ನವದೆಹಲಿ, (ಫೆ.06):  ಗುಮಾಸ್ತ ಹುದ್ದೆಯ ಪರೀಕ್ಷಾ ಫಲಿತಾಂಶವನ್ನು ಐಬಿಪಿಎಸ್ ಆನ್​ಲೈನ್​ನಲ್ಲಿ ಬಿಡುಗಡೆಗೊಳಿಸಿದೆ.

ಕಳೆದ ವರ್ಷ ಡಿಸೆಂಬರ್ 5, 12 ಹಾಗೂ 13ರಂದು ನಡೆದ ಪರೀಕ್ಷೆಯಲ್ಲಿ ಭಾಗವಹಿಸಿರುವ ಅಭ್ಯರ್ಥಿಗಳು, IBPS Clerk prelims result 2020 ಫಲಿತಾಂಶವನ್ನು ಪರಿಶೀಲಿಸಬಹುದು.

ಜಾಬ್ಸ್ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಮ್ಮ ರಿಜಿಸ್ಟ್ರೇಶನ್ ನಂಬರ್ ಅಥವಾ ಕ್ರಮ ಸಂಖ್ಯೆ (ರೋಲ್ ನಂಬರ್) ದಾಖಲಿಸಿ ಲಾಗ್​ಇನ್ ಆಗುವ ಮೂಲಕ ಫಲಿತಾಂಶ ಪಡೆದುಕೊಳ್ಳಬಹುದು. 

ಲಾಗ್​ಇನ್ ಆಗಲು ರಿಜಿಸ್ಟ್ರೇಶನ್ ನಂಬರ್ ಜೊತೆಗೆ, ಪಾಸ್​ವರ್ಡ್ ಮತ್ತು ಹುಟ್ಟಿದ ದಿನಾಂಕವನ್ನು ಕೂಡ ನಮೂದಿಸಬೇಕು.

 ಫಲಿತಾಂಶದಲ್ಲಿ ಅಭ್ಯರ್ಥಿಯ ಅರ್ಹತಾ ವಿವರಗಳು ಮತ್ತು ಇತರ ಪ್ರಮುಖ ವಿವರಗಳು ಇರಲಿದೆ. ಪ್ರಿಲಿಮ್ಸ್ ಪರೀಕ್ಷೆಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳು, ಮುಂದಿನ ಹಂತದಲ್ಲಿ IBPS Clerk 2020 mains ಪರೀಕ್ಷೆಯನ್ನು ಎದುರಿಸಬೇಕಾಗುತ್ತದೆ.