ಡಿಫೆನ್ಸ್ ಮೆಟಲರ್ಜಿಕಲ್ ರಿಸರ್ಚ್ ಲ್ಯಾಬೊರೇಟರಿಯಲ್ಲಿ ನೇಮಕಾತಿ
ಡಿಫೆನ್ಸ್ ಮೆಟಲರ್ಜಿಕಲ್ ರಿಸರ್ಚ್ ಲ್ಯಾಬೊರೇಟರಿಯಲ್ಲಿ 127 ಹುದ್ದೆಯ ನೇಮಕಾತಿಗಾಗಿ ಅಧಿಸೂಚನೆಯನ್ನು ಹೊರಡಿಸಿದ್ದು , ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಡಿಫೆನ್ಸ್ ಮೆಟಲರ್ಜಿಕಲ್ ರಿಸರ್ಚ್ ಲ್ಯಾಬೊರೇಟರಿ (ಡಿಎಂಆರ್‌ಎಲ್), ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಓ) ಅಡಿಯಲ್ಲಿ ಬರುವ ಸಂಸ್ಥೆಯಾಗಿದ್ದು, ಇದು ಸುಧಾರಿತ ಲೋಹೀಯ ಮತ್ತು ಸೆರಾಮಿಕ್ ವಸ್ತುಗಳ ಅಭಿವೃದ್ಧಿ ಮತ್ತು ವಿವಿಧ ನಿರ್ಣಾಯಕ ರಕ್ಷಣಾ ಅನ್ವಯಿಕೆಗಳಿಗೆ ಸಂಬಂಧಿಸಿದ ಸಂಸ್ಕರಣಾ ತಂತ್ರಜ್ಞಾನಗಳ ರಕ್ಷಣಾ ವ್ಯವಸ್ಥೆಗಳಿಗೆ ಸಂಪೂರ್ಣ ವಸ್ತುಗಳನ್ನು
ಒದಗಿಸುವ ಗುರಿಯನ್ನು ಹೊಂದಿದ್ದು, ಇಲ್ಲಿ ಖಾಲಿ ಇರುವ ಕಂಪ್ಯೂಟರ್ ಆಪರೇಟರ್ ಮತ್ತು ಪ್ರೋಗ್ರಾಮಿಂಗ್ ಸಹಾಯಕ, ಎಲೆಕ್ಟ್ರಿಷಿಯನ್, ಫಿಟ್ಟರ್, ಪೇಂಟರ್ ಮತ್ತು ಇತರೆ 127 ಹುದ್ದೆಯ ನೇಮಕಾತಿಗಾಗಿ ಅಧಿಸೂಚನೆಯನ್ನು ಹೊರಡಿಸಿದ್ದು , ಆಸಕ್ತ ಅರ್ಹ ಅಭ್ಯರ್ಥಿಗಳು ಆನ್‌ಲೈನ್‌ನ ಮೂಲಕ ಅರ್ಜಿ ಸಲ್ಲಿಸಬಹುದು.
ಒಟ್ಟು ಹುದ್ದೆ: 127 ಅಪ್ರೆಂಟಿಸ್
1.ಫಿಟ್ಟರ್ - 20 ಹುದ್ದೆ
2.ಟರ್ನರ್ - 08 ಹುದ್ದೆ
3.ಮೆಕ್ಯಾನಿಸ್ಟ್ - 16 ಹುದ್ದೆ
4.ವೆಲ್ಡರ್ - 04 ಹುದ್ದೆ
5.ಎಲೆಕ್ಟ್ರಿಷಿಯನ್ - 12 ಹುದ್ದೆ
6.ಎಲೆಕ್ಟ್ರಾನಿಕ್ಸ್ - 04 ಹುದ್ದೆ
7.ಕಂಪ್ಯೂಟರ್ ಆಪರೇಟರ್ ಮತ್ತು ಪ್ರೋಗ್ರಾಮಿಂಗ್ ಸಹಾಯಕ- 60 ಹುದ್ದೆ
8. ಬಡಗಿ - 02 ಹುದ್ದೆ
9.ಪುಸ್ತಕ ಬೈಂಡರ್- 01 ಹುದ್ದೆ
ಪ್ರಮುಖ ದಿನಾಂಕಗಳು:
ಆನ್‌ಲೈನ್ ಅಪ್ಲಿಕೇಶನ್‌ಗೆ ಕೊನೆಯ ದಿನಾಂಕ : 31-05-2024
ಅರ್ಜಿ ಶುಲ್ಕ : ಇರುವುದಿಲ್ಲ
ಶೈಕ್ಷಣಿಕ ವಿದ್ಯಾರ್ಹತೆ
ಅಭ್ಯರ್ಥಿಗಳು ಎನ್‌ಸಿವಿಟಿ ಅಥವಾ ಎಸ್‌ಸಿವಿಟಿ ಇಂದ ಮಾನ್ಯತೆ ಪಡೆದ ಸಂಸ್ಥೆಯಿಂದ ಸಂಬಂಧಿಸಿದ ವಿಭಾಗದಲ್ಲಿ ಐಟಿಐ ಪದವಿಯನ್ನು ಪಡೆದಿರಬೇಕು.
ಸ್ಟೈಪೆಂಡ್ ವಿವರ
ಅಪ್ರೆಂಟಿಶಿಪ್ ಕಾಯ್ದೆ 1961 ರನ್ವಯ ತರಬೇತಿ ಅವಧಿಯಲ್ಲಿ ಮಾಸಿಕ ವೇತನ ನೀಡಲಾಗುತ್ತದೆ.
ತರಬೇತಿ ಅವಧಿ: ಒಂದು ವರ್ಷ
ಆಯ್ಕೆ ವಿಧಾನ:
ಶೈಕ್ಷಣಿಕ ವಿದ್ಯಾರ್ಹತೆಯ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ. ನಿಗದಿತ ಶೈಕ್ಷಣಿಕ ವಿದ್ಯಾರ್ಹತೆಗಿಂತ ಹೆಚ್ಚಿನ ವಿದ್ಯಾರ್ಹತೆ ಹೊಂದಿದ್ದಲ್ಲಿ ಅಂತಹ ಅಭ್ಯರ್ಥಿಗಳನ್ನು ಆಯ್ಕೆಗೆ ಪರಿಗಣಿಸಲಾಗುವುದಿಲ್ಲ. ಹಾಗೂ ಈಗಾಗಲೇ ಅಪ್ರೆಂಟಿಸ್ ತರಬೇತಿ ಪಡೆದವರನ್ನು ಸಹ ಆಯ್ಕೆಗೆ ಪರಿಗಣಿಸಲಾಗುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ: https://portal.mhrdnats.gov.in/boat/login/user_login.action
ಭಾರತೀಯ ನೌಕಾಪಡೆಯಲ್ಲಿ ಅಗ್ನಿವೀರ್ ನೇಮಕಾತಿ
ಭಾರತೀಯ ನೌಕಾಪಡೆಯು ಅಗ್ನಿವೀರ್ (ಎಸ್ಎಸ್ಆರ್ ) 02/2024 ರ ಬ್ಯಾಚ್ ಗಾಗಿ ನೇಮಕಾತಿ ಅಧಿಸೂಚನೆಯನ್ನು ಪ್ರಕಟಿಸಿದ್ದು, ಆಸಕ್ತ ಅರ್ಹ ಅಭ್ಯರ್ಥಿಗಳು ಆನ್‌ಲೈನ್‌ನ ಮೂಲಕ ಅರ್ಜಿ ಸಲ್ಲಿಸಬಹುದು.
ಪ್ರಮುಖ ದಿನಾಂಕಗಳು:
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 27-05-2024
ಅರ್ಜಿ ಶುಲ್ಕ: ರು.550
(ಅರ್ಜಿಯನ್ನು ದೇಶದಾದ್ಯಂತ ಇರುವ ಸಾಮಾನ್ಯ ಸೇವಾ ಕೇಂದ್ರಗಳಿಂದ (ಸಿ ಎಸ್ ಇ) ಸಲ್ಲಿಸಿದರೆ : ಶುಲ್ಕ ರು. 60 )
ವಯಸ್ಸಿನ ಮಿತಿ: ಅಭ್ಯರ್ಥಿಯು 01 ನವೆಂಬರ್ 2003 ರಿಂದ 30 ಏಪ್ರಿಲ್ 2007 ರ ನಡುವೆ ಜನಿಸಿರಬೇಕು.
ಶೈಕ್ಷಣಿಕ ಅರ್ಹತೆ: ಅಭ್ಯರ್ಥಿಗಳು ಎಸ್ಎಸ್ಎಲ್ಸಿಯಲ್ಲಿ ಗಣಿತ ಮತ್ತು ಭೌತಶಾಸ್ತ್ರವನ್ನು ಆಯ್ಕೆ ಮಾಡಿರಬೇಕು ಹಾಗೂ ಶೇಕಡಾ ೫೫ ರಷ್ಟು ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು ಅಥವಾ ಅಭ್ಯರ್ಥಿಗಳು ಮೆಕ್ಯಾನಿಕಲ್/ ಕಂಪ್ಯೂಟರ್ ಸೈನ್ಸ್ /ಎಲೆಕ್ಟ್ರಿಕಲ್ ಶೇಕಡಾ 50ರಷ್ಟು ಅಂಕಗಳೊಂದಿಗೆ ಡಿಪ್ಲೊಮಾ ಅಥವಾ 2 ವರ್ಷಗಳ ವೃತ್ತಿಪರ ಕೋರ್ಸ್‌ನಲ್ಲಿ ಶೇಕಡಾ 50ರಷ್ಟು ಅಂಕಗಳೊಂದಿಗೆ ಪದವಿ ಹೊಂದಿರಬೇಕು.
ಆಯ್ಕೆ ವಿಧಾನ: ಅಭ್ಯರ್ಥಿಗಳಿಗೆ ಭಾರತೀಯ ನೌಕಾದಳದ ಅರ್ಹತಾ ಪರೀಕ್ಷೆ, ಮುಖ್ಯ ಪರೀಕ್ಷೆ ಮತ್ತು ವೈದ್ಯಕೀಯ ಸಹಿಷ್ಣುತಾ ಪರೀಕ್ಷೆಯ ಮೂಲಕ ಆಯ್ಕೆ ಮಾಡಲಾಗುತ್ತದೆ.
1.ಭಾರತೀಯ ನೌಕಾದಳದ ಅರ್ಹತಾ ಪರೀಕ್ಷೆ: ಇಲ್ಲಿ 100 ಅಂಕಗಳಿಗೆ ದ್ವಿತೀಯ ಪಿಯುಸಿ ಮಟ್ಟಕ್ಕೆ ಸಮಾನವಾದ ವಿಜ್ಞಾನ ವಿಷಯಕ್ಕೆ ಸಂಬಂಧಿಸಿದಂತೆ 1 ಗಂಟೆಯ ಅವಧಿಗೆ ಪರೀಕ್ಷೆಯನ್ನು ಮಾಡಲಾಗುತ್ತದೆ. ಪ್ರತಿ ತಪ್ಪು ಉತ್ತರಕ್ಕೆ ೦.೨೫ ಅಂಕಗಳನ್ನು ಕಡಿತಗೊಳಿಸಲಾಗುತ್ತದೆ.
2. ಮುಖ್ಯ ಪರೀಕ್ಷೆ : ಮೊದಲ ಹಂತದ ಅರ್ಹತಾ ಪರೀಕ್ಷೆಯಲ್ಲಿ ತೇರ್ಗಡೆಯಾದವರಿಗೆ ಮುಖ್ಯ ಲಿಖಿತ ಪರೀಕ್ಷೆಗೆ ಅವಕಾಶ ನೀಡಲಾಗುತ್ತದೆ. ಇದರಲ್ಲಿ ಅರ್ಹತೆ ಹೊಂದಿದ ಅಭ್ಯರ್ಥಿಗಳಿಗೆ ಮಾತ್ರ ದೈಹಿಕ ಸಹಿಷ್ಣುತಾ ಪರೀಕ್ಷೆಯನ್ನು ನಡೆಸಲಾಗುತ್ತದೆ.
3. ದೈಹಿಕ ಮಾನದಂಡಗಳು : ಇಲ್ಲಿ ಪುರುಷ ಅಭ್ಯರ್ಥಿಗಳು 1.6 ಕಿಮೀ ಓಟವನ್ನು 6 ನಿಮಿಷ 30 ಸೆಕೆಂಡುಗಳಲ್ಲಿ , ಮಹಿಳಾ ಅಭ್ಯರ್ಥಿಗಳು 8 ನಿಮಿಷದಲ್ಲಿ ಓಟವನ್ನು ಮುಗಿಸಬೇಕು. ಇದರೊಂದಿಗೆಉಟಕ್ ಬೈಠಕ್ , ಸಿಟ್ ಅಪ್ಸ್ ಪರೀಕ್ಷೆಯನ್ನು ನಡೆಸಲಾಗುತ್ತದೆ. ಸಾಮಾನ್ಯವಾಗಿ ಪರುಷ ಮತ್ತು ಮಹಿಳಾ ಅಭ್ಯರ್ಥಿಗಳು 157 ಸೆಂ.ಮೀ ಎತ್ತರವನ್ನು ಹೊಂದಿರುವುದುಕಡ್ಡಾಯವಾಗಿದೆ೪. ಅಂತಿಮ ಪಟ್ಟಿ: ಈ ಮೇಲಿನ ಎಲ್ಲಾ ಪರೀಕ್ಷೆಯಲ್ಲಿ ತೇರ್ಗಡೆಯಾದ ಅಭ್ಯರ್ಥಿಗಳ ಅಂಕಗಳ ಆಧಾರದ ಮೇಲೆ ಅಂತಿಮ ಪಟ್ಟಿಯನ್ನುಶಾರ್ಟಲಿಸ್ಟ್ ಮಾಡಲಾಗುತ್ತದೆ.ಸೇವಾ ಅವಧಿ: ಆಯ್ಕೆಯಾದ ಅಗ್ನಿವೀರರನ್ನು ನಾಲ್ಕು ವರ್ಷದ ಅವಧಿಗೆ ನಿಯುಕ್ತಿಗೊಳಿಸಲಾಗುತ್ತದೆ.ಸೇವಾ ನಿಧಿ: ಮೊದಲ ವಷೊ ತಿಂಗಳಿಗೆ ರೂ.30,000 , ಎರಡನೇ ವರ್ಷ ರೂ.33,000, ಮೂರನೇ ವರ್ಷ 36,500, ನಾಲ್ಕನೇವರ್ಷ ರೂ.40,000 ಸೇವಾ ನಿಧಿಯನ್ನು ನೀಡಲಾಗುತ್ತದೆ.ಹೆಚ್ಚಿನ ಮಾಹಿತಿಗಾಗಿ : https://www.joinindiannavy.gov.in/