DRDO:116 ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ!

*DRDOದಲ್ಲಿ 116 ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ
*ಇಂಟಿಗ್ರೇಟೆಡ್ ಟೆಸ್ಟ್ ರೇಂಜ್ ಚಂಡೀಪುರ್ (ಒಡಿಶಾ) ವಿವಿಧ ಹುದ್ದೆಗಳು
*DRDO ಅಧಿಕೃತ ವೆಬ್‌ಸೈಟ್‌ ಮೂಲಕ ಅರ್ಜಿ 

DRDO Recruitment 2021 Apply for 116 Apprentice posts

ನವದೆಹಲಿ(ನ.6): ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (Defence Research and Development Organisation) ಇಂಟಿಗ್ರೇಟೆಡ್ ಟೆಸ್ಟ್ ರೇಂಜ್ (Integrated Test Range ) ಚಂಡೀಪುರ್ ಕ್ಕೆ 116 ಪದವಿಧರ ಅಪ್ರೆಂಟಿಸ್‌ಗಳು (Apprentices), ತಂತ್ರಜ್ಞ ಅಪ್ರೆಂಟಿಸ್ (Technician Apprentice) ಮತ್ತು ಟ್ರೇಡ್ ಅಪ್ರೆಂಟಿಸ್ (Trade Apprentice) ಹುದ್ದೆಗಳಿಗೆ ಅಧಿಸೂಚನೆಯನ್ನು ಹೊರಡಿಸಿದೆ. ಅಪ್ರೆಂಟಿಸ್ ಕಾಯಿದೆ, 1961 ರ ಅನ್ವಯ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು drdo.gov.in ನ ಅಧಿಕೃತ ವೆಬ್‌ಸೈಟ್ ಮೂಲಕ ಈ ನೇಮಕಾತಿ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ನವೆಂಬರ್ 15, 2021.

DRDO ನೇಮಕಾತಿ 2021: ಪ್ರಮುಖ ದಿನಾಂಕಗಳು

ಆನ್‌ಲೈನ್ ಅರ್ಜಿ ಸಲ್ಲಿಕೆಗೆ ಪ್ರಾರಂಭ ದಿನಾಂಕ: ನವೆಂಬರ್ 01, 2021
ಆನ್‌ಲೈನ್ ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: ನವೆಂಬರ್ 15, 2021

23,000 ಅತಿಥಿ ಶಿಕ್ಷಕರ ನೇಮಕಕ್ಕೆ ಆದೇಶ

ಹುದ್ದೆ: ಗ್ರಾಜುಯೇಟ್ ಅಪ್ರೆಂಟಿಸ್
ಖಾಲಿಯಿರುವ ಹುದ್ದೆ : 50
ವೇತನ: 9000/- ಪ್ರತಿ ತಿಂಗಳು

ಹುದ್ದೆ: ಟೆಕ್ನಿಷಿಯನ್ ಅಪ್ರೆಂಟಿಸ್
ಖಾಲಿಯಿರುವ ಹುದ್ದೆ: 40
ವೇತನ: 8000/- ಪ್ರತಿ ತಿಂಗಳು

ಹುದ್ದೆ: ಟ್ರೇಡ್ ಅಪ್ರೆಂಟಿಸ್
ಖಾಲಿಯಿರುವ ಹುದ್ದೆ: 26
ವೇತನ: ಸರ್ಕಾರದ ವೇತನ ಅಧಿನಿಯಮದ ಪ್ರಕಾರ

DRDO ನೇಮಕಾತಿ 2021: ಆಯ್ಕೆ ಪ್ರಕ್ರಿಯೆ

ಅರ್ಹತಾ  ಮಟ್ಟದಲ್ಲಿ ಶಾರ್ಟ್‌ಲಿಸ್ಟ್ ಮಾಡಿದ ಅಭ್ಯರ್ಥಿಗಳಿಗೆ ಮಾತ್ರ ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ವೈಯಕ್ತಿಕ ಸಂದರ್ಶನದ ಅಥವಾ ಅಭ್ಯರ್ಥಿ ಪಡೆದ ಅಂಕಗಳ ಶೇಕಡಾವಾರು ಆಧಾರದ ಮೇಲೆ ಆಯ್ಕೆ ಮಾಡಲಾಗುವುದು.

DRDO ನೇಮಕಾತಿ 2021: ಅರ್ಜಿ ಸಲ್ಲಿಸುವುದು ಹೇಗೆ

ಹಂತ 1. ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ

ಹಂತ 2. ಮುಖಪುಟದಲ್ಲಿ ನೀಡಲಾಗಿರುವ ಲಿಂಕ್ ಅನ್ನು ಕ್ಲಿಕ್ ಮಾಡಿ

ಹಂತ 3. ಅಗತ್ಯವಿರುವ ವಿವರಗಳನ್ನು ನಮೂದಿಸಿ ಮತ್ತು ನೋಂದಾಯಿಸಿ

ಹಂತ 4. ಅರ್ಜಿ ನಮೂನೆಯನ್ನು ಸರಿಯಾಗಿ ಭರ್ತಿ ಮಾಡಿ ಮತ್ತು ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಿ

ಹಂತ 5. ಸಲ್ಲಿಸು ಕ್ಲಿಕ್ ಮಾಡಿ ಮತ್ತು  ರೆಫರೆನ್ಸ್‌ಗಾಗಿ (Reference) ಅರ್ಜಿಯನ್ನು ಡೌನ್‌ಲೋಡ್ ಮಾಡಿ

1664 ಅಪ್ರೆಂಟಿಸ್ ಹುದ್ದೆಗಳ ನೇಮಕ್ಕೆ ಉತ್ತರ ಮಧ್ಯೆ ರೇಲ್ವೆ ಅರ್ಜಿ ಆಹ್ವಾನ

ಉತ್ತರ ಮಧ್ಯ ರೇಲ್ವೆ (North Central Railways) ವಲಯವು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಸುಮಾರು 1664 ಅಪ್ರೆಂಟಿಸ್ (Apprentice) ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ (Recruitment Process) ಯನ್ನು ಪ್ರಾರಂಭಿಸಿದ್ದು, ರೇಲ್ವೆ ಉದ್ಯೋಗಕ್ಕೆ ಸೇರುವ ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಆನ್ಲೈನ್ (Online) ಮೂಲಕವೇ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬೇಕಾಗಿದೆ. ಹೆಚ್ಚಿನ ಮಾಹಿತಿಗಾಗಿ ರೇಲ್ವೆ ವಲಯದ ಅಧಿಕೃತ ವೆಬ್‌ಸೈಟ್ - rrcprjapprentices.in ನಲ್ಲಿ ಬಿಡುಗಡೆಯಾಗಿರುವ ಅಧಿಸೂಚನೆಯನ್ನು ಪರಿಶೀಲಿಸಬಹುದು. 

Good News: ಐಟಿ ಸಾಫ್ಟ್‌ವೇರ್ ಕ್ಷೇತ್ರದ ನೇಮಕಾತಿಯಲ್ಲಿ ಶೇ.85 ಹೆಚ್ಚಳ

ಉತ್ತರ ಮಧ್ಯ ರೇಲ್ವೆಯು ತನ್ನ ವ್ಯಾಪ್ತಿಯಲ್ಲಿರುವ ವಿವಿಧ ವಿಭಾಗಗಳು, ಕಾರ್ಯಾಗಾರಗಳು ಹಾಗೂ ನಿಗದಿಪಡಿಸಿದ ಟ್ರೇಡ್‌ಗಳಲ್ಲಿ ತರಬೇತಿಗಾಗಿ ಅರ್ಹ ಅಭ್ಯರ್ಥಿಗಳನ್ನ ನೇಮಕಾತಿ ಮಾಡಿಕೊಳ್ಳಲಿದೆ.   1664 ಮಂದಿ ಅಪ್ರೆಂಟಿಸ್‌ಗಳಾಗಿ ರೇಲ್ವೆ ವಲಯಕ್ಕೆ ಸೇರಲು ಆನ್‌ಲೈನ್ ಮೂಲಕ ಅರ್ಜಿ ಹಾಕಬಹುದು. ಈಗಾಗಲೇ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಶುರುವಾಗಿದ್ದು, ಅಧಿಕೃತ ವೆಬ್‌ಸೈಟ್ rrcpryj.org ಮೂಲಕ  ಅರ್ಜಿ ನಮೂನೆಯನ್ನು ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಡಿಸೆಂಬರ್ 1 ಕೊನೆಯ ದಿನಾಂಕವಾಗಿದೆ. ಅಂದ ಹಾಗೇ ಉತ್ತರ ಮಧ್ಯ ರೇಲ್ವೆಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳ ವಯೋಮಿತಿ ಡಿಸೆಂಬರ್ 1 ಕ್ಕೆ ಅನ್ವಯಿಸುವಂತೆ 15 ರಿಂದ 24 ವರ್ಷದೊಳಗಿನವರಾಗಿರಬೇಕು. ಈ ವಯೋಮಿತಿ ಮೀರಿದವರು ಅರ್ಜಿ ಸಲ್ಲಿಸಲು ಅರ್ಹರಾಗಿರುವುದಿಲ್ಲ.

Latest Videos
Follow Us:
Download App:
  • android
  • ios