ಪುರುಷ ನೌಕರರಿಗೆ ಗುಡ್ ನ್ಯೂಸ್ ಕೊಟ್ಟ ಸರ್ಕಾರ..! ಇನ್ಮುಂದೆ ಸಿಗಲಿದೆ ಚೈಲ್ಡ್ ಕೇರ್ ರಜೆ
ಮಹಿಳೆಯರಿಗೆ ನೀಡಿದಂತೆ ಮಕ್ಕಳ ಪೋಷಣೆ ಮಾಡುತ್ತಿರುವ ನೌಕರರಿಗೆ ಮಕ್ಕಳ ರಕ್ಷಣೆ ರಜೆ ನೀಡಲು ಸರ್ಕಾರ ಮುಂದಾಗಿದೆ.
ನವದೆಹಲಿ, (ಅ.27): ಮಹಿಳಾ ಉದ್ಯೋಗಿಗಳಿಗೆ ನೀಡಿದಂತೆ ಪುರುಷ ನೌಕರರಿಗೂ ಮಕ್ಕಳ ರಕ್ಷಣೆ ರಜೆ ನೀಡಲು ಕೇಂದ್ರ ಸರ್ಕಾರ ಮುಂದಾಗಿದೆ. ಕೇಂದ್ರ ಸರ್ಕಾರದ ನೌಕರರಿಗೆ ಮಾತ್ರ ಈ ಸೌಲಭ್ಯ ಸಿಗಲಿದ್ದು, ಸಿಂಗಲ್ ಪೇರೆಂಟ್ ಆಗಿರುವ ಪುರುಷರಿಗೆ ಮಾತ್ರ ಈ ಚೈಲ್ಡ್ ಕೇರ್ ಲೀವ್ (ಸಿಸಿಎಲ್) ಅನ್ವಯವಾಗಲಿದೆ.
ಈ ಕುರಿತು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಮಾಹಿತಿ ನೀಡಿದ್ದು, ಕೇಂದ್ರ ಸರ್ಕಾರದ ಕಚೇರಿಗಳಲ್ಲಿ ಕೆಲಸ ಮಾಡುವ ಮಹಿಳೆಯರಿಗೆ ಇದಾಗಲೇ ಈ ಸೌಲಭ್ಯವಿದ್ದು, ಅದನ್ನೀಗ ಒಂಟಿ ಪುರುಷರಿಗೂ ಅನ್ವಯ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್: ಇನ್ಮುಂದೆ ವಾರದಲ್ಲಿ 5 ದಿನ ಮಾತ್ರವೇ ಕೆಲಸ
ಮಕ್ಕಳ ಪೋಷಣೆ ವಿಚಾರದಲ್ಲಿ ಪತಿಗೂ ಪತ್ನಿಯಷ್ಟೇ ಜವಾಬ್ದಾರಿ ಇದೆ. ಇದೇ ಕಾರಣದಿಂದ ಅವರ ಹೊಣೆಯನ್ನು ಗಮನದಲ್ಲಿರಿಸಿ ಇಂಥದ್ದೊಂದು ಅವಕಾಶ ಕಲ್ಪಿಸಲಾಗಿದೆ. ಅವಿವಾಹಿತರು ಅಥವಾ ವಿಚ್ಛೇದನ ಪಡೆದವರು ಇದರ ಪ್ರಯೋಜನ ಪಡೆಯಬಹುದಾಗಿದೆ.
ಈ ಸೌಲಭ್ಯ ಪಡೆಯುವ ನೌಕರರು ಕರ್ತವ್ಯ ನಿರ್ವಹಿಸುತ್ತಿರುವ ಸ್ಥಳವನ್ನು ಕೂಡ ತೊರೆಯಬಹುದಾಗಿದೆ. ಅಲ್ಲದೇ ಪ್ರವಾಸ ಭತ್ಯೆ ವಿನಾಯಿತಿಯನ್ನು (ಎಲ್‌ಟಿಸಿ) ಕೂಡ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಮೊದಲ 365 ದಿನಗಳವರೆಗೆ ಭತ್ಯೆ ಸಂಬಳದ ಶೇ. 100ರಷ್ಟು ಪಡೆಯಲು ಅವಕಾಶವಿದ್ದು, ನಂತರ 365 ದಿನಗಳಿಗೆ ಶೇ. 80ರಷ್ಟು ಭತ್ಯೆ ಸಂಬಳ ನೀಡಬಹುದಾಗಿದೆ ಎಂದು ನಿಯಮದಲ್ಲಿನ ಕೆಲವು ಸಡಿಲಿಕೆಗಳನ್ನು ಸಚಿವ ಸಿಂಗ್ ವಿವರಿಸಿದರು.