SSLC, ಡಿಗ್ರಿ ಮುಗಿಸಿದವರಿಗೆ ಆದಾಯ ತೆರಿಗೆ ಇಲಾಖೆಯಲ್ಲಿ ಉದ್ಯೋಗಾವಕಾಶ
* ಆದಾಯ ತೆರಿಗೆ ಇಲಾಖೆಯಲ್ಲಿ ನೇಮಕಾತಿ
* ಟ್ಯಾಕ್ಸ್ ಅಸಿಸ್ಟಂಟ್, ಮಲ್ಟಿ ಟಾಸ್ಕಿಂಗ್ ಸ್ಟಾಫ್ ಹುದ್ದೆ ಭರ್ತಿಗೆ ಅರ್ಜಿ ಆಹ್ವಾನ
* ಇದೇ ನವೆಂಬರ್ 15ರೊಳಗೆ ಅರ್ಜಿ ಸಲ್ಲಿಸಲು ಕೊನೆ ದಿನ
ನವದೆಹಲಿ, (ಅ.12): ಆದಾಯ ತೆರಿಗೆ ಇಲಾಖೆಯಲ್ಲಿ (Income Tax Department Recruitment) ಖಾಲಿ ಇರುವ 21 ಹುದ್ದೆಗಳ ನೇಮಕಾತಿಗೆ (Recruitment) ಅರ್ಜಿ ಆಹ್ವಾನಿಸಲಾಗಿದೆ.
ಟ್ಯಾಕ್ಸ್ ಸಹಾಯಕರು ಮತ್ತು ಸ್ಟೆನೋಗ್ರಾಫರ್ Grade-II, ಮಲ್ಟಿ ಟಾಸ್ಕಿಂಗ್ ಸ್ಟಾಫ್ ಸೇರಿದಂತೆ ಒಟ್ಟು 21 ಹುದ್ದೆಗಳ (Jobs( ಭರ್ತಿಗೆ ಆನ್‌ಲೈನ್ (Online) ಹಾಗೂ ಆಫ್ಲೈನ್ (off Line) ಮೂಲಕ ಅರ್ಜಿ ಆಹ್ವಾನಿಸಲಾಗಿದ್ದು, ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ದಿನಾಂಕ ಇದೇ ನವೆಂಬರ್ 15ರೊಳಗೆ ಅರ್ಜಿ ಸಲ್ಲಿಸಲು ಕೋರಲಾಗಿದೆ.
ಇನ್ನಷ್ಟು ಜಾಬ್ಸ್ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಕೇಂದ್ರ ಸರ್ಕಾರದ ಹುದ್ದೆಗೆ ಸೇರಬೇಕು ಎನ್ನುವವರಿಗೆ ಇದು ಉತ್ತಮ ಅವಕಾಶವಾಗಿದೆ. ನವದೆಹಲಿಯ ಕಚೇರಿಗೆ ಈ ನೇಮಕಾತಿ ನಡೆಯಲಿದೆ.
ವಿದ್ಯಾರ್ಹತೆ (Education):
1. ಟ್ಯಾಕ್ಸ್ ಸಹಾಯಕರು: ಈ ಹುದ್ದೆಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಯು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ ಪೂರ್ಣಗೊಳಿಸಿರಬೇಕು.
2. ಸ್ಟೆನೋಗ್ರಾಫರ್ Grade-II: ಅಭ್ಯರ್ಥಿಯು 12ನೇ ತರಗತಿ ಅಥವಾ ತತ್ಸಮಾನ ವಿದ್ಯಾರ್ಹತೆಯನ್ನು ಮಾನ್ಯತೆ ಪಡೆದ ಬೋರ್ಡ್ ಅಥವಾ ವಿಶ್ವವಿದ್ಯಾಲಯದಿಂದ ಪಡೆದಿರಬೇಕು.
3. ಮಲ್ಟಿ ಟಾಸ್ಕಿಂಗ್ ಸ್ಟಾಫ್: ಎಸ್‌ಎಸ್‌ಎಲ್‌ಸಿ ಪಾಸ್ ಮಾಡಿರಬೇಕು.
ವಯೋಮಿತಿ (Age):
* ಟ್ಯಾಕ್ಸ್ ಸಹಾಯಕರು: 18-30 ವರ್ಷ ನಿಗರಿಪಡಿಸಲಾಗಿದೆ.
* ಟ್ಯಾಕ್ಸ್ ಅಸಿಸ್ಟಂಟ್ ಹುದ್ದೆ: 18 ರಿಂದ 27 ವರ್ಷದವರು ಅರ್ಜಿ ಸಲ್ಲಿಸಬಹುದು.
* ಮಲ್ಟಿ ಟಾಸ್ಕಿಂಗ್ ಸ್ಟಾಫ್: 18-25 ವರ್ಷ.
ಕೇಂದ್ರ ಸರ್ಕಾರಿ ನೇಮಕಾತಿ ನಿಯಮಗಳ ಪ್ರಕಾರ ವಯೋಮಿತಿ ಸಡಿಲಿಕೆ ನಿಯಮಗಳು ಅನ್ವಯವಾಗಲಿವೆ.
ಆಯ್ಕೆ ವಿಧಾನ (Selection Process): ಲಿಖಿತ ಪರೀಕ್ಷೆ ಮತ್ತು ಸಂದರ್ಶನ
ಅರ್ಜಿ ಸಲ್ಲಿಕೆ ವಿಧಾನ (how to apply)
ಅಭ್ಯರ್ಥಿಗಳು ಆಫ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದ್ದು, ಈ ಕೆಳಗಂಡ ವಿಳಾಸಕ್ಕೆ ನವೆಂಬರ್ 15ರೊಳಗೆ ಅರ್ಜಿ ಸಲ್ಲಿಕೆ ಮಾಡಬೇಕು
ಆದಾಯ ತೆರಿಗೆ ಉಪ ಆಯುಕ್ತರು (Hqrs.) (ಸಿಬ್ಬಂದಿ) (NG), 3ನೇ ಮಹಡಿ, ಕೊಠಡಿ ಸಂಖ್ಯೆ 378A, ಕೇಂದ್ರ ಆದಾಯ ಕಟ್ಟಡ, I.P. ಎಸ್ಟೇಟ್, ನವದೆಹಲಿ - 110002