Asianet Suvarna News Asianet Suvarna News

ರೇಲ್ವೆ ನೇಮಕಾತಿ: 3093 ಅಪ್ರೆಂಟಿಸ್ ಹುದ್ದೆಗಳ ನೇಮಕಕ್ಕೆ ಅರ್ಜಿ ಆಹ್ವಾನ

ಉತ್ತರ ರೇಲ್ವೆಯ ವಲಯದಲ್ಲಿ ಖಾಲಿರುವ 3093 ಅಪ್ರೆಂಟಿಸ್ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆಯನ್ನು ರೇಲ್ವೆ ನೇಮಕಾತಿ ಸೆಲ್ ಆರಂಭಿಸಿದೆ. ಈಗಗಲೇ ಅರ್ಜಿ ಸಲ್ಲಿಕೆ ಆರಂಭವಾಗಿದೆ. ಅಕ್ಟೋಬರ್ 20 ಅಪ್ಲೈ ಮಾಡಲು ಕೊನೆಯ ದಿನವಾಗಿದೆ. ಐಟಿಐ ಹಾಗೂ 12ನೇ ತರಗತಿ ಪೂರೈಸಿದವರು ಈ ಹುದ್ದೆಗಳಿಗ ಅರ್ಜಿ ಸಲ್ಲಿಸಬಹುದಾಗಿದೆ.

Railway Recruitment cell calls for 3093 apprentice posts and check details
Author
Bengaluru, First Published Sep 27, 2021, 6:42 PM IST

ರೈಲ್ವೆ ನೇಮಕಾತಿ ಸೆಲ್(Railway Recruitment Cell), ಉತ್ತರ ರೈಲ್ವೇ ವಲಯದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳುತ್ತಿದೆ. ಉತ್ತರ ರೈಲ್ವೇಯಲ್ಲಿ ದೊಡ್ಡ ನೇಮಕಾತಿ ಪ್ರಕ್ರಿಯೆ ಶುರುವಾಗಿದ್ದು, ಬರೋಬ್ಬರೀ 3093 ಅಂಪ್ರೆಟಿಸ್(Apprentice) ಹುದ್ದೆಗಳನ್ನು ನೇಮಕ ಮಾಡಿಕೊಳ್ಳಲಾಗುತ್ತದೆ. 

ಉತ್ತರ ರೇಲ್ವೆ(Northern Railway)ಯ ವಿವಿಧ ವಿಭಾಗ /ಘಟಕಗಳು /ಕಾರ್ಯಾಗಾರಗಳಲ್ಲಿ ತರಬೇತಿ ನೀಡಲು ಅಪ್ರೆಂಟಿಸ್ ಆಕ್ಟ್ 1961 ರ ಅಡಿಯಲ್ಲಿ 3093 ಆಕ್ಟ್ ಅಪ್ರೆಂಟಿಸ್(Apprentice) ಹುದ್ದೆಯ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ rrcnr.org ಮೂಲಕ ಅರ್ಜಿ ಸಲ್ಲಿಸಬಹುದು. 

ಆಯಿಲ್ ಇಂಡಿಯಾ ನೇಮಕಾತಿ: ಅಧಿಕಾರಿ ಹುದ್ದೆಗಳಿಗೆ ಸೂಪರ್ ಸಂಬಳ

ಈಗಾಗಲೇ ಅರ್ಜಿ ಪ್ರಕ್ರಿಯೆಯು ಸೆಪ್ಟೆಂಬರ್ 20ರಿಂದ ಆರಂಭವಾಗಿದ್ದು, ಅರ್ಜಿ ಸಲ್ಲಿಸಲು ಅಕ್ಟೋಬರ್ 20 ಕೊನೆಯ ದಿನಾಂಕವಾಗಿದೆ. ಐಟಿಐ(ITI) ಹಾಗೂ 12ನೇ(12th Class) ತರಗತಿ ಪೂರೈಸಿರುವ ಅಭ್ಯರ್ಥಿಗಳಿಗೆ ನೇಮಕಾತಿಯಲ್ಲಿ ಪ್ರಮುಖ ಆದ್ಯತೆ ಸಿಗಲಿದೆ. ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ.

ಅಪ್ರೆಂಟಿಸ್‌ಶಿಪ್ ನಿಯಮಗಳ ಪ್ರಕಾರ ಅಭ್ಯರ್ಥಿಗಳು 10+2 ವ್ಯವಸ್ಥೆಯ ಅಡಿಯಲ್ಲಿ 10 ನೇ ತರಗತಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. ಅಥವಾ ಅದಕ್ಕೆ ಸಮನಾದ ಮತ್ತು ಮಾನ್ಯತೆ ಪಡೆದ ಸಂಸ್ಥೆಯಿಂದ ಸಂಬಂಧಿತ ಟ್ರೇಡ್‌ಗಳಲ್ಲಿ ಐಟಿಐ ಕೋರ್ಸ್ ಉತ್ತೀರ್ಣರಾಗಿರಬೇಕು. ಅಕ್ಟೋಬರ್ 20, 2021ಕ್ಕೆ ಅನ್ವಯ ಆಗುವಂತೆ 15 ವರ್ಷ ಮೇಲ್ಪಟ್ಟ ಹಾಗೂ 24 ವರ್ಷದೊಳಗಿನ ಅಭ್ಯರ್ಥಿಗಳು ಈ ಹುದ್ದೆ ಗಳಿಗೆ ಅರ್ಜಿ ಸಲ್ಲಿಸಬಹುದು.

ಆಸಕ್ತ ಅಭ್ಯರ್ಥಿಗಳು ಆರ್‌ಆರ್‌ಸಿ ಎನ್‌ಆರ್ ಅಧಿಕೃತ ವೆಬ್‌ಸೈಟ್ rrcnr.org ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಮೆರಿಟ್ ಪಟ್ಟಿಯನ್ನು ಆಧರಿಸಿ ಆರ್‌ಆರ್‌ಸಿ ಎನ್‌ಆರ್ ಅಪ್ರೆಂಟಿಸ್ ಹುದ್ದೆಗಳಿಗೆ ಆಯ್ಕೆ ಮಾಡಲಾಗುತ್ತದೆ.

ನೌಕಾಪಡೆ ಎಸ್‌ಎಸ್‌ಸಿ 181 ಅಧಿಕಾರಿಗಳ ನೇಮಕಾತಿಗೆ ಶುರು

ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ತಮ್ಮ ಆನ್‌ಲೈನ್ ಅರ್ಜಿ ನಮೂನೆಯನ್ನು ಉತ್ತರ ರೈಲ್ವೆಯ(Northern Railway) ಆರ್‌ಆರ್‌ಸಿ(RRC)ಯ ಅಧಿಕೃತ ವೆಬ್‌ಸೈಟ್‌ನಲ್ಲಿ ಸಲ್ಲಿಸಬಹುದು. ಉತ್ತರ ರೈಲ್ವೆಯ ವಿವಿಧ ವಿಭಾಗಗಳು, ಘಟಕಗಳು ಮತ್ತು ಕಾರ್ಯಾಗಾರಗಳಲ್ಲಿ ಅಪ್ರೆಂಟಿಸ್ ಹುದ್ದೆಗಳಿಗೆ ಈ ನೇಮಕಾತಿಯನ್ನು  ಮಾಡಲಾಗುತ್ತದೆ.

ಆಸಕ್ತ ಅಭ್ಯರ್ಥಿಗಳು 10 ನೇ ತರಗತಿಯ ಬೋರ್ಡ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು ಅಥವಾ 12 ನೇ ತರಗತಿಯ ವ್ಯವಸ್ಥೆಯ ಅಡಿಯಲ್ಲಿ ಅದಕ್ಕೆ ಸಮನಾಗಿರಬೇಕು ಮತ್ತು ಮಾನ್ಯತೆ ಪಡೆದ ಸಂಸ್ಥೆಯಿಂದ ಸಂಬಂಧಿತ ವ್ಯಾಪಾರದಲ್ಲಿ ಕೈಗಾರಿಕಾ ತರಬೇತಿ ಸಂಸ್ಥೆ (ITI) ಪ್ರಮಾಣಪತ್ರವನ್ನು ಹೊಂದಿರಬೇಕು.
 

Railway Recruitment cell calls for 3093 apprentice posts and check details

ಅಭ್ಯರ್ಥಿಗಳ ಆಯ್ಕೆಗಾಗಿ ಅರ್ಜಿಯ ಸ್ಕ್ರೀನಿಂಗ್ ಮತ್ತು ಪರಿಶೀಲನೆಯನ್ನು ನಡೆಸಲಾಗುತ್ತದೆ. ಅಭ್ಯರ್ಥಿಗಳಿಗೆ ಯಾವುದೇ ಲಿಖಿತ ಪರೀಕ್ಷೆ ಅಥವಾ ಸಂದರ್ಶನ ಇರುವುದಿಲ್ಲ. ಅರ್ಜಿಗಳ ಪರಿಶೀಲನೆಯ ನಂತರ 10 ನೇ ತರಗತಿ ಮತ್ತು ಐಟಿಐ ಪ್ರಮಾಣಪತ್ರ ಕೋರ್ಸ್‌ಗಳಲ್ಲಿ ಅಭ್ಯರ್ಥಿಗಳ ಒಟ್ಟು ಅಂಕಗಳನ್ನು ಪರಿಗಣಿಸಿ ಮೆರಿಟ್ ಪಟ್ಟಿಯನ್ನು ತಯಾರಿಸಲಾಗುತ್ತದೆ. 

ಅಭ್ಯರ್ಥಿಗಳನ್ನು ಮೆರಿಟ್ ಲಿಸ್ಟ್ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ. ಅವರನ್ನು ಆಗ್ನೇಯ ಮಧ್ಯ ರೈಲ್ವೆಯ ಬಿಲಾಸ್ಪುರ್ ವಿಭಾಗದಲ್ಲಿ 1961 ರ ಅಪ್ರೆಂಟಿಸ್ ಆಕ್ಟ್ ಅಡಿಯಲ್ಲಿ 1 ವರ್ಷದ ಅವಧಿಗೆ ಟ್ರೇಡ್ ಅಪ್ರೆಂಟಿಸ್ ಆಗಿ ನೇಮಕ ಮಾಡಲಾಗುತ್ತದೆ. ಮೆಟ್ರಿಕ್ಯುಲೇಷನ್ ಮತ್ತು ಐಟಿಐ ಪರೀಕ್ಷೆಗಳಲ್ಲಿ ಅಭ್ಯರ್ಥಿಗಳು ಪಡೆದ ಅಂಕಗಳ ಆಧಾರದ ಮೇಲೆ ಮೆರಿಟ್ ಪಟ್ಟಿಯನ್ನು ತಯಾರಿಸಲಾಗುತ್ತದೆ.

NIOS ನೇಮಕಾತಿ: 115 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

ಅಭ್ಯರ್ಥಿಗಳು ಅರ್ಜಿ ಶುಲ್ಕವಾಗಿ ₹ 100 ಪಾವತಿಸಬೇಕು. ಎಸ್‌ಸಿ/ಎಸ್‌ಟಿ(SC ST) ಮತ್ತು ಒಬಿಸಿ(OBC) ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿಯನ್ನು ಕ್ರಮವಾಗಿ ಐದು ವರ್ಷ ಮತ್ತು ಮೂರು ವರ್ಷ ಸಡಿಲಿಸಲಾಗುತ್ತದೆ.

ಅಭ್ಯರ್ಥಿಯು ಅಧಿಸೂಚನೆ ಹೊರಡಿಸಿರುವ ದಿನಾಂಕದೊಳಗೆ ನಿಗದಿತ ವಿದ್ಯಾರ್ಹತೆಯನ್ನು ಪಾಸಾಗಿರಬೇಕು. ಅಧಿಸೂಚನೆಯ ದಿನಾಂಕದವರೆಗೆ ಎಸ್‌ಎಸ್‌ಸಿ(SSC)/ಮೆಟ್ರಿಕ್ಯುಲೇಷನ್(Matriculation)/10ನೇ ಮತ್ತು ಐಟಿಐ(ITI) ಫಲಿತಾಂಶಗಳಿಗಾಗಿ ಕಾಯುತ್ತಿರುವ ಅರ್ಜಿದಾರರು ಅರ್ಜಿ ಸಲ್ಲಿಸಲು ಅರ್ಹರಲ್ಲ.

Follow Us:
Download App:
  • android
  • ios