513 ಹುದ್ದೆಗಳಿಗೆ ಇಂಡಿಯನ್ ಆಯಿಲ್ ಕಂಪನಿ ನೇಮಕಾತಿ, 1.05 ಲಕ್ಷ ರೂ.ವರೆಗೆ ಸಂಬಳ
ಸಾರ್ವಜನಿಕ ವಲಯದ ಪ್ರಮುಖ ಕಂಪನಿಯಾಗಿರುವ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ ನೇಮಕಾತಿ ಪ್ರಕ್ರಿಯೆಯನ್ನು ಆರಂಭಿಸಿದೆ. ಒಟ್ಟು 513 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದರೆ. ಆಯ್ಕೆಯಾದವರಿಗೆ ತಿಂಗಳಿಗೆ 1.05 ಲಕ್ಷ ರೂ.ವರೆಗೆ ಸಂಬಳವಿದೆ. ಅರ್ಜಿ ಸಲ್ಲಿಸಲು ಅಕ್ಟೋಬರ್ 12 ಕೊನೆಯ ದಿನವಾಗಿದೆ. ಆಸಕ್ತರು ಅರ್ಜಿ ಸಲ್ಲಿಸಬಹುದು.
ಸರ್ಕಾರಿ ಸ್ವಾಮ್ಯದ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ (Indian Oil Corporation Limited) ಅಥವಾ ಐಒಸಿಎಲ್(IOCL), ನಿರುದ್ಯೋಗಿಗಳಿಗೆ ಬಂಪರ್ ಆಫರ್ ನೀಡಿದೆ. ಭಾರತದಾದ್ಯಂತ ಖಾಲಿ ಇರುವ 513 ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲು ಮುಂದಾಗಿದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಬರೋಬ್ಬರಿ 1.05 ಲಕ್ಷ ರೂ.ವರೆಗೆ ವೇತನ ಸಿಗಲಿದೆ. ಅಧಿಸೂಚನೆ ಬಗ್ಗೆ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ.
ಐಒಸಿಎಲ್ ನೇಮಕಾತಿಯಲ್ಲಿ ಜೂನಿಯರ್ ಇಂಜಿನಿಯರ್ ಮತ್ತು ಇತರ ಹಲವು ಹುದ್ದೆಗಳ ಅನುಭವಿ ಕಾರ್ಯನಿರ್ವಾಹಕೇತರ ಸಿಬ್ಬಂದಿಯ 513 ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ (Indian Oil Corporation Limited) ಅಥವಾ ಐಒಸಿಎಲ್ ನೇಮಕಾತಿ 2021ನೇಗಾಗಿ ಅಧಿಕೃತ ವೆಬ್‌ಸೈಟ್‌ನಲ್ಲಿ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ನಿಗಮದ ಅಧಿಕೃತ ವೆಬ್‌ಸೈಟ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ.
ಆಯಿಲ್ ಇಂಡಿಯಾ ನೇಮಕಾತಿ: ಅಧಿಕಾರಿ ಹುದ್ದೆಗಳಿಗೆ ಸೂಪರ್ ಸಂಬಳ
ಆಯ್ಕೆಯಾದ ಅಭ್ಯರ್ಥಿಗಳನ್ನು ಗುವಾಹಟಿ(Guwahati), ಬಿಹಾರ(Bihar), ಗುಜರಾತ್(Gujarat), ಪಶ್ಚಿಮ ಬಂಗಾಳ(West Bengal), ಉತ್ತರ ಪ್ರದೇಶ(U.P), ಒಡಿಶಾ(Orissa) ಮತ್ತು ಇತರ ಪ್ರದೇಶಗಳಲ್ಲಿರುವ ಸಂಸ್ಕರಣಾಗಾರಗಳು ಅಥವಾ ಪೆಟ್ರೋಕೆಮಿಕಲ್ ಘಟಕಗಳಲ್ಲಿ ಕೆಲಸಕ್ಕೆ ನಿಯೋಜಿಸಲಾಗುತ್ತದೆ. ಸಂಬಳ 25,000 ದಿಂದ 1,05,500 ರೂ.ವರೆಗೆ ಸಿಗಲಿದೆ.
ಅಭ್ಯರ್ಥಿಗಳು ಆನ್‌ಲೈನ್ ಅರ್ಜಿ ಸಲ್ಲಿಸುವ ಮೊದಲು ಶೈಕ್ಷಣಿಕ ಅರ್ಹತೆ ಮತ್ತು ಇತರ ಅರ್ಹತಾ ಮಾನದಂಡಗಳ ವಿವರಗಳಿಗಾಗಿ ಅಧಿಸೂಚನೆಯನ್ನು ಎಚ್ಚರಿಕೆಯಿಂದ ಓದಬೇಕು.
ಜೂನಿಯರ್ ಇಂಜಿನಿಯರಿಂಗ್ ಸಹಾಯಕ- IV, ಪ್ರೊಡಕ್ಷನ್, ಜೂನಿಯರ್ ಇಂಜಿನಿಯರಿಂಗ್ ಅಸಿಸ್ಟೆಂಟ್- IV, P&U, ಜೂನಿಯರ್ ಇಂಜಿನಿಯರಿಂಗ್ ಅಸಿಸ್ಟೆಂಟ್- IV, ಎಲೆಕ್ಟ್ರಿಕಲ್, ಅಥವಾ ಜೂನಿಯರ್ ಟೆಕ್ನಿಕಲ್ ಅಸಿಸ್ಟೆಂಟ್- IV, ಜೂನಿಯರ್ ಇಂಜಿನಿಯರಿಂಗ್ ಅಸಿಸ್ಟೆಂಟ್- IV, P & U-O & M, ಜೂನಿಯರ್ ಕ್ವಾಲಿಟಿ ಕಂಟ್ರೋಲ್ ಅನಲಿಸ್ಟ್- IV, ಮತ್ತು ಇತರ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ನೌಕಾಪಡೆ ಎಸ್‌ಎಸ್‌ಸಿ 181 ಅಧಿಕಾರಿಗಳ ನೇಮಕಾತಿಗೆ ಶುರು
ಜ್ಯೂನಿಯರ್ ಇಂಜಿನಿಯರಿಂಗ್ ಅಸಿಸ್ಟೆಂಟ್(Junior Engineering Assistant)- IV (ಪ್ರೊಡಕ್ಷನ್) -- 296 ಹುದ್ದೆಗಳು, ಜ್ಯೂನಿಯರ್ ಇಂಜಿನಿಯರಿಂಗ್ ಅಸಿಸ್ಟೆಂಟ್- IV (P&U) -- 35 ಹುದ್ದೆಗಳು, ಜ್ಯೂನಿಯರ್ ಇಂಜಿನಿಯರಿಂಗ್ ಅಸಿಸ್ಟೆಂಟ್ - IV (ಎಲೆಕ್ಟ್ರಿಕಲ್)/ಜ್ಯೂನಿಯರ್ ಟೆಕ್ನಿಕಲ್ ಅಸಿಸ್ಟೆಂಟ್ – IV (P&U-O&M) -- 65 ಹುದ್ದೆಗಳು, ಜ್ಯೂನಿಯರ್ ಇಂಜಿನಿಯರಿಂಗ್ ಅಸಿಸ್ಟೆಂಟ್ - IV (ಮೆಕ್ಯಾನಿಕಲ್)/ ಜ್ಯೂನಿಯರ್ ಟೆಕ್ನಿಕಲ್ ಅಸಿಸ್ಟೆಂಟ್ - IV -- 32 ಹುದ್ದೆಗಳು, ಜ್ಯೂನಿಯರ್ ಇಂಜಿನಿಯರಿಂಗ್ ಅಸಿಸ್ಟೆಂಟ್- IV (ಇನ್ಸ್ ಟ್ರುಮೆಂಟೇಷನ್)/ಜ್ಯೂನಿಯರ್ ಟೆಕ್ನಿಕಲ್ ಅಸಿಸ್ಟೆಂಟ್ IV -- 37 ಹುದ್ದೆಗಳು, ಜ್ಯೂನಿಯರ್ ಕ್ವಾಲಿಟಿ ಕಂಟ್ರೋಲ್ ಅನಾಲಿಸ್ಟ್ - IV -- 29 ಹುದ್ದೆಗಳು, ಜ್ಯೂನಿಯರ್ ಇಂಜಿನಿಯರಿಂಗ್ ಅಸಿಸ್ಟೆಂಟ್- IV (ಫೈರ್ & ಸೇಫ್ಟಿ) -- 14 ಹುದ್ದೆಗಳು, ಜ್ಯೂನಿಯರ್ ಮೆಟೀರಿಯಲ್ ಅಸಿಸ್ಟೆಂಟ್– IV / ಜ್ಯೂನಿಯರ್ ಟೆಕ್ನಾಲಜಿ ಅಸಿಸ್ಟೆಂಟ್ - IV -- 04 ಹುದ್ದೆಗಳು, ಜ್ಯೂನಿಯರ್ ನರ್ಸಿಂಗ್ ಅಸಿಸ್ಟೆಂಟ್- IV -- 01 ಹುದ್ದೆ ಸೇರಿ ಒಟ್ಟು ೫೩೬ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗುತ್ತದೆ.
ಸೆಪ್ಟೆಂಬರ್ 30, 2021 ರ ವೇಳೆಗೆ ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷಗಳು ಮತ್ತು ಗರಿಷ್ಠ ವಯಸ್ಸು 26 ವರ್ಷ ಆಗಿರಬೇಕು. ಸರ್ಕಾರಿ ನಿಯಮಗಳ ಪ್ರಕಾರ ಕೆಲವು ಸಡಿಲಿಕೆಗಳನ್ನು ನೀಡಲಾಗುತ್ತದೆ.ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ iocl.com ಗೆ ಭೇಟಿ ನೀಡಿ ಅರ್ಜಿಗಳನ್ನು ಸಲ್ಲಿಸಬೇಕು. ಈ ಆನ್‌ಲೈನ್ ಅರ್ಜಿಯ ಲಿಂಕ್ ಅಕ್ಟೋಬರ್ 12, 2021 ರ ಸಂಜೆ 5ರವರೆಗೆ ತೆರೆದಿರುತ್ತದೆ.
NIOS ನೇಮಕಾತಿ: 115 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ
ಆನ್‌ಲೈನ್ ಮೋಡ್ ಮೂಲಕ ಸಲ್ಲಿಸಿದ ಅರ್ಜಿಗಳನ್ನು ಮಾತ್ರ ಸ್ವೀಕರಿಸಲಾಗುತ್ತದೆ. ಆನ್‌ಲೈನ್ ಅರ್ಜಿಯನ್ನು ಅಭ್ಯರ್ಥಿಗಳು ಯಶಸ್ವಿಯಾಗಿ ಸಲ್ಲಿಸಿದ ನಂತರ ತಮ್ಮ ದಾಖಲೆಗಳನ್ನು ಸಹ ಕಳುಹಿಸಬೇಕಾಗುತ್ತದೆ. ಸರಿಯಾಗಿ ಸಹಿ ಮಾಡಿದ ಆನ್‌ಲೈನ್ ಅರ್ಜಿಯ ಪ್ರಿಂಟ್ ಔಟ್, ಸ್ವಯಂ ದೃಢೀಕರಣದ ಅಡಿಯಲ್ಲಿ ಬಣ್ಣದ ಫೋಟೋ ಮತ್ತು ಅಗತ್ಯ ದಾಖಲೆಗಳ ಸ್ವಯಂ ದೃಢೀಕೃತ ಪ್ರತಿಗಳನ್ನು ಸಂಬಂಧಿತ ಪ್ರಾಧಿಕಾರಕ್ಕೆ ಅಕ್ಟೋಬರ್ 23, 2021 ರೊಳಗೆ ಪೋಸ್ಟ್ ಮಾಡಬೇಕು.