ಹತ್ತನೇ ತರಗತಿ ಆದವರಿಗೆ ದಕ್ಷಿಣ ರೈಲ್ವೆ ಇಲಾಖೆಯಲ್ಲಿ ಭರ್ಜರಿ ನೇಮಕಾತಿ

ರೈಲ್ವೆ ನೇಮಕಾತಿ ಕೋಶ ದಕ್ಷಿಣ ರೈಲ್ವೆಯು ಅಪ್ರೆಂಟಿಸ್ ಆಕ್ಟ್ 1961 ನಿಯಮದ ಅಡಿಯಲ್ಲಿ ದಕ್ಷಿಣ ರೈಲ್ವೆಯ ವಿವಿಧ ಘಟಕಗಳಲ್ಲಿ ಖಾಲಿ ಇರುವ ವಿವಿಧ ಅಪ್ರೆಂಟಿಸ್ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಹೊರಡಿಸಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಮತ್ತು ಶುಲ್ಕವನ್ನು ಪಾವತಿಸಲು ಫೆಬ್ರವರಿ 28 ಕೊನೆಯ ದಿನವಾಗಿದೆ.

Apply for Southern Railway Apprentice Recruitment 2024 gow

ರೈಲ್ವೆ ನೇಮಕಾತಿ ಕೋಶ (ಆರ್‌ಆರ್‌ಸಿ), ದಕ್ಷಿಣ ರೈಲ್ವೆಯು ಅಪ್ರೆಂಟಿಸ್ ಆಕ್ಟ್ 1961 ನಿಯಮದ ಅಡಿಯಲ್ಲಿ ದಕ್ಷಿಣ ರೈಲ್ವೆಯ ವಿವಿಧ ವಿಭಾಗಗಳು / ಕಾರ್ಯಾಗಾರಗಳು / ಘಟಕಗಳಲ್ಲಿ ಖಾಲಿ ಇರುವ ವೆಲ್ಡರ್, ಕಾರ್ಪೆಂಟರ್, ಪ್ಲಂಬರ್, ಮೆಕ್ಯಾನಿಕಲ್ ಟೂಲ್ ನಿರ್ವಾಹಕ, ಎಲೆಕ್ಟ್ರಾನಿಕ್ಸ್ , ವೈರ್‌ಮ್ಯಾನ್, ಸ್ಟೆನೋಗ್ರಾಫರ್ ಮತ್ತು ಸೆಕ್ರೆಟರಿ ಅಸಿಸ್ಟೆಂಟ್, ಅಡ್ವಾನ್ಸ್ಡ್ ವೆಲ್ಡರ್, ಕಂಪ್ಯೂಟರ್ ಆಪರೇಟರ್ ಮತ್ತು ಪ್ರೋಗ್ರಾಮಿಂಗ್ ಅಸಿಸ್ಟೆಂಟ್, ಮಾಹಿತಿ ಸಂವಹನ ತಂತ್ರಜ್ಞಾನ ಸಿಸ್ಟಮ್ ನಿರ್ವಾಹಕ ಹಾಗೂ ಇತರ ಅಪ್ರೆಂಟಿಸ್ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆಯನ್ನು ಹೊರಡಿಸಿದ್ದು, ಆಸಕ್ತ ಅರ್ಹ ಅಭ್ಯರ್ಥಿಗಳು ಅಧಿಸೂಚನೆಯನ್ನು ಓದಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ಹುದ್ದೆಯ ವಿವರ: ಅಪ್ರೆಂಟಿಸ್ - 2860 ಹುದ್ದೆ

(ವಿಭಾಗವಾರು ಹುದ್ದೆಗಳ ಮಾಹಿತಿ ಈ ಕೆಳಗಿನಂತಿದೆ)

1.ಸಿಗ್ನಲ್ ಮತ್ತು ದೂರಸಂಪರ್ಕ ಕಾರ್ಯಾಗಾರ, ಕೊಯಮತ್ತೂರು- 20 ಹುದ್ದೆ

2.ಕ್ಯಾರೇಜ್ ಮತ್ತು ವ್ಯಾಗನ್ ವರ್ಕ್ಸ್/ಪೆರಂಬೂರ್- 83 ಹುದ್ದೆ

3.ರೈಲ್ವೆ ಆಸ್ಪತ್ರೆ/ಪೆರಂಬೂರ್ (ವೈದ್ಯಕೀಯ ಪ್ರಯೋಗಾಲಯ ತಂತ್ರಜ್ಞ – 20 ಹುದ್ದೆ

4.ಸಿಗ್ನಲ್ ಮತ್ತು ದೂರಸಂಪರ್ಕ ಕಾರ್ಯಾಗಾರ, ಕೊಯಮತ್ತೂರು- 95 ಹುದ್ದೆ

5.ತಿರುವನಂತಪುರಂ ವಿಭಾಗ – 280 ಹುದ್ದೆ

6. ಪಾಲಕ್ಕಾಡ್ ವಿಭಾಗ- 135 ಹುದ್ದೆ

7.ಸೇಲಂ ವಿಭಾಗ -294 ಹುದ್ದೆ

8.ಕ್ಯಾರೇಜ್ ಮತ್ತು ವ್ಯಾಗನ್ ವರ್ಕ್ಸ್/ಪೆರಂಬೂರ್ – 333 ಹುದ್ದೆ

9. ಲೋಕೋ ವರ್ಕ್ಸ್/ಪೆರಂಬೂರ್ -135 ಹುದ್ದೆ

10. ಎಲೆಕ್ಟ್ರಿಕಲ್ ವರ್ಕ್‌ಶಾಪ್/ಪೆರಂಬೂರ್- 224 ಹುದ್ದೆ

11. ಇಂಜಿನಿಯರಿಂಗ್ ಕಾರ್ಯಾಗಾರ/ಅರಕ್ಕೋಣಂ- 48 ಹುದ್ದೆ

12.ಚೆನ್ನೈ ವಿಭಾಗ/ಸಿಬ್ಬಂದಿ ಶಾಖೆ -24 ಹುದ್ದೆ

13. ಚೆನ್ನೈ ವಿಭಾಗ-ಎಲೆಕ್ಟ್ರಿಕಲ್/ರೋಲಿಂಗ್ ಸ್ಟಾಕ್/ಅರಕ್ಕೋಣಂ – 65 ಹುದ್ದೆ

14. ಚೆನ್ನೈ ವಿಭಾಗ-ಎಲೆಕ್ಟ್ರಿಕಲ್/ರೋಲಿಂಗ್ ಸ್ಟಾಕ್/ಅವಡಿ – 65 ಹುದ್ದೆ

15.ಚೆನ್ನೈ ವಿಭಾಗ-ಎಲೆಕ್ಟ್ರಿಕಲ್/ರೋಲಿಂಗ್ ಸ್ಟಾಕ್/ತಾಂಬರಂ – 55 ಹುದ್ದೆ

16.ಚೆನ್ನೈ ವಿಭಾಗ-ಎಲೆಕ್ಟ್ರಿಕಲ್/ರೋಲಿಂಗ್ ಸ್ಟಾಕ್/ರಾಯಪುರಂ- 30 ಹುದ್ದೆ

17.ಚೆನ್ನೈ ವಿಭಾಗ-ಮೆಕ್ಯಾನಿಕಲ್ (ಡೀಸೆಲ್) – 22 ಹುದ್ದೆ

18. ಚೆನ್ನೈ ವಿಭಾಗ-ಮೆಕ್ಯಾನಿಕಲ್ (ಕ್ಯಾರೇಜ್ ಮತ್ತು ವ್ಯಾಗನ್) – 250 ಹುದ್ದೆ

19. ಚೆನ್ನೈ ವಿಭಾಗ-ರೈಲ್ವೆ ಆಸ್ಪತ್ರೆ (ಪೆರಂಬೂರ್) – 03 ಹುದ್ದೆ

20. ಕೇಂದ್ರ ಕಾರ್ಯಾಗಾರಗಳು, ಪೊನ್ಮಲೈ – 390 ಹುದ್ದೆ

21. ತಿರುಚ್ಚಿರಾಪಳ್ಳಿ ವಿಭಾಗ- 187 ಹುದ್ದೆ

22. ಮಧುರೈ ವಿಭಾಗ – 102 ಹುದ್ದೆ

ಪ್ರಮುಖ ದಿನಾಂಕಗಳು:

ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಮತ್ತು ಶುಲ್ಕ ಪಾವತಿಗೆ ಪ್ರಾರಂಭ ದಿನಾಂಕ: 29-01-2024

ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಮತ್ತು ಶುಲ್ಕವನ್ನು ಪಾವತಿಸಲು ಕೊನೆಯ ದಿನಾಂಕ: 28-02-2024

ಅರ್ಜಿ ಶುಲ್ಕ :

ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ: ರು.100

ಎಸ್‌ ಸಿ/ಎಸ್‌ ಟಿ/ ಮಹಿಳೆಯರು/ಪಿಡಬ್ಲ್ಯೂಡಿ ವರ್ಗದ ಅಭ್ಯರ್ಥಿಗಳಿಗೆ: ಅರ್ಜಿ ಶುಲ್ಕ ಇಲ್ಲ

ವಯಸ್ಸಿನ ಮಿತಿ (23-01-2024 ರಂತೆ):

ಕನಿಷ್ಠ ವಯಸ್ಸಿನ ಮಿತಿ: 15 ವರ್ಷಗಳು

ಗರಿಷ್ಠ ವಯಸ್ಸಿನ ಮಿತಿ: 22 ವರ್ಷಗಳು

ಶೈಕ್ಷಣಿಕ ಅರ್ಹತೆ

ಅಭ್ಯರ್ಥಿಗಳು ಮಾನ್ಯತೆ ಪಡೆದ ಪರೀಕ್ಷಾ ಮಂಡಳಿಯಿಂದ ಹತ್ತನೇ ತರಗತಿ ಅಥವಾ ತತ್ಸಮಾನ ವಿದ್ಯಾರ್ಹತೆಯನ್ನು ಶೇಕಡಾ 50

ಅಂಕಗಳೊಂದಿಗೆ ಪಡೆದಿರಬೇಕು ಹಾಗೂ ದ್ವಿತೀಯ ಪಿಯುಸಿಯಲ್ಲಿ ವಿಜ್ಞಾನ ವಿಭಾಗದಲ್ಲಿ ಅಧ್ಯಯನ ಮಾಡಿರಬೇಕು ಮತ್ತು

ನ್ಯಾಷನಲ್ ಕೌನ್ಸಿಲ್ ಫಾರ್ ವೊಕೇಶನಲ್ ಟ್ರೈನಿಂಗ್/ತಾಂತ್ರಿಕ ಶಿಕ್ಷಣ ಮತ್ತು ವೃತ್ತಿಪರ ತರಬೇತಿಗಾಗಿ ರಾಜ್ಯ ಮಂಡಳಿಯಿಂದ

ಮಾನ್ಯತೆ ಪಡೆದ ಐಟಿಐ ಸಂಸ್ಥೆಯಿಂದ ಸಂಬಂಧಿಸಿದ ಟ್ರೇಡ್‌ ನಲ್ಲಿ ಪದವಿ ಪಡೆದಿರಬೇಕು.

(ತರಬೇತಿ ಅವಧಿ) ಒಂದು ವರ್ಷ

(ಸ್ಟೈಪೆಂಡ ವಿವರ) ರೈಲ್ವೆ ನೇಮಕಾತಿ ಕೋಶ, ದಕ್ಷಿಣ ರೈಲ್ವೆಯ ನಿಯಮಗಳಂತೆ ವೇತನ ನೀಡಲಾಗುವುದು.

(ಆಯ್ಕೆ ಪ್ರಕ್ರಿಯೆ) ಅಭ್ಯರ್ಥಿಗಳ ಹತ್ತನೇ ತರಗತಿ ಮತ್ತು ಐಟಿಐ ನಲ್ಲಿ ಪಡೆದ ಒಟ್ಟು ಅಂಕಗಳ ಆಧಾರದ ಮೇಲೆ ಅಂತಿಮ ಆಯ್ಕೆ

ಪಟ್ಟಿ ಸಿದ್ಧಪಡಿಸಲಾಗುವುದು.

---------

-ಸುರೇಂದ್ರ ಪೈ, ಹೊಸದುರ್ಗ

Latest Videos
Follow Us:
Download App:
  • android
  • ios