Asianet Suvarna News Asianet Suvarna News

ಉದ್ಯೋಗಾಕಾಂಕ್ಷಿಗಳಿಗೆ ಸಿಹಿ ಸುದ್ದಿ: 10ನೇ ಕ್ಲಾಸ್ ಉತ್ತೀರ್ಣರಾದವರಿಗೆ ಉತ್ತಮ ಅವಕಾಶ

ಕೊರೋನಾ ಕಾಲದಲ್ಲಿ ಅನೇಕ ಜನರು ಉದ್ಯೋಗ ಇಲ್ಲದೇ ಪರದಾಡುತ್ತಿದ್ದಾರೆ. ಅಂತವರಿಗೆ ಕೇಂದ್ರ ಸರ್ಕಾರ ಖಾಲಿ ಇರುವಂತಹ ಹುದ್ದೆಗಳನ್ನ ಭರ್ತಿ ಮಾಡೋದಕ್ಕೆ ಮುಂದಾಗಿದೆ.

Cochin Shipyard is recruiting candidates for various posts rbj
Author
Bengaluru, First Published Oct 8, 2020, 3:05 PM IST

ನವದೆಹಲಿ, (ಅ.08): ಕೊಚ್ಚಿನ್ ಶಿಪ್‌ಯಾರ್ಡ್ ನೇಮಕಾತಿ ಪ್ರಕಟಣೆ ಹೊರಡಿಸಿದ್ದು, ವಿವಿಧ ಹುದ್ದೆಗಳಿಗೆ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ.

ಶೀಟ್ ಮೆಟಲ್ ವರ್ಕರ್, ವೆಲ್ಡರ್ ಫಿಟ್ಟರ್, ಮೆಕ್ಯಾನಿಕ್ ಡೀಸೆಲ್, ಮೆಕ್ಯಾನಿಕ್ ಮೋಟಾರು ವಾಹನ, ಡಿಸೈನರ್, ಎಲೆಕ್ಟ್ರಿಶಿಯನ್ ಹಾಗೂ ಕ್ರೇನ್ ಆಪರೇಟರ್ ಸೇರಿದಂತೆ ಅನೇಕ ಹುದ್ದೆಗಳ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ.

ಜಾಬ್ಸ್ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

ವಿದ್ಯಾರ್ಹತೆ: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಯು ಮಾನ್ಯತೆ ಪಡೆದ ಶಿಕ್ಷಣ ಸಂಸ್ಥೆಯಿಂದ 10 ನೇ ತರಗತಿ ಉತ್ತೀರ್ಣರಾಗಿರಬೇಕು. ಇದರೊಂದಿಗೆ ಐಟಿಐ ಡಿಪ್ಲೊಮಾ ಸಂಬಂಧಿತ ಕೋರ್ಸ್ ಮುಗಿಸಿರಬೇಕು.

ವಯೋಮಿತಿ: ಕೊಚ್ಚಿನ್ ಶಿಪ್‌ಯಾರ್ಡ್ ನೇಮಕಾತಿಗೆ 30 ವರ್ಷ ವಯಸ್ಸಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

ಅರ್ಜಿ ಶುಲ್ಕ: ಈ ಹುದ್ದೆಗಳಿಗೆ ಸಾಮಾನ್ಯ ಮತ್ತು ಒಬಿಸಿ ವಿಭಾಗದ ಅಭ್ಯರ್ಥಿಗಳು 300 ರೂಪಾಯಿ ಶುಲ್ಕ ಪಾವತಿಸಬೇಕು. ಕಾಯ್ದಿರಿಸಿದ ವರ್ಗದ ಅಭ್ಯರ್ಥಿಗಳ ಅರ್ಜಿ ಶುಲ್ಕ 200 ರೂ. ನಿಗದಿಪಡಿಸಲಾಗಿದೆ. 

 ಆಯ್ಕೆ ಪ್ರಕ್ರಿಯೆ: ಈ ಹುದ್ದೆಗಳಿಗೆ ಅಭ್ಯರ್ಥಿಗಳ ಆಯ್ಕೆ ಲಿಖಿತ ಪರೀಕ್ಷೆ ಮತ್ತು ಪ್ರಾಯೋಗಿಕ ಆಧಾರದ ಮೇಲೆ ನಡೆಯಲಿದ್ದು, ಇದರಲ್ಲಿ 50 ಅಂಕ ಲಿಖಿತ ಪರೀಕ್ಷೆ ಮತ್ತು 50 ಅಂಕ ಪ್ರಾಯೋಗಿಕವಾಗಿರುತ್ತವೆ.

ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ವಿಭಾಗದ cochinshipyard.com ನ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ದಿನಾಂಕ ಅಕ್ಟೋಬರ್ 10 ಅರ್ಜಿ ಸಲ್ಲಿಸಲು ಕೋರಲಾಗಿದೆ.

Follow Us:
Download App:
  • android
  • ios