Asianet Suvarna News Asianet Suvarna News

ದಕ್ಷಿಣ ಮಧ್ಯೆ ರೈಲ್ವೆಯಲ್ಲಿ 4,103 ಅಪ್ರೆಂಟಿಸ್ ಹುದ್ದೆಗಳಿಗೆ ನೇಮಕಾತಿ

ದಕ್ಷಿಣ ಮಧ್ಯೆ ರೈಲ್ವೆಯಲ್ಲಿ ಅಪ್ರೆಂಟಿಸ್ ಮಾಡಲು ಇಚ್ಚಿಸುವ ಅರ್ಹ ಅಭ್ಯರ್ಥಿಗಳಿಗೆ ಅವಕಾಶ ತೆರೆದಿದೆ. ಒಟ್ಟು 4103 ಅಪ್ರೆಂಟಿಸ್ ಹುದ್ದೆಗಳಿಗೆ ರೇಲ್ವೆ ನೇಮಕಾತಿ ಮಾಡಿಕೊಳ್ಳುತ್ತಿದ್ದು, ಐಟಿಐ ಪೂರೈಸಿರುವ ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸಲು ನವೆಂಬರ್ 3 ಕೊನೆಯ ದಿನವಾಗಿದೆ.

South Central Railway is recruiting 4103 apprentice posts
Author
Bengaluru, First Published Oct 11, 2021, 5:07 PM IST
  • Facebook
  • Twitter
  • Whatsapp

ಇತ್ತೀಚೆಗಷ್ಟೇ ಈಸ್ಟರ್ನ್ ರೈಲ್ವೆ ಹಾಗೂ ನೈರುತ್ಯ ರೈಲ್ವೆ ವಲಯಗಳು ಖಾಲಿ ಇರುವ ಅಪ್ರೆಂಟಿಸ್ (Apprentice)  ಹುದ್ದೆಗಳ ಭರ್ತಿಗೆ ನೇಮಕಾತಿ (Recruitment) ಪ್ರಕ್ರಿಯೆ ಶುರು ಮಾಡಿದ್ದವು. ಇದೀಗ ದಕ್ಷಿಣ ಮಧ್ಯ ರೈಲ್ವೆ (South Central Railway) ಕೂಡ ನೇಮಕಾತಿ ಪ್ರಕ್ರಿಯೆ ಆರಂಭಿಸಿದೆ. 

ದಕ್ಷಿಣ ಮಧ್ಯ ರೈಲ್ವೆಯು (South Central Railway) ಬರೋಬ್ಬರೀ 4,103 ಅಪ್ರೆಂಟಿಸ್‌  (Apprentice)   ಹುದ್ದೆಗಳ ನೇಮಕಾತಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಆನ್ಲೈನ್ ಮೂಲಕವೇ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬೇಕಿದ್ದು, ನವೆಂಬರ್ 3 ಅರ್ಜಿ ಸಲ್ಲಿಕೆಗೆ ಕೊನೆಯ ದಿನವಾಗಿದೆ. ಆಸಕ್ತ ಅಭ್ಯರ್ಥಿಗಳು scr.indianrailways.gov.in ನಲ್ಲಿ ಅರ್ಜಿ ಸಲ್ಲಿಸಬಹುದು. 

ಈಸ್ಟರ್ನ್ ರೈಲ್ವೆಯಲ್ಲಿ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ

ದಕ್ಷಿಣ ಮಧ್ಯ ರೈಲ್ವೆ (South Central Railway) ನೇಮಕಾತಿಯಲ್ಲಿ ಎಸಿ ಮೆಕ್ಯಾನಿಕ್ (AC Mechanic) - 250 ಹುದ್ದೆಗಳು, ಕಾರ್ಪೆಂಟರ್ (Carpenter) - 18 ಹುದ್ದೆಗಳು, ಡೀಸೆಲ್ ಮೆಕ್ಯಾನಿಕ್ (Diesel Mechanic) - 531, ಎಲೆಕ್ಟ್ರಿಷಿಯನ್(Electrician)- 1,019, ಎಲೆಕ್ಟ್ರಾನಿಕ್ ಮೆಕ್ಯಾನಿಕ್ (Electronic Mechanic) - 92, ಫಿಟ್ಟರ್ (Fitter) - 1,460 , ಮೆಕ್ಯಾನಿಸ್ಟ್ (Machinist) - 71, ಎಂಎಂಟಿಡಬ್ಲ್ಯೂ (MMTW) - 5, ಎಂಎಂ ಡಬ್ಲ್ಯೂ(MMW) - 24, ಪೇಂಟರ್ (Painter) - 80, ವೆಲ್ಡರ್ (Welder) - 553 ಹುದ್ದೆಗಳು ಸೇರಿ ಒಟ್ಟು 4103 ಅಪ್ರೆಂಟಿಸ್ ಹುದ್ದೆಗಳನ್ನ ನೇಮಕ ಮಾಡಿಕೊಳ್ಳಲಾಗುತ್ತದೆ. 

ನ್ಯಾಷನಲ್ ಕೌನ್ಸಿಲ್ ಆಫ್ ವೋಕೇಶನಲ್ ಟ್ರೇನಿಂಗ್ (National Council of Vocational Training) ಅಥವಾ ಸ್ಟೇಟ್ ಕೌನ್ಸಿಲ್ ಆಫ್ ವೋಕೇಶನಲ್ ಟ್ರೇನಿಂಗ್ (State Council of Vocational Training) ನಿಂದ ಸಂಬಂಧಿತ ಟ್ರೇಡ್ನಲ್ಲಿ ಐಟಿಐ ಪೂರೈಸಿರುವ ಅಭ್ಯರ್ಥಿಗಳು ಅಪ್ರೆಂಟಿಸ್ ಶಿಪ್ಗೆ ಅರ್ಜಿ ಸಲ್ಲಿಸಬಹುದು. 

ಅಭ್ಯರ್ಥಿಗಳು 10 ನೇ ತರಗತಿ ಅಥವಾ ಅದಕ್ಕೆ ಸಮನಾದ ಕೋರ್ಸ್ನಲ್ಲಿ (10+2 ಪರೀಕ್ಷಾ ವ್ಯವಸ್ಥೆಯ ಅಡಿಯಲ್ಲಿ) ಉತ್ತೀರ್ಣರಾಗಿರಬೇಕು. ಒಟ್ಟಾರೆಯಾಗಿ ಕನಿಷ್ಠ 50% ಅಂಕಗಳನ್ನು ಪಡೆದಿರಬೇಕು. ರಾಷ್ಟ್ರೀಯ ವೃತ್ತಿಪರ ತರಬೇತಿ ಕೌನ್ಸಿಲ್ ಅಥವಾ ರಾಜ್ಯ ವೃತ್ತಿಪರ ತರಬೇತಿಯ ಕೌನ್ಸಿಲ್ ಅಡಿಯಲ್ಲಿ ಮಾನ್ಯತೆ ಪಡೆದ ಯಾವುದೇ ಸಂಸ್ಥೆಯಿಂದ ಸಂಬಂಧಿತ ವ್ಯಾಪಾರದಲ್ಲಿ ಐಟಿಐ ಪ್ರಮಾಣಪತ್ರವನ್ನು ಹೊಂದಿರಬೇಕು. ಡಿಪ್ಲೊಮಾ ಹೊಂದಿರುವವರು ಮತ್ತು ಇಂಜಿನಿಯರಿಂಗ್ ಪದವೀಧರರು ಹುದ್ದೆಗಳಿಗೆ ಅರ್ಜಿ ಸಲ್ಲಿಸುವಂತಿಲ್ಲ. 

ನೈರುತ್ಯ ರೈಲ್ವೆಯಲ್ಲಿ 904 ಅಪ್ರೆಂಟಿಸ್‌‌ಗೆ ಅರ್ಜಿ ಆಹ್ವಾನ : ರಾಜ್ಯದಲ್ಲೇ ಕೆಲಸ ಮಾಡುವ ಅವಕಾಶ

 10 ನೇ ತರಗತಿ ಹಾಗೂ ಐಟಿಐ ಪರೀಕ್ಷೆಗಳಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ಅಭ್ಯರ್ಥಿಗಳ ಆಯ್ಕೆ ಮಾಡಲಾಗುತ್ತದೆ. ಅಭ್ಯರ್ಥಿಗಳಿಗೆ ಯಾವುದೇ ಲಿಖಿತ ಪರೀಕ್ಷೆ ಅಥವಾ ಸಂದರ್ಶನ ಇರುವುದಿಲ್ಲ, ಆಯ್ಕೆಯಾದ ಅರ್ಜಿದಾರರು ವೈದ್ಯಕೀಯ ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕಾಗುತ್ತದೆ. 

ಅಭ್ಯರ್ಥಿಯ ವಯೋಮಿತಿ ಕನಿಷ್ಟ 15 ವರ್ಷದಿಂದ 24 ವರ್ಷದೊಳಗೆ ಇರಬೇಕು. ಅಕ್ಟೋಬರ್ 4, 2021 ಕ್ಕೆ 24 ವರ್ಷ ಮೀರಿರಬಾರದು. ಆದಾಗ್ಯೂ, ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳ ವಯೋಮಿತಿಯಲ್ಲಿ   5 ವರ್ಷಗಳವರೆಗೆ ಸಡಿಲಿಕೆ ನೀಡಲಾಗುತ್ತದೆ. ಇನ್ನು ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷಗಳವರೆಗೆ ವಯಸ್ಸಿನ ಸಡಿಲಿಕೆ ಇರುತ್ತದೆ. 

ಸೇನೆಯಲ್ಲಿ NCCಗೆ ಅವಕಾಶ: ಆಯ್ಕೆಯಾದವರಿಗೆ 1.77 ಲಕ್ಷ ರೂ.ವರೆಗೆ ಸಂಬಳ

ಆಯ್ಕೆಯಾದ ಅಭ್ಯರ್ಥಿಗಳಿಗೆ ಕೇಂದ್ರ ಅಪ್ರೆಂಟಿಸ್‌ಶಿಪ್ ಕೌನ್ಸಿಲ್ನಿಂದ ತರಬೇತಿ ನೀಡಲಾಗುತ್ತದೆ. ಕೇಂದ್ರ ಅಪ್ರೆಂಟಿಸ್‌ಶಿಪ್ ಕೌನ್ಸಿಲ್ ಸೂಚಿಸಿದ ಮಾನದಂಡಗಳು ಮತ್ತು ಪಠ್ಯಕ್ರಮಕ್ಕೆ ಅನುಗುಣವಾಗಿ ತರಬೇತಿಯನ್ನು ಏರ್ಪಡಿಸಲಾಗುತ್ತದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಅಪ್ರೆಂಟಿಸ್‌ಶಿಪ್ ಸಮಯದಲ್ಲಿ  ಸ್ಟೈಫಂಡ್ ನೀಡಲಾಗುತ್ತದೆ. 

Follow Us:
Download App:
  • android
  • ios