71 ಹುದ್ದೆಗೆ ಐಒಸಿಎಲ್ ನೇಮಕಾತಿ: ಸಖತ್ ಸಂಬಳ, ಅರ್ಜಿ ಸಲ್ಲಿಕೆ ಆರಂಭ
ಸಾರ್ವಜನಿಕ ವಲಯದ ಪ್ರಮುಖ ಪೆಟ್ರೋಲಿಯಂ ರಿಫೈನಿಂಗ್ ಕಂಪನಿಯಾಗಿರುವ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ (Indian Oil Corporation limited- IOCL) 71 ಸಹಾಯಕ ಗುಣಮಟ್ಟ ನಿಯಂತ್ರಣ ಅಧಿಕಾರಿಗಳನ್ನು ನೇಮಕ ಮಾಡಿಕೊಳ್ಳುತ್ತಿದೆ. ಈಗಾಗಲೇ ಅರ್ಜಿ ಸಲ್ಲಿಕೆ ಶುರುವಾಗಿದೆ. ಆಯ್ಕೆಯಾದವರಿಗೆ ಆಕರ್ಷಕ ಸಂಬಳವೂ ಇದೆ.
ಕೇಂದ್ರ ಸರ್ಕಾರಿ ಸ್ವಾಮ್ಯದಲ್ಲಿರುವ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ (Indian Oil Corporation limited- IOCL) ಪೆಟ್ರೋಲಿಯಂ ರಿಫೈನಿಂಗ್ ಕಂಪನಿಯಾಗಿದ್ದು, ಹೆಸರುವಾಸಿಯಾಗಿದೆ. ಸಾರ್ವಜನಿಕ ವಲಯದ ಈ ಕಂಪನಿಯು ತನ್ನ ದಕ್ಷ ಕಾರ್ಯನಿರ್ವಹಣೆಯಿಂದಾಗಿ ಹೆಚ್ಚು ಮನ್ನಣೆಯನ್ನು ಗಳಿಸಿದೆ. ಈ ಕಂಪನಿಯು ಈಗ ನೇಮಕಾತಿಯನ್ನು ಶುರು ಮಾಡಿದೆ.
ಕೇಂದ್ರ ಸರ್ಕಾರದ ಪೆಟ್ರೋಲಿಯಂ ಹಾಗೂ ನೈಸರ್ಗಿಕ ಅನಿಲ ಸಚಿವಾಲಯ ಅಧೀನದಲ್ಲಿ ಕಾರ್ಯನಿರ್ವಹಿಸುವ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಕಂಪನಿಯು 71 ಸಹಾಯಕ ಗುಣಮಟ್ಟ ನಿಯಂತ್ರಣ ಅಧಿಕಾರಿಗಳ (Assistant Quality Control Officer) ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ.
ಈ ಹುದ್ದೆಗಳಿಗೆ ಅಕ್ಟೋಬರ್ 1 ರಿಂದ ಅರ್ಜಿ ಪ್ರಕ್ರಿಯೆ ಆರಂಭವಾಗಿದ್ದು, ಆನ್‌ಲೈನ್(Online) ಮೂಲಕ ಅರ್ಜಿ ನಮೂನೆಯನ್ನು ಭರ್ತಿ ಮಾಡಬಹುದು. ಅರ್ಜಿ ಸಲ್ಲಿಕೆಗೆ ಅಕ್ಟೋಬರ್ 22 ಕೊನೆಯ ದಿನಾಂಕ ಆಗಿದೆ. ಆಸಕ್ತ ಅಭ್ಯರ್ಥಿಗಳು IOCL ನ ಅಧಿಕೃತ ವೆಬ್‌ಸೈಟ್ iocl.com ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.
ರೇಲ್ವೆ ನೇಮಕಾತಿ: 3093 ಅಪ್ರೆಂಟಿಸ್ ಹುದ್ದೆಗಳ ನೇಮಕಕ್ಕೆ ಅರ್ಜಿ ಆಹ್ವಾನ
ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ (IOCL) ನೇಮಕಾತಿಗೆ ಸಾಮಾನ್ಯ, ಒಬಿಸಿ (OBC) ಮತ್ತು ಇಡಬ್ಲ್ಯೂಎಸ್ (EWS) ಅಭ್ಯರ್ಥಿಗಳು ಎಸ್‌ಬಿಐ ಇ-ಕಲೆಕ್ಟ್ (SBI e collect) ಮೂಲಕ ಅರ್ಜಿ ಶುಲ್ಕ 300 ರೂ. ಸಲ್ಲಿಸಬೇಕು. ಆನ್‌ಲೈನ್ ಅರ್ಜಿಯನ್ನು ಸಲ್ಲಿಸಿದ ನಂತರ, ಅಗತ್ಯ ದಾಖಲೆಗಳ ಹಾರ್ಡ್ ಕಾಪಿಯನ್ನು ಅಂಚೆ ಮೂಲಕ ಕಳುಹಿಸಬೇಕು.
ಲಿಖಿತ ಪರೀಕ್ಷೆ ಮೂಲಕ ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಲಿಖಿತ ಪರೀಕ್ಷೆ (ವಸ್ತುನಿಷ್ಠ ಪ್ರಕಾರ, ಸಾಮಾನ್ಯ ಸಾಮರ್ಥ್ಯ ಮತ್ತು ಶಿಸ್ತು ಜ್ಞಾನ ಕುರಿತ ಪ್ರಶ್ನೆ ಗಳಿರುತ್ತವೆ). ಪರೀಕ್ಷೆಯಲ್ಲಿ ಆಯ್ಕೆಯಾದ ಬಳಿಕ ಗುಂಪು ಚರ್ಚೆ/ ವೈಯಕ್ತಿಕ ಸಂದರ್ಶನದ ಆಧಾರದ ಮೇಲೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.
ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ (IOCL)ನ 71 ಹುದ್ದೆಗಳ ಪೈಕಿ ಸಾಮಾನ್ಯ ವರ್ಗಕ್ಕೆ 28 ಹುದ್ದೆಗಳು, ಎಸ್ಸಿ(SC) ವರ್ಗಕ್ಕೆ 10 ಹುದ್ದೆಗಳು, ಎಸ್ಟಿ(ST) ವರ್ಗಕ್ಕೆ 7 ಹುದ್ದೆಗಳು , ಒಬಿಸಿ (OBC) ವರ್ಗಕ್ಕೆ19 ಹುದ್ದೆ, ಮತ್ತು EWS ವರ್ಗಕ್ಕೆ 7 ಖಾಲಿ ಹುದ್ದೆಗಳನ್ನ ಮೀಸಲಿಡಲಾಗಿದೆ. ಸಾಮಾನ್ಯ ಮತ್ತು EWS ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿ 30 ವರ್ಷಆಗಿರುತ್ತದೆ.
ಎಸ್‌ಬಿಐ ಎಸ್‌ಸಿಒ ನೇಮಕಾತಿ: 606 ಹುದ್ದೆಗಳಿಗೆ ಅರ್ಜಿ ಆಹ್ವಾನ
ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ (IOCL) ಗೆ ಆಯ್ಕೆಯಾಗುವ ಅಭ್ಯರ್ಥಿಗಳನ್ನು ಆರಂಭದಲ್ಲಿ ಶುದ್ದೀಕರಣ ಘಟಕ ಅಥವಾ ಮಾರ್ಕೆಟಿಂಗ್(Marketing) ವಿಭಾಗದ ಯಾವುದೇ ಘಟಕಗಳು ಅಥವಾ ಸ್ಥಳಗಳಲ್ಲಿ ಸೇವೆಗೆ ನಿಯೋಜನೆ ಮಾಡಬಹುದು. ಅಲ್ಲದೆ ಅವರ ಸೇವಾ ಅವಧಿಯಲ್ಲಿ ಭಾರತದಲ್ಲಿ ಅಥವಾ ಅಂಗಸಂಸ್ಥೆ ಅಥವಾ ಜಂಟಿ ಉದ್ಯಮಗಳಲ್ಲಿ ಎಲ್ಲಿಯಾದರೂ ಹುದ್ದೆಗೆ ವರ್ಗಾಯಿಸಬಹುದು. ಆಯ್ಕೆಯಾದವರಿಗೆ ರೂ 40,000 ರಿಂದ 1,40,000 ರೂ.ವರೆಗೂ ವೇತನ ಸಿಗಲಿದೆ.
ರಸಾಯನಶಾಸ್ತ್ರ (Chemistry) ಅಥವಾ ಕೈಗಾರಿಕಾ ರಸಾಯನಶಾಸ್ತ್ರ (Industrial Chemistry) ಸೇರಿದಂತೆ ರಸಾಯನಶಾಸ್ತ್ರದಲ್ಲಿ ಎಂಎಸ್ಸಿ (MSc) ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಆದ್ರೆ ಬಯೋಕೆಮಿಸ್ಟ್ರಿ (Bio Chemistry), ಫಾರ್ಮಸಿ (Pharmacy), ಟಾಕ್ಸಿಕಾಲಜಿ (Toxicology), ಜಿಯೋಕೆಮಿಸ್ಟ್ರಿ (Geochemistry), ಫಾರ್ಮಕಾಲಜಿ (Pharmacology) ಅಥವಾ ಆಹಾರ ತಂತ್ರಜ್ಞಾನ (Food Technology)ದಂತಹ ಯಾವುದೇ ಇತರ ರಸಾಯನಶಾಸ್ತ್ರ (Chemistry) ವಿಭಾಗದಲ್ಲಿ ಸ್ನಾತಕೋತ್ತರ ಪದವೀಧರರ ಅರ್ಜಿಗಳನ್ನು ಖಾಲಿ ಹುದ್ದೆಗಳಿಗೆ ಪರಿಗಣಿಸಲಾಗುವುದಿಲ್ಲ.
ಅರ್ಜಿದಾರರು ಪರೀಕ್ಷೆಯಲ್ಲಿ ಕನಿಷ್ಠ ಎರಡು ವರ್ಷಗಳ ಅನುಭವ, R & D ಪೆಟ್ರೋಲಿಯಂನಲ್ಲಿ ಗುಣಮಟ್ಟದ ನಿಯಂತ್ರಣ, ಪೆಟ್ರೋ-ರಾಸಾಯನಿಕ, ಪಾಲಿಮರ್, ರಸಗೊಬ್ಬರ ಘಟಕ ಪ್ರಯೋಗಾಲಯಗಳು ಮತ್ತು/ ಅಥವಾ ಎನ್‌ಎಬಿಎಲ್ ಮಾನ್ಯತೆ ಪಡೆದ ಪ್ರಯೋಗಾಲಯದಲ್ಲಿ ಅನುಭವ ಹೊಂದಿರಬೇಕು. ಸಾಮಾನ್ಯ ಪದವಿ, OBC (NCL) ಅಥವಾ EWS ವರ್ಗಗಳಿಗೆ ಸೇರಿದ ಅಭ್ಯರ್ಥಿಗಳು ಅರ್ಹತಾ ಪದವಿ ಪರೀಕ್ಷೆಯಲ್ಲಿ ಕನಿಷ್ಠ 60% ಅಂಕಗಳನ್ನು ಪಡೆದಿರಬೇಕು. ಆದಾಗ್ಯೂ, ಅರ್ಹತಾ ಪದವಿಗಳಲ್ಲಿನ ಅಂಕಗಳನ್ನು ಪರಿಶಿಷ್ಟ ಜಾತಿ (ಎಸ್‌ಸಿ), ಪರಿಶಿಷ್ಟ ಪಂಗಡ (ಎಸ್‌ಟಿ) ಅಥವಾ ಬೆಂಚ್‌ಮಾರ್ಕ್ ಅಂಗವೈಕಲ್ಯ (ಪಿಡಬ್ಲ್ಯುಬಿಡಿ) ಅಭ್ಯರ್ಥಿಗಳಿಗೆ 55% ರಷ್ಟು ಸಡಿಲಿಕೆ ನೀಡಲಾಗಿದೆ.
ಇನ್ನು ಕನ್ನಡದಲ್ಲೇ ಬರೆಯಬಹುದು ಬ್ಯಾಂಕಿಂಗ್ ಪರೀಕ್ಷೆ