Asianet Suvarna News Asianet Suvarna News

ನ್ಯಾಷನಲ್ ಇನ್ಶೂರೆನ್ಸ್‌ ಕಂಪನಿಯಲ್ಲಿ 274 ಅಡ್ಮಿನಿಸ್ಟ್ರೇಟಿವ್ ಆಫೀಸರ್ ನೇಮಕಾತಿ

ನ್ಯಾಷನಲ್ ಇನ್ಶೂರೆನ್ಸ್‌ ಕಂಪನಿ ಲಿಮಿಟೆಡ್ (ಎನ್‌ಐಸಿಎಲ್) ಸ್ಕೇಲ್ - 1 ಕೇಡರ್‌ನಲ್ಲಿ ಅಡ್ಮಿನಿಸ್ಟ್ರೇಟಿವ್ ಆಫೀಸರ್ (ಸ್ಪೆಷಲಿಸ್ಟ್ ಮತ್ತು ಜೆನರಲಿಸ್ಟ್ ಆಫೀಸರ್‌ಗಳ ನೇಮಕಾತಿಗಾಗಿ ಅಧಿಸೂಚನೆಯನ್ನು ಹೊರಡಿಸಿದ್ದು, ಆಸಕ್ತ ಅಭ್ಯರ್ಥಿಗಳು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದು.

NICL  Recruitment 2024  Administrative Officer Recruitment in National Insurance Company gow
Author
First Published Jan 18, 2024, 5:08 PM IST

ನ್ಯಾಷನಲ್ ಇನ್ಶೂರೆನ್ಸ್‌ ಕಂಪನಿ ಲಿಮಿಟೆಡ್ (ಎನ್‌ಐಸಿಎಲ್) ಸ್ಕೇಲ್ - 1 ಕೇಡರ್‌ನಲ್ಲಿ ಅಡ್ಮಿನಿಸ್ಟ್ರೇಟಿವ್ ಆಫೀಸರ್ (ಸ್ಪೆಷಲಿಸ್ಟ್ ಮತ್ತು ಜೆನರಲಿಸ್ಟ್ ಆಫೀಸರ್‌ಗಳ ನೇಮಕಾತಿಗಾಗಿ ಅಧಿಸೂಚನೆಯನ್ನು ಹೊರಡಿಸಿದ್ದು, ಆಸಕ್ತ ಅಭ್ಯರ್ಥಿಗಳು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದು.

ಹುದ್ದೆಯ ವಿವರ

1. ಅಡ್ಮಿನಿಸ್ಟ್ರೇಟಿವ್ ಆಫೀಸರ್ (ಸ್ಪೆಷಲಿಸ್ಟ್) : 142 ಹುದ್ದೆ ( ವರ್ಗೀಕರಣ ಇಂತಿದೆ)

೧. ವೈದ್ಯರು - 28 ಹುದ್ದೆ

೨. ಕಾನೂನು ಅಧಿಕಾರಿ - 20 ಹುದ್ದೆ

೩. ಹಣಕಾಸು - 30 ಹುದ್ದೆ

೪. ಆಕ್ಚುರಿಯಲ್ - 02 ಹುದ್ದೆ

೫. ಮಾಹಿತಿ ತಂತ್ರಜ್ಞಾನ -20 ಹುದ್ದೆ

೬. ಆಟೋಮೊಬೈಲ್ ಎಂಜಿನಿಯರ್‌ಗಳು - 20 ಹುದ್ದೆ

೭. ಹಿಂದಿ (ರಾಜಭಾಷಾ) ಅಧಿಕಾರಿಗಳ - 22 ಹುದ್ದೆ

2. ಅಡ್ಮಿನಿಸ್ಟ್ರೇಟಿವ್ ಆಫೀಸರ್ ( ಜನರಲಿಸ್ಟ್ ) - 132 ಹುದ್ದೆ

೧. ಸಾಮಾನ್ಯ -130

೨. ಬ್ಯಾಕ್‌ಲಾಗ್‌ - 02

ಪ್ರಮುಖ ದಿನಾಂಕಗಳು

ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಮತ್ತು ಶುಲ್ಕ ಪಾವತಿಗೆ ಪ್ರಾರಂಭ ದಿನಾಂಕ: 02-01-2024

ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಮತ್ತು ಶುಲ್ಕವನ್ನು ಪಾವತಿಸಲು ಕೊನೆಯ ದಿನಾಂಕ: 22-01-2024

ಅರ್ಜಿ ಶುಲ್ಕ

ಇತರ ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ : ರು. 1000

ಎಸ್‌ ಸಿ/ ಎಸ್‌ ಟಿ/ ಪಿಡಬ್ಲ್ಯೂಡಿ

ಅಭ್ಯರ್ಥಿಗಳಿಗೆ : ರು.250

ವಯಸ್ಸಿನ ಮಿತಿ (01-12-2023 ರಂತೆ)

ಕನಿಷ್ಠ ವಯಸ್ಸು : 21 ವರ್ಷಗಳು

ಗರಿಷ್ಠ ವಯಸ್ಸು : 30 ವರ್ಷಗಳು

ವೇತನ ಶ್ರೇಣಿ : ರು. 50925-2500(14)-85925-2710(4)-96765

ಶೈಕ್ಷಣಿಕ ಅರ್ಹತೆ

1. ವೈದ್ಯರ ಹುದ್ದೆಗೆ : ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ ಎಂ.ಬಿ.ಬಿ.ಎಸ್ / ಎಂ.ಡಿ ವಿಷಯದಲ್ಲಿ ವೈದ್ಯಕೀಯ ಪದವಿಯನ್ನು ಪಡೆದಿರಬೇಕು.

2. ಕಾನೂನು ಅಧಿಕಾರಿ ಹುದ್ದೆಗೆ: ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ ಸಾಮಾನ್ಯ ಅಭ್ಯರ್ಥಿಗಳು ಶೇಕಡಾ 60 ಮತ್ತು ಎಸ್‌ ಸಿ/ಎಸ್‌ ಟಿ ಅಭ್ಯರ್ಥಿಗಳು ಶೇಕಡಾ 55 ಅಂಕಗಳೊಂದಿಗೆ ಕಾನೂನು ಪದವಿಯನ್ನು ಪಡೆದಿರಬೇಕು.

3. ಹಣಕಾಸು ಹುದ್ದೆಗೆ : ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ ಚಾರ್ಟರ್ಡ್ ಅಕೌಂಟೆಂಟ್ / ಕಾಸ್ಟ್ ಅಕೌಂಟೆಂಟ್ ಅಥವಾ ಬಿ.ಕಾಂ/ಎಂ.ಕಾಂ ಪದವಿಯನ್ನು ಸಾಮಾನ್ಯ ಅಭ್ಯರ್ಥಿಗಳು ಶೇಕಡಾ 60 ಮತ್ತು ಎಸ್‌ ಸಿ/ಎಸ್‌ ಟಿ ಅಭ್ಯರ್ಥಿಗಳು ಶೇಕಡಾ 55 ಅಂಕಗಳೊಂದಿಗೆ ಪಡೆದಿರಬೇಕು.

4. ಆಕ್ಚುರಿಯಲ್ ಹುದ್ದೆಗೆ : ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ ಸಂಖ್ಯಾಶಾಸ್ತ್ರ / ಗಣಿತ / ಆಕ್ಚುರಿಯಲ್ ಸೈನ್ಸ್ ನಲ್ಲಿ ಪದವಿ/ ಸ್ನಾತಕೋತ್ತರ ಪದವಿಯನ್ನು ಪಡೆದಿರಬೇಕು.

5. ಮಾಹಿತಿ ತಂತ್ರಜ್ಞಾನ ಹುದ್ದೆಗೆ : ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ ಬಿ.ಇ/ಬಿ-ಟೆಕ್/‌ ಕಂಪ್ಯೂಟರ್‌ ಸೈನ್ಸ್‌ ವಿಷಯದಲ್ಲಿ ಎಂ-ಟೆಕ್/ಎಂಸಿಎ ಪದವಿ ಪಡೆದಿರಬೇಕು.

6. ಆಟೋಮೊಬೈಲ್ ಎಂಜಿನಿಯರ್‌ ಹುದ್ದೆಗೆ : ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ ಆಟೋಮೊಬೈಲ್ ಇಂಜಿನಿಯರಿಂಗ್‌ನಲ್ಲಿ ಬಿ.ಇ. / ಬಿ.ಟೆಕ್/ ಎಂ ಇ/ಎಂ-ಟೆಕ್‌ ಪದವಿ ಪಡೆದಿರಬೇಕು.

7. ಹಿಂದಿ (ರಾಜಭಾಷಾ) ಅಧಿಕಾರಿಗಳ ಹುದ್ದೆಗೆ : ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ ಹಿಂದಿ ವಿಷಯದಲ್ಲಿ ಪದವಿ ಪಡೆದಿರಬೇಕು.

8. ಸಾಮಾನ್ಯ ಅಧಿಕಾರಿ ಹುದ್ದೆಗೆ : ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ ಯಾವುದೇ ವಿಷಯದಲ್ಲಿ ಪದವಿ / ಸ್ನಾತಕೋತ್ತರ ಪದವಿಯನ್ನು ಪಡೆದಿರಬೇಕು.

ಆಯ್ಕೆ ವಿಧಾನ: ಆಯ್ಕೆ ಪ್ರಕ್ರಿಯೆಯು ಎರಡು ಹಂತಗಳನ್ನು ಒಳಗೊಂಡಿದೆ.

ಹಂತ -1 ಪೂರ್ವಭಾವಿ ಪರೀಕ್ಷೆ :

ಪೂರ್ವಭಾವಿ ಪರೀಕ್ಷೆಯು 100 ಅಂಕಗಳಿಗೆ ಆಬ್ಜೆಕ್ಟಿವ್ ಪರೀಕ್ಷೆಗಳನ್ನು ಒಳಗೊಂಡಿರುವ ಪೂರ್ವಭಾವಿ ಪರೀಕ್ಷೆಯನ್ನು ಆನ್‌ಲೈನ್‌ನಲ್ಲಿ ನಡೆಸಲಾಗುತ್ತದೆ. ಈ ಪರೀಕ್ಷೆಯು 100 ಪ್ರಶ್ನೆಗಳಿಗೆ 60 ನಿಮಿಷಗಳ ಅವಧಿಯಲ್ಲಿ ನಡೆಸಲಾಗುತ್ತದೆ.

ಹಂತ - 2 ಆನ್‌ಲೈನ್‌ನಲ್ಲಿ ಮುಖ್ಯ ಪರೀಕ್ಷೆ:

ಮುಖ್ಯ ಪರೀಕ್ಷೆಯು 250 ಅಂಕಗಳಿಗೆ ಆಬ್ಜೆಕ್ಟಿವ್ ಪರೀಕ್ಷೆಗಳಿರುತ್ತವೆ ಮತ್ತು 30 ಅಂಕಗಳಿಗೆ ವಿವರಣಾತ್ಮಕ ಪರೀಕ್ಷೆಯನ್ನು ಒಳಗೊಂಡಿರುತ್ತದೆ. ಭಾಗ ಬಿ - ಹಿಂದಿ ಅಧಿಕಾರಿಗಳಿಗೆ ಮಾತ್ರ ಅನ್ವಯಿಸುತ್ತದೆ. ಹಿಂದಿ (ರಾಜಭಾಷಾ) ಅಧಿಕಾರಿಗಳಿಗೆ 250 ಅಂಕಗಳಿಗೆ 3 ಗಂಟೆ 30 ನಿಮಿಷಗಳ ಅವಧಿಯಲ್ಲಿ ಆನ್‌ಲೈನ್ ಲಿಖಿತ ಪರೀಕ್ಷೆಯನ್ನು ಒಂದೇ ಹಂತದಲ್ಲಿ ನಡೆಸಲಾಗುತ್ತದೆ.

ಪರೀಕ್ಷಾ ಕೇಂದ್ರಗಳು

ಹಂತ-1 ರ ಪರೀಕ್ಷಾ ಕೇಂದ್ರಗಳು: ಭಾರತದಾದ್ಯಂತ ಎಲ್ಲಾ ಪ್ರಮುಖ ಕೇಂದ್ರಗಳಲ್ಲಿ ನಡೆಸಲಾಗುತ್ತದೆ. ಕರ್ನಾಟಕದಲ್ಲಿ ಬೆಂಗಳೂರು, ಹುಬ್ಬಳ್ಳಿ/ಧಾರವಾಡ, ಮಂಗಳೂರು, ಮೈಸೂರು ಕೇಂದ್ರಗಳಿವೆ.

ಹಂತ-2 ಮತ್ತು ಹಿಂದಿಗೆ (ರಾಜಭಾಷಾ) ಪರೀಕ್ಷಾ ಕೇಂದ್ರ: ಬೆಂಗಳೂರು ಅಂತಿಮ ಆಯ್ಕೆ. ಆನ್‌ಲೈನ್ ಮುಖ್ಯ ಪರೀಕ್ಷೆಯಲ್ಲಿ ಅಭ್ಯರ್ಥಿಗಳು ಪಡೆದ ಅಂಕಗಳ ಆಧಾರದ ಮೇಲೆ ಅರ್ಹತಾ ಪಟ್ಟಿಯನ್ನು ತಯಾರಿಸಲಾಗುತ್ತದೆ. ಇಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಸಂದರ್ಶನ ಇರುತ್ತದೆ. ಅಂತಿಮವಾಗಿ ಆನ್‌ಲೈನ್ ಮುಖ್ಯ ಪರೀಕ್ಷೆ ಮತ್ತು ಸಂದರ್ಶನದ ಅಂಕಗಳನ್ನು 80:20 ಅನುಪಾತದ ಆಧಾರದ ಮೇಲೆ ಅಂತಿಮ ಆಯ್ಕೆ ಮಾಡಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಅಧಿಕೃತ ವೆಬ್‌ಸೈಟ್‌ ವೀಕ್ಷಿಸಲು ಕೋರಲಾಗಿದೆ.

Follow Us:
Download App:
  • android
  • ios