- 2022ರ ಜ.1ರಿಂದಲೇ ಹೊಸ ಡಿಎ ಪೂರ್ವಾನ್ವಯ- 1.16 ಕೋಟಿ ಸಿಬ್ಬಂದಿ, ಪಿಂಚಣಿದಾರರಿಗೆ ಅನುಕೂಲ- ಸರ್ಕಾರಕ್ಕೆ ವಾರ್ಷಿಕ 9554 ಕೋಟಿ ರು. ಹೊರೆ

ನವದೆಹಲಿ(ಮಾ.31): ಕೇಂದ್ರ ಸರ್ಕಾರ ತನ್ನ ನೌಕರರಿಗೆ ಯುಗಾದಿ ಉಡುಗೊರೆ ನೀಡಿದೆ. ಅಗತ್ಯ ವಸ್ತುಗಳ ಬೆಲೆ ಏರಿಕೆ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರಿ ನೌಕರರ ತುಟ್ಟಿಭತ್ಯೆ (ಡಿಎ) ಮತ್ತು ಪಿಂಚಣಿದಾರರ ತುಟ್ಟಿಭತ್ಯೆ ಪರಿಹಾರವನ್ನು (ಡಿಆರ್‌) ತಲಾ ಶೇ.3ರಷ್ಟುಏರಿಸಿ ಸರ್ಕಾರ ನಿರ್ಧಾರ ಕೈಗೊಂಡಿದೆ. ಬುಧವಾರ ನಡೆದ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

ಹಾಲಿ ಕೇಂದ್ರ ಸರ್ಕಾರಿ ನೌಕರರ ಡಿಎ ಮೂಲವೇತನದ ಶೇ.31ರಷ್ಟಿದ್ದು ಅದು ಶೇ.34ಕ್ಕೆ ಏರಿಕೆಯಾಗಲಿದೆ. ಅದೇ ರೀತಿ ಪಿಂಚಣಿದಾರರ ಡಿಆರ್‌ ಮೂಲವೇತನದ ಶೇ.31ರಷ್ಟಿದ್ದು, ಶೇ.34ಕ್ಕೆ ಏರಿಕೆಯಾಗಲಿದೆ.

ಜ.1ರಿಂದಲೇ ಹೊಸ ತುಟ್ಟಿಭತ್ಯೆ ಜಾರಿಯಾಗಲಿದ್ದು, ಇದರ ಲಾಭ 47.68 ಕೇಂದ್ರ ಸರ್ಕಾರಿ ನೌಕರರು ಮತ್ತು 68.62 ಲಕ್ಷ ಪಿಂಚಣಿದಾರರಿಗೆ ಸಿಗಲಿದೆ. ಈ ಏರಿಕೆಯಿಂದಾಗಿ ಸರ್ಕಾರದ ಬೊಕ್ಕಸಕ್ಕೆ ವಾರ್ಷಿಕ 9544 ಕೋಟಿ ರು. ಹೊರೆ ಬೀಳಲಿದೆ. ಕಳೆದ ಅಕ್ಟೋಬರ್‌ನಲ್ಲಿ ಕೇಂದ್ರ ಸರ್ಕಾರ ಡಿಎ ಮತ್ತು ಡಿಆರ್‌ ಪ್ರಮಾಣವನ್ನು ಶೇ.3ರಷ್ಟುಹೆಚ್ಚಿಸಿತ್ತು.

7th Pay Commission: ಕೇಂದ್ರ ಸರ್ಕಾರಿ ನೌಕರರರಿಗೆ ಮೋದಿ ಸರ್ಕಾರದ ಹೋಳಿ ಗಿಫ್ಟ್, ತುಟ್ಟಿಭತ್ಯೆ ಹೆಚ್ಚಳ?

ಬೇಡಿಕೆ ಈಡೇರಿಕೆಗೆ ಅಂಚೆ ಇಲಾಖೆ ನೌಕರರ ಧರಣಿ
ಕೇಂದ್ರ ಸರ್ಕಾರವು ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ಸವದತ್ತಿಯ ಅಂಚೆ ಇಲಾಖೆ ನೌಕರರು ಅಂಚೆ ಇಲಾಖೆಯ ಪ್ರಧಾನ ಕಚೇರಿಯ ಮುಂದೆ ಎರಡು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ.

ಈ ವೇಳೆ ಅಂಚೆ ನೌಕರ ಆರ್‌.ಬಿ.ಕಾಳೆ ಮಾತನಾಡಿ, ಇಲಾಖೆಯಲ್ಲಿ ನೌಕರರಿಗೆ ಸಾಕಷ್ಟುತೊಂದರೆಗಳಿದ್ದು, ಒಂದರ ಮೇಲೆ ಒಂದರಂತೆ ಒತ್ತಡಗಳನ್ನು ಹೇರಲಾಗುತ್ತಿದೆ. ನೌಕರರಿಗೆ ನೆಟ್‌ವರ್ಕ್ ಸಮಸ್ಯೆ, ಅನಿಯಮಿತ ಖಾತೆಗಳ ಟಾರ್ಗೆಟ್‌, ಆಧಾರ್‌ ಕಾರ್ಡ್‌ ಟಾರ್ಗೆಟ್‌ ಸೇರಿದಂತೆ ಅನೇಕ ಒತ್ತಡಗಳನ್ನು ನೌಕರರ ಮೇಲೆ ಹೇರಲಾಗುತ್ತಿದೆ ಎಂದರು.

ಕೇಂದ್ರದ ನೌಕರರ DA ಶೇ.31ಕ್ಕೆ ಹೆಚ್ಚಳ: ವಿತ್ತ ಸಚಿವಾಲಯ!

ಅಂಚೆ ಇಲಾಖೆಯನ್ನು ಖಾಸಗೀಕರಣ ಮಾಡುವುದರಿಂದ ಸಾಕಷ್ಟುತೊಂದರೆಗಳು ಎದುರಾಗುವ ಸಾಧ್ಯತೆಗಳಿವೆ. ಈಗಾಗಲೆ ಕಳೆದ 18 ತಿಂಗಳಿಂದ ನಮಗೆ ತುಟ್ಟಿಭತ್ಯೆಯನ್ನು ನೀಡಿಲ್ಲ ಎಂದು ಹೇಳಿದರು.ಈ ಸಂದರ್ಭದಲ್ಲಿ ಹಿರೇಕುಂಬಿ ಪೋಸ್ಟ್‌ ಮಾಸ್ಟರ್‌ ಎ.ಎ.ಕಾಡದೇವರಮಠ, ಮುನವಳ್ಳಿ ಪೋಸ್ಟ್‌ ಮಾಸ್ಟರ್‌ ರಾಜು ನಡುವಿನಮನಿ, ಎಂ.ಎ.ನಾಗನೂರ, ಕೊಕಟನೂರ, ಸಿಂಪಿ, ರಮೇಶ, ಚಂದ್ರಕಾಂತ ಲಮಾಣಿ ಸೇರಿದಂತೆ ಅಂಚೆ ಇಲಾಖೆಯ ವಿವಿಧ ಶಾಖೆಗಳ ನೌಕರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಹಳೆ ಪಿಂಚಣಿ ಜಾರಿಗೊಳಿಸುವಂತೆ: ಆಗ್ರಹ 
ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯ ಸರಕಾರಿ ಪದವಿ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧ್ಯಾಪಕರ ಬದುಕಿನ ಆರ್ಥಿಕ ಸುರಕ್ಷತೆ ದೃಷ್ಟಿಯಿಂದ ಹಳೆ ಪಿಂಚಣಿಯನ್ನು ಜಾರಿಗೊಳಿಸಬೇಕೆಂದು ಹೈದ್ರಾಬಾದ ಕರ್ನಾಟಕ ಸರಕಾರಿ ಕಾಲೇಜು ಅಧ್ಯಾಪಕರ ಸಂಘದ ಜಿಲ್ಲಾಧ್ಯಕ್ಷ ಡಾ. ಸಂಗಪ್ಪ ರಾಂಪುರೆ ಆಗ್ರಹಿಸಿದ್ದಾರೆ.

ಈ ಕುರಿತು ಅಧ್ಯಾಪಕರ ನಿಯೋಗದೊಂದಿಗೆ ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿ ಮಾತನಾಡಿದ ಅವರು, 2006ರಲ್ಲಿ ರಾಜ್ಯ ಸರಕಾರವು ಜಾರಿಗೆ ತಂದಿರುವ ಹೊಸ ಪಿಂಚಣಿ ಪದ್ಧತಿಯಿಂದ ಅಧ್ಯಾಪಕರ ನಿಶ್ಚಿತ ಪಿಂಚಣಿ ಕಸಿದುಕೊಂಡಂತಾಗಿದೆ. ಈ ಹೊಸ ಪಿಂಚಣಿ ಪದ್ಧತಿಯ ಭಾಗವಾಗಿ ಅಧ್ಯಾಪಕರ ಮೂಲ ವೇತನ ಹಾಗೂ ತುಟ್ಟಿಭತ್ಯೆಯಲ್ಲಿ ಶೇ.10ರಷ್ಟುಪ್ರತಿ ತಿಂಗಳು ವಂತಿಗೆಯಾಗಿ ಕಟಾಯಿಸುತ್ತಿರುವುದನ್ನು ತಕ್ಷಣವೇ ನಿಲ್ಲಿಸಬೇಕು. ಅಲ್ಲದೇ ಇಲ್ಲಿಯವರೆಗೆ ಕಟಾಯಿಸಿದ ಮೊತ್ತವನ್ನು ಬಡ್ಡಿ ಸಮೇತ ಹಿಂತಿರುಗಿಸಬೇಕೆಂದು ಒತ್ತಾಯಿಸಿದ್ದಾರೆ.