಿರಬಾರದು. ಎಸ್‌ಸಿ / ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ, ಇತರೆ ಹಿಂದುಳಿದ ವರ್ಗದವರಿಗೆ 3 ವರ್ಷ, ಮಾಜಿ ಸೈನಿಕ ಅಭ್ಯರ್ಥಿಗಳಿಗೆ 3

ವರ್ಷ ವಯಸ್ಸಿನ ಸಡಿಲಿಕೆ ಅರ್ಜಿ ಸಲ್ಲಿಸಲು ಅನ್ವಯವಾಗಲಿದೆ.

ವೇತನ ಶ್ರೇಣಿ

1. ದೆಹಲಿ ಪೊಲೀಸ್ ಪಡೆಗಳ ಸಬ್-ಇನ್ಸ್‌ಪೆಕ್ಟರ್‌ (ಎಕ್ಸಿಕ್ಯೂಟಿವ್) ಹುದ್ದೆಗಳಿಗೆ ವೇತನ ಶ್ರೇಣಿ - ರೂ.35,400-1,12,400.

2. ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳ ಸಬ್-ಇನ್ಸ್‌ಪೆಕ್ಟರ್‌ (ಜನರಲ್ ಡ್ಯೂಟಿ) ಹುದ್ದೆಗಳಿಗೆ ವೇತನ ಶ್ರೇಣಿ - ರೂ.35,400- 1,12,400.

ಕಂಪ್ಯೂಟರ್ ಆಧಾರಿತ ಪರೀಕ್ಷೆ ದಿನಾಂಕ : ಮೇ 09, 10, 13, 2024

ಕರ್ನಾಟಕದಲ್ಲಿ ಪರೀಕ್ಷೆ ಕೇಂದ್ರಗಳು

ಬೆಂಗಳೂರು, ಉಡುಪಿ, ಕಲಬುರಗಿ, ಮಂಗಳೂರು, ಬೆಳಗಾವಿ, ಹುಬ್ಬಳ್ಳಿ, ಮೈಸೂರು, ಶಿವಮೊಗ್ಗ

Breaking News: ಸರ್ಕಾರಿ ನೌಕರರ ತುಟ್ಟಿಭತ್ಯೆ ಶೇ. 4ರಷ್ಟು ಹೆಚ್ಚಿಸಿದ ಮೋದಿ ಸರ್ಕಾರ!

ನೇಮಕ ಪ್ರಕ್ರಿಯೆ

ನಾಲ್ಕು ಹಂತಗಳಲ್ಲಿ ನೇಮಕ ಪ್ರಕ್ರಿಯೆ ನಡೆಯಲಿದೆ.

1.ಪೇಪರ್-1 ಲಿಖಿತ ಪರೀಕ್ಷೆ

2. ಪೇಪರ್-2 ಲಿಖಿತ ಪರೀಕ್ಷೆ

3. ದೈಹಿಕ ಸಾಮರ್ಥ್ಯ ಪರೀಕ್ಷೆ / ದೈಹಿಕ ಸಹಿಷ್ಣುತೆ ಪರೀಕ್ಷೆ.

4. ಸಂಪೂರ್ಣ ಮೆಡಿಕಲ್ ಟೆಸ್ಟ್

ದೇಹದಾರ್ಡ್ಯತೆ

ಎತ್ತರ: ಪುರುಷರು: 165 ಸೆಂ ಮೀ.

ಎದೆಯ ಸುತ್ತಳತೆ: 81-84 ಸೆಂ.ಮೀ. (ಕನಿಷ್ಟ 4 ಸೆಂ ಮೀ ವಿಸ್ತರಿಸುವಂತಿರಬೇಕು)

ಮಹಿಳೆಯರಿಗೆ ಎತ್ತರ: 157 ಸೆಂ ಮೀ

ದೈಹಿಕ ಸಾಮರ್ಥ್ಯ ಪರೀಕ್ಷೆಯ ವಿವರ

ಪುರುಷರಿಗೆ: 1600 ಮೀಟರ್ ಓಟ (30 ವರ್ಷದವರಿಗೆ ಆರು ನಿಮಿಷ, 30ರಿಂದ 40 ವರ್ಷದವರಿಗೆ 7 ನಿಮಿಷ, 40 ವರ್ಷ ಮೇಲ್ಪಟ್ಟವರಿಗೆ 8 ನಿಮಿಷ ಕಾಲಾವಕಾಶ ಇರುತ್ತದೆ).

ಮಹಿಳೆಯರಿಗೆ: 1600 ಮೀಟರ್ ಓಟ (30 ವರ್ಷದವರಿಗೆ 8 ನಿಮಿಷ, 30ರಿಂದ 40 ವರ್ಷದವರಿಗೆ 9 ನಿಮಿಷ, 40 ವರ್ಷ ಮೇಲ್ಪಟ್ಟವರಿಗೆ 10 ನಿಮಿಷ ಕಾಲಾವಕಾಶ ಇರುತ್ತದೆ).

Latest Videos
Follow Us:
Download App:
  • android
  • ios