ನವದೆಹಲಿ, (ಜುಲೈ.12):  ಭಾರತೀಯ ಸೇನಾ  ಡೆಂಟಲ್ ಕಾರ್ಪ್ಸ್ ನಲ್ಲಿ ಶಾರ್ಟ್ ಸರ್ವೀಸ್ ಕಮಿಷನ್ಡ್ ಆಫೀಸರ್ ಆಗಲು ಅರ್ಹ ಭಾರತೀಯ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಒಟ್ಟು 43 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ದಿನಾಂಕ ಇದೇ ಜುಲೈ 30ರೊಳಗೆ ಅರ್ಜಿ ಸಲ್ಲಿಸಲು ಕೋರಲಾಗಿದೆ.

ಜಾಬ್ಸ್ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

ವಿದ್ಯಾರ್ಹತೆ: ಅಂಗೀಕೃತ ಕಾಲೇಜು/ ಸಂಸ್ಥೆಯಿಂದ ಅಂತಿಮ ಬಿಡಿಎಸ್​​ನಲ್ಲಿ ಶೇ. 55 ಅಂಕ ಗಳಿಸಿ (ಅಥವಾ ಎಂಡಿಎಸ್) ಪಾಸಾಗಿರಬೇಕು. ಒಂದು ವರ್ಷದ ಕಡ್ಡಾಯ ರೋಟರಿ ಇಂಟರ್ನ್​​​ಷಿಪ್ ಮುಗಿಸಿರಬೇಕು. 

ವಯೋಮಿತಿ: ಗರಿಷ್ಠ ವಯೋಮಿತಿ 45 ವರ್ಷ ನಿಗದಿಪಡಿಸಲಾಗಿದೆ.

ಆಯ್ಕೆ ವಿಧಾನ: ಈ ಹುದ್ದೆಗೆ ಅರ್ಜಿ ಸಲ್ಲಿದ ಅಭ್ಯರ್ಥಿಗಳನ್ನ ಸಂದರ್ಶನ ಮತ್ತು ವೈದ್ಯಕೀಯ ಪರೀಕ್ಷೆ ಮೂಲ ಆಯ್ಕೆ ಮಾಡಲಾಗುತ್ತದೆ.

ಆನ್​ಲೈನ್ ಅರ್ಜಿ ಹಾಗೂ ಹೆಚ್ಚಿನ ಮಾಹಿತಿಗೆ ವೆಬ್​ಸೈಟ್ ಗೆ www.joinindianarmy.nic.in ಭೇಟಿ ನೀಡಿ.