Asianet Suvarna News Asianet Suvarna News

ಕರ್ನಾಟಕ ಅಂಚೆ ವೃತ್ತದಲ್ಲಿ ವಿವಿಧ ಹುದ್ದೆ ನೇಮಕಾತಿಗೆ ಅರ್ಜಿ ಆಹ್ವಾನ

ಕರ್ನಾಟಕ ಅಂಚೆ ವೃತ್ತದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಸಕ್ತರು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೋರಲಾಗಿದ್ದು, ಹುದ್ದೆಗೆ ಅರ್ಜಿ ಸಲ್ಲಿಸಲು ಬೇಕಾದ ಅರ್ಹತೆ ಸೇರಿದಂತೆ ಇತರೆ ಮಾಹಿತಿ ಈ ಕೆಳಗಿನಂತಿದೆ ನೋಡಿ...

Karnataka postal circle recruitment 2020 apply for 44 various post
Author
Bengaluru, First Published Jan 20, 2020, 8:26 PM IST
  • Facebook
  • Twitter
  • Whatsapp

ಬೆಂಗಳೂರು, [ಜ.20] : ಕರ್ನಾಟಕ ಅಂಚೆ ವೃತ್ತದಲ್ಲಿ ಖಾಲಿ ಇರುವ 44 ವಿವಿಧ ಹುದ್ದೆಗಳನ್ನು ನೇರ ನೇಮಕಾತಿ ಅರ್ಜಿ ಆಹ್ವಾನಿಸಲಾಗಿದೆ.

ಜ್ಯೂನಿಯರ್ ಅಕೌಂಟ್ (ಪೋಸ್ಟಲ್ ಅಕೌಂಟ್ ಆಫೀಸ್‌ಗಳಲ್ಲಿ) 2 ಹುದ್ದೆಗಳು. ಪೋಸ್ಟಲ್ ಅಸಿಸ್ಟೆಂಟ್ (ಪೋಸ್ಟ್ ಆಫೀಸ್ ಅಥವ ಆಡಳಿತ ಕೇಂದ್ರ) 11, ವಿಂಗಡಣೆ ಸಹಾಯಕ (ರೈಲ್ವೆ ಅಂಚೆ ಕಚೇರಿಗಳಲ್ಲಿ) 4, ಪೋಸ್ಟ್‌ಮನ್ (ಅಂಚೆ ಕಚೇರಿಗಳಲ್ಲಿ) 27 ಹುದ್ದೆಗಳನ್ನು ಭರ್ತಿ ಅರ್ಜಿ ಆಹ್ವಾನಿಸಲಾಗಿದೆ.

ಗ್ರಾಮಲೆಕ್ಕಾಧಿಕಾರಿ ನೇಮಕಾತಿಗೆ ಅರ್ಜಿ ಆಹ್ವಾನ; ಪರೀಕ್ಷೆ ಇಲ್ಲದೇ ನೇರ ನೇಮಕಾತಿ

ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ದಿನಾಂಕ 26/2/2020ರೊಳಗೆ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೋರಲಾಗಿದೆ.

ವಿದ್ಯಾರ್ಹತೆ: ಜ್ಯೂನಿಯರ್ ಅಕೌಂಟ್ ಹುದ್ದೆಗೆ ಅರ್ಜಿಗಳನ್ನು ಸಲ್ಲಿಸುವ ಅಭ್ಯರ್ಥಿಗಳು ಯಾವುದೇ ಪದವಿ ಪಡೆದಿರಬೇಕು. ಪೋಸ್ಟಲ್ ಅಸಿಸ್ಟೆಂಟ್ ಹುದ್ದೆಗೆ PUC, ವಿಂಗಡಣೆ ಸಹಾಯಕ ಹುದ್ದೆಗೆ PUC, ಪೋಸ್ಟ್ ಮನ್ PUC ಮತ್ತು ಕನ್ನಡ ಭಾಷೆ ಬರೆಯಲು, ಮಾತನಾಡಲು ಬರಬೇಕು. ಕನಿಷ್ಠ 10ನೇ ತರಗತಿ ತನಕ ಕನ್ನಡ ಮಾಧ್ಯಮದಲ್ಲಿ ಓದಿರಬೇಕು.

ವಯೋಮಿತಿ:ಕನಿಷ್ಠ 18 ವರ್ಷ, ಗರಿಷ್ಠ  27 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ. ಹಾಗೂ ST/SC ಅಭ್ಯರ್ಥಿಗಳಿಗೆ 5, ಓಬಿಸಿ ಅಭ್ಯರ್ಥಿಗಳಿಗೆ 3 ವರ್ಷದ ವಯೋಮಿತಿಯಲ್ಲಿ ಸಡಿಲಿಕೆ ಇದೆ.

ಕ್ರೀಡಾ ಕೋಟಾದಲ್ಲಿ ನೇಮಕಾತಿ: ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳ ಶೈಕ್ಷಣಿಕ ಅರ್ಹತೆ ಮತ್ತು ಕ್ರೀಡಾ ಅರ್ಹತೆಗಳನ್ನು ಆಧರಿಸಿ ನೇಮಕಾತಿ ಮಾಡಿಕೊಳ್ಳಲಾಗುತ್ತದೆ. ಕ್ರೀಡಾ ಅರ್ಹತೆಗಳಲ್ಲಿ ಮೊದಲು ಅಂತರರಾಷ್ಟ್ರೀಯ ಮಟ್ಟದಲ್ಲಿ ನಂತರ ರಾಷ್ಟ್ರೀಯ ಮಟ್ಟದಲ್ಲಿ ನಂತರ ರಾಜ್ಯ ನಂತರ ವಿಶ್ವವಿದ್ಯಾಲಯಗಳ ಮಟ್ಟದಲ್ಲಿ ಭಾಗವಹಿಸಿದವರಿಗೆ ಆದ್ಯತೆ ನೀಡಲಾಗುತ್ತದೆ.

ಅರ್ಜಿ ಸಲ್ಲಿಸುವ ವಿಳಾಸ: https://www.karnatakapost.gov.in/ ವೆಬ್‌ ಸೈಟ್‌ನಲ್ಲಿ  ಅರ್ಜಿಯನ್ನು ಡೌನ್ ಲೋಡ್ ಮಾಡಿಕೊಂಡು ಅಗತ್ಯ ದಾಖಲೆಗಳ ನಕಲು ಲಗತ್ತಿಸಿ The Assistant Director (R & E) Chief Postmaster General Karnataka Circle Bengaluru ವಿಳಾಸಕ್ಕೆ ಸ್ಪೀಡ್ ಪೋಸ್ಟ್ ಅಥವಾ ರಿಜಿಸ್ಟರ್ ಪೋಸ್ಟ್ ಮಾಡಬೇಕು.

ಮತ್ತಷ್ಟು ಮಾಹಿತಿಯನ್ನು ಅಧಿಕೃತ ಅಧಿಸೂಚನೆಯಲ್ಲಿ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ.

Follow Us:
Download App:
  • android
  • ios