GAIL India Recruitment 2022: ಗೈಲ್ ಇಂಡಿಯಾದಲ್ಲಿ MBBS, MD ಪದವೀಧರರಿಗೆ ಉದ್ಯೋಗಾವಕಾಶ
ಗ್ಯಾಸ್ ಅಥಾರಿಟಿ ಆಫ್ ಇಂಡಿಯಾ ಲಿಮಿಟೆಡ್ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಜನವರಿ 20 ರೊಳಗೆ ಅರ್ಜಿ ಸಲ್ಲಿಸಿ
ಬೆಂಗಳೂರು: ಗ್ಯಾಸ್ ಅಥಾರಿಟಿ ಆಫ್ ಇಂಡಿಯಾ ಲಿಮಿಟೆಡ್ (Gas Authority of India Limited- GAIL) ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಮುಖ್ಯ ವ್ಯವಸ್ಥಾಪಕ ಮತ್ತು ಹಿರಿಯ ಅಧಿಕಾರಿ ಹುದ್ದೆ ಸೇರಿ ಒಟ್ಟು 9 ಹುದ್ದೆಗಳ ಭರ್ತಿಗೆ ಗೈಲ್ ಮುಂದಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಜನವರಿ 20 ಕೊನೆಯ ದಿನವಾಗಿದೆ. ಹೆಚ್ಚಿನ ಮಾಹಿತಿಗೆ ಗೈಲ್ ನ ಅಧಿಕೃತ ವೆಬ್‌ತಾಣ https://gailonline.com/ ಗೆ ಭೇಟಿ ನೀಡಿ.
ಹುದ್ದೆಗಳ ವಿವರ: ಗ್ಯಾಸ್ ಅಥಾರಿಟಿ ಆಫ್ ಇಂಡಿಯಾ ಲಿಮಿಟೆಡ್ ನ ಒಟ್ಟು 9 ಹುದ್ದೆಗಳಲ್ಲಿ ಮುಖ್ಯ ವ್ಯವಸ್ಥಾಪಕ ( Chief Manager)-2, ಹಿರಿಯ ಅಧಿಕಾರಿ ಹುದ್ದೆ (Senior Officer)-7 ಹುದ್ದೆಗಳು ಖಾಲಿ ಇದೆ.
ಶೈಕ್ಷಣಿಕ ವಿದ್ಯಾರ್ಹತೆ: ಗೈಲ್ ಇಂಡಿಯಾದ ಮುಖ್ಯ ವ್ಯವಸ್ಥಾಪಕ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಸಂಸ್ಥೆಯಿಂದ MBBS ನಲ್ಲಿ MD ಮಾಡಿರಬೇಕು. ಅಥವಾ ಜನರಲ್ ಮೆಡಿಸಿನ್ ನಲ್ಲಿ DNB ಮಾಡಿರಬೇಕು. ಹಿರಿಯ ಅಧಿಕಾರಿ ಹುದ್ದೆಗೆ ಅರ್ಜಿ ಸಲ್ಲಿಸುವವರು MBBS ಪದವಿ ಮಾಡಿರಬೇಕು.
TCS RECRUITMENT 2022: ಬೆಂಗಳೂರಿನಲ್ಲಿ ಟೆರಾ ಡೆವಲಪರ್ ಹುದ್ದೆಗೆ ಅರ್ಜಿ ಆಹ್ವಾನ
ಆಯ್ಕೆ ಪ್ರಕ್ರಿಯೆ: ಗೈಲ್ ಇಂಡಿಯಾದ ಮುಖ್ಯ ವ್ಯವಸ್ಥಾಪಕ ಮತ್ತು ಹಿರಿಯ ಅಧಿಕಾರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳನ್ನು ಆಯ್ಕೆ ಸಮಿತಿಯ ಮುಂದೆ ಗುಂಪು ಚರ್ಚೆ ಅಥವಾ ಸಂದರ್ಶನದ ಮೂಲಕ ನೇಮಿಸಲಾಗುತ್ತದೆ.
ವಯೋಮಿತಿ ಮತ್ತು ವೇತನ: ಗೈಲ್ ಇಂಡಿಯಾದ ಮುಖ್ಯ ವ್ಯವಸ್ಥಾಪಕ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಗರಿಷ್ಠ 40 ವರ್ಷವಾಗಿರಬೇಕು. ಹಿರಿಯ ಅಧಿಕಾರಿ ಹುದ್ದೆಗೆ ಅರ್ಜಿ ಸಲ್ಲಿಸುವವರಿಗೆ ಗರಿಷ್ಠ 30 ವರ್ಷವಾಗಿರಬೇಕು. ಆಯ್ಕೆಯಾದ ಅಭ್ಯರ್ಥಿಗಳಿಗೆ ಕ್ರಮವಾಗಿ 90,000-2,40,000 ರೂ ವೇತನ. ಹಾಗೂ 60,000 ದಿಂದ 1,80,000 ವೇತನ ನಿಗದಿಯಾಗಿದೆ.
ಅರ್ಜಿ ಶುಲ್ಕ: ಗ್ಯಾಸ್ ಅಥಾರಿಟಿ ಆಫ್ ಇಂಡಿಯಾ ಲಿಮಿಟೆಡ್ ನ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಸಾಮಾನ್ಯ, EWS ಮತ್ತು OBC ವರ್ಗಕ್ಕೆ ಸೇರಿದ ಅಭ್ಯರ್ಥಿಗಳು 200 ರೂ. ಅರ್ಜಿ ಶುಲ್ಕ ಪಾವತಿಸಬೇಕು. SC/ ST/ PwBD ವರ್ಗದ ಅಭ್ಯರ್ಥಿಗಳು ಯಾವುದೇ ಶುಲ್ಕ ಪಾವತಿಸಬೇಕಿಲ್ಲ.
UPSC ESE Result 2020: ಎಂಜಿನಿಯರಿಂಗ್ ಸೇವೆಗಳ ಪರೀಕ್ಷೆಯ ರಿಸರ್ವ್ ಲಿಸ್ಟ್ ಬಿಡುಗಡೆ
ಸಂಪತ್ತು ನಿರ್ವಹಣಾ ಸೇವೆಗಳ ವಿಭಾಗದಲ್ಲಿ ಹುದ್ದೆಗಳ ಭರ್ತಿಗೆ ಕರೆ ನೀಡಿದ BOB: ಬ್ಯಾಂಕ್ ಆಫ್ ಬರೋಡಾ (Bank of Baroda) ಖಾಲಿ ಇರುವ ವಿವಿಧ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಮುಂದಾಗಿದೆ. ಗುತ್ತಿಗೆ ಆಧಾರದ ಮೇಲೆ ಸಂಪತ್ತು ನಿರ್ವಹಣಾ ಸೇವೆಗಳ (Wealth Management Services) ವಿಭಾಗದಲ್ಲಿ ಖಾಲಿ ಇರುವ 58 ಹುದ್ದೆಗಳನ್ನು ತುಂಬಲು ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ. ಈಗಾಗಲೇ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದ್ದು, ಜನವರಿ 27 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಅರ್ಜಿ ಸಲ್ಲಿಸಲು ಬಯಸುವ ಅರ್ಹ ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗೆ ಬ್ಯಾಂಕ್ ಆಫ್ ಬರೋಡಾದ ಅಧಿಕೃತ ವೆಬ್‌ಸೈಟ್ bankofbaroda.in ಗೆ ಭೇಟಿ ನೀಡಿ.
ಶೈಕ್ಷಣಿಕ ವಿದ್ಯಾರ್ಹತೆ: ಬ್ಯಾಂಕ್ ಆಫ್ ಬರೋಡಾ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ ಹುದ್ದೆಗೆ ಅನುಸಾರವಾಗಿ ಪದವಿ, ಸ್ನಾತಕೋತ್ತರ ಪದವಿ ಅಥವಾ ಡಿಪ್ಲೋಮಾ ಇನ್ ಮ್ಯಾನೇಜ್‌ಮೆಂಟ್ ಮಾಡಿರಬೇಕು.
ಆಯ್ಕೆ ಪ್ರಕ್ರಿಯೆ: ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಮೊದಲಿಗೆ ಶಾರ್ಟ್ ಲಿಸ್ಟಿಂಗ್ ಮಾಡಲಾಗುತ್ತದೆ. ನಂತರ ವೈಯಕ್ತಿಕ ಸಂದರ್ಶನ ಅಥವಾ ಗುಂಪು ಚರ್ಚೆ ಅಥವಾ ಯಾವುದೇ ಇತರ ಆಯ್ಕೆ ವಿಧಾನವನ್ನು ಆಧರಿಸಿ ಆಯ್ಕೆ ಪ್ರಕ್ರಿಯೆ ನಡೆಸಲಾಗುತ್ತದೆ.
ಅರ್ಜಿ ಶುಲ್ಕ: ಬ್ಯಾಂಕ್ ಆಫ್ ಬರೋಡಾ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಸಾಮಾನ್ಯ ಮತ್ತು OBC ವರ್ಗಕ್ಕೆ ಸೇರಿದ ಅಭ್ಯರ್ಥಿಗಳು 600 ರೂ ಅರ್ಜಿ ಶುಲ್ಕ. ಮತ್ತು SC/ ST/PWD/ಮಹಿಳಾ ಅಭ್ಯರ್ಥಿಗಳು 100ರೂ ಇಂಟಿಮೇಷನ್ ಶುಲ್ಕವಾಗಿ ಪಾವತಿಸಬೇಕು.