FSSAI Recruitment 2022: ಭಾರತೀಯ ಆಹಾರ ಪ್ರಾಧಿಕಾರದಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ಸಂಸ್ಥೆಯಲ್ಲಿ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಜಿಗಳನ್ನು ಆಹ್ವಾನಿಸಿದೆ. ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ನವೆಂಬರ್ 5 ಕೊನೆಯ ದಿನವಾಗಿದೆ. 

FSSAI Recruitment 2022 notification for various 80 post gow

ನವದೆಹಲಿ (ಅ.22): ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI) ಸಂಸ್ಥೆಯಲ್ಲಿ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಸಲಹೆಗಾರರು, ಜಂಟಿ ನಿರ್ದೇಶಕರು, ಸೀನಿಯರ್ ಮ್ಯಾನೇಜರ್, ಉಪ ನಿರ್ದೇಶಕರು, ವ್ಯವಸ್ಥಾಪಕರು, ಸಹಾಯಕ ನಿರ್ದೇಶಕರು, ಉಪ ವ್ಯವಸ್ಥಾಪಕರು, ಆಡಳಿತಾಧಿಕಾರಿಗಳು, ಹಿರಿಯ ಖಾಸಗಿ ಕಾರ್ಯದರ್ಶಿ, ವೈಯಕ್ತಿಕ ಕಾರ್ಯದರ್ಶಿ, ಸಹಾಯಕ ವ್ಯವಸ್ಥಾಪಕರು, ಸಹಾಯಕ, ಜೂನಿಯರ್ ಸಹಾಯಕ ಮತ್ತು ಸಿಬ್ಬಂದಿ ಕಾರ್ಯಕರ್ತ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಸುಮಾರು 80 ಹುದ್ದೆಗಳು ಖಾಲಿ ಇದ್ದು ಹೆಚ್ಚಿನ ಮಾಹಿತಿಗೆ ಅಧಿಕೃತ ವೆಬ್‌ಸೈಟ್‌  fssai.gov.in ಗೆ ಭೇಟಿ ನೀಡಿದರು. ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ನವೆಂಬರ್ 5 ಕೊನೆಯ ದಿನವಾಗಿದೆ. 

ಹುದ್ದೆಗಳ ವಿವರ ಇಂತಿದೆ: 
ಸಲಹೆಗಾರ - 1 ಹುದ್ದೆ
ಜಂಟಿ ನಿರ್ದೇಶಕ - 6 ಹುದ್ದೆಗಳು
ಸೀನಿಯರ್ ಮ್ಯಾನೇಜರ್ - 1 ಹುದ್ದೆ
ಸೀನಿಯರ್ ಮ್ಯಾನೇಜರ್ (ಐಟಿ) - 1 ಹುದ್ದೆ
ಉಪ ನಿರ್ದೇಶಕರು - 7 ಹುದ್ದೆಗಳು
ಮ್ಯಾನೇಜರ್ - 2 ಹುದ್ದೆಗಳು
ಸಹಾಯಕ ನಿರ್ದೇಶಕ - 2 ಹುದ್ದೆಗಳು
ಸಹಾಯಕ ನಿರ್ದೇಶಕ (ತಾಂತ್ರಿಕ) - 6 ಹುದ್ದೆಗಳು
ಉಪ ವ್ಯವಸ್ಥಾಪಕರು - 3 ಹುದ್ದೆಗಳು
ಆಡಳಿತಾಧಿಕಾರಿ - 7 ಹುದ್ದೆಗಳು
ಹಿರಿಯ ಖಾಸಗಿ ಕಾರ್ಯದರ್ಶಿ - 4 ಹುದ್ದೆಗಳು
ವೈಯಕ್ತಿಕ ಕಾರ್ಯದರ್ಶಿ - 15 ಹುದ್ದೆಗಳು
ಸಹಾಯಕ ವ್ಯವಸ್ಥಾಪಕ (IT) - 1 ಹುದ್ದೆ
ಸಹಾಯಕ - 7 ಹುದ್ದೆಗಳು
ಜೂನಿಯರ್ ಅಸಿಸ್ಟೆಂಟ್ (ಗ್ರೇಡ್-I) - 1 ಹುದ್ದೆ
ಜೂನಿಯರ್ ಅಸಿಸ್ಟೆಂಟ್ (ಗ್ರೇಡ್-II) - 12 ಹುದ್ದೆಗಳು
ಸ್ಟಾಫ್ ಕಾರ್ ಡ್ರೈವರ್ (ಆರ್ಡಿನರಿ ಗ್ರೇಡ್) - 3 ಹುದ್ದೆಗಳು

ವೇತನ ವಿವರ: ಆಯ್ಕೆಯಾದ ಅಭ್ಯರ್ಥಿಗಳು 19,900 ರಿಂದ 2,18,200 ರ ವೇತನ ಶ್ರೇಣಿಯ ನಡುವೆ ವೇತನವನ್ನು ಪಡೆಯುತ್ತಾರೆ. 

SBI CBO RECRUITMENT 2022: ಎಸ್‌ಬಿಐನಲ್ಲಿ 1422 ಹುದ್ದೆಗಳಿಗೆ ಅರ್ಜಿ ಆಹ್ವಾನ

ಶೈಕ್ಷಣಿಕ ಅರ್ಹತೆ: ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI) ಸಂಸ್ಥೆಯಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಮತ್ತು ಸಂಸ್ಥೆಯಿಂದ 10ನೇ ತರಗತಿ, ಪಿಯುಸಿ, ಪದವಿ ಮತ್ತು ಸ್ನಾತಕೋತ್ತರ ಪದವಿ ಜೊತೆಗೆ ಹುದ್ದೆಗೆ ಅನುಸಾರವಾಗಿ ವಿದ್ಯಾರ್ಹತೆ ಪಡೆದಿರಬೇಕು. 

Indian Navy Recruitment 2022; ಒಟ್ಟು 212 ಹುದ್ದೆಗಳಿಗೆ ನೇಮಕಾತಿ

ವಯೋಮಿತಿ: ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು 58 ವರ್ಷದ ಒಳಗಿರಬೇಕು. ಎಸ್‌ಸಿ/ಎಸ್‌ಟಿ , ಓಬಿಸಿ, ಪಿಡಬ್ಯೂಡಿ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ಇದೆ.

Latest Videos
Follow Us:
Download App:
  • android
  • ios